Connect with us

LATEST NEWS

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸಂಭ್ರಮದ ಚೂರ್ಣೋತ್ಸವ

Published

on

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಹಗಲು ಉತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಇದು ಮಕರ ಸಂಕ್ರಾಂತಿ ಪ್ರಯುಕ್ತ ನಡೆಯುವ ಮಹೋತ್ಸವವಾಗಿದ್ದು, ನಿನ್ನೆ ರಾತ್ರಿ ಮೂರು ತೇರಿನ ಉತ್ಸವ ನಡೆದ ಬಳಿಕ ಇಂದು ಹಗಲು ನಡೆಯುವ ಚೂರ್ಣೋತ್ಸವ ಸಂಭ್ರಮದಿಂದ ಜರುಗಿದ್ದು, ಸಾಹಸ್ರಾರು ಮಂದಿ ಭಕ್ತರು ಪಾಲ್ಗೊಂಡರು.

ಬ್ರಹ್ಮರಥದಲ್ಲಿ ಉಡುಪಿ ಕೃಷ್ಣ ಮುಖ್ಯಪ್ರಾಣರ ಮೆರವಣಿಗೆ ನಡೆಯಿತು. ಉಡುಪಿ ಶ್ರೀ ಕೃಷ್ಣ ಮಠದ ವಾರ್ಷಿಕ ಮಹೋತ್ಸವ, ಬ್ರಹ್ಮರಥೋತ್ಸವದಲ್ಲಿ ಪುತ್ತಿಗೆ ಹಾಗೂ ಪೇಜಾವರ ಶ್ರೀಗಳು ಭಾಗಿಯಾಗಿದ್ದರು. ಉತ್ಸವದ ಕೊನೆಯಲ್ಲಿ ಅವಭೃತ ಸ್ನಾನ ನೆರವೇರಿತು.

ಇದನ್ನೂ ಓದಿ: ಕದ್ರಿ ಕಂಚಿ ದೀಪಾಲೆ ದೈವಸ್ಥಾನದ ಮಹಾದ್ವಾರ ಉದ್ಘಾಟನೆ

ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಪರ್ಯಾಯ ಸಮಾಪನ ವೇಳೆ ನಡೆಯುತ್ತಿರುವ ಮಹೋತ್ಸವ ಇದಾಗಿದ್ದು, ಇಂದು ಸಾವಿರಾರು ಮಂದಿ ಭಕ್ತರಿಗೆ ಮಹಾ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

DAKSHINA KANNADA

ಬಂಟ್ವಾಳ : ಹುಲ್ಲಿನಿಂದಾವೃತ ಜಾಗದಲ್ಲಿ ಆಕಸ್ಮಿಕ ಬೆಂ*ಕಿ

Published

on

ಬಂಟ್ವಾಳ : ಹುಲ್ಲಿನಿಂದಾವೃತವಾದ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಖಾಸಗಿ  ಜಾಗವೊಂದರಲ್ಲಿ ಅ*ಗ್ನಿ ಆಕಸ್ಮಿಕ ಸಂಭವಿಸಿದ್ದು, ಸಮೀಪದ ಸಂಚಯಗಿರಿಯವರೆಗೂ ವ್ಯಾಪಿಸಿತು.

ಹುಲ್ಲಿನಿಂದಾವೃತ ಜಾಗದಲ್ಲಿ ಬೆಂ*ಕಿ ಕಾಣಿಸಿಕೊಂಡಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಕೂಡಲೇ ಸ್ಥಳೀಯರು ಬಂಟ್ವಾಳದ ಅ*ಗ್ನಿಶಾಮಕದಳಕ್ಕೆ ಕರೆ ಮಾಡಿದ್ದು, ಈ ವೇಳೆ ಬಂಟ್ವಾಳದಲ್ಲಿದ್ದ ಏಕೈಕ ಅ*ಗ್ನಿಶಾಮಕ ವಾಹನ ಮಂಚಿಗೆ ಕರೆಯೊಂದರ ಮೇಲೆ ತೆರಳಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ವಾಹನ ಆಗಮಿಸಿದ್ದು, ಅಷ್ಟರಲ್ಲಾಗಲೇ ಸ್ಥಳೀಯರು ನಂದಿಸುವ ಕಾರ್ಯ ಆರಂಭಿಸಿದ್ದರು.

ಈ ಜಾಗದ ಹಿಂಭಾಗ ಸಂಚಯಗಿರಿ ಬಡಾವಣೆ ಇದ್ದು, ಇಲ್ಲಿಯೂ ಕೆಲ ಭಾಗಕ್ಕೆ ಬೆಂ*ಕಿ ವ್ಯಾಪಿಸಿತ್ತು. ಗ್ರಾಮ ಆಡಳಿತಾಧಿಕಾರಿ ಯಶ್ವಿತಾ, ಸಿಬ್ಬಂದಿ ಸದಾಶಿವ ಕೈಕಂಬ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

ಜಾಗ ಖರೀದಿಸಿ ಖಾಲಿ ಬಿಟ್ಟುಬಿಡುವವರು ಜಾಗದಲ್ಲಿ ಹುಲ್ಲು ಬೆಳೆದು ಸಮೀಪದವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ, ಅಗ್ನಿ ಆಕಸ್ಮಿಕದ ಸಂದರ್ಭ ಸ್ಥಳೀಯರು ಹರಸಾಹಸಪಡಬೇಕಾಗುತ್ತದೆ. ಈ ಕುರಿತು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಈ ಸಂದರ್ಭ ಒತ್ತಾಯಿಸಿದರು.

Continue Reading

LATEST NEWS

ಮಗನೇ ಹೋದ ಮೇಲೆ ಕಾರು ಯಾಕೆ? 6 ಕೋಟಿಯ BMW ಸಮಾಧಿ ಮಾಡಿದ ತಂದೆ!

Published

on

ಮಾಸ್ಕೋ: ಮಗನ ಅಗಲಿಕೆಯ ದುಃಖವನ್ನು ತಾಳಲಾರದೆ, ಅಹಮದಾಬಾದ್‌ನ ತಂದೆಯೊಬ್ಬರು ಮಗನ ನೆನಪಿಗಾಗಿ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ BMW ಕಾರನ್ನು ಸಮಾಧಿ ಮಾಡಿದ್ದಾರೆ.


ತಂದೆಯು ಮಗನ ಹುಟ್ಟುಹಬ್ಬದ ಅಂಗವಾಗಿ ಈ ಐಷಾರಾಮಿ BMW ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಕಾರು ಖರೀದಿಸಿದ ಕೆಲವೇ ದಿನಗಳಲ್ಲಿ ಮಗ ಅಕಾಲಿಕ ಮರಣಕ್ಕೀಡಾದನು. ಇದರ ಪರಿಣಾಮ ಮಗ ಸಮಾಧಿ ಪಕ್ಕದಲ್ಲೇ ಹೊಸ BMW ಕಾರನ್ನು ಸಮಾಧಿ ಮಾಡಿದ ವೀಡಿಯೋ ವೈರಲ್‌ ಆಗುತ್ತಿದೆ.

ಮಗನೇ ಇಲ್ಲದ ಮೇಲೆ ಈ ಕಾರು ಏಕೆ ಎಂದು ನೊಂದ ತಂದೆ, ಅದನ್ನು ಗುಂಡಿ ತೋಡಿ ಸಮಾಧಿ ಮಾಡುವ ನಿರ್ಧಾರ ಮಾಡಿದರು. ಜೆಸಿಬಿ ಮೂಲಕ ಗುಂಡಿ ತೋಡಿ, ಬೆಲೆಬಾಳುವ ಕಾರನ್ನು ಮಗನ ಸಮಾಧಿಯ ಪಕ್ಕದಲ್ಲೇ ಹೂಳುತ್ತಿರುವ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಪತ್ನಿ ತವರು ಮನೆಯಿಂದ ಬಂದಿಲ್ಲ ಎಂದು ಮಾವನನ್ನೇ ಕೊಂದ ಅಳಿಯ!

ಈ ಘಟನೆಗೆ ಸಂಬಂಧಿಸಿದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಇದು ತಂದೆಯ ಪ್ರೀತಿಯ ಸಂಕೇತ ಎಂದರೆ, ಮತ್ತೆ ಕೆಲವರು ಹಣವನ್ನು ದಾನ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Continue Reading

LATEST NEWS

ಕಾರಿನಲ್ಲಿ ಪತ್ತೆಯಾಯ್ತು ಪ್ರೇಮಿಗಳ ಶ*ವ!

Published

on

ಉತ್ತರ ಪ್ರದೇಶ/ಮಂಗಳೂರು : ಪ್ರೇಮಿಗಳ ದಿನದಂದೇ ದುರಂ*ತವೊಂದು ನಡೆದಿದೆ. ಕಾರಿನಲ್ಲಿ ಪ್ರೇಮಿಗಳ ಶ*ವ ಪತ್ತೆಯಾಗಿದೆ. ಈ ಘಟನೆ ನಡೆದಿರೋದು  ಉತ್ತರ ಪ್ರದೇಶದ ನೋಯ್ಡಾದಲ್ಲಿ. ಶೂಟ್ ಮಾಡಿಕೊಂಡು ಪ್ರೇಮಿಗಳು ಕಾರಿನಲ್ಲೇ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಿಲ್ಲಿಸಿದ್ದ ಕಾರಿನಲ್ಲಿ ಇಬ್ಬರ ಮೃ*ತದೇಹಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದ್ದು, ಇಬ್ಬರೂ ಗುಂಡು ಹಾ*ರಿಸಿಕೊಂಡು ಮೃ*ತಪಟ್ಟಿರುವುದು ದೃಢವಾಗಿದೆ.

ಇಬ್ಬರಿಗೂ ಗುಂ*ಡೇಟಿನ ಗಾ*ಯಗಳಾಗಿದ್ದು, ಮೃ*ತ ಯುವಕನ ಕೈಯಲ್ಲಿ ಪಿಸ್ತೂಲ್ ಪತ್ತೆಯಾಗಿದೆ. ಯುವಕ ಮೊದಲು ಯುವತಿಗೆ ಗುಂ* ಡು ಹಾ*ರಿಸಿ, ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page