Connect with us

LATEST NEWS

ಮಕರ ಸಂಕ್ರಾಂತಿ ಪ್ರಯುಕ್ತ ಬೆಂಗಳೂರು – ಕರಾವಳಿ ವಿಶೇಷ ರೈಲು ಸಂಚಾರ

Published

on

ಕುಂದಾಪುರ: ವಾರಾಂತ್ಯದ ಸರಣಿ ರಜೆ ಹಾಗೂ ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉಡುಪಿ-ಕುಂದಾಪುರ ಮತ್ತು ಕಾರವಾರಕ್ಕೆ ಇಂದು (ಜ.10) ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ರೈಲು ಸಂಚರಿಸಲಿದೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಮನವಿಯಂತೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದಾರೆ.

 

ಇದನ್ನೂ ಓದಿ : ಮಂಗಳೂರು : ಖಾಸಗಿ ಬಸ್‌ ಪ್ರಯಾಣ ದರ ಏರಿಕೆ

 

ಬೆಂಗಳೂರಿನ ಬೈಯ್ಯಪ್ಪನಹಳ್ಳಿಯ ವಿಶ್ವೇರಯ್ಯ ಟರ್ಮಿನಲ್‌ನಿಂದ ಜ.10ರ ಮಧ್ಯಾಹ್ನ 1ಕ್ಕೆ ಹೊರಡಲಿದ್ದು, ಪಡೀಲ್‌ ಬೈಪಾಸ್‌ ಮೂಲಕ ರಾತ್ರಿ 12ಕ್ಕೆ ಉಡುಪಿ, 1 ಗಂಟೆಗೆ ಕುಂದಾಪುರಕ್ಕೆ ಬಂದು, ಬಳಿಕ ಕಾರವಾರ ಕಡೆಗೆ ಸಂಚರಿಸಲಿದೆ. ಈ ರೈಲು ಜ. 11ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರದಿಂದ ಬೆಂಗಳೂರಿಗೆ ಸಂಚರಿಸಲಿದೆ.

LATEST NEWS

ಬೆಳ್ತಂಗಡಿ, ಸುಳ್ಯದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆ; ಅಪಾರ ಹಾನಿ

Published

on

ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನಲ್ಲಿ ಭಾರಿ ಗಾಳಿ ಮಳೆ ಸುರಿದಿದ್ದು ಅಪಾರ ಹಾನಿ ಸಂಭವಿಸಿದ ಬಗ್ಗೆ ವರದಿ ಆಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಸಂಜೆಯಿಂದಲೇ ಮಳೆ ಸುರಿಯಲು ಆರಂಭವಾಗಿದ್ದು, ವೇಗವಾದ ಗಾಳಿಯ ಸಹಿತ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಗಾಳಿಯಿಂದ ಹಲವಾರು ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲವೆಡೆ ಸಂಚಾರ ವೈತ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕೈಕೊಟ್ಟಿದ್ದ ಕಾರಣ ತಡ ರಾತ್ರಿಯ ವರೆಗೂ ಜನರು ಕತ್ತಲೆಯಲ್ಲಿ ಕಳೆಯುವಂತಾಗಿದೆ.

ಇದರೊಂದಿಗೆ ಸಿಡಿಲಿನಿಂದಾಗಿ ಬೆಳ್ತಂಗಡಿಯ ತಾಲೂಕು ಪಂಚಾಯತ್ ಕಚೇರಿಯ ಹಿಂಭಾಗದಲ್ಲಿನ ಮರಕ್ಕೆ ಬೆಂಕಿ ಬಿದ್ದಿದೆ. ಸಂಜೆಯ ವೇಳೆ ಸಿಡಿಲು ಬಡಿದಿದ್ದರೂ ರಾತ್ರಿಯ ತನಕ ಅಗ್ನಿ ಶಾಮಕ ತಂಡ ಸ್ಥಳಕ್ಕೆ ಆಗಮಿಸದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದರು. ಬೆಳ್ತಂಗಡಿಯಲ್ಲಿ ಎರಡು ಅಗ್ನಿಶಾಮಕ ವಾಹನ ಇದ್ದರೂ ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದ ಕಾರಣ ಕಾರ್ಯಾಚರಿಸುವ ಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ. ಹೀಗಾಗಿ ತಡವಾಗಿ ಆಗಮಿಸಿದ ಅಗ್ನಿಶಾಮಕ ದಳ ರಾತ್ರಿ ವೇಳೆಯಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡಿದೆ.

ಅಲ್ಲದೇ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡ ಘಟನೆ ಮಾ.26 ರಂದು ಸಂಜೆ ನಡೆದಿದೆ. ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್‌ಟೈಲ್ಸ್ ಮಾಲೀಕ ಬಿ.ಆರ್ ಪದ್ಮಯ್ಯ ಅವರು ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಸಂಜೆ ವೇಳೆ ಸುರಿದ ಭಾರೀ ಗಾಳಿ ಮಳೆಗೆ ಮರವೊಂದು ದಿಢೀರ್ ಕಾರಿನ ಮೇಲೆ ಬಿದ್ದಿದ್ದು, ಕಾರು ಜಖಂಗೊಂಡಿದೆ.

Continue Reading

LATEST NEWS

ಮಂಗಳೂರಿಗೆ ಆಗಮಿಸಿದ ಸಿಐಎಸ್‌ಎಫ್‌ ಕೋಸ್ಟಲ್‌ ಸೈಕ್ಲೋಥಾನ್ 2025

Published

on

ಮಂಗಳೂರು: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದ ದೇಶದ ಕರಾವಳಿ ತೀರದುದ್ದಕ್ಕೂ ನಡೆಯುತ್ತಿರುವ ಸಿಐಎಸ್‌ಎಫ್‌ ಕೋಸ್ಟಲ್‌ ಸೈಕ್ಲೋಥಾನ್‌ 2025 ಬುಧವಾರ ಸಂಜೆ ಮಂಗಳೂರಿಗೆ ಆಗಮಿಸಿತು.


ಪಣಂಬೂರು ಬೀಚಿನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಓ ಡಾ. ಕೆ. ಆನಂದ್, ಎಸ್ಪಿ ಯತೀಶ್ ಮತ್ತಿತರರು ಸೈಕಲ್ ರ್ಯಾಲಿಯನ್ನು ಸ್ವಾಗತಿಸಿದರು.

ಇದನ್ನೂ ಓದಿ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿಯ ವರದಿ ತಿರಸ್ಕರಿಸಿದ ಭಾರತ..!

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಂದರೆ ಸಿಐಎಸ್‌ಎಫ್ ಭಾರತದ ಭದ್ರತಾ ಮೂಲಸೌಕರ್ಯದ ಆಧಾರಸ್ತಂಭವಾಗಿದೆ. ಪ್ರಮುಖ ಕೈಗಾರಿಕಾ ಕೇಂದ್ರಗಳು, ವಿಮಾನ ನಿಲ್ದಾಣಗಳು, ಮೆಟ್ರೋ ಜಾಲಗಳು, ಪರಮಾಣು ಸ್ಥಾಪನೆ ಮತ್ತು ಪ್ರಮುಖ ಕರಾವಳಿ ಪ್ರದೇಶಗಳನ್ನು ಸಿಐಎಸ್‌ಎಫ್‌ ರಕ್ಷಿಸುತ್ತಿದೆ.

 

ಭಾರತದ ಆರ್ಥಿಕ ಜೀವನಾಡಿಗಳನ್ನು ರಕ್ಷಿಸುವುದರಿಂದ ಹಿಡಿದು ಲಕ್ಷಾಂತರ ಜನರ ಸುರಕ್ಷತೆಯನ್ನು ಮಾಡುತ್ತಿದೆ. ಭಾರತದ 7,500 ಕಿಲೋ ಮೀಟರ್ ಕರಾವಳಿಯು ವ್ಯಾಪಾರ, ಆರ್ಥಿಕತೆ ಮತ್ತು ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರೊಂದಿಗೆ, ಸಿಐಎಸ್‌ಎಫ್ ಕರಾವಳಿ ಭದ್ರತೆ, ಪ್ರಮುಖ ಬಂದರುಗಳು, ಕಡಲ ಮೂಲಸೌಕರ್ಯಗಳನ್ನು ರಕ್ಷಿಸುವುದು ಮತ್ತು ಕರಾವಳಿ ಸಮುದಾಯಗಳಲ್ಲಿ ವಿಶ್ವಾಸವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಾರ್ಚ್‌ 7ರಂದು ಈ ಕೋಸ್ಟಲ್‌ ಸೈಕ್ಲೋಥಾನ್‌ 2025ಕ್ಕೆ ಚಾಲನೆ ನೀಡಲಾಗಿತ್ತು.

Continue Reading

LATEST NEWS

ನಟಿ ಅಪ್ಸರಾ ಕೊ*ಲೆ ಪ್ರಕರಣ : ದೇವಸ್ಥಾನದ ಅರ್ಚಕನಿಗೆ ಜೀ*ವಾವಧಿ ಶಿಕ್ಷೆ..!

Published

on

ಮಂಗಳೂರು/ರಂಗಾರೆಡ್ಡಿ : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಯುವ ನಟಿಯ ಕೊ*ಲೆ ಪ್ರಕರಣದಲ್ಲಿ ದೇವಾಲಯದ ಅರ್ಚಕನೊಬ್ಬನಿಗೆ ಜೀ*ವಾವಧಿ ಶಿಕ್ಷೆ ವಿಧಿಸಲಾಗಿದೆ. ಜೂನ್ 2023 ರಲ್ಲಿ ಯುವತಿಯನ್ನು ಕೊ*ಲೆ ಮಾಡಿ ಆಕೆಯ ಶ*ವವನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಅಡಗಿಸಿಟ್ಟ ಪ್ರಕರಣದಲ್ಲಿ ಅಯ್ಯಗಾರಿ ವೆಂಕಟ ಸಾಯಿ ಕೃಷ್ಣ ತಪ್ಪಿತಸ್ಥನೆಂದು ಸಾಬೀತಾಗಿದೆ.

ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು, ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ 10,000 ರೂ. ದಂಡ ಮತ್ತು ಹೆಚ್ಚುವರಿಯಾಗಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮೃ*ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಪ್ರೀತಿಗೆ ಬಲಿಯಾದ ನಟಿ!

ಇದು ಹೈದರಾಬಾದ್ ಅನ್ನು ಬೆಚ್ಚಿಬೀಳಿಸಿದ ಪ್ರಕರಣವಾಗಿದ್ದು, ಅಪ್ಸರಾ ಕೊಲೆ ಪ್ರಕರಣ ಅಂತಾನೇ ಹೆಸರಾಗಿತ್ತು. ಅಪ್ಸರಾ ನಿತ್ಯ ಭೇಟಿ ನೀಡುತ್ತಿದ್ದ ದೇವಸ್ಥಾನದಲ್ಲಿ ಸಾಯಿ ಕೃಷ್ಣ ಅರ್ಚಕನಾಗಿದ್ದು ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ವಿವಾಹಿತನಾಗಿದ್ದ ಸಾಯಿ ಕೃಷ್ಣ ಅಪ್ಸರಾ ಮದುವೆಗೆ ಒತ್ತಾಯಿಸಿದ ಕಾರಣಕ್ಕೆ ಆಕೆಯನ್ನು ಕೊ*ಲೆ ಮಾಡಿದ್ದ.

2023 ರ ಜೂನ್ 3 ರ ರಾತ್ರಿ ಅಪ್ಸರಾಳನ್ನು ಯಾತ್ರಾ ಕ್ಷೇತ್ರಕ್ಕೆ  ಕರೆದುಕೊಂಡು ಹೋಗುವ ನೆಪದಲ್ಲಿ ಕರೆದುಕೊಂಡು ಹೋಗಿ ಕೊ*ಲೆ ಮಾಡಿದ್ದಾನೆ. ಪ್ರಯಾಣದ ದಾರಿ ಮಧ್ಯದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ನಿದ್ದೆಯಲ್ಲಿದ್ದ ಅಪ್ಸರಾಳನ್ನು ಉಸಿರುಗಟ್ಟಿಸಿ ಕೊ*ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ಸಾ*ವು ಖಚಿತವಾಗದ ಹಿನ್ನೆಲೆಯಲ್ಲಿ ಕಲ್ಲಿನಿಂದ ತಲೆಯನ್ನು ಜ*ಜ್ಜಿ ಹಾಕಿದ್ದಾನೆ.

ಇದನ್ನೂ ಓದಿ : ಈಗಲೇ ನೋಡಿಕೊಳ್ಳಿ ..! ಶರೀರದ ಈ ಭಾಗದಲ್ಲಿ ಮಚ್ಚೆ ಇದ್ದರೆ ನಿಮ್ಮಷ್ಟು ಅದೃಷ್ಟವಂತರು ಬೇರೆ ಯಾರೂ ಇಲ್ಲ ..!

ಮೃ*ತದೇಹವನ್ನು ಕಂಬಳಿಯಲ್ಲಿ ಸುತ್ತಿ ತನ್ನ ಮನೆಗೆ ಕೊಂಡೊಯ್ದು ಎರಡು ದಿನಗಳ ಕಾಲ ಏನೂ ಆಗಿಲ್ಲ ಎಂಬಂತೆ ದೇವಸ್ಥಾನದ ಪೂಜೆಗೆ ಹಾಜರಾಗಿದ್ದ. ಎರಡು ದಿನದ ಬಳಿಕ ಮನೆಯಿಂದ ಮೃ*ತದೇಹವನ್ನು ಬಂಗಾರು ಮೈಸಮ್ಮ ದೇವಸ್ಥಾನದ ಬಳಿಯ ಮ್ಯಾನ್ ಹೋಲ್ ಗೆ ಎಸೆದಿದ್ದ. ಬಳಿಕ ಮ್ಯಾನ್ ಹೋಲ್ ನಿಂದ ವಾಸನೆ ಬರುವ ನೆಪ ಒಡ್ಡಿ ಎರಡು ಟ್ರಕ್ ಮಣ್ಣು ತರಿಸಿ ಮ್ಯಾನ್ ಹೋಲ್ ಮುಚ್ಚಿ ಹಾಕಿದ್ದ.

ಆದರೆ, ಅಪ್ಸರಾ ನಾಪತ್ತೆ ದೂರು ದಾಖಲಾದ ಬಳಿಕ ಶಂಷಾಬಾದ್ ಪೊಲೀಸರು ನಡೆಸಿದ ತನಖೆಯಲ್ಲಿ ಅರ್ಚಕ ಸಾಹಿಕೃಷ್ಣನ ಬಂಧನವಾಗಿತ್ತು.

Continue Reading
Advertisement

Trending

Copyright © 2025 Namma Kudla News

You cannot copy content of this page