Connect with us

ಅಲ್ಪಕಾಲದ ಅಸೌಖ್ಯದಿಂದ ದುಬೈ ಆಸ್ಪತ್ರೆಯಲ್ಲಿ ನಿಧನರಾದ ಉಡುಪಿ ಇಂಜಿನಿಯರ್

Published

on

ಅಲ್ಪಕಾಲದ ಅಸೌಖ್ಯದಿಂದ ದುಬೈ ಆಸ್ಪತ್ರೆಯಲ್ಲಿ ನಿಧನರಾದ ಉಡುಪಿ ಇಂಜಿನಿಯರ್

ದುಬೈ: ದುಬೈಯಲ್ಲಿ ನೆಲೆಸಿದ್ದ ಉಡುಪಿಯ ಇಂಜಿನಿಯರ್ ಅಲ್ಪಕಾಲದ ಅಸೌಖ್ಯದಿಂದ ದುಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇಮ್ತಿಯಾಝ್ ಎಂಬವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಳೆದ 13 ವರ್ಷಗಳಿಂದ ದುಬೈಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಇವರು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ.

ಮೂಲಗಳ ಪ್ರಕಾರ ಇಮ್ತಿಯಾಜ್ ನ್ಯೂಮೋನಿಯಾ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಚಿಕಿತ್ಸೆಗೆ ಸ್ಪಂದಿಸದ ಇವರು ಇಂದು (ಎಪ್ರಿಲ್ 27) ನಿಧರಾಗಿದ್ದಾರೆ. ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.

ಮೃತರ ಸಹೋದರರು ಕೂಡ ದುಬೈಯಲ್ಲೇ ಇದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲಾಕ್ ಡೌನ್ ನಿಂದಾಗಿ ಮೃತದೇಹವನ್ನು ಭಾರತಕ್ಕೆ ತರಲು ಅವಕಾಶ ಇಲ್ಲದಿರುವುದರಿಂದ, ಅಲ್ಲೇ ದಫನ ಮಾಡಲು ಕುಟಂಬಸ್ಥರು ನಿರ್ಧರಿಸದ್ದಾರೆ.

ತನ್ನ ಪತ್ನಿ, ಇಬ್ಬರು ಪುತ್ರಿಯರೊಂದಿಗೆ ಅಬುಧಾಬಿಯಲ್ಲಿ ನೆಲೆಸಿದ್ದ ಇಮ್ತಿಯಾಝ್ ಆರು ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ವಾಪಸ್ ತೆರಳಿದ್ದರು.

Advertisement
Click to comment

Leave a Reply

Your email address will not be published. Required fields are marked *

LATEST NEWS

ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಯುವಕ ಸಾ*ವು

Published

on

ಮಂಗಳೂರು/ಬೀದರ್ : ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಕಟ್ಟಡದ ಮೇಲಿಂದ ಬಿ*ದ್ದು ಯುವಕ ಮೃ*ತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ನಡೆದಿದೆ.

19 ವರ್ಷದ ಶಶಿಕುಮಾ‌ರ್ ಶಿವಾನಂದ ಮೃ*ತ ಯುವಕ. ಶಶಿ ಕುಮಾರ್ ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ. ಗಾಳಿಪಟ ಹಾರಿಸುವಾಗ ದಾರ ತುಂ*ಡಾಗಿದ್ದು. ಈ ವೇಳೆ ಹಾರಿ ಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ, ಕಟ್ಟಡದ ಮೇಲಿಂದ ಬಿ*ದ್ದಿದ್ದಾನೆ.

ಇದನ್ನೂ ಓದಿ : ಗಿಲ್ಲಿ ಫ್ಯಾನ್ಸ್ ಅಬ್ಬರ ಕಂಡು ಬೆಚ್ಚಿಬಿದ್ದ ಬಿಗ್ ಬಾಸ್ ಮನೆ ಮಂದಿ; ಸುದೀಪ್ ಕೊಟ್ಟ ಸುಳಿವೇನು?

ಪರಿಣಾಮ ಸ್ಥಳದಲ್ಲೇ ಕೊನೆ*ಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

BIG BOSS

BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

Published

on

BBK12: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಫಿನಾಲೆ ಇಂದು ನಡೆಯಲಿದ್ದು, ಆರು ಸ್ಫರ್ಧಿಗಳು ಫಿನಾಲೆ ತಲುಪಿದ್ದಾರೆ. ಅವರ ಪೈಕಿ ಗಿಲ್ಲಿ ನಟನೇ ಈ ಸೀಸನ್‌ನ ವಿನ್ನರ್‌ ಎಂದು ಇಡೀ ಕರ್ನಾಟಕ ಸುದ್ದಿ ಮಾಡುತ್ತಿದೆ. ಇನ್ನು ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಗಿಲ್ಲಿ ಬದಲು ರಕ್ಷಿತಾ ಶೆಟ್ಟಿ ಗೆಲ್ಲಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ.


ರಕ್ಷಿತಾ ಶೆಟ್ಟಿ ಕೇವಲ ಯೂಟ್ಯೂಬ್‌ ಕಂಟೆಂಟ್‌ ಕ್ರಿಯೇಟರ್‌. ಆದರೆ ಗಿಲ್ಲಿ ನಟ ನಟರಾಗಿದ್ದಾರೆ. ರಕ್ಷಿತಾ ಯೂಟ್ಯೂಬ್‌ ಒಂದರಿಂದಲೇ ಇಷ್ಟು ಫೇಮಸ್‌ ಆಗಿ ಬಿಗ್‌ಬಾಸ್‌ ಶೋಗೆ ಸ್ಥಾನ ಪಡೆದಿದ್ದಾರೆ. ಅದಕ್ಕಾಗಿ ಗಿಲ್ಲಿಗಿಂತಲೂ ರಕ್ಷಿತಾ ಗ್ರೇಟ್‌ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ರಕ್ಷಿತಾಗಿಂತ ಗಿಲ್ಲಿಗೆ ಅಭಿಮಾನಿಗಳು ಜಾಸ್ತಿ ಇದ್ದಾರೆ. ಅದೇ ಕಾರಣಕ್ಕಾಗಿ ಸಾಕಷ್ಟು ವೋಟ್‌ ಗಿಲ್ಲಿಗೆ ಬಂದಿವೆ. ಆದರೆ, ರಕ್ಷಿತಾ ಶೆಟ್ಟಿ ಗೆಲ್ಲಬೇಕು ಎಂಬ ಬಯಕೆ ಇರುವುದು ಈಗ ಜಗತ್ತಿಗೆ ಗೊತ್ತಾಗಿದೆ. ಕೆಲವು ಮಾಹಿತಿ ಪ್ರಕಾರ, ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಸ್ಥಾನ ಸಿಗುವುದು ಡೌಟ್‌ ಎನ್ನಲಾಗಿದೆ. ಗಿಲ್ಲಿ ವಿನ್ನರ್‌, ಅಶ್ವಿನಿ ಗೌಡ ರನ್ನರ್ ಎಂದು ಅನೇಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಫ್ಯಾನ್ಸ್ ಅಬ್ಬರ ಕಂಡು ಬೆಚ್ಚಿಬಿದ್ದ ಬಿಗ್ ಬಾಸ್ ಮನೆ ಮಂದಿ; ಸುದೀಪ್ ಕೊಟ್ಟ ಸುಳಿವೇನು?

ಇನ್ನು ಕೆಲವೇ ಸಮಯದಲ್ಲಿ ಬಿಗ್‌ಬಾಸ್‌ ಕನ್ನಡ 12ರ ವಿನ್ನರ್‌, ರನ್ನರ್‌ ಅದೇ ರೀತಿ 3ನೇ ಸ್ಥಾನ ಯಾರ ಪಾಲಾಗಲಿದೆ ಎಂಬುದು ತಿಳಿಯಲಿದೆ. ಕಲರ್ಸ್‌ ಕನ್ನಡದಲ್ಲಿ ಇಂದು ಪ್ರಕಟಿಸಲಾಗುತ್ತಿದ್ದು, ಕಪ್‌ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ

Continue Reading

LATEST NEWS

ವಾಷಿಂಗ್ ಮಷಿನ್ ದಿಢೀರ್ ಸ್ಫೋಟ; ತಪ್ಪಿದ ಭಾರಿ ಅನಾಹುತ

Published

on

ಹೈದರಾಬಾದ್: ಮನೆಯೊಂದರಲ್ಲಿ ವಾಷಿಂಗ್‌ ಮಷಿನ್‌ ಸ್ಫೋಟಗೋಡಿರುವ ಘಟನೆ ಹೈದಾರಾಬಾದಿನ ಕೃಷ್ಣ ನಗರ ಪ್ರದೇಶದಲ್ಲಿರುವ ಜೈನ ದೇವಾಲಯದ ಬಳಿ ಶನಿವಾರ(ಜ.17) ನಡೆದಿದೆ.


ಸ್ಯಾಮ್‌ಸಂಗ್ ವಾಷಿಂಗ್ ಮೆಷಿನ್ ಸ್ಫೋಟಗೊಂಡಿದ್ದು, ಘಟನೆಯ ಸಮಯದಲ್ಲಿ ಅದರ ಹತ್ತಿರ ಯಾರೂ ಇಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ ಮತ್ತು ಗೋಡೆಗಳಿಗೆ ಹಾನಿಯಾಗಿದೆ. ಆದರೆ ಶಬ್ದ ಕೇಳಿ ಎಲ್ಲರೂ ಬಾಂಬ್ ಸ್ಫೋಟವಾದಂತೆ ಭಯಪಟ್ಟು ಮನೆಯಿಂದ ಓಡಿ ಬಂದಿದ್ದರು.

ಇದನ್ನೂ ಓದಿ: ಮೂಡುಬಿದಿರೆ : ಸ್ವಂತ ಉದ್ಯಮದ ಸಿದ್ಧತೆಯಲ್ಲಿದ್ದ ಯುವಕ ಆ*ತ್ಮಹ*ತ್ಯೆ

ಈ ಕುರಿತು ಮಾಹಿತಿ ತಿಳಿದ ಬಳಿಕ ಮಧುರಾನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page