Connect with us

LATEST NEWS

7 ತಿಂಗಳಿನಿಂದ ಉಡುಪಿ ಪೆರಂಪಳ್ಳಿ ಯುವತಿ ನಾಪತ್ತೆ : ಪತ್ತೆಗೆ ಪೊಲೀಸ್ ಮೊರೆ..! 

Published

on

ಉಡುಪಿ: ಏಳು ತಿಂಗಳಿನಿಂದ ನಾಪತ್ತೆಯಾದ ಪೆರಂಪಳ್ಳಿಯ ಯುವತಿಯೋರ್ವಳನ್ನು ಕೂಡಲೇ ಪತ್ತೆ ಹಚ್ಚುವಂತೆ ಆಗ್ರಹಿಸಿ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ ವತಿಯಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಅನುಪಸ್ಥೀತಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಅವರಿಗೆ ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಮೇರಿ ಡಿʼಸೋಜಾ ಮನವಿ ಸಲ್ಲಿಸಿದರು.

ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ನಿವಾಸಿಯಾಗಿರುವ ಅವಿನಾ (16) ಎಂಬ ಯುವತಿ 2021 ಏಪ್ರಿಲ್‌ 13 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದು, ಈಗಾಗಲೇ ಆಕೆಯ ಪೋಷಕರು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆದರೆ ಈ ವರೆಗೆ ಆಕೆಯ ಇರುವಿಕೆ ಅಥವಾ ಪತ್ತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಆಕೆಯ ಪೋಷಕರು ಆತಂಕಿತರಾಗಿದ್ದಾರೆ.

ಆಕೆಯ ಪತ್ತೆಗಾಗಿ ಪೊಲೀಸ್‌ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಸಂಸ್ಥೆಯ ಗಮನದಲ್ಲಿದ್ದು ಆದಷ್ಟು ಬೇಗ ಆಕೆಯನ್ನು ಪತ್ತೆ ಮಾಡುವ ಮೂಲಕ ನೊಂದ ಕುಟಂಬಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಈ ವೇಳೆ ಮೇರಿ ಡಿಸೋಜಾ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಪೊಲೀಸ್‌ ಇಲಾಖೆ ಯುವತಿಯ ಪತ್ತೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಕಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಇದರ ನಿಯೋಜಿತ ಅಧ್ಯಕ್ಷರಾದ ಸಂತೋಷ್‌ ಕರ್ನೆಲಿಯೋ, ಉಡುಪಿ ವಲಯ ಅಧ್ಯಕ್ಷರಾದ ಶಾಂತಿ ಪಿರೇರಾ, ಉಡುಪಿ ಘಟಕದ ಅಧ್ಯಕ್ಷರಾದ ಲೆಸ್ಲಿ ಕರ್ನೇಲಿಯೋ, ಪೆರಂಪಳ್ಳಿ ಘಟಕದ ಅಧ್ಯಕ್ಷರಾದ ಒಲಿವರ್‌ ಡಿʼಸೋಜಾ ಉಪಸ್ಥಿತರಿದ್ದರು.

DAKSHINA KANNADA

ಜಸ್ಟ್ ಪಾಸ್ ಮಾಡಲು ದೈವಕ್ಕೆ ಮನವಿ ಸಲ್ಲಿಸಿದ ವಿದ್ಯಾರ್ಥಿ..! ಹುಂಡಿಯಲ್ಲಿ ಪತ್ತೆಯಾದ ಚೀಟಿ..!

Published

on

ಉಡುಪಿ :  ವಿದ್ಯಾರ್ಥಿಯೊಬ್ಬ ದೈವಕ್ಕೆ ಚೀಟಿ ಬರೆದು ನನಗೆ ಇಂತಿಷ್ಟು ಅಂಕ ಬರುವಂತೆ ಮಾಡಿ ಪಾಸ್ ಮಾಡಿಸು ಅಂತ ಕೋರಿಕೊಂಡ ಪತ್ರವೊಂದು ವೈರಲ್ ಆಗಿದೆ.

ಪರೀಕ್ಷೆ ಅಂದ್ರೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಅದೊಂದು ರೀತಿಯ ಟೆನ್ಷನ್ ಇದ್ದೇ ಇರುತ್ತದೆ. ಟಾಪರ್ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಗಿಂತ ಅಂಕ ಕಡಿಮೆ ಬಾರದಿರಲಿ ಅನ್ನೋ ಟೆನ್ಷನ್ ಇದ್ರೆ, ಸಾಮಾನ್ಯ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಹೇಗಾದ್ರೂ ಹೆಚ್ಚಿನ ಅಂಕ ಗಳಿಸಬೇಕು ಅನ್ನೋ ಚ್ಯಾಲೆಂಜ್ ಇರುತ್ತದೆ. ಆದ್ರೆ ಕಲಿಕೆಯಲ್ಲಿ ತೀರಾ ಹಿಂದೆ ಉಳಿದ ವಿದ್ಯಾರ್ಥಿಗಳು ಜಸ್ಟ್ ಪಾಸ್ ಆದ್ರೆ ಸಾಕು ಅಂತಿರ್ತಾರೆ. ಅಂತಹ ಒಬ್ಬ ವಿದ್ಯಾರ್ಥಿ ದೈವದ ಹುಂಡಿಯಲ್ಲಿ ಚೀಟಿ ಬರೆದು ಅಂಕಗಳ ಆಪ್ಷನ್ ಕೊಟ್ಟು ಇಷ್ಟಾದ್ರೂ ಕೊಡಿಸು ದೇವರೆ ಅಂತ ಬೇಡಿಕೊಂಡಿದ್ದಾನೆ.

ಕುಂದಾಪುರ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇವಸ್ಥಾನದ ಕಾಣಿಕೆ ಹುಂಡಿಯ ಲೆಕ್ಕಚಾರ ನಡೆಯುವಾಗ ಈ ಪತ್ರ ಲಭ್ಯವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ಬದ್ಧತೆಯ ಬಗ್ಗೆ ಚರ್ಚೆ ನಡೆದಿದೆ. ಜಸ್ಟ್ ಪಾಸ್ ಮಾಡುವ ಅಂಕ ನೀಡು ಅಂತ ದೈವದ ಬಳಿ ಕೋರಿಕೆ ಇಟ್ಟಿರುವ ವಿದ್ಯಾರ್ಥಿ ಅಂಕಗಳ ಅಪ್ಷನ್ ನೀಡಿದ್ದಾನೆ. ಪ್ರತಿಯೊಂದು ಸಬ್ಜೆಕ್ಟ್‌ ಗೆ ಎಷ್ಟು ಎಷ್ಟು ಸಿಗಬೇಕು ಎಂದು ದೈವದ ಬಳಿ ಕೋರಿಕೆ ಇಟ್ಟಿದ್ದಾನೆ. ಇದಕ್ಕಿಂತ ಕಡಿಮೆ ಬೇಡವೇ ಬೇಡ ದೇವರೆ ಅಂತ ಹೊರ ಬೊಬ್ಬರ್ಯ ದೈವಕ್ಕೆ ಮನವಿ ಮಾಡಿಕೊಂಡಿದ್ದಾನೆ.

Continue Reading

DAKSHINA KANNADA

ಬಂಜಾರ ಸಮೂದಾಯದೊಳಗೆ ಒಡಕು ಮೂಡಿಸಿತಾ ಮಲ್ಪೆ ಹಲ್ಲೆ ಪ್ರಕರಣ..!?

Published

on

ಉಡುಪಿ : ಮಲ್ಪೆಯಲ್ಲಿ ಮೀನು ಕದ್ದ ವಿಚಾರವಾಗಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿದ ಪ್ರಕರಣ ಸದ್ಯ ಬಂಜಾರ ಸಮೂದಾಯದ ನಡುವೆಯೆ ಬಿರುಕು ಮೂಡಿಸಿದಂತೆ ಕಾಣುತ್ತಿದೆ. ಹಲ್ಲೆಯನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡು ಮೀನುಗಾರರ ಪರ ನಿಂತಿದ್ದರೆ, ಹ*ಲ್ಲೆಯನ್ನು ಹಾಗೂ ಬಿಜೆಪಿ ನಾಯಕರ ನಡೆಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಇವರಿಬ್ಬರ ನಡುವೆ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಬಂಜಾರ ಸಮೂದಾಯದವರು ಹೆಣಗಾಡುತ್ತಿದ್ದಾರೆ.


ಮಲ್ಪೆಯಲ್ಲಿ ಹ*ಲ್ಲೆಗೊಳಗಾದ ಮಹಿಳೆ ಸಹಿ ಪಡೆದುಕೊಂಡ ಪೊಲೀಸರು ಆಕೆಗೆ ತಿಳಿಯದಂತೆ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ ಅನ್ನೋದು ಸದ್ಯ ಪೊಲೀಸರ ಮೇಲೆ ಇರುವ ಆರೋಪ. ಈ ಬಗ್ಗೆ ಮಹಿಳೆ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ನಾನು ಊರಿಗೆ ಹೋಗುತ್ತೇನೆ ಎಂದು ಹೇಳಿದ್ದರು. ಆದ್ರೆ ಇದೇ ವೇಳೆ ಪತ್ರಿಕಾಗೋಷ್ಠಿ ನಡೆಸಿದ ಬಂಜಾರ ಸಮೂದಾಯದ ವಿದ್ಯಾರ್ಥಿ ಸಂಘಟನೆ ಹ*ಲ್ಲೆ ನಡೆಸಿದ ಎಲ್ಲರನ್ನೂ ಹಾಗೂ ಪ್ರಮೋದ್ ಮದ್ವರಾಜ್ ಅವರನ್ನೂ ಬಂಧಿಸಬೇಕು ಎಂದು ಒತ್ತಾಯ ಮಾಡಿದೆ. ಆದ್ರೆ ಮತ್ತೊಂದೆಡೆ ಅದೇ ಸಮೂದಾಯದ ಪ್ರಮುಖರು ಇದೊಂದು ದೊಡ್ಡ ಘಟನೆಯೇ ಅಲ್ಲ. ನಾವು ಹೊಟ್ಟೆ ಪಾಡಿಗೆ ಇಲ್ಲಿಗೆ ಬಂದವರು. ಇಲ್ಲಿನ ಜನರು ತುಂಬಾ ಒಳ್ಳೆಯವರು ಹಾಗೂ ಪ್ರಮೋದ್ ಮದ್ವರಾಜ್ ಅವರಷ್ಟು ಒಳ್ಳೆಯವರು ಯಾರೂ ಇಲ್ಲ. ಮಲ್ಪೆ ಬಂದರಿನಲ್ಲಿ ಇಂತಹದು ದಿನಾ ನಡಿತಾ ಇರುತ್ತದೆ ಅದಕ್ಕೆಲ್ಲಾ ಕೇಸ್ ಹಾಕ್ತಾ ಇದ್ರೆ ಪೊಲೀಸ್ ಠಾಣೆಯಲ್ಲಿ ಪುಸ್ತಕ ಸಾಕಾಗದು. ಇದು ನಮ್ಮನ್ನು ಮುಂದಿಟ್ಟು ಮಾಡುತ್ತಿರುವ ರಾಜಕೀಯ ಅಂತ ಹೇಳಿದ್ದಾರೆ.

ಕೇವಲ ಮೀನು ಕದ್ದ ಆರೋಪಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹ*ಲ್ಲೆ ನಡೆಸಿರುವುದನ್ನು ನಾಗರಿಕ ಸಮಾಜ ಒಪ್ಪುವ ವಿಚಾರವಂತು ಖಂಡಿತಾ ಅಲ್ಲ. ಇಂತಹ ಘಟನೆಗಳು ನಡೆದಾಗ ಸಂವಿಧಾನದ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕಾಗಿರುವುದು ಪೊಲೀಸರ ಕರ್ತವ್ಯ ಕೂಡಾ. ಆದ್ರೆ ಇದರಲ್ಲಿ ರಾಜಕೀಯದವರು ಮೂಗು ತೂರಿಸಿದ ಕಾರಣ ಇದೀಗ ಹೊಟ್ಟೆಪಾಡಿಗೆ ಬಂದಿರುವ ಬಂಜಾರ ಸಮೂದಾಯದ ನಡುವೆ ಒಡಕು ಮೂಡಿರುವುದು ಸುಳ್ಳಲ್ಲ.

Continue Reading

LATEST NEWS

ಉಡುಪಿ: ಮಹಿಳೆಯ ಮೊಬೈಲ್‌ ಮತ್ತು ಪರ್ಸ್ ಎಗರಿಸಿದ ಆರೋಪಿ ಬಂಧನ

Published

on

ಉಡುಪಿಯ ಹೊರಟು ಕೆಳಾರ್ಕಳಬೆಟ್ಟು- ಸಂತೆಕಟ್ಟೆ ರಸ್ತೆಯಲ್ಲಿ ನಾಲ್ಕು ದಿನಗಳ ಹಿಂದೆ ಪಾದಚಾರಿ ಮಹಿಳೆಯ ಮೊಬೈಲ್‌ ಫೋನ್‌ ಮತ್ತು ಪರ್ಸ್ ಎಗರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಲ್ಪೆಯ ತೊಟ್ಟಂ ನಿವಾಸಿ ದರ್ಶನ್‌ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಬಾಗಲ್ಕೋಟೆ ಮೂಲದ ಮಹಿಳೆ ಸರಸ್ವತಿ (21) ಎಂಬವರು ಮಾರ್ಚ್ 21 ರಂದು ಬೆಳಿಗ್ಗೆ 11:45 ಗಂಟೆಗೆ ಸಂತೆಕಟ್ಟೆಯಲ್ಲಿನ ವೈದ್ಯರ ಬಳಿ ಹೋಗಲು ತನ್ನ ಮಗನನ್ನು ಎತ್ತಿಕೊಂಡು ಕೆಳಾರ್ಕಳಬೆಟ್ಟುವಿನ ತನ್ನ ತಾಯಿಯ ಮನೆಯಿಂದ ಹೊರಟು ಕೆಳಾರ್ಕಳಬೆಟ್ಟು- ಸಂತೆಕಟ್ಟೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಸುಲಿಗೆ ನಡೆದಿತ್ತು.

ಅಪರಿಚಿತ ಮೋಟಾರ್‌ ಸೈಕಲ್‌ ಸವಾರನೊಬ್ಬ ಹಿಂಬದಿಯಿಂದ ಬಂದು ಸರಸ್ವತಿ ಅವರ ಕೈಯಲ್ಲಿದ್ದ ಚೀಲವನ್ನು ಬಲತ್ಕಾರವಾಗಿ ಕಸಿದುಕೊಂಡು ಕೆಮ್ಮಣ್ಣು ಕಡೆಗೆ ಪರಾರಿಯಾಗಿದ್ದನು. ಅಪರಿಚಿತ ವ್ಯಕ್ತಿ ಎಗರಿಸಿದ್ದ ಚೀಲದಲ್ಲಿ ಮೊಬೈಲ್‌ ಪೋನ್‌ ಮತ್ತು 2500 ರೂಪಾಯಿ ಹಣವಿದ್ದ ಸಣ್ಣ ಪರ್ಸ್‌ ಇತ್ತು.

ಈ ಬಗ್ಗೆ ಸರಸ್ವತಿ ಅವರು ಮಲ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಮಾರ್ಚ್ 24 ರಂದು ಬಂಧಿಸಿ ಆತನಿಂದ 13,000 ರೂಪಾಯಿ ಬೆಲೆಯ ರೆಡ್ಮಿ ಮೊಬೈಲ್ ಫೋನ್‌ ಮತ್ತು 2,500 ನಗದು ಹಾಗೂ ಲೇಡೀಸ್ ಪರ್ಸನ್ನು ವಶಪಡಿಸಿಕೊಂಡಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯ ಸಬ್‌ ಇನ್ಸ್‌ ಪೆಕ್ಟರ್ ರವಿ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page