Connect with us

LATEST NEWS

ಹಿರಿಯಡ್ಕ: ಲಾರಿ ಢಿಕ್ಕಿ- ಬೈಕ್ ಸವಾರ ಮೃತ್ಯು..!

Published

on

ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ಹಿರಿಯಡ್ಕ ಕುಕ್ಕೆಹಳ್ಳಿ ರಸ್ತೆಯ ನಾಗಬನ ಬಳಿ ನಡೆದಿದೆ.

ಉಡುಪಿ : ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ಹಿರಿಯಡ್ಕ ಕುಕ್ಕೆಹಳ್ಳಿ ರಸ್ತೆಯ ನಾಗಬನ ಬಳಿ ನಡೆದಿದೆ.

 

ಮೃತರನ್ನು ಕುಕ್ಕೆಹಳ್ಳಿಯ ರಾಘವೇಂದ್ರ ನಾಯ್ಕ್ ಎಂದು ಗುರುತಿಸಲಾಗಿದೆ. ಸಹಸವಾರ ಕುಕ್ಕೆಹಳ್ಳಿಯ ಬಚ್ಚ ನಾಯ್ಕ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಲಕ ಜಗದೀಶ್ ಲಾರಿಯನ್ನು ರಸ್ತೆಯ ಉಬ್ಬಿನಲ್ಲಿ ಏಕಾಏಕಿ ಯಾವುದೇ ಸೂಚನೆಯನ್ನು ನೀಡದೆ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಹಿರಿಯಡ್ಕ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

FILM

ರನ್ಯಾ ರಾವ್ ಪ್ರಕರಣದಲ್ಲಿ ಮತ್ತೊಬ್ಬ ಅರೆಸ್ಟ್; ಚಿನ್ನ ಸಾಗಣೆಯಲ್ಲಿ ಈತನ ಪಾತ್ರವೇನು?

Published

on

ಮಂಗಳೂರು/ಬೆಂಗಳೂರು : ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದ ತನಿಖೆ ತೀವ್ರವಾಗಿದ್ದು, ಇದೀಗ ಮತ್ತೊಬ್ಬನನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಬಳ್ಳಾರಿ ಮೂಲದ ಸಾಹಿಲ್ ಸಕಾರಿಯಾ ಜೈನ್ ಬಂಧಿತ ಆರೋಪಿ.

ಈತನ ಪಾತ್ರವೇನು?

ಬಂಧಿತ ಸಾಹಿಲ್ ಸಕಾರಿಯಾ  ಜೈನ್ ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ. ಈತ ವಿದೇಶದಿಂದ ಕಳ್ಳ ಸಾಗಣೆ ಮಾಡಿದ ಚಿನ್ನವನ್ನು ಮಾರಾಟ ಮಾಡುವ ಹವಾಲಾ ವಹಿವಾಟುಗಳಿಗೆ ಅನುಕೂಲ ಮಾಡಿಕೊಡುವ ಕೆಲಸದಲ್ಲಿ ಭಾಗಿಯಾಗಿದ್ದ ಎಂಬ ಆರೋಪ ಕೇಳಿ ಬಂದಿದೆ.

ವಿದೇಶದಿಂದ ಕಳ್ಳ ಸಾಗಣೆ ಮೂಲಕ ತಂದ ಚಿನ್ನವನ್ನು ಮಾರಾಟ ಮಾಡಲು ಆತ ಸಹಕರಿಸಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಡಿಜಿಟಲ್ ದಾಖಲೆಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ನಟಿ ಅಪ್ಸರಾ ಕೊ*ಲೆ ಪ್ರಕರಣ : ದೇವಸ್ಥಾನದ ಅರ್ಚಕನಿಗೆ ಜೀ*ವಾವಧಿ ಶಿಕ್ಷೆ..!

ರನ್ಯಾ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಮಾರಾಟ ಮಾಡಲು ಹಲವು ಬಾರಿ ಸಹಾಯ ಮಾಡಿದ್ದ ಎಂದು ತಿಳಿದುಬಂದಿದೆ. ದುಬೈನಿಂದ ಕಳ್ಳಸಾಗಣೆ ಮೂಲಕ ಚಿನ್ನ ತರುವ ವೇಳೆ ರನ್ಯಾ ದುಬೈ ಸಂಖ್ಯೆಯ ಮೂಲಕ ಸಾಹಿಲ್‌ನನ್ನು ಸಂಪರ್ಕಿಸಿದ್ದಾಳೆ. ಈ ಸಂಭಾಷಣೆ ಅಧಿಕಾರಿಗಳಿಗೆ ಸಿಕ್ಕಿದೆ. ಈ ಆಧಾರದಲ್ಲಿ ಆತನನ್ನು ಬಂಧಿಸಿ, ವಿಶೇಷ ನ್ಯಾಯಾಲದ ಮುಂದೆ ಹಾಜರು ಪಡಿಸಿದ್ದು, ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Continue Reading

LATEST NEWS

ಶುಗರ್‌ಕೇನ್‌ ಮಿಷನ್‌ಗೆ ಸಿಲುಕಿದ ಜಡೆ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಮಹಿಳೆ

Published

on

ಕೆಲವು ಸಂದರ್ಭ ಜಾಗರೂಕತೆ ಎನ್ನುವುದು ಎಷ್ಟಿದ್ದರೂ ಕಮ್ಮಿಯೇ. ಅದರಲ್ಲೂ ಫ್ಯಾಕ್ಟರಿ ಕೆಲಸ ಮಾಡುವಾಗ ಅಥವಾ ಕೃಷಿ ಕಾರ್ಯಗಳನ್ನು ಯಂತ್ರಗಳ ಸಹಾಯದಿಂದ ಮಾಡುವ ಸಂದರ್ಭ ಬಹಳ ಜಾಗರೂಕತೆಯಿಂದ ಇರುವುದು ಉತ್ತಮ. ಕೆಲವೊಂದು ಬಾರಿ ಈ ಯಂತ್ರಗಳಿಗೆ ಆಕಸ್ಮಿಕವಾಗಿ ಕೈ, ಕಾಲು ಸಿಲುಕಿ ಅವಘಡಗಳು ಸಂಭವಿಸುವ ಅದೆಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ.

ತೆಲಂಗಾಣ : ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕಬ್ಬಿನ ಹಾಲು ತಯಾರಿಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರ ಜಡೆ ಕಬ್ಬಿನ ಜ್ಯೂಸ್ ಮಿಷನ್‌ಗೆ ಸಿಕ್ಕಿ ಹಾಕಿಕೊಂಡಿದೆ. ಅದೃಷ್ಟವಶಾತ್‌ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಮಹಿಳೆ ಪಾರಾಗಿದ್ದು, ಈ ಸುದ್ಧಿ ಫುಲ್ ವೈರಲ್‌ ಆಗುತ್ತಿದೆ. ತೆಲಂಗಾಣದ ಮಹಬೂಬಾಬಾದ್‌ ಜಿಲ್ಲೆಯ ಡೋರ್ನಕಲ್‌ ಪಟ್ಟಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಅಲ್ಲಿನ ಅಂಚೆ ಕಚೇರಿಯ ಬಳಿ ಕಬ್ಬಿನ ಜ್ಯೂಸ್‌ ಮಾರಿ ಜೀವನ ಸಾಗಿಸುತ್ತಿದ್ದ ಮಹಿಳೆಯೊಬ್ಬರ ಕೂದಲು ಕಬ್ಬಿನ ಜ್ಯೂಸ್‌ ಮಷಿನ್‌ಗೆ ಸಿಲುಕಿದೆ. ಕಬ್ಬಿನ ಹಾಲು ತಯಾರಿಸುತ್ತಿದ್ದ ವೇಳೆ ಯಂತ್ರದ ಚಕ್ರಕ್ಕೆ ಮಹಿಳೆಯ ಜಡೆ ಸಿಕ್ಕಿ ಹಾಕಿಕೊಂಡಿದ್ದು, ತಕ್ಷಣ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಅಲ್ಲಿದ್ದವರು ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಮಾರ್ಚ್‌ 25 ರಂದು ಹಂಚಿಕೊಳ್ಳಲಾದ ಈ ಸುದ್ಧಿ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮಹಿಳೆ ತುಂಬಾ ಅದೃಷ್ಟವಂತೆ. ಇಂತಹ ಅವಘಡದಿಂದ ಮೃತಪಟ್ಟ ಘಟನೆಗಳೂ ನಡೆದಿವೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜಕ್ಕೂ ಇದು ತುಂಬಾನೇ ಅಪಾಯಕಾರಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

Continue Reading

LATEST NEWS

ಬೆಳ್ತಂಗಡಿ, ಸುಳ್ಯದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆ; ಅಪಾರ ಹಾನಿ

Published

on

ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನಲ್ಲಿ ಭಾರಿ ಗಾಳಿ ಮಳೆ ಸುರಿದಿದ್ದು ಅಪಾರ ಹಾನಿ ಸಂಭವಿಸಿದ ಬಗ್ಗೆ ವರದಿ ಆಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಸಂಜೆಯಿಂದಲೇ ಮಳೆ ಸುರಿಯಲು ಆರಂಭವಾಗಿದ್ದು, ವೇಗವಾದ ಗಾಳಿಯ ಸಹಿತ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಗಾಳಿಯಿಂದ ಹಲವಾರು ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲವೆಡೆ ಸಂಚಾರ ವೈತ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕೈಕೊಟ್ಟಿದ್ದ ಕಾರಣ ತಡ ರಾತ್ರಿಯ ವರೆಗೂ ಜನರು ಕತ್ತಲೆಯಲ್ಲಿ ಕಳೆಯುವಂತಾಗಿದೆ.

ಇದರೊಂದಿಗೆ ಸಿಡಿಲಿನಿಂದಾಗಿ ಬೆಳ್ತಂಗಡಿಯ ತಾಲೂಕು ಪಂಚಾಯತ್ ಕಚೇರಿಯ ಹಿಂಭಾಗದಲ್ಲಿನ ಮರಕ್ಕೆ ಬೆಂಕಿ ಬಿದ್ದಿದೆ. ಸಂಜೆಯ ವೇಳೆ ಸಿಡಿಲು ಬಡಿದಿದ್ದರೂ ರಾತ್ರಿಯ ತನಕ ಅಗ್ನಿ ಶಾಮಕ ತಂಡ ಸ್ಥಳಕ್ಕೆ ಆಗಮಿಸದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದರು. ಬೆಳ್ತಂಗಡಿಯಲ್ಲಿ ಎರಡು ಅಗ್ನಿಶಾಮಕ ವಾಹನ ಇದ್ದರೂ ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದ ಕಾರಣ ಕಾರ್ಯಾಚರಿಸುವ ಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ. ಹೀಗಾಗಿ ತಡವಾಗಿ ಆಗಮಿಸಿದ ಅಗ್ನಿಶಾಮಕ ದಳ ರಾತ್ರಿ ವೇಳೆಯಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡಿದೆ.

ಅಲ್ಲದೇ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡ ಘಟನೆ ಮಾ.26 ರಂದು ಸಂಜೆ ನಡೆದಿದೆ. ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್‌ಟೈಲ್ಸ್ ಮಾಲೀಕ ಬಿ.ಆರ್ ಪದ್ಮಯ್ಯ ಅವರು ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಸಂಜೆ ವೇಳೆ ಸುರಿದ ಭಾರೀ ಗಾಳಿ ಮಳೆಗೆ ಮರವೊಂದು ದಿಢೀರ್ ಕಾರಿನ ಮೇಲೆ ಬಿದ್ದಿದ್ದು, ಕಾರು ಜಖಂಗೊಂಡಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page