LATEST NEWS
ಕಡೆಗೋಲು ಕೃಷ್ಣನ ರಥೋತ್ಸವಕ್ಕೆ ಲಕ್ಷ ಲಕ್ಷ ಹಣತೆ ಬೆಳಕಿನ ಚಿತ್ತಾರ..
DAKSHINA KANNADA
ಬಂಟ್ವಾಳ : ಹುಲ್ಲಿನಿಂದಾವೃತ ಜಾಗದಲ್ಲಿ ಆಕಸ್ಮಿಕ ಬೆಂ*ಕಿ
LATEST NEWS
ಮಗನೇ ಹೋದ ಮೇಲೆ ಕಾರು ಯಾಕೆ? 6 ಕೋಟಿಯ BMW ಸಮಾಧಿ ಮಾಡಿದ ತಂದೆ!
LATEST NEWS
ಕಾರಿನಲ್ಲಿ ಪತ್ತೆಯಾಯ್ತು ಪ್ರೇಮಿಗಳ ಶ*ವ!
-
LATEST NEWS6 days agoಟಿ20 ವಿಶ್ವಕಪ್ 2026: ಭಾರತದ ವಿರುದ್ದ ಪಂದ್ಯ ಮೂರು ಪ್ರಮುಖ ಬೇಡಿಕೆ ಮುಂದಿಟ್ಟ ಪಾಕ್ ?
-
bangalore6 days agoಪರಪ್ಪನ ಅಗ್ರಹಾರ ಜೈಲಿನಲ್ಲಿ ಅಲ್-ಹಿಂದ್ ಉಗ್ರ ಸಾವು
-
LATEST NEWS6 days agoಮಂಗಳೂರು ಟು ಬೆಂಗಳೂರು ವಂದೇ ಭಾರತ್ ರೈಲು ಸಂಚಾರ; ಬಿಗ್ ಅಪ್ಡೇಟ್ ಕೊಟ್ಟ ಅಶ್ವಿನಿ ವೈಷ್ಣವ್
-
BIG BOSS6 days agoಬಹುಮಾನ ಹಣದಲ್ಲಿ ಚಿನ್ನ ಖರೀದಿಸಿದ ಬಿಗ್ ಬಾಸ್ ರಕ್ಷಿತಾ ಶೆಟ್ಟಿ
-
DAKSHINA KANNADA3 days agoಮಗಳು ಮುಸ್ಲಿಂ ಯುವಕನನ್ನು ಬಿಟ್ಟು ಬರ್ತಿಲ್ಲ, ನ್ಯಾಯಕ್ಕಾಗಿ ಕೋರ್ಟ್ ಗೆ ಹೋಗಲೂ ಸಿದ್ಧ-ಕಣ್ಣೀರಿಟ್ಟ ವೈಶಾಲಿ ಪೋಷಕರು
-
LATEST NEWS6 days agoಜಾತಿ-ಧರ್ಮ ಮೀರಿದ ಸಂಬಂಧ: ತಬ್ಬಲಿ ಬಾಲಕರಿಗೆ ಆಸರೆಯಾದ ಮುಲ್ಲಾ ದಂಪತಿ
-
DAKSHINA KANNADA7 days ago50ನೇ ವರ್ಷದ ಐಕಳ ಬಾವ “ಕಾಂತಾಬಾರೆ – ಬೂದಾಬಾರೆ” ಜೋಡುಕರೆ ಕಂಬಳ; ಹೀಗಿದೆ ಫಲಿತಾಂಶ
-
DAKSHINA KANNADA4 days agoಮಂಗಳೂರು: ರಾಷ್ಟ್ರೀಯ ಪಿಂಚಣಿ ನೀತಿ ಮತ್ತು ಅದರ ಪ್ರಯೋಜನಗಳ ಕುರಿತ ಜಾಗೃತಿ ಕಾರ್ಯಾಗಾರ

ಮಠಾಧೀಶರ ಉಪಸ್ಥಿತಿಯಲ್ಲಿ ವೈಭವದ ನಡುವೆ ಕೃಷ್ಣನ ದೇವರ ಮೆರವಣಿಗೆ ನಡೆಸಲಾಯ್ತು. ರಥಬೀದಿಯಲ್ಲಿ ಲಕ್ಷದೀಪೋತ್ಸವ ಕಂಡು ಭಕ್ತರು ಪುಳಕಿತರಾದರು.
ಮಠಗಳ ರಥಬೀದಿ ದೀಪಗಳಿಂದ ಕಂಗೊಳಿಸುತ್ತಿದ್ದು, ಭಕ್ತರು ಕೃಷ್ಣನಿಗೆ ಹಣತೆಯಲ್ಲಿ ದೀಪ ಬೆಳಗಿ ಸಂಭ್ರಮಿಸಿದ್ರು .. ಕೃಷ್ಣ ದೇವರು ಯೋಗ ನಿದ್ರೆಯಲ್ಲಿರ್ತಾನೆ ಅನ್ನೋದು ನಂಬಿಕೆ.
ಉತ್ಥಾನ ದ್ವಾದಶಿಯ ದಿನ ಯೋಗ ನಿದ್ರೆ ಪೂರೈಸಿ ರಥಬೀದಿಗೆ ಬರುವ ದೇವರನ್ನು ಬರಮಾಡಿಕೊಳ್ಳಲು ನಡೆದಿರುವ ತಯಾರಿ ಇದು. ಈ ಮಹೋತ್ಸವವನ್ನು ಲಕ್ಷದೀಪೋತ್ಸವ ಎನ್ನುತ್ತಾರೆ.
ಇಳಿ ಹೊತ್ತಿನಲ್ಲಿ ಭಕ್ತರೆಲ್ಲರೂ ರಥಬೀದಿಯಲ್ಲಿ ಸೇರಿ ಸಾವಿರಾರು ದೀಪ ಬೆಳಗಿದರು. ಮಧ್ವ ಸರೋವರದಲ್ಲಿ ಕ್ಷೀರಾಬ್ದಿ ಪೂಜೆ ನಡೆಯಿತು.
ಆ ಬಳಿಕ ಮಠದಿಂದ ಹೊರ ಬರುವ ಕೃಷ್ಣ ದೇವರ ಉತ್ಸವ ಮೂರ್ತಿಯನ್ನು ಮಧ್ವ ಸರೋವರಕ್ಕೆ ಕೊಂಡೊಯ್ಯಲಾಯ್ತು . ಸಾಲು ಸಾಲು ದೀಪಗಳ ನಡುವೆ ಕೃಷ್ಣ ದೇವರ ಮೆರವಣಿಗೆ ನಡೆಯಿತು. ರಥದ ಮುಂಭಾಗದಲ್ಲಿ ಚಂಡೆಗಳ ನಾದ ವೈಭವ ಮೇಳೈಸಿತು.
ಈ ಬಾರಿಯ ಲಕ್ಷ ದೀಪೋತ್ಸವದಲ್ಲಿ ಪರ್ಯಾಯ ಅದಮಾರು ಶ್ರೀಗಳ ಸಹಿತ ಉಳಿದ ಮಠಗಳ ಯತಿಗಳು ಭಾಗವಹಿಸಿದ್ರು.. ನೂರಾರು ಭಕ್ತರು ಸೇರಿ ಎರಡೂ ರಥಗಳನ್ನು ಎಳೆದರು. ಕೋವಿಡ್ ಕಾರಣದಿಂದ ಅಷ್ಟಮಿಯಂದು ಕೃಷ್ಣ ಮಠಕ್ಕೆ ಬರಲು ಸಾಧ್ಯವಾಗದ ಭಕ್ತರು ಲಕ್ಷದೀಪೋತ್ಸವದಲ್ಲಿ ಪಾಲ್ಗೋಂಡು ಸಂತೋಷಗೊಂಡರು.
ಮುಂದಿನ ಮೂರು ದಿನಗಳ ಕಾಲ ಸಮಾನ ವೈಭವದಿಂದ ಲಕ್ಷ ದೀಪೋತ್ಸವ ನಡೆಯುತ್ತೆ. ಲಕ್ಷದೀಪೋತ್ಸವದೊಂದಿಗೆ ಆರಂಭವಾಗುವ ಕೃಷ್ಣ ದೇವರ ರಥೋತ್ಸವ ಮುಂದಿನ ಮಳೆಗಾಲದವರೆಗೆ ನಡೆಯುತ್ತದೆ.
ಅಷ್ಟಮಠಗಳ ರಥಬೀದಿಯಲ್ಲಿ ಸೇವಾರೂಪದಲ್ಲಿ ನಡೆಯುವ ಉತ್ಸವದಿಂದ ದಿನವೂ ಹಬ್ಬದ ವಾತಾವರಣ ಇರಲಿದೆ..




