Connect with us

LATEST NEWS

ಉಡುಪಿ : ಮಣಿಪಾಲದಲ್ಲಿ ದ್ವಿಚಕ್ರ ವಾಹನದ ಮೇಲೆ ಹರಿದ ಬಸ್ – ತಂದೆ ಮಗಳು ಗಂಭೀರ…!

Published

on

ಉಡುಪಿ ಜಿಲ್ಲೆಯ ಮಣಿಪಾಲ ಟೈಗರ್ ಸರ್ಕಲ್ ಬಳಿ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.

ಉಡುಪಿ : ಉಡುಪಿ ಜಿಲ್ಲೆಯ ಮಣಿಪಾಲ ಟೈಗರ್ ಸರ್ಕಲ್ ಬಳಿ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.


ಉಡುಪಿಯಿಂದ ಮಣಿಪಾಲದತ್ತ ಹೋಗುತ್ತಿದ್ದ ಖಾಸಗಿ ಬಸ್ ಪರ್ಕಳ ಕಡೆ ಹೋಗುತ್ತಿದ್ದ ಟಿವಿಎಸ್ ಮೊಪೆಡ್‌ಗೆ ಟೈಗರ್ ಸರ್ಕಲ್ ಬಳಿ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಅಂಜಾರುವ ಕಾಜಾರಗುತ್ತು ನಿವಾಸಿ ರಮೇಶ ಪ್ರಭು (69) ಹಾಗೂ ಸಹಸವಾರೆ ಅವರ ಮಗಳು ಶ್ರೀದೇವಿ ಪ್ರಭು(42) ಗಾಯಗೊಂಡವರು.

ಗಾಯಗೊಂಡ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಳೀಸರು ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದಾರೆ

LATEST NEWS

ಜೈನ ಧರ್ಮವ ನಿರಾಕರಿಸಿದರೆ ಸಲ್ಲೇಖನ ವ್ರತ ಕೈಗೊಳ್ಳಲಾಗುವುದು; ಜೈನಮುನಿ ಹೀಗೆನ್ನಲು ಕಾರಣವೇನು ?

Published

on

ಹುಬ್ಬಳ್ಳಿ :  “ಜೈನ ಅಭಿವೃದ್ಧಿ ನಿಗಮ- ಮಂಡಳಿ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಭರವಸೆ ನೀಡಿತ್ತು. ಆದರೆ , ಇದುವರೆಗೆ ಮೂರು ಬೇಡಿಕೆಗಳು ಮಾತ್ರ ಈಡೇರಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜೈನ ಸಮುದಾಯದ ಯಾವುದೇ ಬೇಡಿಕೆಗಳನ್ನು ಈಡೇರಿಸದೇ ನಿರ್ಲಕ್ಷಿಸಿದ್ದಾರೆ. ಹೀಗಾಗಿ ಶೀಘ್ರವೇ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ಮುಂದುವರೆಸಿದರೆ ಬೆಂಗಳೂರಿನ ವಿಧಾನಸೌಧದ ಎದುರು ಅನ್ನ, ನೀರು ತ್ಯಜಿಸುವ ಮೂಲಕ ಸಲ್ಲೇಖನ ವೃತ ಕೈಗೊಳ್ಳುತ್ತೇವೆ” ಎಂದು  ಗುಣಧರನಂದಿ ಮಹಾರಾಜರು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿಯ ವರೂರು ನವಗ್ರಹತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜರು ಜೈನ ಧರ್ಮದ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಮುಂದುವರಿದರೆ ಸಲ್ಲೇಖನ ವೃತ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಮಾಧ್ಯಮಗಳ ಎದುರು ಜೈನ ಮುನಿ ಕಣ್ಣೀರು ಹಾಕಿ ನೋವು ಹಂಚಿಕೊಂಡಿದ್ದಾರೆ.

ರಾಜ್ಯ ಸರ್ಕಾರದಿಂದ ಜೈನ ಧರ್ಮದ ಬಗ್ಗೆ ದಿವ್ಯ ನಿರ್ಲಕ್ಷ್ಯ ಎಂದು ಆರೋಪಿಸಿರುವ ಗುಣಧರನಂದಿ ಮಹಾರಾಜ, ಮಾಧ್ಯಮಗಳ ಎದುರೇ ಅಳಲು ವ್ಯಕ್ತಪಡಿಸಿದ್ದಾರೆ. ಜೈನ ಅಭಿವೃದ್ಧಿ ನಿಗಮ – ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೋರಿದ್ದಾರೆ. ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜೈನ ಸಮಾಜದ ಬಾಂಧವರಿಂದ ಸದ್ಯದಲ್ಲಿಯೇ ‘ಬೆಂಗಳೂರು ಚಲೋ’ ಗೆ ಗುಣಧರನಂದಿ ಮಹಾರಾಜ ಕರೆ ಕೊಟ್ಟಿದ್ದಾರೆ.

Continue Reading

DAKSHINA KANNADA

ನಿರೂಪಕ ಸಾಯಿಹೀಲ್ ರೈಗೆ ಪಿತೃ ವಿಯೋಗ

Published

on

ಮಂಗಳೂರು : ನಿರೂಪಕ ಸಾಯಿಹೀಲ್ ರೈ ಅವರ ತಂದೆ, ಉದ್ಯಮಿ, ಸಾಯಿ ಭಕ್ತ ಬೋಳಾರ ಮಂಗಳಾದೇವಿ ನಿವಾಸಿ ಬೆಳ್ಳಿಪ್ಪಾಡಿ ಸತೀಶ್ ರೈ ಅಗರಿ (66) ಅವರು ಇಂದು(ಮಾ.20) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರು ಪತ್ನಿ ಶೋಭಾ ರೈ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಬಿ. ಸಿ. ರೋಡ್, ಸಜೀಪ – ನಾಲ್ ಕೈ ತ್ತಾಯ ದೈವಸ್ಥಾನದ ಸಮೀಪ ಇರುವ “ಅಗರಿ ಮನೆ”  ಯಲ್ಲಿ ಸಂಜೆ 4.30 ರಿಂದ 7 ನಡೆಯಲಿದೆ.

 

Continue Reading

FILM

ಟಾಲಿವುಡ್‌ನ 25 ಖ್ಯಾತ ನಟ, ನಟಿಯರ ಮೇಲೆ ಕೇಸ್ ದಾಖಲು

Published

on

ಮಂಗಳೂರು/ಹೈದರಾಬಾದ್: ಟಾಲಿವುಡ್‌ನ 25 ಖ್ಯಾತ ನಟ, ನಟಿಯರಿಗೆ ತೆಲಂಗಾಣ ಪೊಲೀಸರು ಶಾಕ್ ಕೊಟ್ಟಿದ್ದಾರೆ.

ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್, ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ನಿಧಿ ಅಗರವಾಲ್, ಕನ್ನಡದ ನಟಿ ಪ್ರಣೀತಾ ವಿರುದ್ದ ಕೇಸ್ ದಾಖಲಾಗಿದೆ.

32 ವರ್ಷದ ಉದ್ಯಮಿ ಫಣೀಂದ್ರ ಶರ್ಮಾ ಸಲ್ಲಿಸಿದ ಅರ್ಜಿಯ ಮೇರೆಗೆ ಹೈದರಾಬಾದ್‌ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ 318 (4), ಸೆಕ್ಷನ್ 112, 49ರಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಮ್ ಇಂಡಿಯಾಗೆ ಭರ್ಜರಿ ನಗದು ಬಹುಮಾನ ಘೋಷಿಸಿದ ಬಿಸಿಸಿಐ!

ಆನ್‌ಲೈನ್ ಬೆಟ್ಟಿಂಗ್ ದಂಧೆಯಿಂದ ಯುವಜನರು ಹಾಳಾಗುತ್ತಿದ್ದಾರೆ. ಸಮಾಜದಲ್ಲಿ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗಳ ಆಘಾತಕಾರಿ ವಿಚಾರ ಗೊತ್ತಿದ್ದರೂ ಖ್ಯಾತ ನಟ, ನಟಿಯರು ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ.

ಹೀಗಾಗಿ ಇದಕ್ಕೆ ಕಡಿವಾಣ ಹಾಕುವಂತೆ ದೂರು ಸಲ್ಲಿಕೆಯಾಗಿತ್ತು. ಈ ದೂರಿನ ಆಧಾರದ ಮೇಲೆ ನಟ, ನಟಿಯರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page