Connect with us

LATEST NEWS

ಉಡುಪಿ: ಬಂಡೆಗೆ ಢಿಕ್ಕಿ ಹೊಡೆದು ಬೋಟ್ ಮುಳುಗಡೆ-ಅದರಲ್ಲಿದ್ದ ಮೀನುಗಾರರು ಸೇಫ್…

Published

on

ಉಡುಪಿ: ಉಡುಪಿ ಮಲ್ಪೆ ಬಂದರಿನಿಂದ ಡಿಸೆಂಬರ್ 30ರಂದು ಮೀನುಗಾರಿಕೆಗೆ ಹೋಗಿದ್ದ ಬೋಟೊಂದು ಮಂಗಳವಾರ ಬೆಳಗ್ಗಿನ ಜಾವ ಸಮುದ್ರ ಮಧ್ಯೆ ಇರುವ ಬಂಡೆಗೆ ಬಡಿದು ಮುಳುಗಿದ್ದು, ಇದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.


ಬಡಾನಿಡಿಯೂರು ಭಾಸ್ಕರ್ ಎಂ ಪುತ್ರನ ಎಂಬವರಿಗೆ ಸೇರಿದ ಸ್ವರ್ಣಗೌರಿ ಹೆಸರಿನ ಬೋಟು ಇದಾಗಿದ್ದು, ಡಿಸೆಂಬರ್ 30ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.

ಜನವರಿ 3ರಂದು ಬೆಳಿಗ್ಗಿನ ಜಾವ ಕಾಪು ಕಡಲ ಕಿನಾರೆಯ ನಾಏರ 8 ನಾಟಿಕಲ್‌ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಸಮುದ್ರದ ಮಧ್ಯೆ ಪಲ್ಲಲ್ ಸಮೀಪ ಬಂಡೆಗೆ ಬಡಿದ ಪರಿಣಾಮ ಬೋಟ್‌ ಹಲಗೆ ಒಡೆದು ನೀರು ಬರಲಾರಂಭಿಸಿದೆ.

ತಕ್ಷಣ ಬೋಟಿನ ತಾಂಡೆಲರು ಸಮೀಪದ ಬೋಟ್‌ಗೆ ಮಾಹಿತಿ ರವಾನಿಸಿ ರಕ್ಷಣೆ ಕೋರಿದರು.

ಈ ಸಂದರ್ಭ ಧಾವಿಸಿ ಬಂದ ವರುಣ ಬೋಟಿನವರು ಮುಳುಗಡೆಗೊಂಡ ಸ್ವರ್ಣಗೌರಿ ಬೋಟಿನಲ್ಲಿದ್ದ ಎಲ್ಲಾ ಐವರು ಮೀನುಗಾರರನ್ನು ರಕ್ಷಿಸಿದ್ದಾರೆ.

ಕಲ್ಲುಬಂಡೆಗೆ ಬಡಿದ ಬೋಟನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಸುಮಾರು 30 ಲಕ್ಷ ರೂಪಾಯಿಯಷ್ಟುನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

LATEST NEWS

ನಿಧಿ ಪತ್ತೆಯಾದ ಬೆನ್ನಲ್ಲೆ ಸಿಕ್ತು 7 ಹೆಡೆಯ ಘಟಸರ್ಪ ಶಿಲೆ!

Published

on

ಮಂಗಳೂರು/ಗದಗ: ಸದ್ಯ ಎಲ್ಲರ ಚಿತ್ತ ಲಕ್ಕುಂಡಿ ಗ್ರಾಮದತ್ತ. ದಿನನಿತ್ಯ ಅಪರೂಪದ ಐತಿಹಾಸಿಕ ಕುರುಹುಗಳು ಪತ್ತೆಯಾಗುತ್ತಿವೆ. ಇದೀಗ ನಾಗಶಿಲೆ ಪತ್ತೆಯಾಗಿದೆ.

ರವದಿ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಸುಮಾರು ನೂರಾರು ವರ್ಷಗಳಷ್ಟು ಹಳೆಯದಾದ, ಏಳು ಹೆಡೆಗಳನ್ನು ಹೊಂದಿರುವ ಹಾಗೂ ಹಣೆಯ ಮೇಲೆ ನಾಗಮಣಿಯಂತಹ ಅಮೂಲ್ಯ ಕೆತ್ತನೆಯಿರುವ ನಾಗಶಿಲೆ ಪತ್ತೆಯಾಗಿರೋದು ಕುತೂಹಲ ಹುಟ್ಟಿಸಿದೆ.

ಹೇಗಿದೆ ರಚನೆ?

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ರವದಿ ಕುಟುಂಬದ ಜಮೀನಿನ ಬಾವಿಯ ಪಕ್ಕದಲ್ಲಿ ಈ ಶಿಲೆ ಸಿಕ್ಕಿದೆ. ಈ ಶಿಲೆಯಲ್ಲಿ ಹಾವಿನ ಏಳು ಹೆಡೆಗಳನ್ನು ಅತ್ಯಂತ ನೈಪುಣ್ಯತೆಯಿಂದ ಕೆತ್ತಲಾಗಿದೆ. ಇದು ಉಬ್ಬು ಚಿತ್ರದ ಮಾದರಿಯಲ್ಲಿದೆ. ವಿಶೇಷ ಅಂದ್ರೆ, ಹಾವಿನ ಹಣೆಯ ಭಾಗದಲ್ಲಿ ವಜ್ರ ಅಥವಾ ನಾಗಮಣಿಯ ಆಕಾರದ ಕೆತ್ತನೆಯಿದೆ.

ಇದನ್ನೂ ಓದಿ : ಉತ್ತರಕನ್ನಡ: ಕಾರು ಅಪಘಾತದಿಂದ ಇಬ್ಬರು ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್; ಇದು ಅಪಘಾತವಲ್ಲ ಕೊಲೆ!

ವಿಜಯನಗರ ಸಾಮ್ರಾಜ್ಯದ ಕಾಲದ ಕೆತ್ತನೆಯ ಶೈಲಿಯನ್ನು ಈ ಶಿಲೆ ಹೋಲುತ್ತದೆ ಎನ್ನಲಾಗಿದೆ. ಹನ್ನೆರಡನೇ ಶತಮಾನದ ಅನೇಕ ಕಲ್ಲುಗಳು ಮತ್ತು ವಿಗ್ರಹಗಳು ಈಗಾಗಲೇ ಇಲ್ಲಿ ಪತ್ತೆಯಾಗಿವೆ. ಅಲ್ಲದೆ, ಹಳೆಯ ಮನೆಗಳು ಮತ್ತು ತೋಟದ ಮನೆಗಳ ಗೋಡೆಗಳಲ್ಲಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದ ಶಿಲೆಗಳು ಗೋಚರಿಸಿವೆ.ಇದು ಲಕ್ಕುಂಡಿಯ ಇತಿಹಾಸದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಲಿದೆ.

Continue Reading

LATEST NEWS

ಆಳಸಮುದ್ರ ಮೀನುಗಾರರ ಬಲೆಗೆ ಬಿದ್ದ ಲಕ್ಷಾಂತರ ಮೌಲ್ಯದ ತೊರಕೆ ಮೀನು

Published

on

ಉಡುಪಿ: ಆಳಸಮುದ್ರ ಮೀನುಗಾರರಿಗೆ ಬಂಪರ್ ಲಾಟರಿ ಎದ್ದಿದ್ದು ಭರ್ಜರಿ ಬೇಟೆ ಸಿಕ್ಕಿದೆ. ಲಕ್ಷಾಂತರ ಬೆಲೆಯ ತೊರಕೆ ಮೀನು ಬಲೆಗೆ ಬಿದ್ದಿದೆ.


ಲಕ್ಷಾಂತರ ರೂ. ಖರ್ಚು ಮಾಡಿ ತುಂಬ ದೂರದ ತನಕ ಮೀನುಗಾರಿಕೆಗೆ ಹೋದಾಗ ಕೆಲವೊಮ್ಮೆ ಮೀನೇ ಸಿಗದೆ ನಿರಾಶೆ ಅಗುತ್ತೆ. ಆದರೆ ದಿಢೀರ್ ಲಕ್ಷಾಂತರ ಮೌಲ್ಯದ ಮೀನುಗಳು ಬಲೆಗೆ ಬಿದ್ದಿದೆ.

ಇದನ್ನೂ ಓದಿ: ಫೆ.14ರಂದು 16ನೇ ವರ್ಷದ ಜಯ-ವಿಜಯ ಜೋಡುಕರೆ ಕಂಬಳ; ಆಮಂತ್ರಣ ಪತ್ರಿಕೆ ಬಿಡುಗಡೆ

ಕರಾವಳಿಯಲ್ಲಿ ಬೋಟ್ ನಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದವರಿಗೆ ರಾಶಿ ರಾಶಿ ತೊರಕೆ ಮೀನು ಸಿಕ್ಕಿದ್ದು ಫುಲ್ ಖುಷ್ ಆಗಿದ್ದಾರೆ. ಇದನ್ನು ಇಂಗ್ಲೀಷಿನಲ್ಲಿ ಸ್ಟಿಂಗ್ ರೇ ಎಂದು ಕರೆಯಲಾಗುತ್ತದೆ. ಇದನ್ನೇ ಒಣಗಿಸಿ ಮಾರಾಟ ಮಾಡುವ ಉದ್ಯಮವೂ ಇದೆ. ಇದೀಗ ಅರಬ್ಬೀ ಸಮುದ್ರದಲ್ಲಿ‌ ಮೀನುಗಾರರ ಬಲೆಗೆ ಬಿದ್ದ ತೊರಕೆ ಮೀನಿನ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ.

Continue Reading

INTERNATIONAL

ದಾವೋಸ್ ನಲ್ಲಿ ಫ್ರೆಂಚ್‌ ಅಧ್ಯಕ್ಷರ ಭಾಷಣ; ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ಭಾರೀ ಏರಿಕೆ!

Published

on

ದಾವೋಸ್:‌ ವಿಶ್ವ ನಾಯಕರು ಸೇರಿದ್ದ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಸನ್‌ ಗ್ಲಾಸ್‌ ಧರಿಸಿದ್ದರು. ಇದೀಗ ಈ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಬದಲಾದಂತಾಗಿದೆ.


ಹೌದು, ಜಾಗತೀಕವಾಗಿರುವ ಅತ್ಯಂತ ಸಂಕೀರ್ಣ ಮತ್ತು ಆತಂಕಕಾರಿ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಸೇರಿ ಇತರ ವಿಚಾರಗಳ ಬಗ್ಗೆ ಚರ್ಚಿಸಲು ವಿಶ್ವ ನಾಯಕರು ಸೇರಿರುವ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಮಹತ್ವದ ವಿಚಾರಗಳ ಬದಲಾಗಿ, ಎಲ್ಲರ ಕಣ್ಣುಗಳು ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಧರಿಸಿದ್ದ ಸನ್‌ ಗ್ಲಾಸ್‌ ಮೇಲೆ ಬಿದ್ದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ತಮ್ಮ ಕಣ್ಣು ಊದಿಕೊಂಡು ಕೆಂಪಾಗಿ ಕಾಣುತ್ತಿವೆ. ಹೀಗಾಗಿ ಸನ್‌ ಗ್ಲಾಸ್‌ ಧರಿಸುವ ಅನಿವಾರ್ಯತೆ ಇದೆ ಎಂದು ಹೇಳಿಕೊಂಡಿದ್ದರು.

“ದಯವಿಟ್ಟು ಸನ್ ಗ್ಲಾಸ್ ಧರಿಸಿರುವ ನನ್ನ ಕಣ್ಣಿನ ನೋಟಕ್ಕಾಗಿ ಕ್ಷಮಿಸಿ, ಇದು ಸಂಪೂರ್ಣವಾಗಿ ನಿರುಪದ್ರವ” ಎಂದು ಹೇಳಿದ್ದರು.

ಇದನ್ನೂ ಓದಿ: ಮದುವೆ ಮನೆಯಲ್ಲಿ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್..!‌?

ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ದಿಢೀರ್‌ ಏರಿಕೆ!
ಅಧ್ಯಕ್ಷರು ನೀಡಿದ ಹೇಳಿಕೆಯಿಂದ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಖಲಾಯಿಸಿದೆ. ಅದರ ತಯಾರಕ ಐವಿಷನ್ ಟೆಕ್‌ನ ಷೇರುಗಳು ಗುರುವಾರ ಸುಮಾರು 28% ರಷ್ಟು ಏರಿಕೆ ಕಂಡಿವೆ. ಫ್ರೆಂಚ್ ಐಷಾರಾಮಿ ಕನ್ನಡಕ ಬ್ಯಾಂಡ್ ಹೆನ್ರಿ ಜೂಲಿಯನ್ ಅನ್ನು ಹೊಂದಿರುತ ಐವಿಷನ್ ಟೆಕ್, ಮ್ಯಾಕ್ರನ್ ಧರಿಸಿದ್ದ ಸನ್ ಗ್ಲಾಸ್ ಪೆಸಿಫಿಕ್ S 01 ಮಾದರಿಯಾಗಿದ್ದು, ಕಂಪನಿಯ ವೆಬ್‌ಸೈಟ್‌ನಲ್ಲಿ ಇದರ ಬೆಲೆ 659 ಯುರೋಗಳ ಎಂದು ಬುಧವಾರ ಹೇಳಿದೆ ಎಂದು ವರದಿಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page