Connect with us

DAKSHINA KANNADA

ಸೊರಕೆ ಆರೋಪಕ್ಕೆ ಅಣ್ಣಾಮಲೈ ಹೆಲಿಕಾಪ್ಟರ್ ತಪಾಸಣೆಗೆ ಹೋಗಿದ್ದ ಅಧಿಕಾರಿಗೆ ಕಾದಿತ್ತು ಬಿಗ್ ಶಾಕ್.!

Published

on

ಆರೋಪದ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಅಣ್ಣಾಮಲೈ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದಾರೆ.  ಲ್ಯಾಂಡ್ ಆಗಿದ್ದ ಹೆಲಿಕಾಪ್ಟರ್ ತಪಾಸಣೆಗೆ ಹೋದ ಚುನಾವಣಾ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.

ಉಡುಪಿ: ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರು ಅಣ್ಣಾಮಲೈ ಮೇಲೆ ಹೆಲಿಕಾಪ್ಟರ್ ನಲ್ಲಿ ಹಣ ತಂದಿದ್ದಾರೆ ಎನ್ನುವ ಆರೋಪ ಹೊರಿಸಿದ್ದರು

ಈ ಆರೋಪದ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಅಣ್ಣಾಮಲೈ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದಾರೆ.  ಲ್ಯಾಂಡ್ ಆಗಿದ್ದ ಹೆಲಿಕಾಪ್ಟರ್ ತಪಾಸಣೆಗೆ ಹೋದ ಚುನಾವಣಾ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಣ್ಣಮಲೈ ಅವರನ್ನು ಆಹ್ವಾನಿಸಲಾಗಿತ್ತು. ಹಾಗಾಗಿ ಹೆಲಿಕ್ಯಾಪ್ಟರ್ ಮೂಲಕ ಅಣ್ಣಾಮಲೈ ಅವರು ಕಾಪುಗೆ ಆಗಮಿಸಿದ್ದರು.

ಇದೇ ವಿಚಾರವಾಗಿ ಕಾಪು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಅಣ್ಣಾಮಲೈಯವರು ಬರುವ ಹೆಲಿಕಾಪ್ಟರ್ ನಲ್ಲಿ ಹಣ ತೆಗೆದುಕೊಂಡು ಬರಲಾಗಿದೆ, ಚುನಾವಣಾ ಆಯೋಗ ಅದನ್ನ ಪರಿಶೀಲನೆ ಮಾಡಬೇಕು ಅಂತ ಹೇಳಿಕೆ ನೀಡಿದ್ದರು‌.

ಹೀಗಾಗಿ, ಜಿಲ್ಲೆಯಾ ಚುನಾವಣಾ ಅಧಿಕಾರಿಗಳು ಅಣ್ಣಾಮಲೈ ಯವರ ಬ್ಯಾಗ್ ಇನ್ನಿತರ ವಸ್ತುಗಳನ್ನು ಪರಿಶೀಲನೆ ಮಾಡಿದ್ದಾರೆ.

ಇನ್ನು ತಪಾಸಣೆ ವೇಳೆ ಯಾವುದೇ ಹಣ ಅಥವಾ ದಾಖಲೆಗಳು ಸಿಕ್ಕಿಲ್ಲ ಎನ್ನುವ ಪ್ರಕಟಣೆಯನ್ನು ಚುನಾವಣಾ ಅಧಿಕಾರಿಗಳು ಹೊರಡಿಸಿದ್ದಾರೆ.

ತಪಾಸಣೆ ನಡೆಸಿ ವಾಹನದಲ್ಲಿ ಒಂದು ಬ್ಯಾಗ್ ಇದ್ದು ಅದರಲ್ಲಿ 2 ಜೊತೆ ಬಟ್ಟೆಗಳು ಹಾಗೂ ಕುಡಿಯುವ ನೀರಿನ ಬಾಟಲ್ ಗಳು ಮಾತ್ರ ಇದೆಯಂತ ವರದಿ ನೀಡಿದ್ದಾರೆ.

DAKSHINA KANNADA

ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ, ಇನ್ನೋರ್ವನಿಗಾಗಿ ಶೋಧ

Published

on

ಮಂಗಳೂರು : ಜಾರ್ಖಂಡ್ ಮೂಲದ ವಲಸೆ ಕಾರ್ಮಿಕ ದಿಲ್‌ಜಾನ್‌ ಅನ್ಸಾರಿ ಎಂಬಾತನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದ ಆರೋಪಿಗಳಾದ ಕೂಳೂರು ನಿವಾಸಿ ಸಾಗರ್‌, ಧನುಷ್‌, ಲಾಲು ಯಾನೆ ರತೀಶ್‌ ಮತ್ತು ಮೋಹನ್ ಎಂಬ ನಾಲ್ವರ ಪೈಕಿ ಕಾವೂರು ಪೊಲೀಸರು ರತೀಶ್ ದಾಸ್ ಯಾನೆ ಲಾಲು (32), ಧನುಷ್ (24) ಮತ್ತು ಸಾಗರ್ (24) ಎಂಬವರನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


ಜನವರಿ 11 ರಂದು ಸಂಜೆ ಸುಮಾರು 6 :05ರ ಸುಮಾರಿಗೆ ಜಾರ್ಖಂಡ್ ಮೂಲದ ಕಾರ್ಮಿಕ ದಿಲ್‌ಜಾನ್ ಅನ್ಸಾರಿ ಎಂಬಾತನನ್ನು ತಡೆದು ನಿಲ್ಲಿಸಿದ ನಾಲ್ವರು ಆರೋಪಿಗಳು, ‘ನೀನು ಬಾಂಗ್ಲಾದೇಶದವನು’ ಎಂದು ಕೂಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎಂದು ದಿಲ್‌ಜಾನ್‌ ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಜೊತೆಗೆ 3(5) ಅಡಿ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮಂಗಳೂರಿನ ಪೆಡ್ಲರ್‌ಗಳಿಗೆ ಡ್ರಗ್‌ ಸಪ್ಲೈ ಮಾಡುತ್ತಿದ್ದ ಉಗಾಂಡ ಮಹಿಳೆ ಅರೆಸ್ಟ್

ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೋರ್ವ ಆರೋಪಿ ಕಾವೂರು ನಿವಾಸಿ ಮೋಹನ್‌ ಎಂಬಾತ ಪರಾರಿಯಾಗಿದ್ದು, ಈತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಈಗಾಗಲೇ ಬಂಧಿತ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

Continue Reading

DAKSHINA KANNADA

ಅನುಪಮ ಮಹಿಳಾ ಮಾಸಿಕ ಪತ್ರಿಕೆ; ಜ.15ರಂದು ಬೆಳ್ಳಿ ಹಬ್ಬ ಸಂಭ್ರಮ, ವಿಶೇಷ ಸಂಚಿಕೆ ಬಿಡುಗಡೆ

Published

on

ಮಂಗಳೂರು: ಅನುಪಮ ಮಹಿಳಾ ಮಾಸಿಕ ಪತ್ರಿಕೆಯ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಜ.15ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ.


ಬೆಳ್ಳಿ ಹಬ್ಬವನ್ನು ಖ್ಯಾತ ಸಾಹಿತಿ ಡಾ. ಕೆ. ಷರೀಫಾ ಉದ್ಘಾಟಿಸಲಿದ್ದಾರೆ ಎಂದು ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ ನಡೆಯಲಿದೆ. ಗೌರವ ಅತಿಥಿಗಳಾಗಿ ಸ್ಪೀಕರ್ ಯು.ಟಿ ಖಾದರ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಅವರನ್ನು ಕೂಡಾ ಸನ್ಮಾನಿಸಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಪ್ರತಾಪ್‌ಸಿಂಹ ನಾಯಕ್‌

ಸುದ್ದಿಗೋಷ್ಠಿಯಲ್ಲಿ ಕರಾವಳಿ ಇತರ ಮಹಿಳಾ ಸಾಹಿತಿಗಳು, ಸ್ವಾಗತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Continue Reading

DAKSHINA KANNADA

ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಪ್ರತಾಪ್‌ಸಿಂಹ ನಾಯಕ್‌

Published

on

ಮಂಗಳೂರು: ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆದಿದ್ದು, ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಆಗುವುದಕ್ಕಿಂತ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದ ರೈತರ, ಮಹಿಳೆಯರ, ಕಾರ್ಮಿಕರ ಬಗ್ಗೆ ಚರ್ಚೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್‌ ಆರೋಪಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡು ದಿನಗಳ ಸಮಯಾವಕಾಶ ಕಡಿಮೆ ಆಯಿತು ಎನ್ನುವ ಕಾರಣಕ್ಕೆ ಎರಡು ದಿನಗಳ ಕಾಲಾವಕಾಶ ವಿಸ್ತರಿಸಿ ಎಂದು ಬಿಜೆಪಿ ಆಗ್ರಹಿಸಿದರೂ ಅದನ್ನು ವಿಸ್ತರಿಸಿಲ್ಲ. ಕೇವಲ ನಾಮಾಕಾವಸ್ತೆ ಉತ್ತರಕರ್ನಾಟಕದ ಸಮಸ್ಯೆ ಬಗ್ಗೆ ಬೆಳಗಾವಿಯಲ್ಲಿ ಮಾಡಲಾಗಿದೆಯೇ ಹೊರತು ಬೇರೆ ವಿಚಾರಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ದೂರಿದರು.

ಈಗ ಮತ್ತೆ ತಕ್ಷಣ ಅಧಿವೇಶನ ಕರೆಯುವ ಬಗ್ಗೆ ಜೀ ರಾಮ್‌ಜೀ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಆದರೆ ಬಿಜೆಪಿ ಬಹಿರಂಗ ಚರ್ಚೆಗೂ ಸಿದ್ದ. ನಾವು ಚರ್ಚೆಯಿಂದ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಇದನ್ನೂ ಓದಿ: ಡೆಲಿವರಿ ಬಾಯ್‌ ಆದ ರಾಜ್ಯಸಭಾ ಸಂಸದ; ವೀಡಿಯೋ ವೈರಲ್

ಆದರೆ ಈ ಚರ್ಚೆ ಪಾರ್ಲಿಮೆಂಟ್‌ನಲ್ಲಿ ಆಗುವಾಗ ನೀವು ಪ್ರತಿಪಕ್ಷವಾಗಿ ಏನು ಮಾಡಿದಿರಿ..? ಇದಕ್ಕೆ ಸಂಬಂಧಪಟ್ಟ ಮಂತ್ರಿಗಳು ಶಿವರಾಜ್ ಸಿಂಗ್ ಚೌಹಾನ್‌ ಅವರನ್ನು ಮಾತನಾಡ್ಲಿಕ್ಕೆ ಬಿಡಲಿಲ್ಲ. ನೀವು ಅಂದು ನಡೆದುಕೊಂಡ ರೀತಿ ಎಂತದ್ದು. ಕಾಂಗ್ರೆಸ್ಸಿಗೆ ಈ ಮಸೂದೆಯ ಚರ್ಚೆ ಬೇಕಾಗಿಲ್ಲ. ಜನರ ದಾರಿತಪ್ಪಿಸಲು ಅವರು ಮುಂದಾಗಿದ್ದಾರೆ. ಕೇಂದ್ರದ ಯೋಜನೆಗಳ ಬಗ್ಗೆ ನಿಮ್ಮ ವಿರೋಧವೇಕೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page