Connect with us

LATEST NEWS

Udupi: ಅನ್ನಭಾಗ್ಯ ವಿಚಾರದಲ್ಲಿ ಕೇಂದ್ರದಿಂದ ನಕಾರ ಆರೋಪ- ಕಾಂಗ್ರೆಸ್ ನಿಂದ ಪ್ರತಿಭಟನೆ

Published

on

ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ನಕಾರ ಮಾಡಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು.

ಉಡುಪಿ: ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ನಕಾರ ಮಾಡಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಿಜೆಪಿ ದ್ವೇಷದ ರಾಜಕಾರಣ ಮತ್ತು ಬಡವರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

LATEST NEWS

ಅಪರೂಪದಲ್ಲೇ ಅಪರೂಪವಾದ ‘ಗೋಲ್ಕೊಂಡಾ ನೀಲಿ ವಜ್ರ’ ಹರಾಜು..!?

Published

on

ಮಂಗಳೂರು/ನವದೆಹಲಿ: ವಿಶ್ವದಲ್ಲೇ ಅತೀ ಅಪರೂಪವಾದ ‘ಗೋಲ್ಕೊಂಡಾ ನೀಲಿ ವಜ್ರ’ ವನ್ನು ಮೇ 14ರಂದು ಇದೇ ಮೊದಲ ಬಾರಿಗೆ ಹರಾಜಿಗೆ ಹರಾಜಿಗಿಡಲಾಗಿದೆ. “ಮ್ಯಾಗ್ನಿಫಿಸೆಂಟ್ ಜ್ಯುವೆಲ್ಸ್” ಕಾರ್ಯಕ್ರಮದಲ್ಲಿ ಐತಿಹಾಸಿಕ ವಜ್ರವನ್ನ ಹರಾಜಿಗೆ ಇಡುತ್ತಿದ್ದಾರೆ.


ಈ ಕುರಿತು ಕ್ರಿಸ್ಟೀಸ್ ಇಂಟರ್‌ನ್ಯಾಷನಲ್ ಜ್ಯುವೆಲ್ಲರಿ ಮುಖ್ಯಸ್ಥರಾದ ರಾಹುಲ್ ಕಡಕಿಯಾ ಈ ಬಗ್ಗೆ ಮಾಹಿತಿ ಕೊಟ್ಟಿದ್ದು, ಈ ಉಂಗುರ ಒಂದು ಸರಿ ಇಂದೋರ್ ಮಹಾರಾಜರ ಒಡೆತನದಲ್ಲಿತ್ತು. ಆದ್ರೆ, ಇಲ್ಲಿಯವರೆಗೆ ಉಂಗುರವನ್ನು ಹರಾಜಿಗೆ ಇಟ್ಟಿರಲಿಲ್ಲ. ಈಗ ನಾವು ಈ ನೀಲಿ ಬಣ್ಣದ ಗೋಲ್ಕೊಂಡ ವಜ್ರವನ್ನು ಹರಾಜಿಗೆ ಇಡೋದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಮಾಹಿತಿ ಕೊಟ್ಟಿದ್ದಾರೆ.

ಗೋಲ್ಕೊಂಡಾ ನೀಲಿ ವಜ್ರದ ಇತಿಹಾಸ
ಈ ವಜ್ರವು ತೆಲಂಗಾಣದ ಗೋಲ್ಕೊಂಡಾ ಗಣಿಯಲ್ಲಿ ದೊರೆತಿತ್ತು. 1920ರ ದಶಕದಲ್ಲಿ ಮಧ್ಯಪ್ರದೇಶದ ಇಂದೋರ್‌ನ ಹೋಳ್ಕರ್ ರಾಜವಂಶದ ಮಹಾರಾಜ ಯಶವಂತರಾವ್ ಹೋಳ್ಕರ್ ಅವರಿಗೆ ಸೇರಿದ್ದಾಗಿದೆ. ಯಶವಂತರಾವ್ ಹೋಳ್ಕರ್​- ಸಂಯೋಗಿತಾಬಾಯಿ ದೇವಿ ದಂಪತಿ ವೈಭವೋಪೇತ ಜೀವನಶೈಲಿಗೆ ಹೆಸರುವಾಸಿ. ಸಂಯೋಗಿತಾಬಾಯಿ ದೇವಿ ಅವರು ಗೋಲ್ಕೊಂಡ ಬ್ಲೂ ಹಾಗೂ ಇಂದೋರ್​ ಪಿಯರ್ಸ್​ ವಜ್ರಗಳಿಂದ ಮಾಡಿದ್ದ ಹಾರ ಧರಿಸುತ್ತಿದ್ದರು.

ಇದನ್ನೂ ಓದಿ: 50 ಕೋಟಿ ರೂ. ಮೌಲ್ಯದ ನಾಯಿಯ ಅಸಲಿ ಬೆಲೆ ಗೊತ್ತಾದಾಗ ಇಡಿ ಶಾಕ್..!?

ಪಾಶ್ಚಿಮಾತ್ಯ ಕಲೆ, ಆಭರಣಗಳ ಬಗ್ಗೆ ಅಪಾರ ಒಲವು ಹೊಂದಿದ್ದ ಯಶವಂತರಾವ್​ ಹೋಳ್ಕರ್​ ಅವರು ತಮ್ಮ ಬದುಕಿನ ಬಹುತೇಕ ದಿನಗಳನ್ನು ವಿದೇಶಗಳಲ್ಲಿಯೇ ಕಳೆದಿದ್ದರು. ಈ ವೇಳೆ ಗೋಲ್ಕೊಂಡ ವಜ್ರವನ್ನು ಅಮೆರಿಕದ ಪ್ರಸಿದ್ಧ ಚಿನ್ನಾಭರಣ ಸಂಸ್ಥೆ ಹ್ಯಾರಿ ವಿನ್ಸ್​ಟನ್​ 1947 ರಲ್ಲಿ ಖರೀದಿಸಿದ್ದ. ಇದೀಗ, ಚಿನ್ನಾಭರಣಗಳ ಪ್ರಸಿದ್ಧ ವಿನ್ಯಾಸಕ ಜಾರ್​ ಅವರಿಂದ ರೂಪಿಸಲ್ಪಟ್ಟ ಉಂಗುರದಲ್ಲಿ ಹೊಂದಿಸಲಾಗಿರುವ 23.24 ಕ್ಯಾರೆಟ್‌ನ ಈ ವಜ್ರವು ಹರಾಜಾಗಲಿದೆ.

ಗೋಲ್ಕೊಂಡಾ ನೀಲಿ ವಜ್ರದ ಬೆಲೆ ಎಷ್ಟು?


ಐತಿಹಾಸಿಕ ಹಿನ್ನೆಲೆ ಹೊಂದಿರುವ 23.24 ಕ್ಯಾರೆಟ್‌ನ ನೀಲಿ ವಜ್ರವನ್ನು ಹರಾಜಿನಲ್ಲಿ 35 ರಿಂದ 50 ಮಿಲಿಯನ್ ಡಾಲರ್ ಬೆಲೆಯನ್ನ ನಿಗದಿಪಡಿಸಲಾಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 300 ಕೋಟಿ ರೂಪಾಯಿಂದ 430 ಕೋಟಿ ರೂಪಾಯಿ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ.

Continue Reading

LATEST NEWS

ತುಳಸಿ ಗಿಡದ ಮುಂದೆ ಹಚ್ಚುವ ದೀಪದ ಹಿನ್ನಲೆ ಏನು ಗೊತ್ತಾ ?

Published

on

ತುಳಸಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನ ಮಾನವಿದೆ. ತುಳಸಿ ಗಿಡಕ್ಕೆ ಕಟ್ಟೆ ಕಟ್ಟಿ ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚಲಾಗುತ್ತದೆ. ಇದರಿಂದ ಮನೆಗೆ ಶುಭ ಮತ್ತು ಆದ್ಯಾತ್ಮಿಕ ಶಕ್ತಿ ಒದಗಿ ಬರುತ್ತದೆ ಎಂದು ನಂಬಲಾಗುತ್ತದೆ. ತುಳಸಿ ಕಟ್ಟೆಯ ಎದುರು ಹಚ್ಚುವ ದೀಪವು ಮನೆಯಿಂದ ಕೆಟ್ಟ ಶಕ್ತಿಗಳನ್ನು ತೆಗೆದುಹಾಕುತ್ತದೆ. ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ದೀಪವನ್ನು ಬೆಳಗಿಸಿದಾಗ, ಬೆಳಕು ಮತ್ತು ಸುವಾಸನೆಯು ಸಹ ಶುಭ ಪರಿಣಾಮವನ್ನು ಬೀರುತ್ತದೆ.

ತುಳಸಿ ಸಸ್ಯವು ಅನೇಕ ಆರೋಗ್ಯ ಪ್ರಯೋಜನಗಳನ್ನು ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದು ಗಾಳಿಯನ್ನು ಶುದ್ಧವಾಗಿಡುವುದಲ್ಲದೆ, ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ದೇಹಕ್ಕೆ ಆರೋಗ್ಯ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ.

ತುಪ್ಪದ ದೀಪ :

ತುಪ್ಪದಿಂದ ಬೆಳಗಿಸಿದ ದೀಪವು ಶುದ್ಧತೆಯನ್ನು ಸಂಕೇತಿಸುತ್ತದೆ. ದಂತಕಥೆಗಳು ಹೇಳುವಂತೆ ಇದು ಮನೆಗೆ ಸಂಪತ್ತನ್ನು ತರುತ್ತದೆ. ತುಪ್ಪದಿಂದ ದೀಪ ಹಚ್ಚುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ದೊರೆಯುತ್ತದೆ. ಮನೆಯಲ್ಲಿ ಗರಿಷ್ಠ ಸಮಸ್ಯೆಗಳು ಮತ್ತು ಅಡೆತಡೆಗಳು ಕಡಿಮೆಯಾಗುತ್ತವೆ. ಕೆಲವರು ತುಳಸಿ ಗಿಡದ ಬಳಿ ಹಿಟ್ಟಿನಿಂದ ಮಾಡಿದ ದೀಪವನ್ನು ಹಚ್ಚುತ್ತಾರೆ. ಇದನ್ನು ಬಹಳ ಶುಭ ಕಾರ್ಯವೆಂದು ಸಹ ಪರಿಗಣಿಸಲಾಗಿದೆ. ಇದು ಮನೆಗೆ ಮಹಾಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ ಎಂಬುವುದಾಗಿ ನಂಬಲಾಗುತ್ತದೆ.

ಮನೆಯಲ್ಲಿ ಆಗಾಗ್ಗೆ ಜಗಳಗಳು, ವಾದಗಳು ಮತ್ತು ಘರ್ಷಣೆಗಳು ನಡೆಯುತ್ತಿದ್ದರೆ, ತುಳಸಿ ಗಿಡದ ಬಳಿ ದೀಪ ಹಚ್ಚುವುದು ಒಳಿತು. ಏಕೆಂದರೆ ಇದರಿಂದ ಶಾಂತಿ ಸಿಗುತ್ತದೆ. ದೀಪ ಹಚ್ಚಿದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ. ಕುಟುಂಬ ಸದಸ್ಯರ ನಡುವಿನ ಪ್ರೀತಿ ಹೆಚ್ಚಾಗುತ್ತದೆ. ಮುಸ್ಸಂಜೆ ಸಮಯದಲ್ಲಿ ತುಳಸಿ ಗಿಡದ ಬಳಿ ದೀಪ ಹಚ್ಚುವುದರಿಂದ ಮನೆಯಲ್ಲಿರುವ ದುರದೃಷ್ಟ ದೂರವಾಗುತ್ತದೆ. ಸಂಜೆ ಹಚ್ಚುವ ದೀಪದ ಬೆಳಕು ಮನೆಗೆ ಮಂಗಳ, ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ತರುತ್ತದೆ.

Continue Reading

LATEST NEWS

ಮತ್ತೊಮ್ಮೆ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಗೂಗಲ್

Published

on

ಭಾರತೀಯ ಮೂಲದ ಸುಂದರ್ ಪಿಚೈ ನೇತೃತ್ವದ ಗೂಗಲ್ ಮತ್ತೊಮ್ಮೆ ತನ್ನ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ. ಭಾರತದಲ್ಲಿ ಜಾಹೀರಾತು, ಮಾರಾಟ ಮತ್ತು ಮಾರ್ಕೆಟಿಂಗ್ ತಂಡಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೆಲಸ ಕಳೆದುಕೊಳ್ಳುವುದು ಖಚಿತ ಎನ್ನಲಾಗಿದೆ.

ಹೈದರಾಬಾದ್ ಮತ್ತು ಬೆಂಗಳೂರಿನ ಕಚೇರಿಗಳಲ್ಲೇ ಹೆಚ್ಚು ಉದ್ಯೋಗ ಕಡಿತ ಇರಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಗೂಗಲ್ ಅಧಿಕೃತವಾಗಿ ಉದ್ಯೋಗ ಕಡಿತದ ನಿಖರ ಸಂಖ್ಯೆಯನ್ನು ಹೇಳಿಲ್ಲ. ಆದರ ಜಾಹೀರಾತು, ಮಾರಾಟ ಮತ್ತು ಮಾರ್ಕೆಟಿಂಗ್ ತಂಡದಲ್ಲಿರುವ ಬಹುತೇಕ ಉದ್ಯೋಗಿಗಳು ವಜಾಗೊಳಿಸುವಿಕೆಯ ತೂಗುಗತ್ತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಆಂಡ್ರಾಯ್ಡ್, ಪಿಕ್ಸೆಲ್ ಸ್ಮಾರ್ಟ್‌ ಫೋನ್‌ಗಳು ಮತ್ತು ಕ್ರೋಮ್ ಬ್ರೌಸರ್ ಗಳನ್ನು ನೋಡಿಕೊಳ್ಳುವ ತನ್ನ ಪ್ಲಾಟ್‌ಫಾರ್ಮ್‌ಗಳು ಮತ್ತು ಬಿಡಿಭಾಗದ ಸಾಧನಗಳ ವಿಭಾಗದಲ್ಲಿ ನೂರಾರು ಉದ್ಯೋಗಗಳನ್ನು ಕಡಿತಗೊಳಿಸುವ ಗೂಗಲ್‌ನ ಇತ್ತೀಚಿನ ನಿರ್ಧಾರದ ನಂತರ ಈ ಕ್ರಮಕ್ಕೆ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page