Connect with us

BANTWAL

ಪಕ್ಷದಲ್ಲಿ ಯು.ಟಿ ಖಾದರ್‌ಗೆ ಮಹತ್ವದ ಜವಾಬ್ದಾರಿ: ಜನಾರ್ದನ ಪೂಜಾರಿ ಭೇಟಿ ಮಾಡಿ ಆಶೀರ್ವಾದ ಪಡೆದ ಖಾದರ್‌

Published

on

ಬಂಟ್ವಾಳ: ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ವಿಧಾನಸಭೆ ವಿರೋಧಪಕ್ಷದ ಉಪನಾಯಕರಾಗಿ ನಿಯುಕ್ತಿಗೊಂಡಿರುವ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಸೋಮವಾರ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದುಕೊಂಡರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ.ಖಾದರ್, “ತನ್ನ ಕೆಲಸ ಕಾರ್ಯಗಳನ್ನು ಗುರುತಿಸಿ ಈ ಜವಾಬ್ದಾರಿಯನ್ನು ನೀಡಲಾಗಿದ್ದು,

ಹಿರಿಯರ ಆಶೀರ್ವಾದ ಪಡೆಯಲು ಪೂಜಾರಿಯವರ ಮನೆಗೆ ಬಂದಿದ್ದೇನೆ. ಹಿರಿಯ ಕಾಂಗ್ರೆಸ್ ನಾಯಕರ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ ಎಂದರು.

ಬಿ.ಕೆ.ಹರಿಪ್ರಸಾದ್ ಅವರು ವಿಧಾನಪರಿಷತ್ತಿನ ಪಕ್ಷದ ನಾಯಕರಾದದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಆಸ್ಕರ್ ಫೆರ್ನಾಂಡಿಸ್, ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಸಹಿತ ಪ್ರಮುಖ ನಾಯಕರ ಆಶೀರ್ವಾದದಿಂದ ಮುನ್ನಡೆಯುತ್ತೇನೆ.

ಎಲ್ಲ ಜಾತಿ ಧರ್ಮದವರೊಂದಿಗೆ ಬೆರೆತು ಕೆಲಸ ಮಾಡುವ ಕಾರಣ ತನಗೆ ಈ ಹುದ್ದೆ ದೊರಕಿದೆ ಎಂದು ಭಾವಿಸುತ್ತೇನೆ ಎಂದರು. , ಅವರು ಹಿರಿಯ ನಾಯಕರಾಗಿದ್ದು, ಪಕ್ಷದಲ್ಲೇ ಇರುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬಳಿಕ ಸುದ್ದಿಗಾರರು ಸಿ.ಎಂ.ಇಬ್ರಾಹಿಂ ಅವರು ಪಕ್ಷ ತ್ಯಾಗದ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಖಾದರ್ “ಸಿ.ಎಂ.ಇಬ್ರಾಹಿಂ ಅವರು ಪಕ್ಷದ ಹಿರಿಯ ನಾಯಕರಾಗಿದ್ದಾರೆ.

ಸದ್ಯ ಪಕ್ಷದ ವರಿಷ್ಠರೊಂದಿಗೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾದ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತ್ಯಜಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿವೆ.

ಈ ನಡುವೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಉಪ ನಾಯಕ ಯು.ಟಿ.ಖಾದರ್, ಇಬ್ರಾಹಿಂ ಅವರು ಪಕ್ಷದಲ್ಲಿ ಉಳಿಯುತ್ತಾರೆ.

ಪಕ್ಷ ಬಲಪಡಿಸಲು ಹಾಗೂ ಬಿಜೆಪಿ ಕಿತ್ತೊಗೆಯಲು ಸಹಕಾರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಪೂಜಾರಿ, ದೇವಸ್ಥಾನ, ಮಸೀದಿ, ಚರ್ಚುಗಳಿಗೆ ತೆರಳಿ ಸರ್ವಧರ್ಮದ ದೇವರ ಅನುಗ್ರಹ ಪಡೆದುಕೊಂಡು, ಉತ್ತಮವಾಗಿ ಕೆಲಸ ಕಾರ್ಯಗಳನ್ನು ನಡೆಸುವಂತೆ ಯು.ಟಿ.ಖಾದರ್ ಅವರಿಗೆ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್,

ಇರಾ ಗ್ರಾಪಂ ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.
.

Advertisement
Click to comment

Leave a Reply

Your email address will not be published. Required fields are marked *

BANTWAL

ಬ್ರಹ್ಮರಕೊಟ್ಲು ಟೋಲ್ ಗೇಟ್ ಗೆ ಹಾನಿ ಮಾಡಿ ಸಿಬಂದಿ ಮೇಲೆ ಹಲ್ಲೆ; ಲಾರಿ ಚಾಲಕ, ಕ್ಲೀನರ್ ಬಂಧನ

Published

on

ಬಂಟ್ವಾಳ: ಬಿ.ಸಿ.ರೋಡು ಬಳಿಯ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಸೇರಿಕೊಂಡು ಟೋಲ್ ಗೇಟ್ ಗೆ ಹಾನಿ ಮಾಡಿ ಸಿಬಂದಿಗೆ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದ್ದು, ಘಟನೆಗೆ ಸಂಬಂಧಿಸಿ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಮೂಲದ ಲಾರಿ ಚಾಲಕ ಭರತ್ (23) ಮತ್ತು ಕ್ಲೀನರ್ ತೇಜಸ್ (26) ಬಂಧಿತ ಆರೋಪಿಗಳಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಟೋಲ್ ಮೇಲ್ವಿಚಾರಕ ಕಾಸರಗೋಡಿನ ಮುಳ್ಳೇರಿಯಾ ನಿವಾಸಿ ಪ್ರಶಾಂತ್ ಬಿ. ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಗಳು ಸೋಮವಾರ ಮುಂಜಾನೆ ಟಾಟಾ ಲಾರಿಯಲ್ಲಿ ಟೋಲ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದಿದ್ದು, ಟೋಲ್ ಸಿಬಂದಿ ಹಣ ಕೇಳಿದಾಗ ಲಾರಿಯನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಟೋಲ್ ಗೇಟ್ ಗೆ ಹಾನಿ ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡು| ಕಾರ್ಮಿಕನ ಮೇಲೆ ಭೀಕರವಾಗಿ ಹಲ್ಲೆ ಗೈದ ಅಪ್ರಾಪ್ತ ವಯಸ್ಕರು

ಬಳಿಕ ಚಾಲಕ ಹಾಗೂ ಕ್ಲೀನರ್ ಟೋಲ್ ಸಿಬಂದಿ ಅಂಕಿತ್ ಮತ್ತು ರೋಹಿತ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಬಳಿಕ ಇನ್ನೊಂದು ಪಿಕ್ ಅಪ್ ವಾಹನದಲ್ಲಿದ್ದ ಇಬ್ಬರನ್ನು ಕರೆದುಕೊಂಡು ಟೋಲ್ ಬೂತ್ ಗೆ ಅಕ್ರಮವಾಗಿ ಪ್ರವೇಶಿಸಿ ಮತ್ತೆ ಸಿಬಂದಿಗೆ ಹಲ್ಲೆ ನಡೆಸಿರುತ್ತಾರೆ.

ಈ ಕುರಿತ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Continue Reading

BANTWAL

ಬಂಟ್ವಾಳ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯೊಳಗೆ ಪತ್ತೆ

Published

on

ಬಂಟ್ವಾಳ: ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕಲ್ಲಮಜಲು-ಸೆರ್ಕಳ ರಸ್ತೆಯ ವಾಸವ್ಯವಿಲ್ಲದ ದಿ.ಬಟ್ಯ ನಾಯ್ಕರ ಮನೆಯ ಬಾವಿಯೊಳಗೆ ಪುರುಷನ ಮೃತದೇಹ ಪತ್ತೆಯಾಗಿತ್ತು. ಇದು ಹಲವು ಸಮಯಗಳ ಹಿಂದೆ ನಾಪತ್ತೆಯಾಗಿದ್ದ ಕೊಳ್ನಾಡು ನಿವಾಸಿ ಪೂವಪ್ಪ ಪೂಜಾರಿ ಅವರ ಶವ ಎಂದು ಗುರುತು ಪತ್ತೆಹಚ್ಚಲಾಗಿದೆ.

ಸ್ಥಳೀಯರಿಗೆ ದುರ್ವಾಸನೆ ಬಂದ ಕಾರಣ ಹುಡುಕಾಡಿದಾಗ ವಾಸ್ತವ್ಯವಿಲ್ಲದ ಪಾಳು ಬಿದ್ದ ಮನೆಯಂಗಳದ ಬಾವಿಯಲ್ಲಿ ಶವ ಕಂಡುಬಂದಿತ್ತು. ತಕ್ಷಣವೇ ಸ್ಥಳೀಯರು ವಿಟ್ಲ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಮುರಳೀಧರ ವಿಟ್ಲ ನೇತೃತ್ವದ “ಫ್ರೆಂಡ್ಸ್ ವಿಟ್ಲ” ತಂಡದವರು ಸ್ಥಳಕ್ಕಾಗಮಿಸಿ 57 ಅಡಿ ಆಳದ ಬಾವಿಯೊಳಗೆ ಇದ್ದ ಶವ ಮೇಲಕ್ಕೆತ್ತಿದ್ದಾರೆ.

ಇದನ್ನೂ ಓದಿ: ಮದ್ವೆಯಾಗು ಅಂದಿದಕ್ಕೆ ಪ್ರೇಯಸಿಯ ಕತ್ತು ಕೊಯ್ದು ಹತ್ಯೆ ಮಾಡಿದ ಪ್ರಿಯಕರ!

ಫ್ರೆಂಡ್ಸ್ ವಿಟ್ಲ ತಂಡದ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದು ಸ್ಥಳೀಯರು ಸಹಕಾರ ನೀಡಿದ್ದಾರೆ. ಪೂವಪ್ಪ ಪೂಜಾರಿ ಆತ್ಮಹತ್ಯೆ ಬಗ್ಗೆ ಪತ್ನಿ ಸುಶೀಲಾ ಎಂಬವರು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಬಂಟ್ವಾಳ: ಮೆದುಳಿನ ರಕ್ತ ಸ್ರಾವದಿಂದ ಮೃತಪಟ್ಟ ಯುವತಿ; ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ತಾಯಿ

Published

on

ಬಂಟ್ವಾಳ: ಮೆದುಳಿನ ರಕ್ತ ಸ್ರಾವದಿಂದ ಮೃತಪಟ್ಟ ಅವಿವಾಹಿತ ಯುತಿಯೋರ್ವಳ ಅಂಗಾಂಗವನ್ನು ದೊಡ್ಡ ಮನಸ್ಸು ದಾನ ಮಾಡಿದ ತಾಯಿ ಹೃದಯದ ಶ್ರೀಮಂತಿಕೆಗೆ ತಲೆಬಾಗುವಂತೆ ಮಾಡಿದೆ.


ಸುಳ್ಯದ ರಥಬೀದಿ ನಿವಾಸಿಯಾಗಿದ್ದ ಮಮತಾ ಶೆಟ್ಟಿ ಅವರು ಎಂಬವರ ಪುತ್ರಿ ಸಿಂಧು ಶೆಟ್ಟಿ ಮೃತಪಟ್ಟ ಯುವತಿ.

ಏನಿದು ಘಟನೆ
ಸಿಂಧು ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಡಿ.16 ರಂದು ಬ್ಯಾಂಕ್ ನಿಂದ ಮನೆಗೆ ಬಸ್ ನಲ್ಲಿ ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ತಲೆನೋವು ಬಂದು ಸ್ಥಳೀಯ ಆಸ್ಪತ್ರೆಗೆ ಹೋಗಿ ಪರೀಕ್ಷೆ ನಡೆಸಿದರು. ಅಲ್ಲಿಂದ ಬಳಿಕ ಸುಳ್ಯದ ಕೆ.ವಿ‌.ಜಿ., ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಯಿತು.

ಮೆದುಳಿನ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆ ಬಳಿಕ ಒಮ್ಮೆ ಪ್ರಜ್ಞೆ ಬಂದಿತ್ತಾದರೂ ಬಳಿಕ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಕೋಮಾಗೆ ಜಾರಿದ್ದರು.

ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡರೂ, ಯಂತ್ರಗಳ ಸಹಾಯದಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಲಿವರ್, ಕಣ್ಣುಗಳು ಮುಂತಾದ ಪ್ರಮುಖ ಅಂಗಗಳನ್ನು ಉಳಿಸಬಹುದಾಗಿದೆ. ಈ ಅಂಗಗಳನ್ನು ದಾನ ಮಾಡುವುದರಿಂದ ಇತರರಿಗೆ ಜೀವದಾನ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ತಾಯಿ ಮಮತಾ ಅವರು ಮನೆಯವರೊಂದಿಗೆ ಚರ್ಚಿಸಿ ಅಂಗಾಂಗಗಳನ್ನು ದಾನಮಾಡುವ ನಿರ್ಧಾರ ಮಾಡಿದರು.

ಮೆದುಳು ನಿಷ್ಕ್ರಿಯಗೊಂಡಿದ್ದ ಕಾರಣ ಆಕೆಯ ಅಂಗಾಂಗಗಳನ್ನು ದಾನ ಮಾಡಲು ಮನೆಯವರು ನಿರ್ಧರಿಸಿದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಮೈಸೂರಿನ ಅಪೋಲೋ ಹಾಗೂ ಮಂಗಳೂರು ಎ.ಜೆ, ಕೆ.ಎಂ.ಸಿ, ಹಾಗೂ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ರವಾನಿಸಿದರು. ಈ ಪೈಕಿ ಮೈಸೂರಿಗೆ ಅಂಗಾಂಗವನ್ನು ಸುಮಾರು 3 ಗಂಟೆ ವೇಳೆಗೆ ಆಂಬುಲೆನ್ಸ್ ಮೂಲಕ ಸಾಗಿಸಿದ್ದಾರೆ.

ಅಂಗಾಂಗ ದಾನ ಮಾಡಿದ ಬಳಿಕ ಸಿಂಧು ಅವರ ಮೃತದೇಹವನ್ನು ಸಿದ್ದಕಟ್ಟೆಯ ಮಾವ ರಾಜೇಶ್ ಎಂಬವರ ಮನೆಗೆ ಕರೆತರಲಾಯಿತು. ಅಲ್ಲಿ ವಿಧಿವಿಧಾನಗಳನ್ನು ಮಾಡಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಮೃತ ಸಿಂಧು ಅವರುತಾಯಿ, ಸಹೋದರಿಯನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page