Connect with us

LATEST NEWS

ಕ್ರಿಕೆಟ್ ಲೋಕಕ್ಕೆ ಒಂದೇ ದಿನ ಎರಡೆರಡು ಆಘಾತ; ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ನಿವೃತ್ತಿ ಘೋಷಣೆ

Published

on

ಮಂಗಳೂರು/ನವದೆಹಲಿ: ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಏಕದಿನ ಕ್ರಿಕೆಟ್​ಗೆ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಇದೀಗ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಹೀಗಾಗಿ ಕ್ರಿಕೆಟ್​ ಲೋಕಕ್ಕೆ ಒಂದೇ ದಿನ ಎರಡೆರಡು ಆಘಾತ ಎದುರಾದಂತಾಗಿದೆ.

ಇತ್ತೀಚೆಗೆ ಐಪಿಎಲ್ 2025 ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದ ಕ್ಲಾಸೆನ್ ಅವರು ಇನ್‌ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ಇದು ನನಗೆ ದುಃಖದ ದಿನ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನನಗೂ ಹಾಗೂ ನನ್ನ ಕುಟುಂಬಕ್ಕೂ ಈ ನಿರ್ಧಾರವನ್ನು ತೆಗೆದುಕೊಳ್ಳಲು ತುಂಬಾ ಸಮಯ ಹಿಡಿಯಿತು. ಇದು ನಿಜಕ್ಕೂ ತುಂಬಾ ಕಷ್ಟದ ನಿರ್ಧಾರವಾಗಿತ್ತು, ಆದರೆ ಈಗ ನನಗೆ ಸಂಪೂರ್ಣ ಶಾಂತಿ ದೊರೆತಂತಾಗಿದೆ’ ಎಂದು ತಿಳಿಸಿದ್ದಾರೆ.

ಮುಂದುವರಿದು, ಮೊದಲ ದಿನದಿಂದಲೂ ನನ್ನ ದೇಶವನ್ನು ಪ್ರತಿನಿಧಿಸುವುದು ನನಗೆ ಅತ್ಯಂತ ದೊಡ್ಡ ಗೌರವವಾಗಿತ್ತು. ನಾನು ಬಾಲ್ಯದಲ್ಲಿ ಕನಸು ಕಂಡದ್ದು ಹಾಗೂ ಸಾಧಿಸಲು ಶ್ರಮಿಸಿದದ್ದೆಲ್ಲವೂ ಈ ಗೌರವದಲ್ಲಿ ಸೇರಿದೆ’ ಎಂದು ಕ್ಲಾಸೆನ್ ಹೇಳಿದ್ದಾರೆ.

ಕ್ಲಾಸೆನ್​ಗೆ ಟಿ20 ಕ್ರಿಕೆಟ್​ನಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿಯೇ ಅವರು ವಿಶ್ವದ ಇತರ ಟಿ20 ಲೀಗ್​ಗಳಲ್ಲೂ ಆಡುತ್ತಿದ್ದಾರೆ. ಹೀಗಿರುವಾಗ ಅವರು ಇದ್ದಕ್ಕಿದ್ದಂತೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವುದು ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿದೆ.

ದಕ್ಷಿಣ ಆಫ್ರಿಕಾ ಪರ 2018 ರಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಕ್ಲಾಸೆನ್ ಒಂದು ವರ್ಷದ ನಂತರ ಅಂದರೆ 2019 ರಲ್ಲಿ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದರು. ಆದಾಗ್ಯೂ, ಅವರು ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ ಅನೇಕ ಸಾಧನೆಗಳನ್ನು ಸಾಧಿಸಿದ್ದಾರೆ. ಆದರೆ ಈಗ ಅವರು ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ.

ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಗ್ಲೆನ್ ಮ್ಯಾಕ್ಸ್​ವೆಲ್! ಕಾರಣ ಏನು ಗೊತ್ತಾ?

33 ವರ್ಷದ ಕ್ಲಾಸೆನ್ ಆಫ್ರಿಕಾ ತಂಡದ ಪರ 4 ಟೆಸ್ಟ್ ಪಂದ್ಯಗಳಲ್ಲಿ 13 ಸರಾಸರಿಯಲ್ಲಿ 104 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 60 ಏಕದಿನ ಪಂದ್ಯಗಳಲ್ಲಿ 43.69 ಸರಾಸರಿಯಲ್ಲಿ 2141 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 11 ಅರ್ಧಶತಕಗಳು ಸೇರಿವೆ. ಹಾಗೆಯೇ 58 ಟಿ20 ಪಂದ್ಯಗಳಲ್ಲಿ 23.25 ಸರಾಸರಿಯಲ್ಲಿ 5 ಅರ್ಧಶತಕಗಳ ಸಹಿತ 1000 ರನ್ ಬಾರಿಸಿದ್ದಾರೆ.

LATEST NEWS

ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಬಿಡುಗಡೆಗೆ ಮುಹೂರ್ತ

Published

on

ಮಂಗಳೂರು: ಟೈಟಲ್ ನಿಂದಲೇ ಕುತೂಹಲ ಕೆರಳಿಸಿರುವ ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟರಾದ ಲಿಖಿತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಮೂರು ವರ್ಷಗಳ ಕಾಲ ಈ ಸಿನಿಮಾಕ್ಕೆ ದುಡಿದಿದ್ದು ಕಥೆ ತುಂಬಾ ಚೆನ್ನಾಗಿದೆ. ಒರಿಯರ್ದೊರಿ ಅಸಲ್, ಮದಿಮೆ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿ ಚಿತ್ರರಂಗದ ಜೀವನದಲ್ಲಿ ಇದೀಗ ನನ್ನ ಹೊಸ ಚಿತ್ರ ಹೊರಬರಲು ತಯಾರಾಗಿದೆ ಎಂದರು.

ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ”ಲಿಖಿತ್ ಶೆಟ್ಟಿ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ. ತುಳುನಾಡಿನಿಂದ ಕನ್ನಡ ಸಿನಿಮಾ ರಂಗದಲ್ಲಿ ಅನೇಕ ಮಂದಿ ಸಾಧನೆ ಮಾಡಿದ ಕಲಾವಿದರಿದ್ದಾರೆ. ಕನ್ನಡಿಗರು ಮತ್ತು ತುಳುವರು ಒಟ್ಟು ಸೇರಿ ಸಿರ್ಮಿಸಿರುವ ಸಿನಿಮಾ ಇದಾಗಿದ್ದು ಎಲ್ಲರೂ ಹೊಸಬರ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎಂದರು.

ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ”ಫುಲ್ ಮೀಲ್ಸ್ ಸಿನಿಮಾ ಹೆಸರೇ ಹೇಳುವಂತೆ ಹಾಸ್ಯ, ಸುಮಧುರ ಪ್ರೇಮಕತೆ ಮತ್ತು ಮನೋರಂಜನೆಯ ಫುಲ್ ಮೀಲ್ಸ್ ಆಗಿದೆ. ಸಿನಿಮಾದ ಹಾಡುಗಳು ಮುದ ನೀಡುತ್ತಿದ್ದು ಸಿನಿಮಾವನ್ನು ಪ್ರೇಕ್ಷಕ ಇಷ್ಟಪಡಲು ಬೇಕಾದ ಎಲ್ಲ ಅಂಶಗಳು ಇದರಲ್ಲಿವೆ ಎಂದರು.

ಇದನ್ನೂ ಓದಿ: ಇನ್ಮುಂದೆ ಖುಷಿ ಶಿವು ಅಲ್ಲ….ಹೆಸರು ಬದಲಿಸಿಕೊಂಡ ‘ನೀನಾದೆ ನಾ’ ನಟಿ..!

ನಿರ್ದೇಶಕ ಎನ್.ವಿನಾಯಕ, ನಾಯಕಿ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮಾ ಸಿನಿಮಾ ಚಿತ್ರೀಕರಣದ ಕುರಿತು ತಮ್ಮ ಅನುಭವ ಹಂಚಿಕೊಂಡರು.

Continue Reading

DAKSHINA KANNADA

ಡಾ.ಹರಿಕೃಷ್ಣ ಪುನರೂರು , ಮಾಜಿ ಸಚಿವ ರಮಾನಾಥ ರೈಗೆ ಸಾರ್ವಜನಿಕ ಅಭಿನಂದನಾ ಸಮಾರಂಭ

Published

on

ಬಂಟ್ವಾಳ :  ಸಾಮಾಜಿಕವಾಗಿ, ಧಾರ್ಮಿಕವಾಗಿ ತೊಡಗಿಸಿಕೊಂಡು ಸಮಾಜದ ಉನ್ನತಿಗೆ ಶ್ರಮಿಸಿದ ಮಹನೀಯರನ್ನು ಗೌರವಿಸುವುದು ಇಂದು ಪ್ರಸ್ತುತ. ಸಮಾಜವನ್ನು ಒಂದುಗೂಡಿಸುವ ಕಾರ್ಯ ಇಬ್ಬರ ಅಭಿನಂದನೆಯಿಂದ ನಡೆದಿದೆ ಎಂದು ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿ ನುಡಿದರು.

ಮಂಗಳವಾರ (ನ.18) ಬಿ.ಸಿ.ರೋಡ್‌ನ ಸ್ಪರ್ಶ ಕಲಾಮಂದಿರದಲ್ಲಿ ಧರ್ಮದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರಿಗೆ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅವರು ಅರ್ಶೀವಚನಗೈದರು.

ದ.ಕ.ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಧರ್ಮದರ್ಶಿ , ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಕುರಿತು ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಕುರಿತು ಅಭಿನಂದನಾ ಭಾಷಣ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಿಕೃಷ್ಣ ಪುನರೂರು, ಬಡವರ ಸೇವೆಗಾಗಿ ಜೀವನವನ್ನು ಸಮರ್ಪಿಸಿದ್ದೇವೆ. ಭಾಷಣ ಮಾಡುವ ಬದಲು ಕೆಲಸ ಮಾಡುವುದು ಮುಖ್ಯ  ಎಂದರು. ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಸಾರ್ವಜನಿಕ ಬದುಕಿನಲ್ಲಿ ನನ್ನ ಕರ್ತವ್ಯದ ಭಾಗವನ್ನು ಮಾಡಿದ್ದೇನೆ. ಎಲ್ಲ ಜಾತಿ, ಮತ, ಭಾಷೆ ಮೀರಿ ಮನುಷ್ಯರಾಗಿ ಬಾಳಬೇಕು ಎಂದರು.

ಅಭಿನಂದನಾ ಸಮಿತಿ ಅಧ್ಯಕ್ಷ  ಕೈಯ್ಯೂರು ನಾರಾಯಣ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಬಡಗಬೆಳ್ಳೂರು ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ  ರಘು ಎಲ್. ಶೆಟ್ಟಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ದ.ಕ. ನಿರ್ದೇಶಕ ದಿನೇಶ್ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.

ಉದ್ಯಮಿ ರಘುನಾಥ ಸೋಮಯಾಜಿ, ಸಮಿತಿಯ ಗೌರವಾಧ್ಯಕ್ಷ ಶಿವಪ್ರಸಾದ ಅಜಿಲ ಅಳದಂಗಡಿ, ಅಭಿನಂದನಾ ಗ್ರಂಥದ ಸಂಪಾದಕ ಪ್ರೊ.ರಾಜಮಣಿ ರಾಮಕುಂಜ, ಕೋಶಾಧಿಕಾರಿ ರಾಮಗಣೇಶ್ ಪ್ರಭು  ಉಪಸ್ಥಿತರಿದ್ದರು.

ಇದನ್ನೂ ಓದಿ : ಇನ್ಮುಂದೆ ಖುಷಿ ಶಿವು ಅಲ್ಲ….ಹೆಸರು ಬದಲಿಸಿಕೊಂಡ ‘ನೀನಾದೆ ನಾ’ ನಟಿ..!

ಅಭಿನಂದನಾ ಸಮಿತಿಯ ಮಹಾಲಿಂಗ ಭಟ್, ಹರಿಕೃಷ್ಣ ಪುನರೂರು ಅವರ ಅಭಿನಂದನಾ ಪತ್ರ ವಾಚಿಸಿದರು. ಬೆಳಗ್ಗೆ 8 ರಿಂದ ಮಹಾಗಣಪತಿ ಹೋಮ, ಮಧ್ಯಾಹ್ನ ಭೋಜನದ ಬಳಿಕ ಶಾಂಭವಿ ವಿಜಯ ಯಕ್ಷಗಾನ ಬಯಲಾಟ ನಡೆಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ವಂದಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು

Continue Reading

BIG BOSS

BBK12: ‘ಆ ಜಾಗದಲ್ಲಿ ಒಂದು ಸೆಕೆಂಡ್ ಇರಬೇಕು ಅನಿಸುತ್ತಿಲ್ಲ’ ಎಂದ ಅಶ್ವಿನಿ ಗೌಡ..! ಹೊರಹೋಗುವ ಸುಳಿವು ನೀಡಿದ್ರ ರಾಜಾಮಾತಾ..?

Published

on

BBK12: ಬಿಗ್‌ ಬಾಸ್‌ನಲ್ಲಿ ಟಾಸ್ಕ್‌ಗಳ ವಿಚಾರದಲ್ಲಿ ಸ್ಪರ್ಧಿಗಳ ನಡುವೆ ಜಟಾಪಟಿಯೇ ನಡೆದಿದೆ. ಅದರಲ್ಲೂ ಅಶ್ವಿನಿ ಗೌಡ-ಗಿಲ್ಲಿ ನಟನ ನಡುವೆ ನಡೆದಿರುವ ಜಗಳ ವಿಕೋಪಕ್ಕೆ ತಿರುಗಿದೆ. ಹೀಗಾಗಿ ಅಶ್ವಿನಿ ಗೌಡ ಕಣ್ಣೀರಾಕಿದ್ದು, ಹೊರಹೋಗುವ ಸುಳಿವು ನೀಡಿದ್ರ ರಾಜಾಮಾತಾ ಎಂದು ವೀಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.


ಟಾಸ್ಕ್‌ ಇರಲಿ.. ಚರ್ಚೆಯೇ ಇರಲಿ ಮಾತಿನಲ್ಲೇ ಚಾಟಿ ಬೀಸುತ್ತಿದ್ದ ಅಶ್ವಿನಿ ಗೌಡ ಇಂದು ಟಾಸ್ಕ್ ವಿಚಾರಕ್ಕೆ ನಡೆದ ವಾಗ್ವಾದದಲ್ಲಿ ಕಣ್ಣೀರಾಕಿದ್ದಾರೆ. ಅಷ್ಟಕ್ಕೂ ಇದರ ಅಸಲಿಯತ್ತೇನು..?

ಏಕವಚನದಲ್ಲಿ ಬೈದಾಡಿಕೊಂಡ ಅಶ್ವಿನಿ-ಗಿಲ್ಲಿ!

ಇಂದು ನಡೆಯುವ ಟಾಸ್ಕ್‌ವೊಂದಕ್ಕೆ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಉಸ್ತುವಾರಿಗಳಾಗಿದ್ದಾರೆ. ಬಕೆಟ್‌ನ ಅಭಿಷೇಕ್ ತಳ್ಳಿದಾಗ ಉಸ್ತುವಾರಿ ಗಿಲ್ಲಿ ನಟ ಪ್ರಶ್ನೆ ಮಾಡಿದರು. ಈ ವೇಳೆ ಎದುರಾಳಿ ತಂಡದ ಉಸ್ತುವಾರಿ ಆದ ಅಶ್ವಿನಿ ಗೌಡ ಕ್ಯಾತೆ ತೆಗೆದಿದ್ದಾರೆ. ಪರಿಣಾಮ, ಇಬ್ಬರ ಮಧ್ಯೆ ಏಕವಚನದಲ್ಲಿ ಮಾತಿನ ಚಕಮಕಿ ನಡೆದಿದೆ.

ಅಶ್ವಿನಿ ಅವರು, ʻಸರಿಯಾಗಿ ಉಸ್ತುವಾರಿ ಮಾಡುʼ ಎಂದು ಗಿಲ್ಲಿ ಮೇಲೆ ಮೊದಲಿಗೆ ಕೂಗಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಗಿಲ್ಲಿ ಅವರು, ʻನೀನು ಕರೆಕ್ಟ್‌ ಆಗಿ ಉಸ್ತುವಾರಿ ಮಾಡೊಮ್ಮೋʼ ಅಂತ ಕಿರುಚಾಡಿದ್ದಾರೆ. ಗಿಲ್ಲಿ ಏಕವಚನದಲ್ಲಿ ಮಾತನಾಡಿದ ಬಳಿಕ ಅಶ್ವಿನಿ ಪಿತ್ತ ನೆತ್ತಿಗೇರಿದೆ.

‘ನಿನ್ ಯೋಗ್ಯತೆಗಿಷ್ಟು’ ಅಂತ ಗಿಲ್ಲಿ ನಟನಿಗೆ ಕೈ ತೋರಿಸಿ ಅಶ್ವಿನಿ ಗೌಡ ಬೈದಿದ್ದಾರೆ. ಇದಕ್ಕೆ ಪ್ರತಿಯಾಗಿ ಗಿಲ್ಲಿ, ʻವಟ ವಟ ಅಂತ ಬಿಪಿ ರೈಸ್‌ ಮಾಡ್ಕೋಬೇಡʼ ಎಂದಿದ್ದಾರೆ.

ಇದನ್ನೂ ಓದಿ: ಗಿಲ್ಲಿ ನಟ-ಅಶ್ವಿನಿ ಗೌಡ ನಡುವೆ ವಾಕ್ಸಮರ; ಏಕವಚನದಲ್ಲಿ ಬೈದಾಡಿಕೊಂಡ ಉಸ್ತುವಾರಿಗಳು!

ಕಣ್ಣೀರಿಟ್ಟ ಅಶ್ವಿನಿ ಗೌಡ!
ಟಾಸ್ಕ್‌ನಲ್ಲಿ ನಡೆದ ವಾಕ್ಸಮರದ ಬಗ್ಗೆ ಅಶ್ವಿನಿ ಗೌಡ ಬೇಸರಗೊಂಡಿದ್ದು, ಗಾರ್ಡನ್ ಏರಿಯಾದಲ್ಲಿ ಸಹ ಸ್ಪರ್ಧಿಗಳೊಂದಿಗೆ ಚರ್ಚಿಸುತ್ತಾರೆ. ಈ ವೇಳೆಯೂ ಗಿಲ್ಲಿ ಅಶ್ವಿನಿ ಅವರಿಗೆ ಮಾತಿನಲ್ಲೇ ತಿವಿಯುತ್ತಾರೆ. ಗಿಲ್ಲಿ ‘ಎಲ್ಲಾ ವೃದ್ದಾಪ್ಯದವರು ಸೇರಿಕೊಂಡು ಕಷ್ಟ-ಸುಖ ಮಾತನಾಡುತ್ತಿದ್ದಾರೆ’ ಎಂದು ಗೇಲಿ ಮಾಡುತ್ತಾರೆ. ಇದು ಅಶ್ವಿನಿ ಅವರಿಗೆ ಹರ್ಟ್ ಆದಂತೆ ಕಾಣಿಸುತ್ತಿದೆ.

ಇನ್ನೂ ‘ನಮ್ಮನ್ನು ಒಬ್ಬರು ಅಷ್ಟು ಅಗೌರವದಿಂದ ನೋಡುತ್ತಿದ್ದಾರೆ ಎಂದಾಗ ಆ ಜಾಗದಲ್ಲಿ ಒಂದು ಸೆಕೆಂಡ್ ಇರಬೇಕು ಅಂತ ಅನಿಸುತ್ತಿಲ್ಲ’ ಎಂದು ಗಿಲ್ಲಿಯ ಮಾತಿನ ಚಾಟಿಗೆ ಅಶ್ವಿನಿ ಗೌಡ ಕಂಗಲಾಗಿ ಕಣ್ಣೀರು ಹಾಕಿದ್ದಾರೆ. ಒಟ್ಟಿನಲ್ಲಿ ಗಿಲ್ಲಿ ಆಡಿದ ಮಾತಿನಿಂದಾಗಿ ಅಶ್ವಿನಿ ಗೌಡ ಹೊರಹೋಗುವ ನಿರ್ಧಾರ ಮಾಡಿದ್ರ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page