Connect with us

LATEST NEWS

ಬೈಕ್‌ಗೆ ಸಾರಿಗೆ ಬಸ್ ಡಿ*ಕ್ಕಿ; ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾ*ವು

Published

on

ಮಂಗಳೂರು/ಚಿತ್ರದುರ್ಗ: ಬೈಕ್‌ಗೆ ಸಾರಿಗೆ ಬಸ್ ಡಿ*ಕ್ಕಿಯಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.


ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃ*ತರನ್ನು ಯಾಸಿನ್ (22), ಅಲ್ತಾಫ್ (22) ಎಂದು ಗುರುತಿಸಲಾಗಿದೆ. ಮೃತರು ಕೇರಳ ಮೂಲದವರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:  ಮದುವೆ ಸಂಭ್ರಮದಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿಯ ಹ*ತ್ಯೆ

ವಿದ್ಯಾರ್ಥಿಗಳು ನರ್ಸಿಂಗ್ ಓದುತ್ತಿದ್ದರು. ಘಟನೆ ಸಂಬಂಧ ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS

ಮೊಘಲ್ ಹಾಗೂ ದಿಲ್ಲಿ ಸುಲ್ತಾನರ ಪಾಠವನ್ನು ಕೈಚೆಲ್ಲಿದ ಎನ್‌ಸಿಇಆರ್‌ಟಿ

Published

on

ಹೊಸದಿಲ್ಲಿ : ಈ ಹಿಂದೆ ಮೊಘಲ್ ಹಾಗೂ ದಿಲ್ಲಿ ಸುಲ್ತಾನರ ವಿಷಯವನ್ನು ಪಠ್ಯಪುಸ್ತದಿಂದ ಎನ್‌ಸಿಇಆರ್‌ಟಿ ಕಡಿತಗೊಳಿಸಿತ್ತು. ಆದರೆ ಈ ವರ್ಷ 7ನೇ ತರಗತಿ ಪಠ್ಯದಿಂದ ಆ ವಿಷಯಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಹಾಗಾದರೆ ಆ ವಿಷಯ ತೆಗೆದು ಬೇರೆ ಯಾವ ಹೊಸ ವಿಷಯನ್ನು ಸೇರಿಸುತ್ತಾರೆ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮೊಘಲರು ಹಾಗೂ ದಿಲ್ಲಿ ಸುಲ್ತಾನರ ಸಾಮ್ರಾಜ್ಯದ ಬಗೆಗಿನ ಪಾಠಗಳನ್ನು ತೆಗೆದ ಎನ್‌ಸಿಇಆರ್‌ಟಿ  “ಪವಿತ್ರ ಭೂಗೋಳ ಶಾಸ್ತ್ರ’ ಎಂಬ ಪಾಠವನ್ನು ಸೇರಿಸಿದ್ದು, ಇದರಲ್ಲಿ ಮಹಾಕುಂಭದ ಮಾಹಿತಿಯನ್ನು ನೀಡಲಾಗಿದೆ.ಇದಲ್ಲದೇ ಮೇಕ್ ಇನ್ ಇಂಡಿಯಾ, ಬೇಟಿ ಬಚಾವೋ, ಬೇಟಿ ಪಡಾವೋ ಸೇರಿ ಸರಕಾರದ ಇನ್ನಿತರ ಉಪಕ್ರಮಗಳ ಪಾಠಗಳನ್ನೂ ಅಳವಡಿಸಲಾಗಿದೆ.

ಇದು ಪಠ್ಯಪುಸ್ತಕದ ಮೊದಲ ಭಾಗವಷ್ಟೇ, ಇನ್ನು ಕೆಲ ತಿಂಗಳುಗಳಲ್ಲಿ 2ನೇ ಭಾಗ ಬಿಡುಗಡೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಪಠ್ಯದಿಂದ ಕೈಬಿಟ್ಟ ವಿಚಾರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Continue Reading

LATEST NEWS

ಅಂದು ನ್ಯಾಷುನಲ್ ಬ್ಯಾಂಕ್ .. ಇಂದು ಕಾಫಿ ಹೌಸ್ ..! ಏನಿದು ವಿಚಿತ್ರ ಕಥೆ ..?

Published

on

ಮುಂಬೈ : ಒಂದು ಸಮಯದಲ್ಲಿ ಆ ಕಟ್ಟಡ ನ್ಯಾಷುನಲ್ ಬ್ಯಾಂಕ್ ಆಗಿತ್ತು ಆದರೆ ಈಗ ಕಾಫಿ ಹೌಸ್ ಆಗಿ ಬದಲಾವಣೆ ಹೊಂದಿದೆ. ಈ  ವಿಷಯ ಮುಂಬೈ ನಗರದಾದ್ಯಂತ ವೈರಲ್ ಆಗುತ್ತಿದೆ. ಅಷ್ಟಕ್ಕೂ ಏನಿದು ವಿಚಿತ್ರ ಕಥೆ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮುಂಬೈನ ಖ್ಯಾತ ಉದ್ಯಮಿ ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹುಲ್ ಚೋಕ್ಸಿ ಅವರು ನಡೆಸಿದ್ದ ನ್ಯಾಷುನಲ್ ಬ್ಯಾಂಕ್ ಬಹುಕೋಟಿ ರೂ. ಹಗರಣದಿಂದ ಕುಖ್ಯಾತವಾಗಿದ್ದ ಮುಂಬೈನ ಬ್ರಾಡಿ ಹೌಸ್‌ನ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಶಾಖೆಯ ಕಟ್ಟಡವನ್ನು ಕಾಫಿ ಹೌಸನ್ನಾಗಿ ಪರಿವರ್ತಿಸಲಾಗಿದೆ.

ಮುಂಬೈನ ಪಿಎನ್‌ಬಿ ಶಾಖೆಯನ್ನು ಮತ್ತೊಂದು ಕಟ್ಟಡಕ್ಕೆ ಕೆಲ ವರ್ಷಗಳ ಹಿಂದೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಗರಣವೊಂದರ ಮೂಲಕ ಕೇಂದ್ರ ಬಿಂದುವಾಗಿದ್ದ ಬ್ರಾಡಿ ಹೌಸ್‌ನಲ್ಲಿ ಇಂದು ಆರ್ಗಾನಿಕ್ ಕಾಫಿ ಕೆಫೆ ತಲೆಯೆತ್ತಿದೆ. 2011-17ರವರೆಗೆ ನೀರವ್ ಮತ್ತು ಚೋಕ್ಸಿ, ಈ ಶಾಖೆಯ ಅಧಿಕಾರಿಗಳಿಗೆ ಲಂಚ ನೀಡಿ ಸುಮಾರು 13,000 ಕೋಟಿ ರೂ. ಸಾರ್ವಜನಿಕ ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

Continue Reading

DAKSHINA KANNADA

ವರುಣನ ಆರ್ಭಟಕ್ಕೆ ಮಂಗಳೂರು ಫುಲ್ ಕೂಲ್.. ಕೂಲ್.. !

Published

on

ಮಂಗಳೂರು : ಬೆಂದಿದ್ದ ಧರೆಯ ತಂಪಾಗಿಸಲು ಭುವಿಗಿಳಿದ ವರುಣ… ರಾತ್ರಿ ಮಲಗುವ ವೇಳೆ “ಎಂಥಾ ಸೆಕೆ ಮಾರ್ರೆ ?” ಎನ್ನುತ್ತಿದ್ದವರೂ ಸಹ ಫ್ಯಾನ್ ಆಫ್ ಮಾಡಿ ಮಲಗಿದ್ದಾರೆ. ಹೌದು .. ನಿನ್ನೆ(ಏ.27) ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆ ಈ ಕುರಿತು ಮೊದಲೇ ಮುನ್ಸೂಚನೆ ನೀಡಿದೆ. ಅದರಲ್ಲೂ ದಕ್ಷಿಣ ಕನ್ನಡದ ಹಲವೆಡೆ ನಿನ್ನೆ ಹಾಗೂ ಮೊನ್ನೆ (ಏ.26) ಗುಡುಗು ಮಿಂಚು ಸಹಿತ ವರುಣನ ಆರ್ಭಟ ಜೊರಾಗಿಯೇ ಇತ್ತು,

ನಿನ್ನೆ ಹಗಲು ಬಿಸಿಲು ಇತ್ತು. ಆದರೆ ಸಂಜೆ ಹೊತ್ತಿಗೆ ಯಾರೂ ಊಹಿಸದ ರೀತಿ ಮಳೆ ಸುರಿದಿದೆ. ಧಾರಕಾರ ಮಳೆಯಿಂದ ಬಿಸಿ ಬಿಸಿಯಾಗಿದ್ದ ನಗರ ಫುಲ್ ಕೂಲ್ ಆಗಿದೆ. ಬಿಸಿ ವಾತಾವರಣ ಪೂರ್ತಿ ನಿವಾರಣೆಯಾಗಿದೆ.

ಎರಡು ಮೂರು ದಿನಗಳಿಂದ ದಕ್ಷಿಣ ಕನ್ನಡ ಹಲವು ಕಡೆಗಳಲ್ಲಿ ಆಗಾಗ ಮಳೆ ಕಾಣಿಸಿಕೊಳ್ಳುತ್ತಿದೆ. ಇಂದು (ಏ.28) ಮಂಗಳೂರು ನಗರದಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂಬುವುದಾಗಿ ಹವಮಾನ ಇಲಾಖೆ ಸೂಚಿಸಿದ್ದು, ಸಂಜೆ ತನಕ ಕಾದು ನೋಡಬೇಕಷ್ಟೇ.

Continue Reading
Advertisement

Trending

Copyright © 2025 Namma Kudla News

You cannot copy content of this page