Connect with us

DAKSHINA KANNADA

ರಿವಾಲ್ವರ್ ತೋರಿಸಿ ಲಾರಿ ಕಿಡ್ನಾಪ್‌: ಕೆಲವೇ ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಮಂಜೇಶ್ವರ ಪೊಲೀಸ್‌

Published

on

ಕಾಸರಗೋಡು: ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ಚಾಲಕರಿಗೆ ರಿವಾಲ್ವರ್ ತೋರಿಸಿ ಎರಡು ಲಾರಿಗಳನ್ನು ಅಪಹರಿಸಿದ ಘಟನೆ ಬುಧವಾರ ಕರ್ನಾಟಕ ಕೇರಳ ಗಡಿಯ ಮೀಯಪದವಿನಲ್ಲಿ ನಡೆದಿದ್ದು, ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಮಂಜೇಶ್ವರ ಪೊಲೀಸರು ಬೇಧಿಸಿ ನಾಲ್ವರನ್ನು ಬಂಧಿಸಿದ್ದಾರೆ.


ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ನಾಸಿಕ್ ನ ರಾಕೇಶ್ ಕಿಶೋರ್ (25), ಸೋಂಕಾಲಿನ ಹೈದರ್ ಅಲಿ (22), ಪೈವಳಿಕೆ ಕಳಾಯಿಯ ಸಯಾಫ್ (22), ಮೀಯಪದವು ಮುಹಮ್ಮದ್ ಸಫ್ವಾನ್ (23) ಬಂಧಿತರು.

ಈ ವೇಳೆ ಮತ್ತಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಆರಂಭವಾಗಿದೆ.
ಬಂಧಿತರಿಂದ ಅಪಹರಣಗೊಂಡ ಎರಡು ಲಾರಿ, ಪಿಸ್ತೂಲ್, ನಾಲ್ಕು ಸಜೀವ ಗುಂಡುಗಳು, ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ವಿವರ
ಬುಧವಾರ ಸಂಜೆ 6 ಗಂಟೆಯ ವೇಳೆ ಮೀಯಪದವು ಬೆಜ್ಜದಲ್ಲಿ ಬರುತ್ತಿದ್ದ ಎರಡು ಲಾರಿಯನ್ನು ಪಿಸ್ತೂಲು ತೋರಿಸಿ ಅಡ್ಡಗಟ್ಟಿ ಕೆಳಗಿಳಿಸಿ ಮೊಬೈಲ್, ಹಣವನ್ನು ದೋಚಿ ಲಾರಿಗಳನ್ನು ಅಪಹರಿಸಿದ್ದರು.

ಈ ಬಗ್ಗೆ ತಕ್ಷಣ ಮಾಹಿತಿ ಪಡೆದ ಮಂಜೇಶ್ವರ ಪೊಲೀಸರು ಲಾರಿಗಳನ್ನು ಬೆನ್ನಟ್ಟಿದ್ದಾಗ ಪೈವಳಿಕೆ ಕೊಮ್ಮಂಗಳ ಬಳಿ ಎರಡು ಲಾರಿಗಳನ್ನು ಬಿಟ್ಟು ಪರಾರಿಯಾಗಲೆತ್ನಿಸಿದ್ದಾರೆ. ತಕ್ಷಣ ಇಬ್ಬರನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
25ಕ್ಕೂ ಅಧಿಕ ಪ್ರಕರಣಗಳಲ್ಲಿ ಶಾಮೀಲಾಗಿ ಕಾಫಾ ಕಾಯ್ದೆಯಂತೆ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಗೊಂಡಿದ್ದ ಮೀಯಪದವಿನ ಅಬ್ದುಲ್ ರಹೀಂ ನ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

DAKSHINA KANNADA

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ರಿಗೆ ‘ಕನ್ನಡ ಪಯಸ್ವಿನಿ ಅವಾರ್ಡ್- 2026’ ಪ್ರದಾನ 

Published

on

ಮಂಗಳೂರು : ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡಿದ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026’ ಅಂತಾರಾಜ್ಯ ಪ್ರಶಸ್ತಿಯನ್ನು  ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆರಿಗೆ ಪ್ರದಾನ ಮಾಡಲಾಯಿತು.

ಕಾಸರಗೋಡು ನುಳ್ಳಿಪಾಡಿಯಲ್ಲಿ ನಡೆದ ಕನ್ನಡ ಭವನ ರಜತ ಸಂಭ್ರಮ – ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನುಅವರು  ಸ್ವೀಕರಿಸಿದರು.

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 32 ವರ್ಷ ಕ್ರೀಡಾ  ಅಂಕಣಕಾರರಾಗಿ ಹಾಗೂ ಕ್ರೀಡಾ  ವಿಮರ್ಶಾತ್ಮಕ ಲೇಖನಗಳ  ಮೂಲಕ ಎಸ್. ಜಗದೀಶ್ಚಂದ್ರ ಅಂಚನ್ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

ಕಾರ್ಯಕ್ರಮದಲ್ಲಿ ಕನ್ನಡ ಭವನ ಸ್ಥಾಪಕಾಧ್ಯಕ್ಷ ಡಾ.ಕೆ.ವಾಮನ್ ರಾವ್, ನಿರ್ದೇಶಕ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ , ಕರ್ನಾಟಕ ಬ್ಯಾರಿ‌ ಅಕಾಡೆಮಿಯ ಮಾಜಿ ಅಧ್ಯಕ್ಷೆ ಆಯಿಷಾ ಪೆರ್ಲ , ಶಿಕ್ಷಣ ತಜ್ಞ ವಿ.ಬಿ.ಕುಳವರ್ಮ , ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟ್ಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ , ಸಾಹಿತಿ ಜಯಾನಂದ ಪೆರಾಜೆ, ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು  ಮೊದಲಾದವರು ಉಪಸ್ಥಿತರಿದ್ದರು.

Continue Reading

DAKSHINA KANNADA

ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

Published

on

 

ಸಾಂದರ್ಭಿಕ ಚಿತ್ರ

ಮಂಗಳೂರು : ವಿವಿಧ ಡಾಕ್ಯುಮೆಂಟ್ಸ್‌ ಗಳಿದ್ದ ಪರ್ಸೊಂದು ಕಳೆದುಹೋಗಿದೆ. ಚೇತನ್ ಎಂಬವರು ಬಂಟ್ವಾಳದಿಂದ ಕುಂಟಲ್ ಪಲ್ಕೆಯವರೆಗೆ ಆಟೋದಲ್ಲಿ ಪ್ರಯಾಣಿಸಿದ್ದು, ಈ ವೇಳೆ ಅವರ ಪರ್ಸ್  ಜೇಬಿನಿಂದ ಕೆಳಗೆ ಬಿದ್ದಿದೆ. ಅದರಲ್ಲಿ ಆಧಾರ್ ಕಾರ್ಡ್, ಹಣ ಹಾಗೂ ಇತರೆ ಡಾಕ್ಯುಮೆಂಟ್ಸ್‌ ಗಳಿದ್ದವು. ಯಾರಿಗಾದರೂ ಪರ್ಸ್ ಸಿಕ್ಕಿದ್ದಲ್ಲಿ 9036015784 ನಂಬರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Continue Reading

DAKSHINA KANNADA

ಮಂಗಳೂರು: ಹಂಚಿನ ಫ್ಯಾಕ್ಟರಿಯಲ್ಲಿ ಅ*ಗ್ನಿ ಅ*ವಘ*ಡ

Published

on

ಮಂಗಳೂರು : ಹಂಚಿನ ಫ್ಯಾಕ್ಟರಿಯೊಂದರಲ್ಲಿ ಇಂದು(ಜ.20) ನಸುಕಿನ ಜಾವ ಆಕಸ್ಮಿಕವಾಗಿ ಬೆಂ*ಕಿ ಕಾಣಿಸಿಕೊಂಡ ಘಟನೆ ಮಂಗಳೂರಿನ ಹೊಯ್ಗೆ ಬಜಾರ್‌ನಲ್ಲಿ ನಡೆದಿದೆ. ಬೆಂ*ಕಿ ಕ್ಷಣಾರ್ಧದಲ್ಲಿ ಕಾರ್ಖಾನೆಯಾದ್ಯಂತ ವ್ಯಾಪಿಸಿ ಆತಂಕಕ್ಕೆ ಕಾರಣವಾಯಿತು.

ತಕ್ಷಣವೇ ಕಾರ್ಯಪ್ರವೃತ್ತರಾದ ಪಾಂಡೇಶ್ವರ ಮತ್ತು ಕದ್ರಿ ಅ*ಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂ*ಕಿ ನಂದಿಸುವ ಕಾರ್ಯಾಚರಣೆ ಮಾಡಿದರು. ದಟ್ಟವಾದ ಹೊಗೆಯ ನಡುವೆಯೂ ಸಿಬ್ಬಂದಿ ಹರಸಾಹಸ ಪಟ್ಟು ಬೆಂ*ಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ :ಲಕ್ಷಾಂತರ ಮೌಲ್ಯದ ಗಾಂ*ಜಾ ಸಾಗಾಟ; ಇಬ್ಬರ ಬಂಧನ

ಬೆಂ*ಕಿಯ ತೀವ್ರತೆಗೆ ಕಾರ್ಖಾನೆಯ ಆವರಣದಲ್ಲಿ ಹಂಚು ಸು*ಡಲು ಸಂಗ್ರಹಿಸಿಟ್ಟಿದ್ದ ಕಟ್ಟಿಗೆ ಮತ್ತು ಇತರ ವಸ್ತುಗಳು ಕಾರಣ ಎನ್ನಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page