Connect with us

ಐತಿಹಾಸಿಕ ಬನವಾಸಿಯಲ್ಲಿ ಇಂದಿನಿಂದ 2 ದಿನಗಳ ಕದಂಬೋತ್ಸವ ಸಂಭ್ರಮ 

Published

on

ಐತಿಹಾಸಿಕ ಬನವಾಸಿಯಲ್ಲಿ ಇಂದಿನಿಂದ 2 ದಿನಗಳ ಕದಂಬೋತ್ಸವ ಸಂಭ್ರಮ 

ಬನವಾಸಿ : ಕನ್ನಡದ ಪ್ರಥಮ ರಾಜಧಾನಿಯೆಂಬ ಖ್ಯಾತಿಯ ಬನವಾಸಿಯಲ್ಲಿ ಇಂದಿನಿಂದ ಎರಡು ದಿನಗಳ ಕದಂಬೋತ್ಸವ ಅದ್ದೂರಿಯಾಗಿ ನಡೆಲಿದ್ದು ಇದಕ್ಕೆ ಬೇಕಾದ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದೆ.

ಇಂದು ಸಂಜೆ ಮುಖ್ಯಮಂತ್ರಿ ಬಿ,ಎಸ್‌ ಯಡ್ಯೂರಪ್ಪ ಕದಂಬೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಕವಿ ಡಾ. ಸಿದ್ದ ಲಿಂಗಯ್ಯ ಅವರಿಗೆ ಈ ಬಾರಿ ಪಂಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೂಡ ನಡೆಯಲಿದ್ದು, ಇಂದು ಅಪರಾಹ್ನ ಬನವಾಸಿಯ ಇತಿಹಾಸ ಪ್ರಸಿದ್ದ ಮಧುಕೇಶ್ವರ ದೇವಾಲಯದಿಂದ ಮಯೂರ ವರ್ಮ ವೇದಿಕೆಯವರೆಗೆ ವೈಭವದ ಅದ್ದೂರಿ ಮೆರವಣಿಗೆ ನಡೆಯಲಿದೆ. ಸಚಿವ ಶಿವರಾಂ ಹೆಬ್ಬಾರ್ ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳಲಿದ್ದಾರೆ.

ಇಂದು (ಫೆ.8 ರಂದು) ಮಯೂರವರ್ಮ ವೇದಿಕೆಯಲ್ಲಿ ಭಕ್ತಿಗೀತೆ, ನೃತ್ಯರೂಪಕ, ಉಡುಪಿಯ ದುರ್ಗಾ ಪರಮೇಶ್ವರಿ ಚೆಂಡೆ ಬಳಗದವರಿಂದ ಚೆಂಡೆ ವಾದ್ಯ, ಜಾದೂ ಪ್ರದರ್ಶನ ನಡೆಯಲಿದೆ. ನಂತರ ಮುಂಬೈನ ಎಂಜೆ 5 ಕಲಾವಿದರಿಂದ ನೃತ್ಯ, ರಾತ್ರಿ 8.30ರಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಹಾಗೂ ತಂಡದವರಿಂದ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರಿಂದ ಗಾಯನ ವೈಭವ ಜರುಗಲಿದೆ. ಜೊತೆಗೆ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಕೂಡ ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ತಾರಾ ಮೆರುಗು ಮೇಳೈಸಲಿದೆ. ಫೆ.9ರಂದು ಸಂಜೆ 6ರಿಂದ ಪ್ರವೀಣ ಗೋಡ್ಕಿಂಡಿ ಅವರಿಂದ ಕೊಳಲು ವಾದನ, 8ರಿಂದ ಅಂತಾರಾಷ್ಟ್ರೀಯ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉದ್ಯಮಿಯನ್ನು ‘ಹನಿಟ್ರ್ಯಾಪ್’ ಮಾಡಲು ಹೋಗಿ ತಗಲಾಕ್ಕೊಂಡ ನರ್ಸ್ & ಗ್ಯಾಂಗ್

Published

on

ಮಂಗಳೂರು/ದಾವಣಗೆರೆ : ಖಾಸಗಿ ಆಸ್ಪತ್ರೆ ನರ್ಸ್​​ ಒಬ್ಬಳು ಕಷ್ಟ ಎಂದು ಹೇಳಿಕೊಂಡು ಬಂದು ಉದ್ಯಮಿಗೆ ಗಾಳ ಹಾಕಿದ್ದಳು. ಆದರೆ, ಹಾಳು ಬುದ್ದಿ  ತೋರಿಸಿ ಇದೀಗ ಜೈಲು ಪಾಲಾಗಿದ್ದಾಳೆ. ಈ ಘಟನೆ ನಡೆದಿರೋದು ದಾವಣಗೆರೆಯಲ್ಲಿ.

ಸುಶ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಪರಿಚಯ…ಸಲುಗೆ…ಹನಿಟ್ರ್ಯಾಪ್ :

ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಶ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು, ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಬಳಿಕ ಈ ಪರಿಚಯ ಸ್ನೇಹವಾಗಿ ಬದಲಾಗಿತ್ತು. ಸುಶ್ಮಿತಾ ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭುರನ್ನು ಅಪಾರ್ಟ್ಮೆಂಟ್‌ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್‌ನಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು.

ಇದನ್ನೂ ಓದಿ : ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

ಸುಶ್ಮಿತಾ ಹಾಗೂ ಪ್ರಭು ಒಟ್ಟಿಗೆ ಇದ್ದ ವೀಡಿಯೋವನ್ನು ಇತರ ಆರೋಪಿಗಳು ಮಾಡಿಕೊಂಡಿದ್ದರು. ಬಳಿಕ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ರೂಮಿಗೆ ನುಗ್ಗಿ, ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ಹೆದರಿಸಿ  25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಪ್ರಭು, 12 ಲಕ್ಷಕ್ಕೆ ಒಪ್ಪಿಕೊಂಡಿದ್ದು, ಎರಡು ದಿನದಲ್ಲಿ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಆರೋಪಿಗಳ ಬೆ*ದರಿಕೆಗೆ ಬೇಸತ್ತು ಠಾಣೆಗೆ ಪ್ರಭು ದೂರು ನೀಡಿದ್ದು,  ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Continue Reading

LATEST NEWS

ರಿಪ್ಪನ್‌ ಪೇಟೆ ಬಳಿ ಬೀಕರ ಅಗ್ನಿ ಅವಘಡ, ರಸ್ತೆ ಮಧ್ಯೆಯೇ ಬೆಂಕಿಗಾಹುತಿಯಾದ ಕಾರು

Published

on

ಶಿವಮೊಗ್ಗ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಬಳಿ ಶನಿವಾರ ತಡರಾತ್ರಿ ನಡೆದಿದೆ.


ಶಿವಮೊಗ್ಗದಿಂದ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರಕ್ಕೆ ಮದುವೆ ಕಾರ್ಯದ ನಿಮಿತ್ತವಾಗಿ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಕಾರಿನ ಎಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಮಲಗಿದ್ದಲ್ಲೇ ಆರೋಗ್ಯ ಇಲಾಖೆ ನೌಕರ ಹೃದಯಾ*ಘಾತಕ್ಕೆ ಬ*ಲಿ

ಚಾಲಕ ಶ್ರೀಕಾಂತ್ ಮತ್ತು ಮತ್ತೊಬ್ಬ ಪ್ರಯಾಣಿಕ ಗಂಗಾಧರ ಗೌಡ ಅವರು ಹೊಗೆ ಕಾಣಿಸಿಕೊಂಡ ತಕ್ಷಣ ಕಾರಿನಿಂದ ಕೆಳಗಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರು ರಸ್ತೆ ಮಧ್ಯೆಯೇ ಧಗಧಗನೆ ಉರಿದು ಸಂಪೂರ್ಣವಾಗಿ ಭಸ್ಮವಾಗಿದೆ.

Continue Reading

FILM

‘ನಮ್ಮನ್ನ ಯಾಕೆ ಮದುವೆಗೆ ಕರೆದಿಲ್ಲ?’: ವಿಜಯ್-ರಶ್ಮಿಕಾ ವಿರುದ್ಧ ಮುನಿಸಿಕೊಂಡ ಪುಟ್ಟ ಅಭಿಮಾನಿ!

Published

on

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಉದಯಪುರದಲ್ಲಿ ವಿವಾಹವಾದರು. ಈ ಮದುವೆಗೆ ತನ್ನನ್ನು ಕರೆದಿಲ್ಲ ಎಂದು ಪುಟ್ಟ ಅಭಿಮಾನಿಯೊಬ್ಬರು ಕೋಪದಿಂದ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಆ ಪುಟ್ಟ ಬಾಲಕಿ ವಿಡಿಯೋದಲ್ಲಿ, “ನಾನು ಕೂಡ ನಿಮ್ಮ ಅಭಿಮಾನಿಯಲ್ಲವೇ? ನಮ್ಮನ್ನು ಯಾಕೆ ಮದುವೆಗೆ ಕರೆಯಲಿಲ್ಲ?” ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾಳೆ.
ಈ ವಿಡಿಯೋಗೆ ವಿಜಯ್ ಅವರು ತುಂಬಾ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. “ಬುಜ್ಜಿ ತಲ್ಲಿ.. ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ. ನಿನಗೆ ಇಷ್ಟವಾದ ಅಡುಗೆ ಮತ್ತು ಸಿಹಿತಿಂಡಿಗಳನ್ನು ಹೇಳು, ಮನೆಯಲ್ಲಿ ಎಲ್ಲವನ್ನೂ ಮಾಡಿಸಿ ಒಟ್ಟಿಗೆ ತಿನ್ನೋಣ” ಎಂದು ಕಮೆಂಟ್ ಮಾಡಿದ್ದಾರೆ.

ನಟಿ ರಶ್ಮಿಕಾ ಕೂಡ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಆ ಬಾಲಕಿಗೆ ವಿಶೇಷ ಉಡುಗೊರೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್!

ಈ ದಂಪತಿಗಳು ತಮ್ಮ ಮದುವೆಯ ನಂತರ ದೇವಸ್ಥಾನಗಳಲ್ಲಿ ಸಿಹಿತಿಂಡಿ ಹಂಚುವ ಮೂಲಕ ಮತ್ತು ಅಭಿಮಾನಿಗಳೊಂದಿಗೆ ವಿಶೇಷ ಊಟ ಮಾಡುವ ಮೂಲಕ ಸಂಭ್ರಮವನ್ನು ಆಚರಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page