Connect with us

STATE

ಕೃಷಿ ಹೊಂಡದಲ್ಲಿ ಬಿದ್ದು ಸಹೋದರಿಯರು ಮೃತ್ಯು

Published

on

ಕೋಲಾರ : ಕೃಷಿ ಹೊಂಡದಲ್ಲಿ ಬಿದ್ದು ಸಹೋದರಿಯರು ಮೃತಪಟ್ಟಿರುವ ಘಟನೆ ಕೋಲಾರ ಹೊರವಲಯದ ಕೋಡಿಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೋಡಿಗೆನಹಳ್ಳಿ ಗ್ರಾಮದ ರಾಜೇಂದ್ರ, ಸುಮಿತ್ರಮ್ಮ ದಂಪತಿಯ ಮಕ್ಕಳಾದ ಅನುಷ್ಯ (12) ಮತ್ತು ವೆನ್ನಲ್ಲ (10) ಮೃತರಾಗಿದ್ದಾರೆ. ಮೃತ ಸಹೋದರಿಯರು ತಮ್ಮ ಮನೆಯ ಸೀಮೆ ಹಸುಗಳಿಗೆ ಹುಲ್ಲು ತರಲು ಜಮೀನತ್ತ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಬಾಲಕಿಯರ ಮೃತದೇಹವನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS

ಧಾರವಾಡದಲ್ಲಿ ಒಂದೇ ದಿನ ಇಬ್ಬರು ಪೊಲೀಸರು ಸಾ*ವು

Published

on

ಮಂಗಳೂರು/ಧಾರವಾಡ : ಧಾರವಾಢ ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ಪೊಲೀಸರು ಮೃ*ತಪಟ್ಟಿದ್ದಾರೆ. ಎಎಸ್‌ಐ  ಒಬ್ಬರು ಹೃದಯಾ*ಘಾತದಿಂದ  ಸಾ*ವನ್ನಪ್ಪಿದ್ದು, ಹೆಡ್ ಕಾನ್ಸ್ಟೇಬಲ್ ಒಬ್ಬರು ಅನಾರೋಗ್ಯದಿಂದ ಮೃ*ತಪಟ್ಟಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆಯ ಎಎಸ್‌ಐ ಚಂದ್ರಕಾಂತ ಹುಟಗಿ ಹೃದಯಾ*ಘಾತದಿಂದ ಸಾ*ವನ್ನಪ್ಪಿದ್ದಾರೆ. ಪೊಲೀಸ್ ಠಾಣೆಯಿಂದ ಮನೆಗೆ ವಿಶ್ರಾಂತಿಗೆ ತೆರಳಿದ್ದ  ಅವರಿಗೆ ಹೃದಯಾಘಾತವಾಗಿದೆ. ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ : ಮದುವೆಗೆ ಕೇವಲ ಒಂದು ಗಂಟೆ ಮೊದಲು ವಧುವನ್ನು ಕೊಂದ ವರ!

ಮತ್ತೊಂದೆಡೆ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎನ್.ಬಿ ಭಜಂತ್ರಿ ಬಹು ಅಂಗಾಗ ವೈಫಲ್ಯದಿಂದ ಮೃ*ತಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾ*ವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

 

Continue Reading

MANGALORE

ಮದುವೆಗೆ ಕೇವಲ ಒಂದು ಗಂಟೆ ಮೊದಲು ವಧುವನ್ನು ಕೊಂದ ವರ!

Published

on

ಮಂಗಳೂರು/ಅಹಮದಾಬಾದ್: ಮದುವೆಗೆ ಕೆಲವೇ ಗಂಟೆಗಳ ಮೊದಲು ವರ ವಧುವನ್ನು ಹತ್ಯೆ ಮಾಡಿರುವ ಘಟನೆ ಗುಜರಾತ್ನ ಭಾವನನಗರ ಎಂಬಲ್ಲಿ ನಡೆದಿದೆ.

ಸಾಜನ್ ಬರೈಯಾ ಹತ್ಯೆಗೈದ ವರ. ಸೋನಿ ಹಿಮ್ಮತ್ ರಾಥೋಡ್ ಮೃತಪಟ್ಟ ವಧು.

ವಧು-ವರರ ನಡುವೆ ಸೀರೆಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಾಜನ್ ಬರೈಯಾ ಮತ್ತು ಸೋನಿ ಹಿಮ್ಮತ್ ರಾಥೋಡ್ ಕಳೆದ ಒಂದೂವರೆ ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿದ್ದರು. ಇದೀಗ ಅವರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಮದುವೆಯ ಹಲವು ಶಾಸ್ತ್ರಗಳನ್ನು ಪೂರೈಸಿದ್ದರು.

ಹಸೆಮಣೆ ಏರುವ ಕೆಲವೇ ಗಂಟೆಯ ಮೊದಲು ವಧು ವರರ ಮಧ್ಯೆ ಸೀರೆ ಮತ್ತು ಹಣದ ಕಾರಣಕ್ಕೆ ಜಗಳ ಹುಟ್ಟಿಕೊಂಡಿದೆ. ಕೋಪಗೊಂಡ ವರ ಕಬ್ಬಿಣದ ಪೈಪ್ನಿಂದ ವಧು ಸೋನಿಗೆ ಹೊಡೆದು, ಗೋಡೆಗೆ ತಲೆಯನ್ನು ಬಡಿದು ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: 72ನೇ ಅಖಿಲ ಭಾರತ ಸಹಕಾರ ಸಪ್ತಾಹ : ಆಕರ್ಷಕ ಮೆರವಣಿಗೆ

ಅಷ್ಟೇ ಅಲ್ಲದೆ, ಆರೋಪಿಯು ಮನೆಯನ್ನು ಧ್ವಂಸ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

Continue Reading

STATE

ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು

Published

on

ಕಲಬುರಗಿ : ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿಯಾದ ಘಟನೆ ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಸಮೀಪ ಸಂಭವಿಸಿದೆ.


ಬೆಂಕಿಗೆ ಆಹುತಿಯಾದ ಕಾರು ಕಲಬುರಗಿ ನಿವಾಸಿ, ರಾಹುಲ್ ಗುತ್ತೇದಾರ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ.

ಇದನ್ನೂ ಓದಿ: ಕಾರಿನ ಮೇಲೆ ಬಿದ್ದ ಕಾಡಾನೆ ; ಆಮೇಲೇನಾಯ್ತು?

ಕಾರಿನ ಇಂಜಿನ್ ಅತಿಯಾಗಿ ಬಿಸಿ ಆಗಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೆಂಕಿ ಹತ್ತಿದ ಕೂಡಲೇ ಚಾಲಕ ಕಾರು ನಿಲ್ಲಿಸಿ, ಕಾರಿನಲ್ಲಿದ್ದವರನ್ನು ದೂರ ಕರೆದೊಯ್ದಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page