ಬೆಂಗಳೂರು : ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಪ್ರಕರಣ ಇಡೀ ಸಿನಿಮಾರಂಗವನ್ನೇ ಬೆಚ್ಚಿ ಬೀಳಿಸಿತ್ತು. ನಿರ್ಮಾಪಕನಾಗಿ ಭಾರಿ ಯಶಸ್ಸನ್ನು ಬಾಚಿಕೊಂಡಿದ್ದ ಸೌಂದರ್ಯ ಜಗದೀಶ್ ಸಾವು ಆತಂಕ ಸೃಷ್ಟಿಸಿದ್ದು ಸುಳ್ಳಲ್ಲ. ಯಾಕೆ ಸೌಂದರ್ಯ ಜಗದೀಶ್ ಇಂತಹ ನಿರ್ಧಾರ ಕೈಗೊಂಡ್ರು ಅನ್ನೋ ಪ್ರಶ್ನೆಯೊಂದು ಹುಟ್ಟುಕೊಂಡಿತ್ತು. ಇದೀಗ ಡೆ*ತ್ ನೋಟ್ ಸಿಕ್ಕಿರುವ ಬಗ್ಗೆ ಸೌಂದರ್ಯ ಜಗದೀಶ್ ಪತ್ನಿ ರೇಖಾ ತಿಳಿಸಿದ್ದಾರೆ. ಈ ಡೆ*ತ್ ನೋಟ್ ಮೂಲಕ ಕೆಲವೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ತಮ್ಮ ಪತಿಯ ನಿಧ*ನಕ್ಕೆ ಅವರ ಬಿಸ್ ನೆಸ್ ಪಾರ್ಟ್ನರ್ ಗಳಾಗಿದ್ದ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಅವರೇ ಕಾರಣ ಎಂದು ರೇಖಾ ಆರೋಪಿಸಿದ್ದಾರೆ.
ಸೌಂದರ್ಯ ಜಗದೀಶ್ ಇಹಲೋಕ ತ್ಯಜಿಸಿದ ಕಾರಣ ಸೌಂದರ್ಯ ಜಗದೀಶ್ ಅವರಿಗೆ ಆದ ನಷ್ಟ ಹಾಗೂ ಮೋಸ ಎಂಬುದಾಗಿ ರೇಖಾ ಹೇಳಿದ್ದಾರೆ.
ಡೆ*ತ್ ನೋಟ್ ನಲ್ಲಿ ಏನಿತ್ತು? ರೇಖಾ ಆಪಾದನೆ ಏನು?
ಈಗ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿ ಅವರ ಬಟ್ಟೆಗಳನ್ನು ಅಲ್ಲಿ ಬಿಡಬೇಕು ಅಂತ ಅರ್ಚಕರು ಹೇಳಿದ್ದಾರೆ. ಹಾಗಾಗಿ ಹಳೇ ಬಟ್ಟೆಗಳನ್ನು ತೆಗೆಯಲು ವಾರ್ಡ್ ರೋಬ್ ತೆಗೆದಾಗ ಡೆ*ತ್ ನೋಟ್ ಸಿಕ್ಕಿದೆ ಎಂದಿದ್ದಾರೆ.
ಸುರೇಶ್ ಹಾಗೂ ಹೊಂಬಣ್ಣ ಮತ್ತು ಸೌಂದರ್ಯ ಜಗದೀಶ್ ಸೇರಿಕೊಂಡು ಸೌಂದರ್ಯ ಕನ್‌ಸ್ಟ್ರಕ್ಷನ್ಸ್ ಕಂಪೆನಿಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಈ ವೇಳೆ ಕಂಪನಿಯು ಲಾಭದಲ್ಲಿದ್ದರೂ ನಷ್ಟದಲ್ಲಿದೆ ಎಂದು ಸುಳ್ಳು ಹೇಳಿ ತಮ್ಮ ಪತಿ ಜಗದೀಶ್ ಅವರಿಂದ ಹಣವನ್ನು ಹೂಡಿಕೆ ಮಾಡಿಸಿದ್ದರು. ಇಷ್ಟೇ ಅಲ್ಲದೇ, ಸುಳ್ಳು ಹೇಳಿ ಕುಟುಂಬದ ಆಸ್ತಿಗಳನ್ನು ಬ್ಯಾಂಕ್ ನಲ್ಲಿ ಅಡಮಾನ ಇರಿಸಿದ್ದಾರೆ. ಅದರ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಗೆ ತುಂಬ ಕಾಟ, ಕಿರುಕುಳ ಕೊಡುತ್ತಾರೆ ಅಂತ ಈ ಮೊದಲು ಒಮ್ಮೆ ನನ್ನ ಬಳಿ ಹೇಳಿದ್ದರು. ಆದರೆ ಈ ಮಟ್ಟಕ್ಕೆ ಆಗುತ್ತೆ ಅಂತ ನಮಗೆ ಗೊತ್ತಿರಲಿಲ್ಲ. ಏನೇ ಇದ್ದರೂ ನಮ್ಮ ಜೊತೆ ಹಂಚಿಕೊಳ್ಳಿ ಅಂತ ಧೈರ್ಯ ತುಂಬಿದ್ದೆವು ಎಂದಿದ್ದಾರೆ.
ನಮಗೂ ಬೆದರಿಕೆ ಇದೆ ಎಂದ ರೇಖಾ
ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಇದೆ ಎಂದಿರುವ ಅವರು, ಹುಲಿ ರೀತಿ ಇದ್ದ ಅವರನ್ನೇ ಕೊನೆ ಕೊನೆಗೆ ಇಷ್ಟು ಸೈಲೆಂಟ್ ಆಗುವಂತೆ ಮಾಡಿ ಈ ಹಂತಕ್ಕೆ ತೆಗೆದುಕೊಂಡು ಬಂದವರು. ನಾಳೆ ನನಗೆ ಮತ್ತು ನನ್ನ ಮಗನಿಗೆ ಏನು ಮಾಡುತ್ತಾರೋ ಗೊತ್ತಿಲ್ಲ. ನನಗೆ ಆ ಭಯ ಇದೆ.
ಪತಿ ಸೌಂದರ್ಯ ಜಗದೀಶ್ ಆತ್ಮಹ*ತ್ಯೆ ಮಾಡಿಕೊಳ್ಳುವ ಮುಂಚೆ ಒಂದು ವಾರದ ಹಿಂದೆ ಸುರೇಶ್ ಹಾಗೂ ಹೊಂಬಣ್ಣ ನಿರಂತರವಾಗಿ ಫೋನ್ ಮಾಡಿದ್ದರು. ಅವರ ಕರೆ ಬಂದಾಗ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ಇದರಿಂದ ಮನನೊಂದು ಡೆ*ತ್‌ನೋಟ್ ಬರೆದಿಟ್ಟು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಜಗದೀಶ್ ಪತ್ನಿ ರೇಖಾ ಆರೋಪಿಸಿದ್ದಾರೆ.
ಇದನ್ನೂ ಓದಿ : ತುಳುನಾಡನ್ನು ಹಾಡಿ ಹೊಗಳಿದ ಸುನಿಲ್ ಶೆಟ್ಟಿ.. ಮಾವನ ಪೋಸ್ಟನ್ನು ರಿ ಪೋಸ್ಟ್ ಮಾಡಿ ಗಮನ ಸೆಳೆದ ಕೆ.ಎಲ್ ರಾಹುಲ್
ಸದ್ಯಕ್ಕೆ ರೇಖಾ ಜಗದೀಶ್ ಅವರು ನೀಡಿದ ಡೆ*ತ್ ನೋಟ್ ಆಧರಿಸಿ ಸೌಂದರ್ಯ ಜಗದೀಶ್ ಅವರ ಪಾರ್ಟ್ನರ್ಸ್ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಏ.14ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನಲ್ಲಿರುವ ನಿವಾಸದಲ್ಲಿ ಸೌಂದರ್ಯ ಜಗದೀಶ್ ಜೀವಾಂತ್ಯಗೊಳಿಸಿದ್ದರು. ಇದರಿಂದ ಇಡೀ ಚಿತ್ರರಂಗ ಶಾಕ್ ಗೆ ಒಳಗಾಗಿತ್ತು. ಇದಾದ ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ, ಅವರ ಇಚ್ಛೆಯಂತೆ ಚನ್ನರಾಯಪಟ್ಟಣದ ಹಿರಿಸಾವೆ ಗ್ರಾಮದಲ್ಲಿ ಅಂತ್ಯಕ್ರಿ*ಯೆ ನೆರವೇರಿಸಲಾಗಿತ್ತು.