Connect with us

BANTWAL

ಬಂಟ್ವಾಳದ ಲೀಲಾವತಿ ಬಂಗೇರರಿಗೆ ಸೂರು ನಿರ್ಮಿಸಿದ ತುಳುಕೂಟ ಕುವೈಟ್ & ಹ್ಯುಮಾನಿಟಿ ಟ್ರಸ್ಟ್..!

Published

on

ಬಂಟ್ವಾಳದ ಲೀಲಾವತಿ ಬಂಗೇರರಿಗೆ ಸೂರು ನಿರ್ಮಿಸಿದ ತುಳುಕೂಟ ಕುವೈಟ್ & ಹ್ಯುಮಾನಿಟಿ ಟ್ರಸ್ಟ್..!

ಮಂಗಳೂರು : ಹೊರದೇಶದಲ್ಲಿದ್ದರೂ ಕೂಡ ಸದಾ ನಮ್ಮ ನಾಡಿಗೆ ಮತ್ತು ನಾಡಿನ ಜನತೆಗೆ ಒಂದಿಲ್ಲೊಂದು ವಿಚಾರದಲ್ಲಿ ಸಹಾಯಹಸ್ತ ಚಾಚುವ ಸಂಸ್ಥೆ ತುಳುಕೂಟ ಕುವೈಟ್.

ಸದಾ ಸಮಾಜಮುಖಿ ಕಾರ್ಯಗಳಲ್ಲಿ ಈ ಸಂಸ್ಥೆ ಮುಂದಾಗಿದ್ದು, ಈ ಸಂಸ್ಥೇಯ ಹೆಮ್ಮೆಯ ಯೋಜನೆಗಳಲ್ಲೊಂದು ಮನೆ ಇಲ್ಲದವರಿಗೆ ಸ್ವಂತ ಸೂರು ಕಲ್ಪಿಸುವ ಆಶ್ರಯ ಯೋಜನೆ.

ಇದೀಗ ಈ ಆಶ್ರಯ ಯೋಜನೆಯ ಅಡಿಯಲ್ಲಿ ಬಂಟ್ವಾಳದ ಲೀಲಾವತಿ ಬಂಗೇರರವರಿಗೆ ನೂತನ ಮನೆಯನ್ನು ತುಳುಕೂಟ ಕುವೈಟ್ ಮತ್ತು ಹ್ಯುಮಾನಿಟಿ ಟ್ರಸ್ಟ್ ನ ರೋಶನ್ ಬೇಳ್ಮಣ್ ಸಮ್ಮುಖದಲ್ಲಿ ಬಂಟ್ವಾಳದ ತಹಶಿಲ್ದಾರ್ ರಶ್ಮಿ ಎಸ್ ಆರ್ ಉದ್ಘಾಟಿಸಿದರು.

ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿರುವ ವಿಧವೆ ಲೀಲಾವರಿತವರಿಗೆ ಇಬ್ಬರು ಹೆಣ್ಣುಮಕ್ಕಳು ಜೊತೆಗೆ  ಅನಾರೋಗ್ಯದಿಂದ ಅಸಹಾಯಕರಾಗಿದ್ದರು.

ಇದೀಗ ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಹೊಸ ಟೆರೇಸ್ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಸಂಕಷ್ಟದಲ್ಲಿರುವ ಲೀಲಾವತಿ ಮತ್ತು  ಅವರ ಕುಟುಂಬದ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.

ತುಳುಕೂಟ ಕುವೈಟ್ ಮತ್ತು ಹ್ಯುಮಾನಿಟಿ ಟ್ರಸ್ಟ್ನ ಈ ಸಮಾಜಮುಖಿ ಕಾರ್ಯ ಇದೀಗ ಎಲ್ಲರಿಗೂ ಮಾದರಿಯಾಗಿದೆ.

BANTWAL

ಬಂಟ್ವಾಳದ ಯುವಕ ಚೆನ್ನರಾಯಪಟ್ಟಣದಲ್ಲಿ ರೈಲಿನಿಂದ ಬಿದ್ದು ಸಾವು

Published

on

ಬಂಟ್ವಾಳ: ಬಂಟ್ವಾಳ ಮೂಲದ ಯುವಕನೋರ್ವ ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪುಣಚ ಗ್ರಾಮದ ದೇವಿನಗರ ನಿವಾಸಿ 25 ವರ್ಷ ಪ್ರಾಯದ ನಿಶಿತ್ ನಾಯ್ಕ್ ಮೃತ ಯುವಕನಾಗಿರುತ್ತಾನೆ.


ನಿಶಿತ್ ಅವರು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ಬೆಂಗಳೂರಿನ ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಊರಿಗೆ ರೈಲಿನಲ್ಲಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ, ಹಣ ಪಡೆದು ಪರಾರಿಯಾಗುತ್ತಿದ್ದ ಆರೋಪಿಗಳ ಬಂಧನ

ನಿಶಿತ್ ಅವರು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿಯೂ ಗುರುತಿಸಿಕೊಂಡಿದ್ದರು. ಮನೆಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ಟ್ರೈನ್ ಹಿಡಿದಿದ್ದರು. ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅವರು ಮುಂಜಾನೆ ಸುಮಾರು 2.30ರ ಹೊತ್ತಿಗೆ ರೈಲಿನಿಂದ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Continue Reading

BANTWAL

ವಿಟ್ಲ: ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಮಹಿಳೆ

Published

on

ವಿಟ್ಲ: ಮಹಿಳೆಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲ ಬಸ್‌ಸ್ಟ್ಯಾಂಡ್ ಸಮೀಪ ರವಿವಾರ ಬೆಳಿಗ್ಗೆ ನಡೆದಿದೆ. 68 ವರ್ಷದ ವಿಟ್ಲ ಮುಳ್ಳೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ ಮೃತ ಮಹಿಳೆ.


ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬೈಕ್ ಸವಾರ ಪುತ್ತೂರು ಮೂಲದವರು ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಬೈಕ್ ಸುಮಾರು 50 ಮೀಟರ್ ದೂರ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಳ್ಳಾಲ: ಎಮ್ ಡಿಎಮ್ ಎ ಮಾರಾಟ ಪ್ರಕರಣ: ಆರೋಪಿ ಬಂಧನ

ಗಾಯಗೊಂಡು ಬಿದ್ದಿದ್ದ ಬೈಕ್ ಸವಾರನನ್ನು ಯಾರೂ ಮುಟ್ಟದೆ ಇದ್ದ ಸಂದರ್ಭ ಕಾಶಿಮಠ ನಿವಾಸಿ ಪ್ರತಾಪ್ ಅವರು ಮಾನವೀಯತೆ ಮೆರೆದಿದ್ದು, ತಮ್ಮ ದ್ವಿಚಕ್ರ ವಾಹನದಲ್ಲಿ ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಮೃತ ಸೀತಾ ಶೆಟ್ಟಿ ಅವರು ಪುತ್ರ ರೂಪೇಶ್ ಹಾಗೂ ಪುತ್ರಿ ರೂಪಿತಾರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Continue Reading

BANTWAL

ಇಂದಿನಿಂದ ಫೆ. 10ರ ತನಕ ಸಸಿಹಿತ್ಲು ಸಾರಂತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ

Published

on

ಮೂಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಕ್ಷೇತ್ರ ಸಜ್ಜಾಗಿ ನಿಂತಿದೆ.


ಇಂದಿನಿಂದ ಮೊದಲ್ಗೊಂಡು ಫೆಬ್ರವರಿ 10 ರ ತನಕ ನಿರಂತರ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ. ಬಿ. ಕರ್ಕೇರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ದೈವಸ್ಥಾನ ಭವ್ಯ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿದೆ. ಶ್ರೀ ಉಳ್ಳಾಯ ಮತ್ತು ಪರಿವಾರ ಶಕ್ತಿಗಳಿಗೆ ಪ್ರಧಾನಗೊಂಡ ಕಾಂತಾಬಾರೆ ಬೂದಾಬಾರೆ ಮತ್ತು ಮಾಯಂದಾಲ್ ದೈವಕ್ಕೆ ಪ್ರತ್ಯೇಕ ಗುಡಿ ನಿರ್ಮಿಸಲಾಗಿದ್ದು, ದೈವಸ್ಥಾನದ ಪ್ರಧಾನ ಗೋಪುರವನ್ನು ನವೀಕರಿಸಲಾಗಿದೆ.

ಇದನ್ನೂ ಓದಿ: ಫೆ.7-8 ರಂದು ಈಶ್ವರ ಮಲ್ಪೆ ತಂಡದಿಂದ ಉಚಿತ ಶ್ರವಣ ತಪಾಸಣಾ ಶಿಬಿರ

ಹಳೆಯಂಗಡಿಯ ವೇದಮೂರ್ತಿ ಎಚ್. ರಂಗನಾಥ ಭಟ್ ನೇತೃತ್ವದಲ್ಲಿ ಏಳು ದಿನಗಳ ಕಾಲ ನಿರಂತರ ವೈದಿಕ ವಿಧಿ ವಿಧಾನಗಳು ನಡೆಯಲಿವೆ. ಬ್ರಹ್ಮಕಲಶೋತ್ಸವ ಯಶಸ್ವಿಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಗೌರವ ಸಲಹೆಗಾರ ಚಂದ್ರಶೇಖರ ನಾನಿಲ್, ಮುಂಬೈ ಸಮಿತಿಯ ಅಧ್ಯಕ್ಷ ಸತೀಶ್ ಎನ್ ಕೋಟ್ಯಾನ್ ಮತ್ತಿತರರು ಇದ್ದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page