Connect with us

bengaluru

ಎಚ್ ಡಿ ದೇವೇಗೌಡರಿಂದ ಕುಕ್ಕೆಯಲ್ಲಿ ತುಲಾಭಾರ

Published

on

ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಇಂದು ಬೆಳಿಗ್ಗೆ ತುಲಾಭಾರ ಸೇವೆಯನ್ನು ಜೆಡಿಎಸ್ ವರಿಷ್ಠ ನಾಯಯಕ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ನೆರವೇರಿಸಿದರು.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ರಾಶಿಯಲ್ಲಿ ಕಂಡುಬಂದಂತೆ ಸಂಕಲ್ಪ ಮಾಡಿದ್ದು, ಕುಕ್ಕೆಯಲ್ಲಿ ತುಲಾಭಾರ ಮಾಡಿಸುವುದಾಗಿ ಹೇಳಿಕೊಂಡಿದ್ದರು.

ಅಕ್ಕಿ, ಬೆಲ್ಲ, ಕಡ್ಲೆಬೇಳೆ ಧಾನ್ಯಗಳಲ್ಲಿ ತುಲಾಭಾರ ಸೇವೆ ನಡೆಸಲಾಯಿತು. ಈ ಸಂದರ್ಭ ಧರ್ಮಪತ್ನಿ, ಕುಟುಂಬಿಕರು ಉಪಸ್ಥಿತರಿದ್ದರು.

bengaluru

ಮದ್ಯದ ಅಮಲಿನಲ್ಲಿ ಕ್ಯಾಬ್‌ಗೆ ಸ್ಕೂಟರ್ ಡಿಕ್ಕಿ: ಯುವತಿಯರ ಹೈಡ್ರಾಮಾ

Published

on

ಬೆಂಗಳೂರು: ಮದ್ಯದ ಅಮಲಿನಲ್ಲಿ ಯುವತಿಯರು ಸ್ಕೂಟಿಯನ್ನು ಕ್ಯಾಬ್‌ಗೆ ಗುದ್ದಿಸಿ, ಚಾಲಕ ಹಾಗೂ ಸ್ಥಳೀಯರೊಂದಿಗೆ ಗಲಾಟೆ ಮಾಡಿರುವ ಘಟನೆ ಬೆಂಗಳೂರಿನ ಹುಲಿಮಾವು ಸಮೀಪದಲ್ಲಿ ನಡೆದಿದೆ.


ಗ್ರಾಹಕರನ್ನು ಪಿಕ್-ಅಪ್ ಮಾಡಲು ತೆರಳುತ್ತಿದ್ದ ಕ್ಯಾಬ್ ಚಾಲಕ ಅಹ್ಮದ್ ಅವರ ವಾಹನಕ್ಕೆ ಹಿಂಬದಿಯಿಂದ ಬಂದ ಯುವತಿಯರ ಸ್ಕೂಟಿ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ವಾಹನಕ್ಕೆ ಆದ ಹಾನಿಯನ್ನು ಸರಿಪಡಿಸಿಕೊಡುವಂತೆ ಚಾಲಕ ಕೇಳಿದಾಗ, ಯುವತಿಯರು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.

ಆ ವೇಳೆ ಸ್ಥಳೀಯರು ಯುವತಿಯರನ್ನು ತಡೆದಾಗ ಮತ್ತು ಚಾಲಕ ಸ್ಕೂಟಿಯ ಕೀ ತೆಗೆಯಲು ಹೋದಾಗ, ಯುವತಿಯರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಕೈಗೆ ಸುತ್ತಿಕೊಂಡ ಚೈನ್‌ನಿಂದ ಮುಖ, ಕೈ ಮತ್ತು ಬೆನ್ನಿನ ಮೇಲೆ ಹೊಡೆದಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ.

ಇದನ್ನೂ ಓದಿ: ಗ್ಯಾಸ್​​ ಗೀಸರ್​​ ಲೀಕ್​​ ಆಗಿ ಪತಿ ಸಾವು; ವಿಷಯ ತಿಳಿದು ಪತ್ನಿಯೂ ಆತ್ಮಹತ್ಯೆ!

ಮದ್ಯದ ಅಮಲಿನಲ್ಲಿದ್ದ ಯುವತಿಯರು ಸ್ಥಳೀಯರ ಜೊತೆಗೂ ಕಿರಿಕ್ ಮಾಡಿಕೊಂಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಹುಲಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Continue Reading

bengaluru

ಬೆಚ್ಚಿ ಬೀಳಿಸಿದ ಸಾವಿರಾರು ಕೋಟಿ ಒಡೆಯನ ಆತ್ಮಹತ್ಯೆ ಪ್ರಕರಣ-ಐಟಿ ದಾಳಿಗೆ ಹೆದರಿದ್ರಾ ರಾಯ್..?

Published

on

ಬೆಂಗಳೂರು: ಕೋಟಿ ರೂ. ಒಡೆತನದ ಸಾಮ್ರಾಜ್ಯ ಕಟ್ಟಿದ್ದ ಒಡೆಯನ ಆತ್ಮಹತ್ಯೆ ಪ್ರಕರಣ ಉದ್ಯಮ ಲೋಕವನ್ನೇ ಬೆಚ್ಚಿ ಬೀಳಿಸಿದೆ. ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ತನ್ನ ಆಫೀಸಿನಲ್ಲೇ ಶೂಟ್ ಮಾಡಿಕೊಂಡು ಜೀವಾಂತ್ಯಗೊಳಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ತನ್ನ ಬೆಂಗಳೂರಿನ ಆನೇಪಾಳ್ಯದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಆತ್ಮಹತ್ಯೆಗೆ ಶರಣಾದ ಕೋಟ್ಯಾಧಿಪತಿ ವ್ಯಕ್ತಿ. ಕೇರಳ ಮೂಲದವರಾದ ಇವರು ಗಗನಚುಂಬಿ ಕಟ್ಟಡಗಳು, ಐಷಾರಾಮಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಮೂಲಕ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದ್ದು ಇವರ ದಿಢೀರ್ ಸಾವು ದಿಗ್ಭ್ರಾಂತಗೊಳಿಸಿದೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಸಿಜೆ ರಾಯ್, ತಮ್ಮ ಕಠಿಣ ಪರಿಶ್ರಮದಿಂದ ಸಾವಿರಾರು ಕೋಟಿ ರೂಪಾಯಿಗಳ  ಮಾಲಕರಾಗಿದ್ದರು.

ಕಳೆದ ಕೆಲವು ಸಮಯದಿಂದ ಆದಾಯ ತೆರಿಗೆ ಇಲಾಖೆಯ ಹದ್ದುಗಣ್ಣು ಸಿಜೆ ರಾಯ್ ಅವರ ಮೇಲೆ ಬಿದ್ದಿತ್ತು. ಅವರ ಕುಟುಂಬ ಮತ್ತು ಉದ್ಯಮಗಳ ಮೇಲೆ ಪದೇ ಪದೇ ನಡೆದ ಐಟಿ ದಾಳಿಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು ಎಂದು ಹೇಳಲಾಗುತ್ತಿದೆ.

ನಿರಂತರ ದಾಳಿಯಿಂದ ಬೇಸತ್ತ ಇವರನ್ನು ಒತ್ತಡ ಮತ್ತು ಭಯ ಕಾಡುತ್ತಿತ್ತು. ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿದೆ. ಅವರ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ತನಿಖೆಯಿಂದಷ್ಟೇ ನಿಖರ ಮಾಹಿತಿ ಹೊರಬರಬೇಕಿದೆ.

 

 

Continue Reading

bengaluru

ಏರ್ಪೋರ್ಟ್ ನಲ್ಲಿ ಟಾಯ್ಲೆಟ್ ಗೆ ಕರೆದೊಯ್ದು ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ-ಸಿಬ್ಬಂದಿ ಅರೆಸ್ಟ್

Published

on

ಬೆಂಗಳೂರು: ವಿದೇಶಿ ಮಹಿಳೆಗೆ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ನಡೆದಿದೆ. ಏರ್ ಸಾಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಫ್‌.ಡಿ ಆಪ್ಪಾನ್ ಅಹಮದ್ ಬಂಧಿತ ಆರೋಪಿ.

ದಕ್ಷಿಣ ಕೊರಿಯಾ ಮೂಲದ 36 ವರ್ಷದ ಮಹಿಳೆಯೊಬ್ಬರು ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ಮುಗಿಸಿ ಮತ್ತೆ ತನ್ನ ದೇಶಕ್ಕೆ ಹಿಂದಿರುಗಲು ಬೆಂಗಳೂರು ಏರ್‌ಪೋರ್ಟ್‌ಗೆ ವಾಪಸ್‌ ಆಗಿದ್ದರು. ಅಲ್ಲಿ ಭದ್ರತಾ ಪರಿಶೀಲನೆ ಮುಗಿಸಿ ಬೋರ್ಡಿಂಗ್ ಆಗುವ ವೇಳೆ ಎದುರಾದ ಆರೋಪಿ ಮಹಿಳಾ ಪ್ರಯಾಣಿಕರ ಬಳಿ ತಮ್ಮ ಬ್ಯಾಗೇಜ್ ಪರಿಶೀಲನೆ ಮಾಡಬೇಕು ಎಂದು ತಿಳಿಸಿ ಬ್ಯಾಗೇಜ್ ಪರಿಶೀಲನೆ ಮಾಡಿದ್ದಾರೆ.

ನಂತರ ವೈಯಕ್ತಿಕವಾಗಿ ಪರಿಶೀಲನೆ ಮಾಡಲಿದೆ ಎಂದು ತಿಳಿಸಿ ಈ ಮಹಿಳೆಯನ್ನ ಪುರುಷರ ಶೌಚಾಲಯದ ಒಳಗೆ ಕರೆದುಕೊಂಡು ಹೋಗಿ ಆಕೆಯನ್ನು ಮುಟ್ಟುವ ಹಾಗೂ ತಬ್ಬಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಇದರಿಂದ ವಿಚಲಿತಳಾದ ಮಹಿಳೆ ಸಿಐಎಸ್‌ ಎಫ್‌ ಸಿಬ್ಬಂದಿಗೆ ತಿಳಿಸಿದ್ದಾಳೆ.

ಕೂಡಲೇ ಸಿಐಎಸ್ ಎಫ್ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಮಹಿಳೆಯ ಬಳಿ ದೂರು ಪಡೆದಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page