Connect with us

BANTWAL

ಬಡ ಮಹಿಳೆಗೆ ಮನೆ ಹಸ್ತಾಂತರ; ಮಾನವೀಯತೆ ಮೆರೆದ ತುಡರ್ ಸೇವಾ ಟ್ರಸ್ಟ್.. 

Published

on

ಬಂಟ್ವಾಳ:  ಬಂಟ್ವಾಳದ ತುಡರ್ ಸೇವಾ ಟ್ರಸ್ಟ್ ಸಂಸ್ಥೆಯು ಹಲವು ಸಮಾಜ ಸೇವೆ ಮಾಡಿ ಹೆಸರು ಮಾಡಿದೆ.   ಸರಪಾಡಿ ಹಲ್ಲಂಗಾರು ಎಂಬಲ್ಲಿನ ಬಡ ಮಹಿಳೆಯೊಬ್ಬರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಮಾನವೀಯ ಕಾಳಜಿಯನ್ನು ಮರೆದಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಸಮಾಜದಲ್ಲಿ ಕಷ್ಟದಲ್ಲಿ ಇರುವವರಿಗೆ ದಿನದಲಿತರಿಗೆ  ಬಡವರ್ಗದವರ ಕಷ್ಟಕ್ಕೆ ಸದಾ ಸ್ಪಂದಿಸುವ ಸಂಘಟನೆ ಇದಾಗಿದೆ. ಈ ನಿಟ್ಟಿನಲ್ಲಿ ಬುಧವಾರದಂದು ತುಡರ್ ಸೇವಾ ಟ್ರಸ್ಟ್ ತನ್ನ 36 ನೇ ಸೇವಾ ಯೋಜನೆಯ ಅಂಗವಾಗಿ ತುಡರ್ ನಿಲಯ ನಾಮಾಂಕಿತ ಮನೆಯನ್ನು ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ಮನೆಯ ಫಲಾನುಭವಿ ಮಹಿಳೆ ತುಂಗಮ್ಮ ನಾಯ್ಕ್ ಎಂಬವರಿಗೆ ಮನೆ ಹಸ್ತಾಂತರಿಸಿದೆ. ಮನೆ ಹಸ್ತಾಂತರದ  ಫೋಟೋ ಮತ್ತು ಮನೆಗೆ ಬೇಕಾಗಿರುವ ದಿನಸಿ ಸಾಮಗ್ರಿ ಯನ್ನೂ ಇದೇ ವೇಳೆ  ನೀಡಿದರು.  ಇನ್ನು ಮನೆ ನಿರ್ಮಾಣ  ಮಾಡಿ ಕೊಟ್ಟ ಸಂಸ್ಥೆಗೆ ಫಲಾನುಭವಿ ತುಂಗಮ್ಮ ನಾಯಕ್ ಧನ್ಯವಾದ ಸಲ್ಲಿಸಿದ್ದಾರೆ…

BANTWAL

ಎರಡು ಕಾರುಗಳ ನಡುವೆ ಭೀಕರ ಅಪಘಾತ

Published

on

ಬಂಟ್ವಾಳ : ಮುಖ್ಯರಸ್ತೆಯಿಂದ ಅಡ್ಡ ರಸ್ತೆಗೆ ತಿರುವು ಪಡೆದುಕೊಳ್ಳುತ್ತಿದ್ದ ಕಾರೊಂದಕ್ಕೆ ಮುಖ್ಯರಸ್ತೆಯಲ್ಲಿ ಇನ್ನೊಂದು ದಿಕ್ಕಿನಿಂದ ಕಾರು ಡಿಕ್ಕಿ ಹೊಡೆದ ಘಟನೆ ಬಂಟ್ವಾಳ ಸಮೀಪ ನಡೆದಿದೆ.

ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ನಾಲ್ವರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕಾರು ಕಾವಳಕಟ್ಟೆ ಸಮೀಪ ಅಡ್ಡರಸ್ತೆಗೆ ತಿರುವು ಪಡೆಯುತ್ತಿರುವಾಗ ಈ ಅಪಘಾತ ಸಂಭವಿಸಿದೆ.

ಇನ್ನೋವಾ, ಡಿಕ್ಕಿ ಹೊಡೆದ ಕಾರು ರಸ್ತೆಯಲ್ಲಿ ಉರುಳಿ ಬಿದ್ದಿದ್ದು, ತಕ್ಷಣ ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಈ ಅಪಘಾತದ ದೃಶ್ಯ ಅಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Continue Reading

BANTWAL

ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾ*ವು

Published

on

ಬಂಟ್ವಾಳ : ಫ್ಯಾನ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವ ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.

ಅರಳ ನಿವಾಸಿ ಭವಾನಿ ಶಂಕರ ಯಾನೆ ರಾಜೇಶ್ ಮೃತಪಟ್ಟವರು. ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ರಾಜೇಶ್ ತನ್ನ ತಂಗಿ ಮನೆಯಲ್ಲಿ ಫ್ಯಾನ್ ರಿಪೇರಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಬಿದ್ದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಆನ್ಲೈನ್ ವಂಚನೆ ; ಕೊನೆಗೂ ಪೊಲೀಸರ ಕೈವಶವಾದ ಖದೀಮ

ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Continue Reading

BANTWAL

ಬಂಟ್ವಾಳ: ಕಾಂಗ್ರೆಸ್ ನಾಯಕನೊರ್ವನ ಕಾಲಿಗೆ ಗುಂಡೇಟು.!

Published

on

ಬಂಟ್ವಾಳ: ಗುಂಡೇಟಿನಿಂದ ಕಾಂಗ್ರೆಸ್ ಮುಖಂಡರೊಬ್ಬರು ಗಾಯ ಗೊಂಡಿದ್ದಾರೆ. ಇಂಟಕ್ ನಲ್ಲಿ ಸಕ್ರೀಯವಾಗಿದ್ದ ಚಿತ್ತರಂಜನ್ ಶೆಟ್ಟಿ ಗಾಯಗೊಂಡವರಾಗಿದ್ದಾರೆ.

ಬಂಟ್ವಾಳ ‌ತಾಲೂಕಿನ‌ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಅನಂತಾಡಿ ಎಂಬಲ್ಲಿ ಗುಂಡು ಹಾರಿದ್ದು, ಅಸಲಿಗೆ ಚಿತ್ತರಂಜನ್ ಶೆಟ್ಟಿ ಅವರ ಕಿಸೆಯಲ್ಲಿದ್ದ ಪಿಸ್ತೂಲ್ ನಿಂದಲೇ ಈ ಫೈರಿಂಗ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಸ್ವಂತ ಭದ್ರತೆಗಾಗಿ ಇರಿಸಿಕೊಂಡಿದ್ದ ಪಿಸ್ತೂಲ್ ಸರಿಯಾಗಿ ಲಾಕ್ ಮಾಡದ ಕಾರಣ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು. ಗಾಯಗೊಂಡ ಚಿತ್ತರಂಜನ್ ಶೆಟ್ಟಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page