Connect with us

LATEST NEWS

ಜನಸಂಖ್ಯೆ ಹೆಚ್ಚಳಕ್ಕೆ ಮಹತ್ವದ ಹೆಜ್ಜೆಯಿಟ್ಟ ಟ್ರಂಪ್; ಅಮೆರಿಕದ ತಾಯಂದಿರಿಗೆ ಬಂಪರ್ ಆಫರ್..!?

Published

on

ಮಂಗಳೂರು/ವಾಷಿಂಗ್ಟನ್: ಅಮೆರಿಕದಲ್ಲಿ ಜನಸಂಖ್ಯೆ ಕೊರತೆಯನ್ನ ಬಹುಮಟ್ಟಿಗೆ ವಲಸಿಗರಿಂದಲೇ ಸರಿದೂಗಿಸಲಾಗುತ್ತಿದೆ. ಆದರೆ ದೊಡ್ಡಣ್ಣ ಟ್ರಂಪ್ ಆಡಳಿತಕ್ಕೆ ಈ ವಲಸಿಗರ ಮೇಲೆ ಒಲವಿಲ್ಲ. ಗೇಟ್‌ಪಾಸ್ ಕೊಡ್ಬೇಕು ಅಂತ ವಿರೋಧಿಸಿ ಕೂತಿದೆ. ಆದರೆ ಅದಕ್ಕೂ ಮುನ್ನ ತನ್ನ ರಾಷ್ಟ್ರದಲ್ಲಿ ಜನಸಂಖ್ಯೆಯನ್ನು ಹೆಚ್ಚು ಮಾಡುವ ಅನಿವಾರ್ಯತೆ ಇದೆ. ಹಾಗಾಗಿ ಅಲ್ಲಿನ ಹೊಸ ತಾಯಂದಿರಿಗೆ ಟ್ರಂಪ್ ಆಫರ್ ಒಂದನ್ನ ಕೊಟ್ಟಿದ್ದಾರೆ.

ಹೌದು.. ಚೀನಾ, ದ.ಕೊರಿಯಾ ಬಳಿಕ ಅಮೆರಿಕವೂ ಜನಸಂಖ್ಯೆ ಹೆಚ್ಚಳದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ಜನನ ಪ್ರಮಾಣ ಕುಸಿಯುತ್ತಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಜನಸಂಖ್ಯೆ ಹೆಚ್ಚಳಕ್ಕಾಗಿ ಟ್ರಂಪ್ ಸರ್ಕಾರದಿಂದ, ಬೇಬಿ ಬೋನಾಸ್ ಹೆಸರಿನಲ್ಲಿ 5,000 ಡಾಲರ್ ಸಿಗಲಿದೆ. ಅಂದರೆ ಭಾರತದ ರೂಪಾಯಿ ಪ್ರಕಾರ, 4.26 ಲಕ್ಷ ರೂ.ಗಳವರೆಗೂ ಪ್ರೋತ್ಸಾಹ ಧನ ನೀಡಲು ಟ್ರಂಪ್ ನೇತೃತ್ವದ ಸರ್ಕಾರ ಆಲೋಚಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಶನಿವಾರ ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ

ಪ್ರತಿ ಅಮೆರಿಕನ್ ತಾಯಿಗೆ ಮಗುವಿನ ಜನನದ ನಂತರ ಪ್ರೋತ್ಸಾಹ ಧನವಷ್ಟೇ ಅಲ್ಲದೆ, ಮಹಿಳೆಯರ ಋತುಚಕ್ರ ಸೇರಿದಂತೆ ನೈಸರ್ಗಿಕ ಪ್ರಕ್ರಿಯೆಗಳ ಬಗ್ಗೆ ಶಿಕ್ಷಣ ನೀಡುವ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಸಹಾಯಧನವನ್ನು ನೀಡಲು ಆಲೋಚಿಸಲಾಗಿದೆ. ಸರ್ಕಾರಿ ಬೆಂಬಲಿತ ಫೆಲೋಶಿಪ್‌ಗಳಲ್ಲೂ ಶೇ.30ರಷ್ಟು ವಿದ್ಯಾರ್ಥಿ ವೇತನವನ್ನು ವಿವಾಹಿತರಿಗೆ ಹಾಗೂ ಮಕ್ಕಳ ಹೆತ್ತವರಿಗೆ ಮೀಸಲಿಡುವ ಬಗ್ಗೆಯೂ ಆಲೋಚಿಸಲಾಗಿದೆ.

LATEST NEWS

ಮನೆ ಮುಂದೆ ಕಟ್ಟಿದ್ದ 3 ಹಸುಗಳ ಕಳ್ಳತನ

Published

on

ಬೆಂಗಳೂರು: ಮನೆ ಮುಂದೆ ಕಟ್ಟಿದ್ದ 3 ಹಸುಗಳು ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಪ್ಪ ಎಂಬುವರಿಗೆ ಸೇರಿದ 12 ಹಸುಗಳಲ್ಲಿ ಮೂರು ಹಸುಗಳನ್ನು ಕದಿಯಲಾಗಿದೆ. ಈ ಮೂರು ಹಸುಗಳಲ್ಲಿ, ಒಂದು ಹಸು ಇನ್ನೇರಡು ತಿಂಗಳಲ್ಲಿ ಕರು ಹಾಕುತ್ತಿತ್ತು. ಇನ್ನೆರಡು ಹಸುಗಳಿಂದ ಮನೆ ನಡೆಸುವಷ್ಟು ಆದಾಯ ಬರುತ್ತಿತ್ತು.

ಇದನ್ನೂ ಓದಿ: ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ

ಇತಂಹ ಹಸುಗಳನ್ನು ಖತರ್ನಾಕ್ ಕಳ್ಳರು ಕದ್ದಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ

Published

on

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತದ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಹವಾಮಾನ ಇಲಾಖೆಯು ಇಂದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ನಿನ್ನೆ ರಾತ್ರಿ ವೇಳೆಯೇ ಕೆಲವು ಕಡೆ ಮಳೆಯಾಗಿದ್ದು, ಇಂದು ಮುಜಾನೆಯಿಂದ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ.

ಗಾಳಿ ಮಳೆಯಿಂದಾಗಿ ಕೆಲವು ಕಡೆ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಬಳಿಯ ಪಲ್ಲಿಕಂಡದಲ್ಲಿ ಸಿಸಿಲಿಯಾ ಪಿಂಟೊ ಎಂಬುವವರ ಮನೆ ಕುಸಿದು ಬಿದ್ದ ಘಟನೆ ಸಂಭವಿಸಿದ್ದು, ಯಾವುದೇ ಜಿವ ಹಾನಿಯಾಗಿಲ್ಲ.

ಕೆಲವು ಕಡೆ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಸಮಸ್ಯೆ ಉಂಟಾದ ಘಟನೆಯೂ ಸಂಭವಿಸಿದೆ. ಉಡುಪಿ, ಕಾರ್ಕಳ, ಕುಂದಾಪುರ, ಕಾಪು,ಪಡುಬಿದ್ರಿ ಸಹಿತ ಕರಾವಳಿಯ ಎಲ್ಲಾ ತಾಲೂಕುಗಳಲ್ಲಿ ಧಾರಾಕಾರ ಮಳೆ ಬಂದಿದೆ.

ಇದನ್ನೂ ಓದಿ: ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರು ಯುವತಿಯರ ಸಾ*ವು

ಕಾರ್ಮೋಡ ಮುಸುಕಿದ ವಾತಾವರಣವಿದ್ದು ದಿನಪೂರ್ತಿ ಮಳೆ ಬರುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

 

Continue Reading

LATEST NEWS

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹ*ತ್ಯೆ

Published

on

ಮಡಿಕೇರಿ: ಜೀವನದಲ್ಲಿ ಜಿಗುಪ್ಸೆಗೊಂಡು ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ.

ನಾರೂರು ಮನೆ ಮಧು (ಅಶೋಕ್) ಮೃತ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮದ್ಯ ಸೇವಿಸಿ ತಲೆಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಮೂರು ವರ್ಷದ ಪುತ್ರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಪತ್ನಿ ಮತ್ತು ಪುತ್ರಿ ಬೆಂಗಳೂರಿಗೆ ತೆರಳಿದ್ದರು. ಭಾನುವಾರ ಬೆಳಗ್ಗೆ ಮೃತನ ತಾಯಿ ಕೂಡ ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭ ತನ್ನ ಮನೆಯಲ್ಲಿ ಇದ್ದ ಡಬಲ್ ಬ್ಯಾರೆಲ್ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರು ಯುವತಿಯರ ಸಾ*ವು

ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page