Connect with us

INTERNATIONAL

ಪುರುಷರ ಬಗ್ಗೆ ನನಗೆ ಯಾವುದೇ ಆಸಕ್ತಿಯಿಲ್ಲ.. ಮಹಿಳೆಯರೆಂದರೆ..? ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಟ್ರಂಪ್!

Published

on

ವಾಷಿಂಗ್ಟನ್:‌ ಅಮೆರಿಕ ಅಂದರೆ ಜಗತ್ತಿನ ದೊಡ್ಡಣ್ಣ ಎಂದೇ ಫೇಮಸ್.‌ ಇಲ್ಲಿನ ಅಧ್ಯಕ್ಷರಿಗೆ ಅವರದ್ದೇ ಆದ ಅಧಿಕಾರ, ಗತ್ತು ಎಲ್ಲವೂ ಇರುತ್ತದೆ. ಆದರೆ ಇತ್ತೀಚೆಗೆ ಇದಕ್ಕೆ ತದ್ವಿರುದ್ದವೆಂಬಂತೆ ಅಧ್ಯಕ್ಷ ಟ್ರಂಪ್‌ ನಡೆದುಕೊಳ್ಳುತ್ತಿದ್ದಾರೆ. ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾಗುತ್ತಿರುವ ಟ್ರಂಪ್‌ ಮತ್ತೊಂದು ಹೇಳಿಕೆ, ಇದೀಗ ಚರ್ಚೆಗೆ ಕಾರಣವಾಗಿದೆ.


ಹೌದು.. ವಾಷಿಂಗ್ಟನ್‌ನಲ್ಲಿ ನಡೆದ ಗಾಜಾ ಶಾಂತಿ ಮಂಡಳಿ ಸಭೆಯಲ್ಲಿ ಮಾತನಾಡುವಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನೀಡಿರುವ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಕಾರಣವಾಗಿದೆ.

ಗಾಜಾ ಶಾಂತಿ ಮಂಡಳಿ ಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಸುದೀರ್ಘ ಭಾಷಣ ಮಾಡಿದ್ದಾರೆ. ಈ ವೇಳೆ ಟ್ರಂಪ್‌, ‘ಪುರುಷರ ಬಗ್ಗೆ ನನಗೆ ಯಾವುದೇ ಆಸಕ್ತಿಯಿಲ್ಲ.. ಮಹಿಳೆಯರೆಂದರೆ ಇಷ್ಟ’ ಎಂದಿದ್ದಾರೆ.

ಪೆರುಗ್ವೆ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಸಭೆಗೆ ಆಹ್ವಾನ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪೆರುಗ್ವೆ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅವರು ಟ್ರಂಪ್ ಅವರ ಮಾತಿಗೆ ಸಣ್ಣಗೆ ನಕ್ಕಿದ್ದಾರೆ.

ಪೆನಾ ಅವರ ಕಡೆ ತಿರುಗಿ ಮಾತು ಆರಂಭಿಸಿದ ಟ್ರಂಪ್‌, ಅಧ್ಯಕ್ಷರೇ ಇಲ್ಲಿಗೆ ಆಗಮಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದ. ಪೆನಾ ಅವರ ಯೌವನ, ರೂಪ ಚೆಂದ. ಸುಂದರ ಯುವ ವ್ಯಕ್ತಿ. ಯುವಕರಾಗಿ, ಸುಂದರವಾಗಿ ಇರುವುದು ಯಾವಾಗಲೂ ಒಳ್ಳೆಯದೇ. ಇದರರ್ಥ ನಾನು ನಿಮ್ಮನ್ನು ಇಷ್ಟಪಡಬೇಕು ಎಂದೇನು ಅಲ್ಲ. ನನಗೆ ಯುವಕರು ಮತ್ತು ಸುಂದರ ಪುರುಷರು ಇಷ್ಟವಿಲ್ಲ ಎಂದು ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದಾರೆ. ಮುಂದುವರಿದು ಮಹಿಳೆಯರನ್ನು ಕಂಡರೆ ನನಗೆ ತುಂಬಾ ಇಷ್ಟ. ಪುರುಷರೆಂದರೆ ಅಷ್ಟಕಷ್ಟೇ ಅಂತ ಹೇಳಿ ನಕ್ಕಿದ್ದಾರೆ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ನಿನ್ನ ಸೌಂದರ್ಯ ನೋಡಿ ನಿನ್ನ ಗಂಡನಿಗೆ ಕೆಲಸ ಕೊಟ್ಟೆ: ಟ್ರಂಪ್‌ ವಿವಾದಾತ್ಮಕ ಹೇಳಿಕೆ!

ಲಿಫ್ಟ್ ಘಟನೆ ಬಗ್ಗೆ ಮಾತನಾಡಿದ ಟ್ರಂಪ್‌
‘ಲಿಫ್ಟ್‌ನಲ್ಲಿ ಹೋಗುತ್ತಿದ್ದ ವೇಳೆ ಅಮೆರಿಕದ ಪ್ರಥಮ ಮಹಿಳೆ (ಟ್ರಂಪ್ ಪತ್ನಿ) ನನ್ನ ಮುಂದೆ ಇದ್ದದ್ದು ನನ್ನ ಅದೃಷ್ಟ. ಏಕೆಂದರೆ ಅವರ ದೇಹದ ನಿರ್ದಿಷ್ಟ ಭಾಗವೊಂದು ಹಿಡಿದುಕೊಳ್ಳುವ ಮೂಲಕ ನಾನು ಬೀಳುವುದು ತಪ್ಪಿತು’ ಎಂದು ಹೇಳಿದ್ದಾರೆ.

INTERNATIONAL

ಇಸ್ರೇಲ್‌-ಇರಾನ್‌ ಸಂಘರ್ಷ; ಕಿಮ್‌ ಜಾಂಗ್‌ ಉನ್‌ ಎಂಟ್ರಿ..ಬೆಂಬಲ ಯಾರಿಗೆ!?

Published

on

ಪ್ಯೊಂಗ್ಯಾಂಗ್: ಇರಾನ್-ಇಸ್ರೇಲ್‌ ಸಂಘರ್ಷ ಜಗತ್ತಿನ ನಿದ್ದೆಗೆಡಿಸಿದೆ. ಇಸ್ರೇಲ್‌ ಗೆ ಅಮೆರಿಕ ಬೆಂಬಲವಾಗಿ ನಿಂತಿದ್ದರೆ, ಇರಾನ್‌ ಒಬ್ಬಂಟಿ ಹೋರಾಟ ನಡೆಸುತ್ತಿತ್ತು. ಇದೀಗ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಎಂಟ್ರಿ ಕೊಟ್ಟಿದ್ದಾರೆ. ಇರಾನ್‌-ಇಸ್ರೇಲ್‌ ಯುದ್ದದ ಬಗ್ಗೆ ಮಾತನಾಡಿದ್ದು, ಅಮೆರಿಕ ವಿರುದ್ದ ಗುಡುಗಿದ್ದಾರೆ.


ಹೌದು.. ಅಮೆರಿಕ ಮತ್ತು ಇರಾನ್‌ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರು ದೇಶಗಳ ನಡುವಿನ ಯುದ್ದೋನ್ಮಾದ ಕೇವಲ ಮಧ್ಯಪ್ರಾಚ್ಯ ಮಾತ್ರವಲ್ಲದೇ, ಜಾಗತಿಕ ಆತಂಕವನ್ನೂ ಹೆಚ್ಚಿಸಿದೆ. ಈ ನಡುವೆ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇದೀಗ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಇರಾನ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಇರಾನ್‌ ಮಾಜಿ ಸುಪ್ರೀಂ ಲೀಡರ್‌ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ನಂತರ ಅಧಿಕಾರ ವಹಿಸಿಕೊಂಡ ಮುಜ್ತಬಾ ಖಮೇನಿ ಅವರಿಗೆ ಉತ್ತರ ಕೊರಿಯಾದ ಕಿಮ್‌ ಜಾಂಗ್‌ ಉನ್‌ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಕಾನೂನುಬಾಹಿರ ಎಂದು ಕರೆದಿರುವ ಉತ್ತರ ಕೊರಿಯಾ, ಯುದ್ದದ ನಡುವೆಯೇ ತನ್ನ ಅತ್ಯಂತ ಶಕ್ತಿಶಾಲಿ ಯುದ್ದನೌಕೆಯಿಂದ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಉಡಾಯಿಸಿ ಅಮೆರಿಕಕ್ಕೆ ನೇರ ಸವಾಲು ಹಾಕಿದೆ. ಅಲ್ಲದೆ ಸಂಕಷ್ಟದ ಸಮಯದಲ್ಲಿ ತಾವು ಇರಾನ್‌ ಜೊತೆಗೆ ಇರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಸಂಘರ್ಷ: ಮಾ.12ರಂದು ಮಂಗಳೂರು- ಮಧ್ಯ ಪ್ರಾಚ್ಯ ಮಾರ್ಗದ 14 ವಿಮಾನಗಳು ರದ್ದು

ಇರಾನ್‌ ವಿಷಯದಲ್ಲಿ ಕೇವಲ ಹೇಳಿಕೆ ನೀಡಿ ಸುಮ್ಮನಾಗದ ಕಿಮ್‌ ಜಾಂಗ್‌ ಉನ್‌, ಪ್ರಾಯೋಗಿಕವಾಗಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಉತ್ತರ ಕೊರಿಯಾದ ಅತಿದೊಡ್ಡ ನೌಕಾ ವಿಧ್ವಂಸಕ ನೌಕೆ ಚೋ ಹ್ಯೋನ್‌ನಿಂದ ವ್ಯೂಹಾತ್ಮಕ ಕ್ರೂಸ್‌ ಕ್ಷಿಪಣಿಗಳ ಪರೀಕ್ಷೆಯನ್ನು ಕಿಮ್‌ ವೈಯಕ್ತಕವಾಗಿ ಮೇಲ್ವಿಚಾರಣೆ ಮಾಡಿದ್ದಾರೆ.

Continue Reading

INTERNATIONAL

VIDEO: ಚಿನ್ನದ ಸರ ಕದ್ದು ಎಸ್ಕೇಪ್‌ ಆಗುತ್ತಿದ್ದ ಕಳ್ಳನಿಗೆ ಕೈಕೊಟ್ಟ ಬೈಕ್!

Published

on

ವೆಣ್ಣಪ್ಪುವಾ: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವತಿಯನ್ನು ತಡೆದು, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ಘಟನೆಯೊಂದು ಶ್ರೀಲಂಕಾದ ವೆಣ್ಣಪ್ಪುವಾದ ತಂಬರವಿಲ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿಯನ್ನು ಹಿಂದಿನಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿ ಆಕೆಯ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಯುವತಿಯ ಸ್ಕೂಟಿ ನಿಯಂತ್ರಣ ತಪ್ಪಿ ಬಿದ್ದಿದೆ. ಬಿದ್ದ ಅವಕಾಶವನ್ನು ಬಳಸಿಕೊಂಡ ಆರೋಪಿಯು ಯುವತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ.

ಇದನ್ನೂ ಓದಿ: ಶ್ರೀಮಂತರೇ ಈಕೆಯ ಟಾರ್ಗೆಟ್…ಕೊನೆಗೂ ಖತರ್ನಾಕ್ ಲೇಡಿ ಅಂದರ್…ಅಷ್ಟಕ್ಕೂ ಈಕೆ ಮಾಡಿದ್ದೇನು?

ಆದರೆ, ಈ ವೇಳೆ ಆತನ ಬೈಕ್ ಸ್ಟಾರ್ಟ್ ಆಗದ ಕಾರಣ, ಸ್ಥಳದಲ್ಲಿದ್ದವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Continue Reading

INTERNATIONAL

ಏನಿದು ಎಪ್ಸ್ಟೀನ್‌ ಫೈಲ್ಸ್‌..! ಜಗತ್ತಿನ ಖ್ಯಾತ ನಾಮರ ಹೆಸರೇಕೆ ತಳುಕು ಹಾಕಿಕೊಂಡಿದೆ?

Published

on

ಜಗತ್ತಿನಲ್ಲಿ ಇದೀಗ ಎಪ್‌ಸ್ಟೀನ್‌ ಫೈಲ್ಸ್‌ ಬಿರುಗಾಳಿ ಎದ್ದಿದೆ. ಈ ದಂಧೆಯಲ್ಲಿ ದೊಡ್ಡ ದೊಡ್ಡವರ ಬಂಡವಾಳ ಬಯಳಾಗುತ್ತಿದೆ. ಹಾಗಾದರೆ ಏನಿದು ಎಫ್‌ಸ್ಟೀನ್‌ ಫೈಲ್ಸ್‌ ರಾಜಕೀಯ ಬಿರುಗಾಳಿ…?

ಹೌದು.. ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ದಾಖಲೆಗಳು (ಫೈಲ್ಸ್‌) ಜನವರಿ 30 ರಂದು ಬಹಿರಂಗವಾಗಿತ್ತು. ನಂತರ ಜಾಗತಿಕ ಮಟ್ಟದಲ್ಲಿ ತಲ್ಲಣ ಉಂಟಾಗಿದೆ. ಇದರಲ್ಲಿ ರಾಜಕಾರಣ, ಉದ್ದಿಮೆ, ಮನರಂಜನೆ ಮತ್ತು ಶೈಕ್ಷಣಿಕ ವಲಯದ ಘಟಾನುಘಟಿಗಳ ಹೆಸರುಗಳು ಎಪ್‌ಸ್ಟೀನ್‌ ಫೈಲ್ಸ್‌ನಲ್ಲಿ ಸ್ಥಾನ ಪಡೆದಿವೆ.

ಎಪ್ಸ್ಟೀನ್‌ ಫೈಲ್ಸ್‌ ಅಂದ್ರೆ ಏನು?
ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ದಾಖಲೆಗಳ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು, ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ ಸಂಬಂಧಿಸಿದ 35 ಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ಅಮೆರಿದ ನ್ಯಾಯಾಂಗ ಇಲಾಖೆ ಸಾರ್ವಜನಿಕಗೊಳಿಸಿದೆ. ಜಗತ್ತಿನ ಶ್ರೀಮಂತ ವ್ಯಕ್ತಿಗಳಿಗಾಗಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಕೂಪಕ್ಕೆ ತಳ್ಳಿದ ಆರೋಪ ಜೆಫ್ರಿ ಎಪ್ಸ್ಟೀನ್‌ ಮೇಲಿದೆ.

ತನಿಖಾ ವರದಿಯಲ್ಲೇನಿದೆ?
ಎಪ್ಸ್ಟೀನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಬಿಐ ಸಂಗ್ರಹಿಸಿದ ದೂರುಗಳ ಪಟ್ಟಿಯಲ್ಲಿ ಟ್ರಂಪ್‌ ಹೆಸರು ಕಂಡುಬಂದಿದೆ. ಇದರಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಗಂಭೀರ ಆರೋಪಗಳನ್ನು ಸಾರ್ವಜನಿಕರು ಮತ್ತು ಸಂತ್ರಸ್ತರು ನೀಡಿದ್ದಾರೆ ಎಂದು ದಾಖಲೆಗಳಾಗಿವೆ.

ಎಪ್ಸ್ಟೀನ್‌ ಹೇಯ ಕೃತ್ಯಗಳು
ಮಹಿಳೆಯರ ಕಳ್ಳಸಾಗಣೆ ಮತ್ತು ಬಾಲಕಿಯರ ಮೇಲೆ ಅತ್ಯಾಚಾರದಂಥ ಅನೇಕ ಹೇಯ ಕೃತ್ಯಗಳನ್ನು ಎಸಗಿದ್ದ ಎಪ್ಸ್ಟೀನ್‌, ಇಂಥ ಸರಣಿ ಅಪರಾಧಗಳಲ್ಲಿ ತೊಡಗಿದ್ದ. ತನ್ನ ಐಷಾರಾಮಿ ಮನೆಗಳಲ್ಲಿ ಬಾಲಕಿಯರನ್ನು ಕೂಡಿಹಾಕಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯಲು ಕಾರಣನಾಗಿದ್ದ. ವಿವಿಧ ದೇಶಗಳ ಜನಪ್ರತಿನಿಧಿಗಳು, ಪ್ರಭಾವಶಾಲಿಗಳು, ಉದ್ಯಮಿಗಳು ಎಪ್ಸ್ಟೀನ್‌ ಜತೆಗೆ ನಂಟು ಹೊಂದಿದ್ದರು. ಈ ಪೈಕಿ ಅನೇಕರು ಅವನ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸಿದ್ದರು. ತನ್ನ ವಿರುದ್ದದ ಪ್ರಕರಣಗಳ ಕಾರಣದಿಂದ ಜೈಲು ಸೇರಿದ್ದ ಎಪ್ಸ್ಟೀನ್‌, 2019ರಲ್ಲಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗಿದ್ದಾನೆ.

ಆನಂತರ ತನಿಖೆಯ ವೇಳೆ ಪತ್ತೆಯಾಗಿದ್ದ ಇಮೇಲ್‌ಗಳು, ವೀಡಿಯೋಗಳು ಮತ್ತಿತರ ದಾಖಲೆಗಳನ್ನು ಬಹಿರಂಗ ಮಾಡುವಂತೆ ಜನ ಒತ್ತಾಯ ಹೇರತೊಡಗಿದರು. ಡೊನಾಲ್ಡ್‌ ಟ್ರಂಪ್‌ ಸರ್ಕಾರವು ಅವುಗಳನ್ನು ಹಂತಹಂತವಾಗಿ ಬಹಿರಂಗ ಮಾಡುತ್ತಿದೆ.

ಟ್ರಂಪ್‌ ಮೇಲಿರುವ ಆರೋಪವೇನು?
ಈ ಫೈಲ್‌ಗಳಲ್ಲಿ ಟ್ರಂಪ್ ಹೆಸರು ಹಲವು ಕಡೆ ಪ್ರಸ್ತಾಪವಾಗಿದೆ. ಹಾಗಾದರೆ ಟ್ರಂಪ್ ಲೈಂಗಿಕ ದಂಧೆಯಲ್ಲಿ ಭಾಗಿಯಾಗಿದ್ದರಾ? ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ, ಟ್ರಂಪ್ ಅವರು ಎಪ್‌ಸ್ಟೀನ್‌ನ ಖಾಸಗಿ ವಿಮಾನದಲ್ಲಿ ಹಲವು ಬಾರಿ ಪ್ರಯಾಣಿಸಿದ್ದಾರೆ. ಕೆಲವು ಸಾಕ್ಷಿಗಳ ಪ್ರಕಾರ, ಟ್ರಂಪ್ ಅವರು ಎಪ್‌ಸ್ಟೀನ್‌ನ ಕ್ಲಬ್‌ಗಳಿಗೆ ಭೇಟಿ ನೀಡುತ್ತಿದ್ದರು. ಜೊತೆಗೆ ಎಪ್‌ಸ್ಟೀನ್ ಒಮ್ಮೆ ಟ್ರಂಪ್ ಬಗ್ಗೆ ಹೀಯಾಳಿಸಿ ಮಾತನಾಡಿದ ಉಲ್ಲೇಖಗಳೂ ಇಲ್ಲಿವೆ. ಆದರೆ, ಟ್ರಂಪ್ ಈ ದಂಧೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಈ ಫೈಲ್‌ಗಳಲ್ಲಿ ಸ್ಪಷ್ಟವಾದ ಕ್ರಿಮಿನಲ್ ಪುರಾವೆಗಳು ಇನ್ನೂ ಸಿಕ್ಕಿಲ್ಲ. ಆದರೆ ಎಪ್‌ಸ್ಟೀನ್‌ನೊಂದಿಗೆ ಅವರಿಗಿದ್ದ ನಿಕಟ ಸ್ನೇಹ ಈಗ ರಾಜಕೀಯವಾಗಿ ಅವರಿಗೆ ಮುಳ್ಳಾಗಿ ಪರಿಣಮಿಸಿದೆ.

ಟ್ರಂಪ್‌ ಸ್ಪಷ್ಟನೆ
ಟ್ರಂಪ್ ಈ ಮೊದಲೇ ಸ್ಪಷ್ಟಪಡಿಸಿದಂತೆ, ಎಪ್‌ಸ್ಟೀನ್‌ನೊಂದಿಗೆ ತಮಗೆ ಕೇವಲ ಪರಿಚಯವಿತ್ತೇ ಹೊರತು, ಆತನ ವೈಯಕ್ತಿಕ ದಂಧೆಗಳ ಬಗ್ಗೆ ಏನೂ ತಿಳಿದಿರಲಿಲ್ಲ ಎಂದಿದ್ದಾರೆ. ಆದರೆ ಈ ಫೈಲ್‌ಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಟ್ರಂಪ್‌ರನ್ನು ಕಟ್ಟಿಹಾಕಲು ಯತ್ನಿಸುತ್ತಿವೆ. ಅದರಂತೆ, ಇದು ಬರಿ ಫೈಲ್ ಅಲ್ಲ, ಟ್ರಂಪ್ ವ್ಯಕ್ತಿತ್ವಕ್ಕೆ ತಗುಲಿದ ಕಳಂಕ ಎನ್ನುತ್ತಿವೆ ವಿರೋಧಿ ಬಣಗಳು.

ಹಲವು ಗಣ್ಯರ ಹೆಸರುಗಳು
ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಜಗತ್ತಿನ ಖ್ಯಾತನಾಮರ ಹೆಸರುಗಳು ಮುನ್ನಲೆಗೆ ಬಂದಿವೆ. ಮೈಕ್ರೋಸಾಫ್ಟ್‌ ನ ಬಿಲ್‌ ಗೇಟ್ಸ್‌, ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಅವರ ಮಾಜಿ ಖಜಾನೆ ಕಾರ್ಯದರ್ಶಿ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯ ಮಾಜಿ ಅಧ್ಯಕ್ಷ ಲ್ಯಾರಿ ಸಮರ್ಸ್, ಟ್ರಂಪ್ ಸರ್ಕಾರದ ಹಣಕಾಸು ಕಾರ್ಯದರ್ಶಿ ಹೊವಾರ್ಡ್ ಲುಟ್ಟಿಕ್, ಟ್ರಂಪ್‌ ಅವರ ಮಾಜಿ ಸಲಹೆಗಾರ ಸ್ಟೀವ್ ಬ್ಯಾನನ್ ಸೇರಿದಂತೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಮತ್ತು ಈಗಲೂ ಸಕ್ರಿಯವಾಗಿರುವ ಅನೇಕರು ಎಪ್‌ಸ್ಟೈನ್ ಜತೆಗೆ ನಂಟು ಹೊಂದಿರುವುದು ಪತ್ತೆಯಾಗಿದೆ. ಈ ಪೈಕಿ ಬಹುತೇಕರು, ಎಪ್ಸ್ಟೀನ್‌ ಜತೆಗೆ ನಂಟು ಹೊಂದಿರುವುದು ಪತ್ತೆಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page