Connect with us

NATIONAL

ಭಾರತೀಯ ಕೋಸ್ಟ್ ಗಾರ್ಡ್‌ನ ಗೌಪ್ಯ ಮಾಹಿತಿ ಪಾಕ್‌ಗೆ ರವಾನೆ; ಆರೋಪಿ ಅರೆಸ್ಟ್

Published

on

ಮಂಗಳುರು/ಗುಜರಾತ್‌: ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಹಿನ್ನಲೆ ಭಯೋತ್ಪಾದನಾ ನಿಗ್ರಹ ದಳದ ಗುಜರಾತ್ ಘಟಕವು ಓಖಾ ಮೂಲದ ಗುತ್ತಿಗೆ ಕಾರ್ಮಿಕನೋರ್ವನನ್ನು ಬಂಧಿಸಿದ್ದಾರೆ.

ದೀಪೇಶ್ ಗೋಹಿಲ್ ಬಂಧಿತ ಆರೋಪಿ. ಓಖಾ ಬಂದರಿನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತ ಫೇಸ್ ಬುಕ್ ಮೂಲಕ ಪರಿಚಯಸ್ಥನಾದ ಪಾಕಿಸ್ತಾನದ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದ. ದೀಪೇಶ್ ಸೂಕ್ಷ್ಮ ಮಾಹಿತಿ ರವಾನಿಸಿದ್ದಕ್ಕೆ ಪಾಕ್ ಏಜೆಂಟ್ ನಿಂದ ದಿನಕ್ಕೆ 200ರೂ. ಪಡೆಯುತ್ತಿದ್ದ ಮತ್ತು ಈವೆರೆಗೆ ಒಟ್ಟು 42,000ರೂ. ಪಡೆದಿದ್ದಾನೆ.

ಪಾಕಿಸ್ತಾನದ ಏಜೆಂಟ್ ತನ್ನನ್ನು ಸಹಿಮಾ ಎಂದು ಪರಿಚಯಿಸಿಕೊಂಡು ಫೇಸ್ಬುಕ್ ಮತ್ತು ವಾಟ್ಸಾಪ್ ನಲ್ಲಿ ದೀಪೇಶ್ ಜೊತೆ ಸಂಪರ್ಕದಲ್ಲಿದ್ದ. ಓಖಾ ಬಂದರಿನಲ್ಲಿರುವ ಕೋಸ್ಟ್ ಗಾರ್ಡ್ ಬೋಟ್ ನ ಹೆಸರು ಮತ್ತು ಸಂಖ್ಯೆಯನ್ನು ದೀಪೇಶ್ ಏಜೆಂಟ್ ಜೊತೆ ಹಂಚಿಕೊoಡಿದ್ದ ಎಂದು ಹೇಳಲಾಗಿದೆ. ಗುಜರಾತ್ ಎಟಿಎಸ್ ಅಧಿಕಾರಿ ಕೆ ಸಿದ್ಧಾರ್ಥ್ ಈ ಕುರಿತು ಪ್ರತಿಕ್ರಿಯಿಸಿದ್ದು, ಓಖಾ ಮೂಲದ ವ್ಯಕ್ತಿಯೊಬ್ಬ ಕೋಸ್ಟ್ ಗಾರ್ಡ್ ಬೋಟ್ ಕುರಿತು ಪಾಕಿಸ್ತಾನದ ನೌಕಾಪಡೆ ಮತ್ತು ಐಎಸ್ಐ ಏಜೆಂಟ್ನೊಂದಿಗೆ ವಾಟ್ಸಾಪ್ ಮೂಲಕ ವಿವರಗಳನ್ನು ಹಂಚಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ.

ಈ ಕುರಿತ ತನಿಖೆಯ ನಂತರ ನಾವು ಓಖಾ ನಿವಾಸಿ ದೀಪೇಶ್ ಗೋಹಿಲ್ ಎಂಬಾತನನ್ನು ಬಂಧಿಸಿದ್ದೇವೆ. ಪಾಕಿಸ್ತಾನದ ಗೂಢಚಾರಿಗೆ ಮಾಹಿತಿ ನೀಡಿದ್ದಕ್ಕೆ ಆತ ದಿನಕ್ಕೆ 200ರೂ. ಪಡೆಯುತ್ತಿದ್ದ. ಆತನಲ್ಲಿ ಬ್ಯಾಂಕ್ ಖಾತೆ ಇಲ್ಲದ ಕಾರಣ ತನ್ನ ಸ್ನೇಹಿತನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ವೆಲ್ಡಿಂಗ್ ಕೆಲಸಕ್ಕಿರುವ ಹಣ ಎಂದು ಹೇಳಿ ತನ್ನ ಸ್ನೇಹಿತನಿಂದ ನಗದು ರೂಪದಲ್ಲಿ ಹಣ ಪಡೆದಿದ್ದಾನೆ. ಇದೇ ರೀತಿ ಆತ ಒಟ್ಟು 42,000ರೂ. ಹಣ ಪಡೆದಿದ್ದಾನೆ ಎಂದು ಹೇಳಿದ್ದಾರೆ.

LATEST NEWS

9 ತಿಂಗಳ ಬಳಿಕ ಮಾ.18ರಂದು ಸುನಿತಾ ಭೂಮಿಗೆ ವಾಪಸ್; ಗಗನಯಾನಿಗಳ ಸಂಬಳ ಎಷ್ಟಿರುತ್ತೆ ಗೊತ್ತಾ?

Published

on

ಮಂಗಳೂರು/ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಸಿಲುಕಿರುವ ಭಾರತೀಯ ಮೂಲದ ಅಮೆರಿಕ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್‌ಮೋರ್ ಭೂಮಿಗೆ ಬರುವ ದಿನಾಂಕ ನಿಗದಿಯಾಗಿದೆ ಎಂದು ನಾಸಾ ತಿಳಿಸಿದೆ.


ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿಯೇ ಸುನಿತಾ ವಿಲಿಯಮ್ಸ್​ ಭೂಮಿಗೆ ವಾಪಸ್ ಆಗಲಿದ್ದಾರೆ. ಈ ಮೊದಲು ಮಾರ್ಚ್​ 19ಕ್ಕೆ ಸುನಿತಾ ವಿಲಿಯಮ್ಸ್ ಭೂಮಿಗೆ ಬರುತ್ತಾರೆ ಎಂದು ನಾಸಾ ತಿಳಿಸಿತ್ತು.

ಆದರೆ ಇದೀಗ ಮತ್ತೊಂದು ಅಪ್​ಡೇಟ್ಸ್ ನೀಡಿರುವ ನಾಸಾ, ತನ್ನ ಎಕ್ಸ್ ಖಾತೆಯಲ್ಲಿ ಸಂತಸದ ವಿಚಾರವನ್ನು ಹಂಚಿಕೊಂಡಿದೆ. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್‌ಮೋರ್ ಮಾರ್ಚ್​ 18 ರಂದು ಭೂಮಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿಸಿದೆ. ನಾಳೆ ಸಂಜೆ 5.57ರ ಸುಮಾರಿಗೆ ಭೂಮಿಗೆ ಲ್ಯಾಂಡ್ ಆಗುವ ನಿರೀಕ್ಷೆ ಇದೆ ಎಂದು ನಾಸಾ ತಿಳಿಸಿದೆ. ಫ್ಲೊರಿಡಾದ ಕಡಲ ತೀರಕ್ಕೆ ಲ್ಯಾಂಡ್ (Splash Down Off) ಆಗಲಿದ್ದಾರೆ.

ಬುಚ್ ವಿಲ್ಮೋರ್ ಹಾಗೂ ಸುನಿತಾ ವಿಲಿಯಮ್ಸ್ ಜೊತೆ ನಾಸಾದ ಗಗನಯಾನಿ ನಿಕ್ ಹೇಗ್, ರಷ್ಯಾದ ಗಗನಯಾನಿ ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಹಿಂತಿರುಗಲಿದ್ದಾರೆ.

ಇದನ್ನೂ ಓದಿ: ಬ್ಯಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್‌ ಈಗ ಹೇಗಿದ್ದಾರೆ ಗೊತ್ತಾ ?

ಗಗನಯಾನಿಗಳ ಸಂಬಳ ಎಷ್ಟು?
ಬಾಹ್ಯಾಕಾಶ ನಿಲ್ದಾಣದಲ್ಲಿ ತಿಂಗಳುಗಟ್ಟಲೆ ಕಳೆದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲೋರ್ ಅವರಿಗೆ NASA ಎಷ್ಟು ಹಣವನ್ನು ಪಾವತಿಸುತ್ತದೆ ಎಂಬುದರ ಕುರಿತು ಚರ್ಚೆಯೂ ನಡೆಯುತ್ತಿದೆ. ಈ ಸಮಯದಲ್ಲಿ ಗಗನಯಾತ್ರಿಗಳ ವೇತನ ಭತ್ಯೆಗಳ ಕುರಿತು ಹಲವಾರು ವರದಿಗಳು ಬೆಳಕಿಗೆ ಬಂದಿವೆ.

ಗಗನಯಾನಿಗಳ ಸಂಬಳ ಅವರು ಕಾರ್ಯನಿರ್ವಹಿಸುವ ಆಯಾ ಬಾಹ್ಯಾಕಾಶ ಸಂಸ್ಥೆಗ ಮೇಲೆ . ಅದರ ಜೊತೆಗೆ ಅವರ ಅನುಭವ ಹಾಗೂ ನೀಡಿರುವ ಜವಾಬ್ದಾರಿಗಳು ಕೂಡ ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇನ್ನು ನಿವೃತ್ತ ನೌಕಾದಳದ ಕ್ಯಾಪ್ಟನ್ ಸುನೀತಾ ವಿಲಿಯಮ್ಸ್ ಗೆ ನೀಡಿದ ಸಂಬಳದ ಬಗ್ಗೆ ಹಲವು ಮಾಧ್ಯಮಗಳು ಹಲವು ರೀತಿಯ ಅಂಕಿ ಸಂಖ್ಯೆಗಳು ಕೊಟ್ಟಿವೆ.

ನಾಸಾದ ಅತ್ಯುನ್ನತ ಜಿಎಸ್‌-15 ವೇತನ ಶ್ರೇಣಿ ಹೊಂದಿರುವ ಸರಕಾರಿ ನೌಕರರಾಗಿರುವ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್‌ಮೋರ್‌ ಅವರು ವಾರ್ಷಿಕ ವೇತನವಾಗಿ 1.08 ಕೋಟಿ ರೂ.ಗಳಿಂದ 1.41 ಕೋಟಿ ರೂ.ವರೆಗೆ ಪಡೆಯುತ್ತಾರೆ. ಆದರೆ, ಸದ್ಯ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌)ದಲ್ಲಿ ಹೆಚ್ಚುವರಿಯಾಗಿ 9 ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಸುನಿತಾ, ಬುಚ್‌ ಅವರಿಗೆ ಹೆಚ್ಚುವರಿಯಾಗಿ ಕೇವಲ 1 ಲಕ್ಷ ರೂ.ವರೆಗೆ (1,148 ಡಾಲರ್‌) ಪಡೆಯಬಹುದು. ಅದರ ಜೊತೆಗೆ ಇನ್ಸೂರೆನ್ಸ್, ಆರೋಗ್ಯ ಸೌಲಭ್ಯ ಮತ್ತು ಪಿಂಚಣಿಗಳನ್ನು ಕೂಡ ಇವರಿಗೆ ನೀಡಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 

Continue Reading

LATEST NEWS

ಒಂದೇ ವಾರದಲ್ಲಿ ಶನಿಗ್ರಹದ 124 ಹೊಸ ಉಪಗ್ರಹ ಪತ್ತೆ; ಮಾ.23 ರಂದು ನಡೆಯಲಿದೆ ವಿಸ್ಮಯ

Published

on

ಮಂಗಳೂರು/ನವದೆಹಲಿ :  ಶನಿ ಗ್ರಹ ಸೌರಮಂಡಲದಲ್ಲಿ ಆಕರ್ಷಣೀಯ ಗ್ರಹ. ತನ್ನ ಸಾಂಪ್ರದಾಯಿಕ ಉಂಗುರಗಳಿಂದಲೇ ಅದು ಭಿನ್ನವಾಗಿ ಕಾಣುತ್ತದೆ. ಇದೀಗ ಈ ಶನಿ ಗ್ರಹಕ್ಕೆ 124 ಉಪಗ್ರಹಗಳನ್ನು ಪತ್ತೆಹಚ್ಚಲಾಗಿದೆ. ಬಾಹ್ಯಾಕಾಶ ವಿಜ್ಞಾನಿಗಳು 124 ಹೊಸ ಉಪಗ್ರಹಗಳನ್ನು ಪತ್ತೆ ಹಚ್ಚಿದ್ದು, ಈ ಮೂಲಕ ಶನಿಗ್ರಹದ ಉಪಗ್ರಹಗಳ ಒಟ್ಟು ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸೌರವ್ಯೂಹದಲ್ಲೇ ಅತೀ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಹೆಗ್ಗಳಿಕೆ ‘ಶನಿ’ಗ್ರಹದ್ದಾಗಿದೆ.


ತೈವಾನ್‌ನ ಅಕಾಡೆಮಿಯಾ ಸಿನಿಕಾದಲ್ಲಿ ಎಡ್ವರ್ಡ್ ಆಷ್ಟನ್ ನೇತೃತ್ವದ ಖಗೋಳಶಾಸ್ತ್ರಜ್ಞರ ತಂಡವು ಮಾಡಿದ ಆವಿಷ್ಕಾರವನ್ನು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು ಗುರುತಿಸಿದೆ. ಈ ಸಂಶೋಧನೆಯ ಬಗ್ಗೆ ಹಲವು ಅನುಮಾನಗಳೂ ಕೂಡ ಹುಟ್ಟಿಕೊಂಡಿವೆ. ಒಂದೇ ವಾರದಲ್ಲಿ ಅಷ್ಟೊಂದು ಉಪಗ್ರಹಗಳು ಪತ್ತೆಯಾದವು ಎಂಬ ಪ್ರಶ್ನೆ ಹಲವು ವಿಜ್ಞಾನಿಗಳದ್ದು.

ಪ್ರಸ್ತುತ ಸೌರವ್ಯೂಹದಲ್ಲಿ ಭೂಮಿಗೆ 1, ಮಂಗಳಕ್ಕೆ 2, ಗುರುವಿಗೆ 95, ಶನಿಗೆ 146, ಯರೇನಸ್‌ಗೆ 28, ನೆಪ್ಚೂನ್‌ಗೆ 16 ಉಪಗ್ರಹಗಳಿಗೆ ಮಾನ್ಯತೆ ನೀಡಲಾಗಿದೆ.

ಮಾರ್ಚ್ 23 ರಂದು ಶನಿಯ ಉಂಗುರ ಮಾಯ :

ಮಾರ್ಚ್ 23 ರಂದು ಸೌರವ್ಯೂಹದಲ್ಲಿ ಒಂದು ಅಪರೂಪದ ಘಟನೆ ನಡೆಯಲಿದೆ. ರಿಂಗ್ ಪ್ಲೇ ನ್ ಕ್ರಾಸಿಂಗ್ ಎಂಬ ಅಪರೂಪದ ವಿದ್ಯಮಾನ ನಡೆಯಲಿದೆ. 15 ವರ್ಷಗಳಿಗೊಮ್ಮೆ ಇಂತಹ ಅದ್ಭುತ ಘಟನೆ ನಡೆಯಲಿದೆ. ಯಾಕೆಂದರೆ ಅಂದು ಶನಿಯ ಉಂಗುರಗಳು ಕಾಣಿಸುವುದಿಲ್ಲ ಎಂದು ತಿಳಿದುಬಂದಿದೆ. ಭೂಮಿಯು ಶನಿಯ ಸಮಭಾಜಕ ವೃತ್ತದೊಂದಿಗೆ ಸಂಪೂರ್ಣವಾಗಿ ಹೊಂದಿಕೊಂಡಾಗ ಉಂಗುರಗಳು ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ.

ಸಾಮಾನ್ಯವಾಗಿ ಶನಿಯ ಉಂಗುರಗಳು  ಭೂಮಿಯಿಂದ ಸುಲಭವಾಗಿ ಗೋಚರಿಸುತ್ತವೆ. ಉಂಗುರಗಳು ಹಿಮಕಣದಿಂದ ಮಾಡಲ್ಪಟ್ಟಿರುವುದರಿಂದ ಅದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಸೂರ್ಯನ ಬೆಳಕನ್ನು ಅದು ಚೆನ್ನಾಗಿ ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ : ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಡಿಕೆ ಶಿವಕುಮಾರ್ ಹೇಳಿಕೆ

ಕೊನೆಯ ಬಾರಿ ರಿಂಗ್ ಪ್ಲೇನ್ ಕ್ರಾಸಿಂಗ್ 2009ರಲ್ಲಿ ಸಂಭವಿಸಿತ್ತು. ಅದಾದ 15 ವರ್ಷಗಳ ಬಳಿಕ ಮಾ.23 ರಂದು ಸಂಭವಿಸಲಿದೆ. ಮುಂದೆ 2040ರಲ್ಲಿ ಮತ್ತೆ ಸಂಭವಿಸಲಿದೆ.

Continue Reading

LATEST NEWS

20 ವಿದ್ಯಾರ್ಥಿಗಳಿಗೆ ಮರಣದಂಡನೆ; ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಬಾಂಗ್ಲಾ ಹೈಕೋರ್ಟ್

Published

on

ಮಂಗಳೂರು/ಢಾಕಾ: 2019ರಲ್ಲಿ ರಾಜಕೀಯ ನಂಟು ಹೊಂದಿದ್ದಾನೆ ಎಂದು ಆರೋಪಿಸಿ ಎರಡನೇ ವರ್ಷದ ಪದವಿ ವಿದ್ಯಾರ್ಥಿಯನ್ನು ಕೊಂ*ದಿದ್ದ 20 ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿರುವ ಕೆಳ ನ್ಯಾಯಾಲಯದ ತೀರ್ಪನ್ನು ಬಾಂಗ್ಲಾದೇಶ ಹೈಕೋರ್ಟ್ ಭಾನುವಾರ ಎತ್ತಿಹಿಡಿದಿದೆ.


ನ್ಯಾಯಮೂರ್ತಿಗಳಾದ ಎಕೆಎಂ ಅಸಾದುಜ್ಜಮಾನ್ ಮತ್ತು ನ್ಯಾಯಮೂರ್ತಿ ಸೈಯದ್ ಎನಾಯೆತ್ ಹೊಸೈನ್ ಅವರ ದ್ವಿ ಸದಸ್ಯ ಪೀಠವು, ಕೆಳ ಹಂತದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಹಾಗೂ ಮರಣದಂಡನೆ ಉಲ್ಲೇಖ ಕುರಿತು ವಿಚಾರಣೆಯನ್ನು ಒಟ್ಟಿಗೆ ನಡೆಸಿ ತೀರ್ಪು ಪ್ರಕಟಿಸಿದ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಏನಿದೂ ಪ್ರಕರಣ?
ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಎಲ್ಲರೂ, ಬಾಂಗ್ಲಾದೇಶದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಬಿಯುಇಟಿ) ವಿದ್ಯಾರ್ಥಿಗಳಾಗಿದ್ದು, ಸದ್ಯ ನಿಷೇಧಗೊಂಡಿರುವ ‘ಬಾಂಗ್ಲಾದೇಶ ಛತ್ರ ಲೀಗ್‌’ಗೆ (ಬಿಸಿಎಲ್) ಸೇರಿದವರಾಗಿದ್ದಾರೆ. ಇದು, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ‘ಅವಾಮಿ ಲೀಗ್‌’ ಪಕ್ಷದ ವಿದ್ಯಾರ್ಥಿ ಘಟಕವಾಗಿದೆ.

‘ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್’ ವಿಷಯದ 2ನೇ ವರ್ಷದ ವಿದ್ಯಾರ್ಥಿಯಾಗಿದ್ದ ಅಬ್ರಾರ್ ಫಹಾದ್ ಹಸೀನಾ ಸರ್ಕಾರದ ವಿರುದ್ದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡ ಎಂಬ ಕಾರಣಕ್ಕೆ ಫಹಾದ್ ಮೇಲೆ ದಾಳಿ ಮಾಡಲಾಗಿತ್ತು.

ಫಹಾದ್ ಅವರ ಶವ ವಿವಿಯ ವಿದ್ಯಾರ್ಥಿನಿಲಯದಲ್ಲಿ 2019ರ ಅಕ್ಟೋಬರ್ 8ರಂದು ಬೆಳಿಗ್ಗೆ ಪತ್ತೆಯಾಗಿತ್ತು. ಆತನ ಮೇಲೆ, ಕ್ರಿಕೆಟ್ ಬ್ಯಾಟ್ ಹಾಗೂ ಇತರ ವಸ್ತುಗಳಿಂದ ಸುಮಾರು 6 ಗಂಟೆಗಳ ಕಾಲ, 25 ವಿದ್ಯಾರ್ಥಿಗಳು ಹ*ಲ್ಲೆ ಮಾಡಿದ್ದರು ಎಂಬುದು ತನಿಖೆಯ ನಂತರ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಆಟವಾಡಲೆಂದು ಕೆರೆಗೆ ಹಾರಿ ಸಾವನ್ನಪ್ಪಿದ 9 ವರ್ಷದ ಬಾಲಕಿ

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಬಾಂಗ್ಲಾದೇಶ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ (ಬಿಯುಇಟಿ) ಕೂಡಲೇ ಹೊರಹಾಕಿದ್ದವು.
ಢಾಕಾ ನ್ಯಾಯಾಲಯ, ಅವಾಮಿ ಲೀಗ್ ಅಧಿಕಾರದಲ್ಲಿದ್ದಾಗಲೇ (2021ರ ಡಿಸೆಂಬರ್ 8ರಂದು) 20 ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಹೈಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿರುವುದಷ್ಟೇ ಅಲ್ಲದೆ, ‘ಬಿಯುಇಟಿ ವಿದ್ಯಾರ್ಥಿಗಳಾಗಿದ್ದ ಇತರ ಐವರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ’ ಎಂದು ಅಟಾರ್ನಿ ಜನರಲ್ ಎಂ. ಅಸಾದುಜ್ಜಮಾನ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಶಿಕ್ಷೆಗೆ ಗುರಿಯಾದವರ ಪೈಕಿ, ಮುನ್ತಾಸಿರ್ ಅಲ್ ಜಮೀ ಎಂಬಾತ ಕಾಶಿಮುರ್ ಕಳೆದ ವರ್ಷ (2024) ಕೇಂದ್ರ ಕಾರಾಗೃಹದ ಜೈಲಿನಿಂದ ಪರಾರಿಯಾಗಿದ್ದಾನೆ.

ದೇಶದಾದ್ಯಂತ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ 2024ರ ಆಗಸ್ಟ್ 5ರಂದು ದೇಶದಿಂದ ಪಲಾಯನ ಮಾಡಿದ್ದರು. ಮರುದಿನ (ಆಗಸ್ಟ್ 6ರಂದು) ಮುನ್ತಾಸಿರ್ ಸೇರಿದಂತೆ 86 ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ.

ಹೈಕೋರ್ಟ್ ತೀರ್ಪಿನ ಕುರಿತು ಮಾತನಾಡಿದ ಫಹಾದ್ ತಂದೆ, ‘ತೀರ್ಪು ಸಮಾಧಾನ ತಂದಿದೆ. ಇದು ಶೀಘ್ರದಲ್ಲೇ ಜಾರಿಯಾಗಬೇಕು’ ಎಂದಿದ್ದಾರೆ. ಫಹಾದ್ ಸಹೋದರ ಫೈಯಾಜ್, ‘ಇಷ್ಟು ಶೀಘ್ರದಲ್ಲೇ ತೀರ್ಪು ಪ್ರಕಟವಾಗಲಿದೆ ಎಂದು ನಿರೀಕ್ಷಿಸಿರಲಿಲ್ಲ. ಇನ್ನೂ ಅನೇಕ ಕಾನೂನು ಕಾರ್ಯವಿಧಾನಗಳು ಉಳಿದಿದ್ದರೂ, ಈ ತೀರ್ಪು ನಮಗೆ ಸಮಾಧಾನ ತಂದಿದೆ’ ಎಂದು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page