Connect with us

DAKSHINA KANNADA

ಗಮನಿಸಿ: ಹಂಪನಕಟ್ಟೆ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ – ಇಂದಿನಿಂದ ಸಂಚಾರದಲ್ಲಿ ಬದಲಾವಣೆ

Published

on

ಮಂಗಳೂರು: ನಗರದ ಹೃದಯಭಾಗ ಹಂಪನಕಟ್ಟೆ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಇಂದಿನಿಂದ ಕೆಲವೊಂದು ಬದಲಾವಣೆ ಮಾಡಲಾಗಿದೆ.


ಬದಲಾವಣೆ ಏನು?
ಕ್ಲಾಕ್‌ ಟವರ್ ಕಡೆಯಿಂದ ಪಳ್ನೀರ್ ರಸ್ತೆ (ಮದರ್ ತೆರೆಸಾ) ಕಡೆಗೆ ಹೋಗುವ ಎಲ್ಲಾ ವಾಹನಗಳು ಹಂಪನಕಟ್ಟೆ ಸರ್ಕಲ್‌ನಲ್ಲಿ ನೇರವಾಗಿ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆಯಲ್ಲಿ ಚಲಿಸಿ ಜೋಸ್ ಅಲುಕಾಸ್ ಎದುರು ‘ಯು’ ಟರ್ನ್ ಪಡೆದು ವಾಪಸ್ ಹಂಪನಕಟ್ಟೆ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ ಪಳ್ನೀರ್ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.
ಪಳ್ನೀರ್ ರಸ್ತೆ ಕಡೆಯಿಂದ ನವಭಾರತ್ ಸರ್ಕಲ್ ಕಡೆಗೆ ಹೋಗುವ ವಾಹನಗಳು ಹಂಪನಕಟ್ಟೆ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಕ್ಲಾಕ್ ಟವರ್ ಕಡೆಗೆ ಚಲಿಸಿ ಕ್ಲಾಕ್ ಟವರ್ ಜಂಕ್ಷನ್‌ನಲ್ಲಿ ‘ಯು’ ಟರ್ನ್ ಪಡೆದು ಹಂಪನಕಟ್ಟೆ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ ನವಭಾರತ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
ನವಭಾರತ್ ಸರ್ಕಲ್ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಂಜೆ ಮಂಗೇಶ್ವರ ರಾವ್ (ಪಿಎಂ ರಾವ್ ರೋಡ್) ರಸ್ತೆಯ ಮೂಲಕ ಚಲಿಸಿ ಗಣಪತಿ ಹೈಸ್ಕೂಲ್ ರಸ್ತೆ ಮೂಲಕ ಕೃಷ್ಣಭವನ ಜಂಕ್ಷನ್ (ಕೆಬಿ ಕಟ್ಟೆ) ತಲುಪಿ ಅಲ್ಲಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸಬಹುದಾಗಿದೆ.


ನವಭಾರತ್ ಸರ್ಕಲ್ ಕಡೆಯಿಂದ ಪಳ್ನೀರ್ ರಸ್ತೆ ಕಡೆಗೆ ಹೋಗುವ ವಾಹನಗಳು ಹಂಪನಕಟ್ಟೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಯಲ್ಲಿ ಚಲಿಸಿ ಜೋಸ್ ಅಲುಕ್ಕಾಸ್ ಎದುರು ‘ಯು’ ಟರ್ನ್ ಪಡೆದು ಹಂಪನಕಟ್ಟೆ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ ಪಳ್ನೀರ್ ರಸ್ತೆ ಹಾಗೂ ನೇರವಾಗಿ ಕ್ಲಾಕ್ ಟವರ್ ಕಡೆಗೆ ಸಂಚರಿಸಬಹುದಾಗಿದೆ.


ಸಾರ್ವಜನಿಕರಿಗೆ ವಿಶೇಷ ಸೂಚನೆ
ಹಂಪನಕಟ್ಟೆ ಜಂಕ್ಷನ್‌ನಲ್ಲಿ ಪಾದಚಾರಿಗಳ ಸುರಕ್ಷಿತಾ ಸಂಚಾರಕ್ಕೆ ಪಾದಚಾರಿಗಳ ಮಾರ್ಗ (ಝೀಬ್ರಾ ಕ್ರಾಸ್)ವನ್ನು ಗುರುತಿಸಲಾಗಿದ್ದು, ಪಾದಚಾರಿಗಳು ಕಡ್ಡಾಯವಾಗಿ ಈ ಮಾರ್ಗಗಳನ್ನು ಬಳಸಬೇಕಿದೆ.

ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಹಾಗೂ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳಿಗೆ ಕೆಬಿ ಕಟ್ಟೆ ನಿಲ್ದಾಣದ ನಂತರ ಜೋಸ್ ಅಲುಕಾಸ್ ಎದುರಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬಸ್‌ಗಳನ್ನು ಹತ್ತಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಯಾವುದೇ ಕಾರಣಕ್ಕೂ ಈ ಬಸ್ ನಿಲ್ದಾಣಗಳನ್ನು ಹೊರತುಪಡಿಸಿ ಹಂಪನಕಟ್ಟೆಯ ಬಳಿ ಬಸ್ಸನ್ನು ಹತ್ತಲು ನಿಲ್ಲದೆ ಕೆಬಿ ಕಟ್ಟೆ ಅಥವಾ ಜೋಸ್ ಅಲುಕಾಸ್ ಬಸ್ ನಿಲ್ದಾಣಗಳನ್ನು ಮಾತ್ರ ಉಪಯೋಗಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಮಂಗಳೂರು: ವಿಚ್ಛೇದನಕ್ಕೆ ಬಂದ ಎರಡು ಜೋಡಿಗಳು-ಸಂಧಾನ ಮಾಡಿ ಒಂದಾಗಿಸಿದ ಲೋಕ್ ಅದಾಲತ್

Published

on

ಮಂಗಳೂರು: ವಿಚ್ಛೇದನಕ್ಕೆ ಮುಂದಾಗಿದ್ದ ಎರಡು ಜೋಡಿಗಳು ಮತ್ತೆ ಒಂದಾದ ವಿಶೇಷ ಹಾಗೂ ಹೃದಯಸ್ಪರ್ಶಿ ವಿದ್ಯಮಾನಕ್ಕೆ ಶನಿವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಬೈಠಕ್‌ ಸಾಕ್ಷಿಯಾಯಿತು.

ಈ ಎರಡು ಜೋಡಿಗಳ ದಾಂಪತ್ಯ ಜೀವನದಲ್ಲಿ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿದ್ದ ಕಾರಣ ದಂಪತಿಗಳು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ವೇಳೆ ಈ ಪ್ರಕರಣವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಮೂಲಕ ಸರಿಪಡಿಸಲು ಪ್ರಯತ್ನ ನಡೆಯಿತು. ಪತಿ ಮತ್ತು ಪತ್ನಿಯ ಮಧ್ಯೆ ಸಂಧಾನ ಏರ್ಪಡಿಸಿ ಮತ್ತೆ ಒಂದುಗೂಡಿ ದಾಂಪತ್ಯ ಜೀವನ ಮುಂದುವರಿಸುವ ಬಗ್ಗೆ ಉಭಯೇತರರಿಗೂ ಮನವರಿಕೆ ಮಾಡಲಾಗಿತ್ತು.

ಸಂಧಾನದ ವೇಳೆ ದಂಪತಿಗಳು ಮತ್ತೆ ಒಂದುಗೂಡಿ ಜೀವನ ಮುಂದುವರಿಸಲು ಒಪ್ಪಿದ್ದರು. ಅದರಂತೆ ಶನಿವಾರ ಲೋಕ ಅದಾಲತ್ ಗೆ ಆಗಮಿಸಿದ್ದ ಎರಡೂ ಜೋಡಿಗಳು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಲಕ್ಷ್ಮೀ ನಾರಾಯಣ ಭಟ್‌ ಕೆ.  ಅವರ ಸಮಕ್ಷಮದಲ್ಲಿ ಪರಸ್ಪರ ಹಾರ ಬದಲಾಯಿಸುವ ಮುಖೇನ  ಒಂದಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ವಕೀಲರು ಉಪಸ್ಥಿತರಿದ್ದು, ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.  ಲೋಕ ಅದಾಲತ್ ಅಧಿವೇಶನದಲ್ಲಿ ಭಾಗವಹಿಸಿದ್ದ ಎರಡೂ ಜೋಡಿಗಳು ಮತ್ತೆ ಒಂದಾಗುವ ಮೂಲಕ ತಮ್ಮ ವಿಚ್ಛೇದನದ ಹೋರಾಟವನ್ನು ಕೊನೆಗೊಳಿಸಿದ ಈ ವಿದ್ಯಮಾನ ಮಾದರಿಯಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಅವರು ತಿಳಿಸಿದ್ದಾರೆ.

Continue Reading

DAKSHINA KANNADA

ಕರಾವಳಿಯಲ್ಲಿ ‘ಸಿಲ್ವರ್ ವುಡ್’ ಮರಗಳ ಹೊಸ ಪ್ರಯೋಗ!

Published

on

ಪುತ್ತೂರು: ಕೊಡಗು ಮತ್ತು ಚಿಕ್ಕಮಗಳೂರಿನಂತಹ ತಂಪಾದ ಹವಾಗುಣದಲ್ಲಿ ಬೆಳೆಯುವ ಸಿಲ್ವರ್ ವುಡ್ ಮರಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳೆಸಲು ನಡೆಸಿದ ಮೊದಲ ಪ್ರಯತ್ನ ಯಶಸ್ವಿಯಾಗಿದೆ.


ಫ್ಲೈವುಡ್ ಮತ್ತು ಇತರ ಪೀಠೋಪಕರಣಗಳ ತಯಾರಿಕೆಗಾಗಿ ಬಳಸುವ ಈ ಮರಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಪುತ್ತೂರಿನ ಕೃಷಿಕರೊಬ್ಬರು ಮುಂದಾಗಿದ್ದು, ದಾರಂದಕುಕ್ಕ ಕಾಯರ್ತಡಿ ನಿವಾಸಿ ಅಜಿತಪ್ರಸಾದ್ ರೈ ತಮ್ಮ ಬಳಿ ಇರುವ ಸುಮರು 20 ಎಕರೆ ಕೃಷಿಭೂಮಿಯಲ್ಲಿ ಈ ಸಿಲ್ವರ್ ವುಡ್ ಬೆಳೆಯಲು ನಿರ್ಧರಿಸಿದ್ದರು.

ಉಷ್ಣಾಂಶ ಹೆಚ್ಚಾಗಿರುವ ದಕ್ಷಿಣಕನ್ನಡ ಜಿಲ್ಲೆಯ ವಾತಾವರಣದಲ್ಲಿ ಈ ಮರಗಳು ಉಳಿಯುತ್ತದೋ ಎನ್ನುವ ಪ್ರಶ್ನೆಗಳ ಮಧ್ಯೆ ಸುಮಾರು 3 ಸಾವಿರದಷ್ಟು ಸಿಲ್ವರ್ ವುಡ್ ಸಸಿಗಳನ್ನು ನಾಟಿ ಮಾಡಿದ್ದಾರೆ. ಗಿಡಗಳನ್ನು ನಾಟಿ ಮಾಡಿ ಎರಡು ವರ್ಷಗಳಾಗುತ್ತಿದ್ದಂತೆ ಉತ್ತಮ ರೀತಿಯಲ್ಲಿ ಬೆಳೆದು ನಿಂತಿವೆ.

ಇದನ್ನೂ ಓದಿ: ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕಾಗಮಿಸಿದ ಆದಿ ಯೋಗಿ ರಥದ ಶಿವ ಯಾತ್ರೆ

ಜಿಲ್ಲೆಯ ಹವಾಗುಣದಲ್ಲೂ ಸಿಲ್ವರ್ ವುಡ್ ಮರಗಳನ್ನು ಬೆಳೆಸಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಸಿಲ್ವರ್ ವುಡ್ ಮರದಿಂದ ಎರಡು ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಗಿಡ ಬೆಳೆಯುತ್ತಿದ್ದಂತೆ ಈ ಗಿಡಗಳಿಗೆ ಕಾಳುಮೆಣಸಿನ ಬಳ್ಳಿಯನ್ನು ಬಿಡುತ್ತಿದ್ದು, ಈ ಬಳ್ಳಿಗಳಿಗೆ ಈ ಗಿಡಗಳು ಉತ್ತಮ ರೀತಿಯ ಆಸರೆಯನ್ನು ನೀಡುವ ಹಿನ್ನಲೆಯಲ್ಲಿ ಕಾಳುಮೆಣಸಿನ‌ ಗಿಡಗಳಲ್ಲೂ ಉತ್ತಮ‌ ಬೆಳೆ ಪಡೆಯುತ್ತಿದ್ದಾರೆ.

ನೇರವಾಗಿ, ಎತ್ತರವಾಗಿ‌ ಬೆಳೆಯವ ಈ ಮರಕ್ಕೆ ಭಾರೀ ಬೇಡಿಕೆಯೂ ಇದೆ. ಹೆಚ್ಚಾಗಿ ಪ್ಲೈವುಡ್ ತಯಾರಿಕೆಗೆ, ಪೀಠೋಪಕರಣಗಳ ತಯಾರಿಕೆಯಲ್ಲೂ ಈ ಮರವನ್ಮು ಬಳಸುತ್ತಾರೆ. ಎಲ್ಲಾ ಸಿಲ್ವರ್ ವುಡ್ ಮರಗಳು ಹುಲುಸಾಗಿ ಬೆಳೆಯುತ್ತಿದ್ದು, ಮುಂದಿನ ಎರಡು-ಮೂರು ವರ್ಷದ ಒಳಗೆ ಕಟಾವು ಮಾಡಿದಲ್ಲಿ, ಮರದಿಂದ ಉತ್ತಮ ಆದಾಯ ಬರುವ ನಿರೀಕ್ಷೆಯಿದೆ.

Continue Reading

DAKSHINA KANNADA

ತಾವರೆ ಬೆಳೆದ ನೀರಿನ ಟ್ಯಾಂಕ್ ಗೆ ಬಿದ್ದು ಮಗು ಸಾ*ವು

Published

on

ಪುತ್ತೂರು : ಮಕ್ಕಳ ವಿಚಾರದಲ್ಲಿ ಎಷ್ಟು ಜಾಗೃತೆ ವಹಿಸಿದರೂ ಸಾಲದು. ಪುಟ್ಟ ಮಕ್ಕಳ ಬಗ್ಗೆ ಸದಾ ಕಣ್ಣಿಡುವುದು ಅತೀ ಅಗತ್ಯ. ಇಲ್ಲವಾದಲ್ಲಿ ಅನಾಹುತವೇ ಸಂಭವಿಸಬಹುದು. ಇದೀಗ ಪುತ್ತೂರಿನಲ್ಲಿ ದುರಂ*ತ ಸಂಭವಿಸಿದೆ.

ತಾವರೆ ಬೆಳೆದ ನೀರಿನ ಟ್ಯಾಂಕ್‌ಗೆ ಒಂದೂವರೆ ವರ್ಷದ ಮಗು ಬಿದ್ದು ಸಾ*ವನ್ನಪ್ಪಿದೆ. ಪುತ್ತೂರಿನ ಬನ್ನೂರು ನೀರ್ಪಾಜೆಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ : ಸುದೀಪ್ ಸಿನಿಮಾದಲ್ಲಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟರು! ಪೋಸ್ಟರ್ ಬಿಡುಗಡೆ

ಮನೆಯಂಗಳದಲ್ಲಿ ಮಗುವಿಗೆ ಊಟ ಕೊಡುತ್ತಿದ್ದ ತಾಯಿ ಮನೆಯೊಳಗೆ ಹೋಗಿ ಬರುತ್ತಿದ್ದಂತೆ ಮಗು ನಾಪತ್ತೆಯಾಗಿದೆ. ಹುಡುಕಾಡಿದಾಗ ಮನೆಯಂಗಳದ ತಾವರೆ ನೀರಿನ ಟ್ಯಾಂಕ್‌ಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮಗುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಮಗು ಮೃ*ತಪಟ್ಟಿದೆ ಎಂದು ತಿಳಿದುಬಂದಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page