Connect with us

BANTWAL

ಉಪ್ಪಿನಂಗಡಿಯಲ್ಲಿ ಟ್ರಾಕ್ಟರ್‌ಗೆ ಕಂಟೈನರ್ ಲಾರಿ ಢಿಕ್ಕಿ-ಚಾಲಕನಿಗೆ ಗಾಯ

Published

on

ಉಪ್ಪಿನಂಗಡಿ: ಓವರ್‌ಟೇಕ್ ಮಾಡುವ ಭರದಲ್ಲಿ ಕಂಟೈನರ್ ಲಾರಿಯೊಂದು ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಟ್ರಾಕ್ಟರ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ನಿನ್ನೆ ಸಂಜೆ ನಡೆದಿದೆ.


ನೆಲ್ಯಾಡಿ ಕಡೆಯಿಂದ ಬಿ.ಸಿ.ರೋಡು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿಯು ಅದೇ ಮಾರ್ಗವಾಗಿ ಹೋಗುತ್ತಿದ್ದ ಟ್ರಾಕ್ಟರ್ ಅನ್ನು ಗಾಂಧಿಪಾರ್ಕ್ ಬಳಿ ಓವರ್‌ಟೇಕ್ ಮಾಡಿದ್ದು, ಆಗ ಟ್ರಾಕ್ಟರ್‌ಗೆ ಕಂಟೈನರ್ ಲಾರಿಯು ಡಿಕ್ಕಿ ಹೊಡೆದಿದೆ.


ಘಟನೆಯಿಂದ ಟ್ರಾಕ್ಟರ್‌ನ ಎಂಜಿನ್‌ನ ಭಾಗ ರಸ್ತೆಯಲ್ಲಿ ನೇರವಾಗಿ ನಿಂತಿದ್ದರೆ, ಅದರ ಹಿಂದಿನ ಟ್ರಾಲಿ ಪಲ್ಟಿಯಾಗಿತ್ತು.


ಅಪಘಾತದಿಂದಾಗಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BANTWAL

ತಲವಾರು ತೋರಿಸಿ ಜೀವ ಬೆದರಿಕೆ ಪ್ರಕರಣ; ಮಾದ್ಯಮದ ಮೊರೆ ಹೋದ ದಂಪತಿ

Published

on

ವಿಟ್ಲ : ದಂಪತಿಗೆ ತಲವಾರು ತೋರಿಸಿ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪುಣಚ ನಿವಾಸಿ ಹರೀಶ್ ಎನ್. ಎಂಬವರು ಈ ಕುರಿತು ಪೊಲೀಸ್ ದೂರು ನೀಡಿದ್ದರು. ಇದೀಗ ಮತ್ತೆ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ಆರೋಪಗಳ ಸುರಿಮಳೆಯೇ ಸುರಿಯುತ್ತಿದೆ.

ಸಂತ್ರಸ್ತರಾದ ಹರೀಶ್ ಭಟ್ ಹಾಗೂ ಶ್ರೀದೇವಿ ನ್ಯಾಯಕ್ಕಾಗಿ ಇದೀಗ ಮಾದ್ಯಮದ ಮೊರೆ ಹೋಗಿದ್ದಾರೆ. ಕೆಲವೊಂದು ಸಮಸ್ಯೆಯಿಂದ ದಂಪತಿಯು ಪೆಟ್ರೋಲ್ ಪಂಪ್ ಮುಚ್ಚಿದ್ದರು. ಇದಾದ ಬಳಿಕ ಹಿಂದೂ ಮುಖಂಡ ಮುರಳೀಕೃಷ್ಣ ಹಸಂತಡ್ಕ ಅವರು ದಂಪತಿ ಬಳಿ ಹೋಗಿ ಆವಾಝ್ ಹಾಕಿದ್ದಾರೆ. ‘ನನ್ನ ತಾಕತ್ ಏನೂ ಅಂತ ತೋರಿಸಿಕೊಡುತ್ತೇನೆ’ ಎಂದು ಬೆದರಿಕೆ ಹಾಕಿರುವುದಾಗಿ ದಂಪತಿ ತಿಳಿದ್ದಾರೆ. ಇದಾದ ಬಳಿಕ ಸ್ವತಃ ಮುರಳೀಕೃಷ್ಣ ಅವರಿಗೆ ಶ್ರೀದೇವಿ ಬುದ್ಧಿ ಮಾತು ಹೇಳಿದ್ದಾರೆ. “ನೀವು ಈ ರೀತಿ ಅನ್ಯಾಯದ ದಾರಿ ಹಿಡಿಯುವುದು ಸರಿಯಲ್ಲ. ನೀವೊಬ್ಬ ಹಿಂದೂ ಸಂಘಟಕನಾಗಿ ಈ ಬೆದರಿಕೆಯೊಡ್ಡೋದು ತಪ್ಪು. ಸಮಾಜದಲ್ಲಿ ಗೌರವದ ಸ್ಥಾನದಲ್ಲಿರುವ ನೀವು ನಮ್ಮನ್ನ ಬೆದರಿಸಿ ಅನ್ಯಾಯ ಮಾಡುವುದು ಎಷ್ಟು ಸರಿ..?” ಎಂಬೆಲ್ಲಾ ಪ್ರಶ್ನೆ ಹಾಕಿದ್ದರು.

“ಮುರಳೀಕೃಷ್ಣ ಹಸಂತಡ್ಕ ಅವರು ಈ ರೀತಿ ಬೆದರಿಕೆ ಹಾಕುವ ಬದಲು ಕಾನೂನು ರೀತಿಯಲ್ಲಿ ನೋಡಿಕೊಳ್ಳಲಿ. ಮುರಳೀಕೃಷ್ಣ ನಮಗೆ ಬೆದರಿಸಿ ಆವಾಝ್ ಹಾಕಿರೋದು ತುಂಬಾ ನೋವಾಗಿದೆ. ಪಾಲುದಾರಿಕೆಯಲ್ಲಿ ಒಗ್ಗಟ್ಟುತನ ಇರಬೇಕು. ಆದರೆ ಮುರಳೀಕೃಷ್ಣ ನನ್ನದೇ ಎಲ್ಲವೂ ಎಂಬಂತೆ ನಮಗೆ ಮೋಸ ಮಾಡಿದ್ರು. ಒಂದೊಮ್ಮೆ ಪಂಚಾಯಿತಿ ಮಾಡಿ ವ್ಯವಹಾರವನ್ನ ಸರಿಪಡಿಸಲಾಯಿತು. ಆದ್ರೆ ಮುರಳೀಕೃಷ್ಣ ಅವರು ಸ್ವಲ್ಪ ಸಮಯದ ಬಳಿಕ ಮತ್ತೆ ಅಡ್ಡಗಾಲಿಟ್ಟರು. ಸದ್ಯ ನಮಗೆ ಮುರಳೀಕೃಷ್ಣ ಅವರಿಂದ ಅನ್ಯಾಯ ಆಗಿದೆ ಎಂದು ಕಾನೂನು ರೀತಿಯಲ್ಲಿ ಮೊರೆ ಹೋಗಿದ್ದೇವೆ” ಎಂದು ಹೇಳಿದ್ದಾರೆ.

“ಕಳೆದೆರಡು ದಿನಗಳ ಹಿಂದೆ ಮುರಳೀಕೃಷ್ಣ ಹಸಂತಡ್ಕ ಅವರು ಆಣೆ ಪ್ರಮಾಣ ಮಾಡಲು ಬನ್ನಿ ಎಂದು ಮಾಧ್ಯಮದ ಮುಖಾಂತರ ಹೇಳಿದ್ದರು. ಆಣೆ ಪ್ರಮಾಣಕ್ಕೆ ದಂಪತಿಯಾಗಿ ನಾವು ಕೂಡ ರೆಡಿ ಇದ್ದೇವೆ. ಆದ್ರೆ ಸದ್ಯ ನಾವು ಕಾನೂನು ಮೊರೆ ಹೋಗಿರುವುದರಿಂದ ನ್ಯಾಯಾಲಯದಲ್ಲಿ ಏನು ತೀರ್ಪು ಸಿಗುತ್ತದೋ ಅದಕ್ಕೆ ಬದ್ಧ. ಮುರಳೀಕೃಷ್ಣ ಅವರು ಕೂಡ ಕಾನೂನು ರೀತಿಯಲ್ಲಿ ಎದುರಿಸಲಿ. ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ನಾವು ಕೂಡ ದೈವ ದೇವರನ್ನ ನಂಬುವವರು. ಅದು ಬಿಟ್ಟು ಆಣೆ ಪ್ರಮಾಣಕ್ಕೆ ಬನ್ನಿ ಎಂದು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಸರಿಯಲ್ಲ. ಇಷ್ಟೆಲ್ಲ ಆದ ಮೇಲೆ ಮುರಳೀಕೃಷ್ಣ ಅವ್ರು ಸುರತ್ಕಲ್ ಮೂಲದ ವ್ಯಕ್ತಿಯಿಂದ ಮತ್ತೆ ಬೆದರಿಕೆ ಹಾಕಿಸಿದ್ದಾರೆ. ಬೆದರಿಕ ಮೇಲೆ ಬೆದರಿಕೆ ಹಾಕಿ ನಮ್ಮಲ್ಲಿ ಆತಂಕವನ್ನ ಸೃಷ್ಟಿ ಮಾಡಿದ್ದಾರೆ” ಎಂದು ದಂಪತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Continue Reading

BANTWAL

ಬಸ್ ಡ್ರೈವರ್ ಹಾಗೂ ಕಂಡಕ್ಟರ್‌ಗೆ ಬೆದರಿಕೆ; ಪ್ರಕರಣ ದಾಖಲು

Published

on

ಬಂಟ್ವಾಳ : ಬಸ್‌ ತಿರುಗಿಸುವ ವಿಚಾರದಲ್ಲಿ ಖಾಸಗಿ ಬಸ್‌ನ್ನು ತಡೆದ ತಂಡವೊಂದು ಡ್ರೈವರ್ ಹಾಗೂ ಕಂಡಕ್ಟರ್‌ನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ನಡೆದಿತ್ತು.

ಎ.21 ರಂದು ರಾತ್ರಿ 7.40 ರ ಸುಮಾರಿಗೆ ಬಸ್‌ ಪೊಳಲಿ-ಕೊಳತ್ತಮಜಲು ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಬಸ್‌ ತಿರುಗಿಸುವ ವಿಚಾರದಲ್ಲಿ ಆರೋಪಿಗಳಾದ ಉಮೇಶ ಶೆಟ್ಟಿ, ವಿಜಯ, ಕಿಶೋರ, ಪ್ರಶಾಂತ್‌ ಹಾಗೂ ಇತರರು ತಕರಾರು ತೆಗೆದಿದ್ದಾರೆ.

ಗಲಾಟೆ ಮಾಡಿ ಬಳಿಕ ಆರೋಪಿಗಳು ಪಲಾಯನಗೈದಿದ್ದಾರೆ. ಬಳಿಕ ಬಸ್‌ ಕಂಡಕ್ಟರ್ ಅಭಿಜಿತ್‌ ಶೆಟ್ಟಿ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಬೀಗ ಮುರಿದು ಬಟ್ಟೆ ಮಳಿಗೆಯಲ್ಲಿ ಕಳ್ಳತನ ಪ್ರಕರಣ; ಒಬ್ಬ ಆರೋಪಿ ಅಂದರ್

Published

on

ಬಂಟ್ವಾಳ: ಬಟ್ಟೆ ಮಳಿಗೆಯೊಂದರ ಬೀಗ ಮುರಿದು ನಗದು ದೋಚಿದ ಘಟನೆ ಮಂಗಳೂರಿನ ಫರಂಗಿಪೇಟೆಯಲ್ಲಿ ನಡೆದಿತ್ತು. ಇದೀಗ ಪ್ರಕರಣವನ್ನು ಬೇಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಡ್ಯಾರು ಗ್ರಾಮದ ಕಣ್ಣೂರು ನಿವಾಸಿ ನಝೀ‌ರ್ ಮಹಮ್ಮದ್ ಬಂಧಿತ ಆರೋಪಿಯಾಗಿದ್ದು, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ನಝೀರ್‌ನಿಂದ 1,09,490 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಎ. 11ರ ತಡರಾತ್ರಿ ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ಸಂಕೀರ್ಣದಲ್ಲಿದ್ದ ವೈಟ್‌ಲೆ ‌ನ್ ಕಿಡ್ಸ್ ವರ್ಲ್ಡ್ ಬಟ್ಟೆ ಮಳಿಗೆಯ ಶಟರ್‌ನ ಬೀಗ ಮುರಿದು ಒಳಪ್ರವೇಶಿಸಿ ಕ್ಯಾಶ್ ಕೌಂಟರ್‌ನಲ್ಲಿದ್ದ ಸುಮಾರು 4 ಲಕ್ಷ ರೂ.ಗಳನ್ನು ಕಳವು ಮಾಡಿದ್ದಾನೆ ಎಂದು ಮಾಲಕ ಇರ್ಫಾನ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಬಂಧಿತ ಆರೋಪಿ ನಝೀರ್ ಮಹಮ್ಮದ್‌ನು ಕಳೆದ ವರ್ಷ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಟಿವಿಎಸ್ ಶೋರೂಮ್‌ನ ಗಾಜು ಒಡೆದು ಹಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟ‌ರ್ ಶಿವಕುಮಾ‌ರ್ ಬಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page