Connect with us

bangalore

ದೈವಕೋಲ ವೀಕ್ಷಣೆಗೆ ಟೂರ್ ಪ್ಯಾಕೇಜ್‌ – ತುಳುವರ ಧಾರ್ಮಿಕ ಭಾವನೆಗೆ ಪೆಟ್ಟು..!

Published

on

ಬೆಂಗಳೂರು:  ತುಳುನಾಡಿನ ದೈವರಾಧನೆಯನ್ನು ಇದೀಗ  ಬೆಂಗಳೂರಿನ ಟೂರ್ ಪ್ಯಾಕೇಜ್ ಸಂಸ್ಥೆಯೊಂದು ವ್ಯವಹಾರ ಮಾಡಲು ಹೊರಟಿದೆ. ತುಳುನಡಿನ ಜನರ ನಂಬಿಕೆಯಿಂದ ದೈವರಾಧನೆ, ಭೂತಕೋಲಗಳನ್ನು ಉಳಿಸಿ ಬೆಳೆಸಿಕೊಂಡು ಬಂದರೆ ಇತ್ತ ಇದರ ಬ್ಯುಸಿನೆಸ್ ಶುರುವಾಗಿದೆ. ಇದರ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿದ್ದು, ತುಳುನಾಡ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂತಕೋಲ ಎಂಬ ಪೋಸ್ಟರ್ ರೆಡಿ ಮಾಡಿ ಅದನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ಶೇರ್ ಮಾಡಿದ್ದಾರೆ. ಟ್ರಾವೆಲ್ ಸಂಸ್ಥೆಯೊಂದು 2024ರ ಫೆ. 10 ಹಾಗೂ 11ರಂದು ಎರಡು ದಿನದ ಟೂರ್ ಪ್ಯಾಕೇಜ್ ಅನ್ನು ಹಮ್ಮಿಕೊಂಡಿದೆ. ಅದರಲ್ಲಿ ನದಿ ಬೋಟಿಂಗ್, ಉಪ್ಪಿನಂಗಡಿ ಕಂಬಳ, ಬೊಳ್ಳಾಡಿ ಫಾರ್ಮ್ ಪಾರ್ಟಿ, ಬೊಳ್ಳಾಡಿ ಮನೆಯಲ್ಲಲಿ ಭೂತಕೋಲ, ಬೀರಮಲೆ ಬೆಟ್ಟ ಟ್ರಕ್ಕಿಂಗ್ ಇರಲಿದೆ ಎಂದು ಬರೆದುಕೊಂಡಿದ್ದಾರೆ. ಟೂರ್ ಪ್ಯಾಕೇಜ್ ನ ಮೊತ್ತ ಒಬ್ಬನಿಗೆ 2899 ರೂ. ಆಗಿರುತ್ತದೆ. ಅಲ್ಲದೆ ಆ ಪೋಸ್ಟರ್ ನಲ್ಲಿ ಬುಕ್ ಶೋ ನಲ್ಲಿ ಬುಕ್ ಮಾಡಿ ಎಂದು ಹಾಕಲಾಗಿದೆ. ಈಗಾಗಲೇ ಹಲವರು ಬುಕ್ ಮಾಡಿದರೆನ್ನಲಾಗಿದೆ. ಈ ಪೋಸ್ಟರ್ ನೋಡಿದ ಹಲವು ನೆಟ್ಟಿಗರು ಕಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ತುಳುನಾಡಿನ ಭೂತರಾಧನೆ ಟೂರ್ ಪ್ಯಾಕೇಜ್ ಆಗಬಾರದು, ದೈವದ ಮೇಲೆ ಇರುವ ನಂಬಿಕೆಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

 

bangalore

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗುತ್ತಿರುವ ‘ರಾಮಾಚಾರಿ’ ನಟಿ …!

Published

on

ಈ ವರ್ಷ ಬಹಳ ಅದೃಷ್ಟ ಎಂಬಂತೆ ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಹಬ್ಬ ಜೋರಾಗಿದೆ. ಒಬ್ಬರಾದ ಮೇಲೆ ಒಬ್ಬರು ಎಂಗೇಜ್‌ ಆಗುವ ಮೂಲಕ ಮದುವೆ ಆಗುತ್ತಿದ್ದಾರೆ. ʼಬಿಗ್‌ ಬಾಸ್ʼ‌ ನ ರಂಜಿತ್‌ ಇತ್ತೀಚೆಗೆ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡ ಸುದ್ಧಿ ಅಚ್ಚರಿ ಜೊತೆ ಐರಲ್ ಆಗುತ್ತಿದೆ. ಈ ಬೆನ್ನಲ್ಲೇ ಇದೀಗ ‘ರಾಮಾಚಾರಿ’ ಧಾರಾವಾಹಿಯ ನಟಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಅಮಾಜಿಕ ಜಾಲತಾಣದಲ್ಲಿ ಆ ಸುದ್ಧಿ ಫುಲ್ ವೈರಲ್ ಆಗುತ್ತಿದೆ. ಯಾರು ಆ ನಟಿ ? ಹುಡುಗ ಯಾರು ? ಇಲ್ಲಿದೆ ಸಂಪೂರ್ಣ ಮಾಹಿತಿ.

‘ರಾಮಾಚಾರಿ’ ದಾರವಾಹಿಯಲ್ಲಯ ರಾಮಾಚಾರಿಯ ತಂಗಿ ಪಾತ್ರಧಾರಿಗಳು ಸಾಕಷ್ಟು ಬಾರಿ ಬದಲಾಗಿದ್ದಾರೆ. ಶ್ರುತಿ ಪಾತ್ರದಲ್ಲಿ ಒಮ್ಮೆ ಶೀಲಾ ಎಚ್‌ ಎನ್ನುವವರು ನಟಿಸಿದ್ದು, ಇದೀಗ ಆಕೆ ಹೊಸ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ರಾಮಾಚಾರಿ ಧಾರಾವಾಹಿ ತಂಡವು ಶೀಲಾ ನಿಶ್ಚಿತಾರ್ಥದಲ್ಲಿ ಬಹಳ ಸಂಭ್ರಮದಿಂದ ಭಾಗಿಯಾಗಿದ್ದರು.

ಶೀಲಾ ನಿಶ್ಚಿತಾರ್ಥದಲ್ಲಿ ಕಲಾವಿದರು ಭಾಗಿ :

ರಾಮಾಚಾರಿ ಧಾರಾವಾಹಿ ಕಲಾವಿದರಾದ ಐಶ್ವರ್ಯಾ ಸಾಲೀಮಠ, ಮೌನ ಗುಡ್ಢೇಮನೆ, ನಟ ವಿನಯ್‌ ಯುಜೆ, ರಿತ್ವಿಕ್‌ ಕೃಪಾಕರ್‌, ತೇಜಸ್ವಿ ಪ್ರಕಾಶ್‌ ಮುಂತಾದವರು ಭಾಗಿಯಾದರು. ಇದರ ಜೊತೆಗೆ ಸಾಕಷ್ಟು ನಟ-ನಟಿಯರು ಶೀಲಾ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದು ಬಹಳ ಅದ್ದೂರಿಯಾಗಿ ಎಂಗೇಜ್‌ಮೆಂಟ್‌ ನಡೆದಿದೆ.

ಶೀಲಾ ಮದುವೆ ಯಾವಾಗ ?

‘ಚಿರಂತ್‌’ ಎನ್ನುವವರ ಜೊತೆ ಶೀಲಾ ನಿಶ್ಚಿತಾರ್ಥ ನಡೆದಿದೆ. ಚಿರಂತ್‌ ಯಾರು? ಎಲ್ಲಿಯವರು? ಚಿರಂತ್‌ ಹಾಗೂ ಶೀಲಾ ಭೇಟಿ ಆಗಿದ್ದು ಎಲ್ಲಿ? ಇವರಿಬ್ಬರದ್ದು ಲವ್‌ ಮ್ಯಾರೇಜ್?‌ ಅರೇಂಜ್ ಮ್ಯಾರೇಜ್?‌ ಎಂಬ ಬಗ್ಗೆ ಉತ್ತರ ಸಿಗಬೇಕಷ್ಟೇ. ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಪ್ರಶ್ನೆ ಇದ್ದು, ಇದಕ್ಕೆ ಶೀಲಾ ಅವರೇ ಉತ್ತರ ಕೊಡಬೇಕಿದೆ. ಇನ್ನು ಯಾವಾಗ ಮದುವೆ ಆಗಲಿದೆ ಎಂಬ ಬಗ್ಗೆಯೂ ಮಾಹಿತಿ ಲಬ್ಯವಾಗಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ಧಿ ವೈರಲ್ ಆಗುತ್ತಿದೆ.

Continue Reading

bangalore

ದೇವಾಲಯದಲ್ಲಿ ದೇವರ ತಾಳಿ ಕದ್ದ ಆರೋಪಿ ಅಂದರ್..

Published

on

ಬೆಂಗಳೂರು : ದೇವಾಲಯಲ್ಲಿಯೇ ಕಳ್ಳನೋರ್ವ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಶ್ಯಾಮರಾಜಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್‌ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.

ಸಂಜಯ್‌ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಸಂಜಯ್ ದೇವಸ್ಥಾನದಲ್ಲಿ ಮಾ.5 ರಂದು ದೇಗುಲದ ಬೆಳ್ಳಿ ತಟ್ಟೆ, 15 ಬೆಳ್ಳಿ ಬಟ್ಟಲು, ಬೆಳ್ಳಿ ಹಸುವಿನ ವಿಗ್ರಹ, 4 ತಾಳಿ, ಕಾಸಿನ ಸರವನ್ನು ಕದ್ದಿದ್ದ. ನಂತರ ಈತ ಪರಾರಿಯಾಗಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯ ಬಂಧನ ಮಾಡಲಾಗಿದೆ.

ಕಳ್ಳ ಸಂಜಯ್‌ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು, ವಾರೆಂಟ್‌ ಜಾರಿಯಾಗಿತ್ತು. ಆದರೆ ವಕೀಲರಿಗೆ ಕೊಡಲು ಹಣವಿಲ್ಲದ ಕಾರಣ ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಸದ್ಯ ಪೊಲಿಸರು ಸಂಜಯ್‌ನನ್ನು ಬಮಧಿಸಿದ್ದು, ವಿಚಾರನರ ನಡೆಸುತ್ತಿದ್ದಾರೆ.

Continue Reading

bangalore

‘I LOVE YOU’ ಅಲ್ಲ.. ಕೇವಲ ಮೀನು ಕೊಟ್ಟು ಪ್ರಪೋಸ್ ಮಾಡ್ತಾರಂತೆ ‘ಕುಡ್ಲದ ಜನ’..! ಹೇಗೆ ಗೊತ್ತಾ ?

Published

on

ಪ್ರಸ್ತುತ ಝೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಆರಂಭವಾಗಿದ್ದು ಉತ್ತಮ ರಿತಿಯಲ್ಲಿ ನಡೆಯುತ್ತಿದೆ. ಬ್ಯಾಚುಲರ್ಸ್‌ಗಳಿಗೆ ಮೆಂಟರ್ಸ್‌ಗಳು ಕೂಡ ಸಿಕ್ಕಿದ್ದಾರೆ. ವಿವಿಧ ರೀತಿಯಲ್ಲಿ ತಮ್ಮ ಪಾರ್ಟ್ನರ್/ ಮೆಂಟರ್‌ಗಳಿಗೆ ಬ್ಯಾಚುಲರ್ಸ್ ಸರ್ಪ್ರೈಸ್ ನೀಡುವಂತೆ ಕಳೆದ ವಾರ ಸರ್ಪ್ರೈಸ್ ರೌಂಡ್ ಇತ್ತು. ಸಿನಿಮಾಗಳ ರೀಕ್ರಿಯೇಶನ್ ರೌಂಡ್ ಆಗಿದ್ದು ನಟಿ ಅಭಿಜ್ಞಾ ಭಟ್, ಸೂರ್ಯ ಕುಮಾರ್‌ಗೆ ಜೋಡಿಯಾಗಿದ್ದು, ಇವರು ಜೊತೆಯಾಗಿ ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಹಾಗೂ ದೃಶ್ಯಗಳನ್ನು ರೀಕ್ರಿಯೇಟ್ ಮಾಡಿದ್ದಾರೆ.

ನಿರೂಪಕ ನಿರಂಜನ್ ದೇಶಪಾಂಡೆ ಮೀನುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅಭಿಜ್ಞಾ ಭಟ್ ಉತ್ತರಿಸಿದ್ದು, “ನಾನು ಮೀನು ತಿನ್ನೋದಿಲ್ಲ, ಆದರೆ ನಾನು ದಕ್ಷಿಣ ಕನ್ನಡದವಳು ಅಲ್ವಾ? ಹಾಗಾಗಿ ನಮ್ಮ ಅಕ್ಕ ಪಕ್ಕದ ಮನೆಯಲ್ಲಿ ಯಾವಾಗ ನೋಡಿದ್ರೂ ಮೀನು. ಮೀನು ಕಣ್ಣಿಗೆ ತುಂಬಾನೆ ಒಳ್ಳೆಯದು ಅಲ್ಲದೇ ಮೀನಿನ ಮಂಡೆ ತಿಂದ್ರೆ ನಮ್ಮ ಮಂಡೆಸ ಚುರುಕಾಗುತ್ತದೆ” ಎಂದರು . ಇಷ್ಟೇ ಅಲ್ಲ ಮೀನು ಕೊಟ್ಟು ಪ್ರಪೋಸ್ ಮಾಡುವ ಕುರಿತು ಸಹ ಅಭಿಜ್ಞಾ ಮಾಹಿತಿ ನೀಡಿದ್ದು, “ಇಲ್ಲೆಲ್ಲಾ ಹುಡುಗರು ಹುಡುಗಿಯರಿಗೆ ಪ್ರಪೋಸ್ ಮಾಡಲು, ಅಥವಾ ಇಂಪ್ರೆಸ್ ಮಾಡಲು ರೋಸ್, ಚಾಕ್ಲೆಟ್ ಎಲ್ಲಾ ಕೊಡ್ತಾರೆ, ಆದರೆ ನಮ್ ಕಡೆ ಹಾಗಲ್ಲ, ಮೀನು ಕೊಟ್ರೆ ಸಾಕು. ಇಲ್ಲೆಲ್ಲ ಐ ಲವ್ ಯೂ ಅಂದ್ರೆ ಮುಗೀತು, ಆದ್ರೆ ನಮ್ ಕಡೆ ‘ಹೇ ಭಾಗಿ ನಿನಗಾಗಿ ಮೀನು ತಂದಿದ್ದೇನೆ, ಸಾರು ಮಾಡಿಡು, ರಾತ್ರಿ ಬೇಗ ಬರ್ತೇನೆ’ ಎನ್ನುತ್ತಾರಂತೆ ಕುಡ್ಲದ ಜನ. ಹಾಗಾಗಿ ಭಾಗಿ ಮನೆಯಲ್ಲಿ ಮೀನು ಸಾರು ಅಂದ್ರೆ, ಇವತ್ತೇನೋ ಸ್ಪೆಷಲ್ ಇದೆ ಎಂದು ಕನೆಕ್ಟ್ ಮಾಡ್ಬೇಕು” ಎಂದಿದ್ದಾರೆ ಅಭಿಜ್ಞಾ.

ಕಾರ್ಯಕ್ರಮದ ಜಡ್ಜ್ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಜ್ಞಾಳ ಕತೆಯನ್ನೆಲ್ಲಾ ಕೇಳಿ, “ಯಾವ ಯಾವ ಮೀನು ಕೊಡಬೇಕು ? ಅದರ ಅರ್ಥ ಏನು ?” ಎಂದು ಕೇಳಿದ್ದಾರೆ. ಅದಕ್ಕೆ ಅಭಿಜ್ಞಾ, “ಬಂಗುಡೆ ಮೀನು ಕೊಟ್ರೆ, ಬರೀ ರೋಮ್ಯಾನ್ಸ್. ಕಾಣೆ ಫಿಶ್ ಕೊಟ್ರೆ ಸ್ವಲ್ಪ ಜಾಸ್ತಿನೇ ರೊಮ್ಯಾನ್ಸ್ , ಪಾಂಪ್ಲೆಟ್ ಮೀನು ಕೊಟ್ರೆ ಲವ್ ಮಾಡೋದು ಅಂತ ಅರ್ಥ, ಇನ್ನು ಏಡಿಯನ್ನು ತಂದು ಕೊಟ್ರೆ ಫಸ್ಟ್ ಸೆಕೆಂಡ್ ಸ್ಟೇಜ್ ಏನೂ ಇಲ್ಲ, ಡೈರೆಕ್ಟ್” ಎಂದ ಅಭಿಜ್ಞಾ ಕೊನೆಗೆ “ನಾನು ಸುಮ್ಮನೆ ಹೇಳಿದ್ದು, ಇವಳಿಗೇನು ಮಾಡೋದಕ್ಕೆ ಬೇರೆ ಕೆಲ್ಸ ಇಲ್ವಾ ಅಂತ ಹೇಳ್ಬೇಡಿ” ಎಂದು ಹೇಳಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page