Connect with us

ಎತ್ತಿಗೆ ಜ್ವರ ಎಮ್ಮೆಗೆ ಬರೆ : ಬಸ್‌ ಪ್ರಯಾಣಿಕರಿಗೆ ಟೋಲ್ ಸೆಸ್ ಹೇರಿಕೆ

Published

on

ಎತ್ತಿಗೆ ಜ್ವರ ಎಮ್ಮೆಗೆ ಬರೆ : ಬಸ್‌ ಪ್ರಯಾಣಿಕರಿಗೆ ಟೋಲ್ ಸೆಸ್ ಹೇರಿಕೆ.।!

ಮಂಗಳೂರು : ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ ಎನ್ನುವ ಗ್ರಾಮೀಣ ಪ್ರದೇಶದ ನಾಣ್ಣುಡಿಯಂತೆ ತಮ್ಮ ಬಸ್‌ಗಳಿಗೆ ಹಾಕಿದ ಟೋಲ್‌ ಸೆಸ್‌ ಅನ್ನು ಬಸ್‌ ಮಾಲಕರ ಪ್ರಯಾಣಿಕರ ಮೇಲೆ ಹೇರಿ ಟಿಕೆಟ್‌ ದರ ಹೆಚ್ಚಳ ಮಾಡಿದೆ.

ಇದಕ್ಕೆ ಹೆದ್ದಾರಿ ಟೋಲ್ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತವಾಗಿದೆ, ಫಾಸ್ಟ್ ಟಾಗ್ ಕಡ್ಡಾಯ, ಟೋಲ್ ದರಗಳ ಹೆಚ್ಚಳವನ್ನು ಮುಂದಿಟ್ಟು ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಬಸ್ ಮಾಲಕರು ಪ್ರತಿ ಸ್ಟೇಜ್ ಗೆ ಟಿಕೇಟ್ ಮೇಲೆ ತಲಾ ಒಂದು ರೂಪಾಯಿ ಪ್ರಯಾಣ ದರ ಹೆಚ್ಚಳ ಮಾಡಿರುವುದು ಖಂಡನೀಯ.

ಜಿಲ್ಲಾಡಳಿತ, ಆರ್ ಟಿ ಎ ಅನುಮತಿ ಪಡೆಯದೆ ಈ ರೀತಿ ಏಕಪಕ್ಷೀಯ, ನಿಯಮ ಬಾಹಿರ ಏರಿಕೆ ಮಾಡುವುದನ್ನು ಒಪ್ಪಲಾಗದು,

ಉಭಯ ಜಿಲ್ಲಾಡಳಿತಗಳು ತಕ್ಷಣ ಮಧ್ಯ ಪ್ರವೇಶಿಸಿ ದರ ಏರಿಕೆಯನ್ನು ತಡೆ ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಆಗ್ರಹಿಸಿದೆ.

ಟೋಲ್ ದರ ಹೆಚ್ಚಳ, ಫಾಸ್ಟ್ ಟಾಗ್ ಹೆಸರಿನ ಸುಲಿಗೆ, ಸುರತ್ಕಲ್ ನಲ್ಲಿ ಅಕ್ರಮ ಟೋಲ್ ವಸೂಲಿಯನ್ನು ಸಂಘಟಿತ ವಿಭಾಗವಾದ ಬಸ್ ಮಾಲಕರ ಒಕ್ಕೂಟಗಳು ಪ್ರತಿಭಟಿಸಬೇಕು.

ಅದರ ಹೊರತಾಗಿ ಟೋಲ್ ದರ ಹೆಚ್ಚಳವನ್ನೇ ನೆಪವಾಗಿಸಿ ಪ್ರಯಾಣಿಕರ ಮೇಲೆ ಯದ್ವಾ ತದ್ವ ದರ ವಿಧಿಸುವುದು ಖಂಡನೀಯ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಟೋಲ್ ಗೇಟ್ ಗಳಲ್ಲಿ ವಿಪರೀತ ದರ ವಸೂಲಿ, ಅಕ್ರಮ ಟೋಲ್ ಗೇಟ್ ಗಳ ವಿರುದ್ದ ನಾಗರಿಕ ಸಂಘಟನೆಗಳು ಹೋರಾಟಗಳನ್ನು ಹಮ್ಮಿಕೊಂಡಾಗ ಬಸ್ ಮಾಲಕರ ಸಂಘಗಳು ಪ್ರತಿಭಟನೆಗಳ ಜೊತೆಗೆ ನಿಲ್ಲಲಿಲ್ಲ.

ನಿಯಮಗಳ ವಿರುದ್ದವಾಗಿ ಕಿರು ಅಂತರದ ಟೋಲ್ ಕೇಂದ್ರಗಳ ವಿರುದ್ದ ಸ್ವತಂತ್ರ ಹೋರಾಟವನ್ನೂ ಮಾಡಲಿಲ್ಲ‌. ಅದರಲ್ಲೂ ಹೆದ್ದಾರಿ ಪ್ರಾಧಿಕಾರವೇ ಸ್ವತಹ ಮುಚ್ಚಲು ನಿರ್ಧರಿಸಿರುವ ಸುರತ್ಕಲ್ ನ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಅಕ್ರಮ ಟೋಲ್ ಸಂಗ್ರಹದ ವಿರುದ್ದ ಟೋಲ್ ವಿರೋಧಿ ಹೋರಾಟ ಸಮಿತಿ ಸತತವಾದ ಹೋರಾಟ ನಡೆಸಿದಾಗಲೂ ಬಸ್ ಮಾಲಕರ ಸಂಘ ಹೋರಾಟ ಬೆಂಬಲಿಸಿ ಬೀದಿಗಿಳಿಯಲಿಲ್ಲ.

ಅದರ ಬದಲಿಗೆ ಅಕ್ರಮ ಟೋಲ್ ಸಂಗ್ರಹದ ಹೊರೆಯನ್ನು ಪ್ರಯಾಣಿಕರ ತಲೆಗೆ ವರ್ಗಾಯಿಸಿ ದುಪ್ಪಟ್ಟು ಲಾಭ ಪಡೆಯಿತು.

ಅವಳಿ ಜಿಲ್ಲೆಗಳ ಜೀವನಾಡಿಯಾಗಿರುವ, ಸಂಘಟಿತ, ಪ್ರಬಲ ವಿಭಾಗವಾಗಿರುವ ಖಾಸಾಗಿ ಬಸ್ ಗಳು ಸುರತ್ಕಲ್ ಅಕ್ರಮ ಟೋಲ್ ಕೇಂದ್ರದ ವಿರುದ್ದದ ಹೋರಾಟದಲ್ಲಿ ಕೈ ಜೋಡಿಸಿದ್ದರೆ ಸುರತ್ಕಲ್ ಟೋಲ್ ಮುಚ್ಚದೆ ಸರ್ಕಾರಕ್ಕೆ ಬೇರೆ ದಾರಿ ಇರಲಿಲ್ಲ.

ಈ ಹಿಂದೆ ಟೋಲ್ ಕೇಂದ್ರಗಳು ಆರಂಭಗೊಂಡಾಗ ಪ್ರಯಾಣಿಕರ ಪ್ರತಿ ಟಿಕೆಟ್ ಮೇಲೆ ಬಸ್ ಮಾಲಕರ ಸಂಘ ತಲಾ ಎರಡು ರೂಪಾಯಿ ಟೋಲ್ ಸೆಸ್ ವಿಧಿಸಿತ್ತು.

ಈಗ ಮತ್ತೆ ಟೋಲ್ ದರ ಅಲ್ಪ ಹೆಚ್ಚಳವನ್ನು ಮುಂದಿಟ್ಟು ಪ್ರತಿ ಸ್ಟೇಜ್ ಮೇಲೆ ಟಿಕೆಟ್ ಗೆ ಒಂದು ರೂಪಾಯಿ ಸೆಸ್ ಅನ್ನು ಜಿಲ್ಲಾಡಳಿತ, ಆರ್ ಟಿ ಎ ಅನುಮತಿ ಪಡೆಯದೆ ಏಕಪಕ್ಷೀಯವಾಗಿ ಹೆಚ್ಚುವರಿಯಾಗಿ ವಿಧಿಸಿದೆ.

ಈ ರೀತಿ ಜಿಲ್ಲಾಡಳಿತದ ಅನುಮತಿ ಇಲ್ಲದೆ, ಸಾರ್ವಜನಿಕ ಅಹವಾಲು ಸ್ವೀಕರಿಸಿ ಆರ್ ಟಿ ಎ ಒಪ್ಪಿಗೆ ಸೂಚಿಸದೆ ಬಸ್ ಮಾಲಕರು ದರ ಹೆಚ್ಚಿಸುವುದು ನಿಯಮಗಳಿಗೆ ವಿರುದ್ದವಾಗಿದೆ.

ಈ ಹೆಚ್ಚಳದಿಂದ ಮಂಗಳೂರಿನಿಂದ ಉಡುಪಿ, ಕುಂದಾಪುರದ ಕಡೆಗೆ ಪ್ರಯಾಣಿಸುವ ಪ್ರತಿಯೊಂದು ಟಿಕೇಟ್ ಮೇಲೆ ತಲಾ ಐದು ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತದೆ.

ಇದು ಬಡ ಪ್ರಯಾಣಿಕರ ನೇರವಾದ ಅಕ್ರಮ ಸುಲಿಗೆಯಾಗಿದ್ದು, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬಸ್ ಮಾಲಕರ ಸಂಘದ ಈ ಏಕಪಕ್ಷೀಯ ಸುಲಿಗೆ ನೀತಿಯನ್ನು ತೀವ್ರವಾಗಿ ವಿರೋಧಿಸುತ್ತದೆ.

ಪ್ರಯಾಣಿಕರು ಹೆಚ್ಚುವರಿ ದರ ಪಾವತಿಸದೆ ಪ್ರತಿಭಟಿಸುವಂತೆ ಮನವಿ ಮಾಡುತ್ತದೆ.

ಉಭಯ ಜಿಲ್ಲಾಡಳಿಗಳು ತಕ್ಷಣ ಮಧ್ಯ ಪ್ರವೇಶಿಸಿ ಹೆಚ್ವುವರಿ ಟೋಲ್ ಸೆಸ್ ವಸೂಲಿಗೆ ತಡೆ ವಿಧಿಸುವಂತೆ ಆಗ್ರಹಿಸುತ್ತದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉಡುಪಿ: ಫ್ಲ್ಯಾಟ್, ಚಿನ್ನ ನೀಡುವುದಾಗಿ ನಂಬಿಸಿ ಉದ್ಯಮಿಗೆ ಕೋಟಿ ಕೋಟಿ ವಂಚನೆ

Published

on

ಉಡುಪಿ: ಹರಾಜಿನಲ್ಲಿ ಫ್ಲ್ಯಾಟ್ ಮತ್ತು ಚಿನ್ನ ಖರೀದಿಸಿ ಕೊಡುವುದಾಗಿ ನಂಬಿಸಿ ಮುಂಬೈ ಮೂಲದ ಉದ್ಯಮಿ ಮಮತಾ ಶೆಟ್ಟಿ ಎಂಬವರಿಗೆ ಉಡುಪಿ ಮೂಲದ ದಂಪತಿ ಸುಹಾಸಿನಿ ಶೆಟ್ಟಿ ಹಾಗೂ ಪತಿ ಪುನೀತ್ ಶೆಟ್ಟಿ ಎಂಬವರು ಸುಮಾರು 4.78 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ ಎಂದು ದಂಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಮತಾ ಶೆಟ್ಟಿಗೆ ದೂರದ ಸಂಬಂಧಿಯಾಗಿರುವ ಸುಹಾಸಿನಿ, 2024ರ ಜನವರಿಯಿಂದ ಜೂನ್‌ವರೆಗೆ ಹಂತ ಹಂತವಾಗಿ 4.78 ಕೋಟಿ ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದಾರೆ. ಹರಾಜಿನಲ್ಲಿ ಚಿನ್ನ, ಫ್ಲ್ಯಾಟ್ ಹಾಗೂ ಸ್ಕ್ರಾಪ್ ವ್ಯವಹಾರದಲ್ಲಿ ಲಾಭಕರ ಹೂಡಿಕೆ ಮಾಡಿಕೊಡುವುದಾಗಿ ನೀಡಿದ ಭರವಸೆಯನ್ನು ನಂಬಿದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿದ್ದಾಗಿ ದೂರು ನೀಡಲಾಗಿದೆ. ಆಕೆ ಜೊತೆ ಪತಿ ಕೂಡಾ ಕೈಜೋಡಿಸಿದ್ದಾರೆ.

2024ರಲ್ಲಿ ಉಡುಪಿ ಸೈಬರ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಬಳಿಕ ಸುಹಾಸಿನಿ ಶೆಟ್ಟಿ ನ್ಯಾಯಾಲಯದಿಂದ ಪ್ರಕರಣಕ್ಕೆ ಸ್ಟೇ ಆದೇಶ ಪಡೆದಿದ್ದರು. ಈ ನಡುವೆ ಕಿಶೋರ್ ಶೆಟ್ಟಿ ಮತ್ತು ನವೀನ್ ಮೂಲ್ಕಿ ಎನ್ನುವವರ ಮೂಲಕ ಸಂಧಾನ ಮಾತುಕತೆ ನಡೆದಿದ್ದರೂ ಅದು ವಿಫಲವಾಗಿದೆ. ಇದೀಗ ಸುಹಾಸಿನಿ ಮತ್ತು ಪತಿ ಮಣಿಪಾಲದಿಂದ ಮಂಗಳೂರಿಗೆ ಸ್ಥಳಾಂತರಗೊಂಡು ಮಂಗಳೂರಿನಲ್ಲೂ ಇದೇ ರೀತಿ ಮೋಸ ಮಾಡಿದ್ದಾರೆ.

ಇದನ್ನೂ ಓದಿ: ಮದುವೆ ಮನೆ ಬಫೆ ಆ್ಯಪ್‌ ಅಭಿವೃದ್ಧಿಪಡಿಸಿದ ಬೆಂಗಳೂರು ಯುವಕನಿಗೆ ಕೊಲೆ ಬೆದರಿಕೆ!

ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ತನಗೆ ನ್ಯಾಯ ದೊರಕಿಸಿಕೊಡುವಂತೆ ಮಮತಾ ಶೆಟ್ಟಿ ಮಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಮರು ತನಿಖೆಗೆ ಮನವಿ ಮಾಡಿರುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Continue Reading

LATEST NEWS

‘ಸಾರಿ ಮಮ್ಮಿ-ಪಾಪ, ಐ ಲವ್ ಯು’ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

Published

on

ಬೀದರ್‌: 10ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ದುರದೃಷ್ಟಕರ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ ನಡೆದಿದೆ.


ಶರತ್ ಪರಮೇಶ್ವರ್(16), ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ನಿವಾಸಿ. ವಿದ್ಯಾರ್ಥಿಯು ಸಾಯುವ ಮೊದಲು “Sorry Mummy, Papa… I Love You” ಮತ್ತು “Keep Smile Forever” ಎಂದು ಬರೆದ ಹೃದಯವಿದ್ರಾವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ಬಾಲಕ ಪರೀಕ್ಷೆಗೆ ಹೆದರಿ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕಂಡ್ಲೂರು ಸೇತುವೆ ಬಳಿ ಅಕ್ರಮ ಮರಳು ಅಡ್ಡೆಗೆ ದಾಳಿ; 11 ಮಂದಿ ಆರೋಪಿಗಳ ಬಂಧನ

ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ವಸತಿ ಶಾಲೆಯ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Continue Reading

bangalore

ಮದುವೆ ಮನೆ ಬಫೆ ಆ್ಯಪ್‌ ಅಭಿವೃದ್ಧಿಪಡಿಸಿದ ಬೆಂಗಳೂರು ಯುವಕನಿಗೆ ಕೊಲೆ ಬೆದರಿಕೆ!

Published

on

ಬೆಂಗಳೂರು: ಬೆಂಗಳೂರಿನ ಟೆಕ್ಕಿಯೊಬ್ಬರು ತಮಾಷೆಗಾಗಿ ರೂಪಿಸಿದ AI ಆಧಾರಿತ ಬಫೆ ಆ್ಯಪ್ ಆನ್‌ಲೈನ್‌ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಅವರಿಗೆ ಕೊಲೆ ಬೆದರಿಕೆಗಳು ಬಂದಿರುವ ಘಟನೆ ವರದಿಯಾಗಿದೆ.


ಬೆಂಗಳೂರಿನ ಪಂಕಜ್ ಎಂಬ ಟೆಕ್ಕಿ, ತಮಾಷೆಯಾಗಿ ಭಾರತೀಯ ವಿವಾಹಗಳ ಸಂಭ್ರಮಗಳಲ್ಲಿ ಬೃಹತ್ ಬಫೆ ವ್ಯವಸ್ಥೆ ನಿರ್ಹಿಸಿ, ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ಬಿಡಬೇಕು ಎಂದು ನಿರ್ಧರಿಸಲು ಸಹಾಯ ಮಾಡುವ ಬಫೆಟ್‌ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಉಪಕರಣವನ್ನು ಅಭಿವೃದ್ಧಿಪಡಿಸಿದ್ದರು.

ಈ ಎಐ ಮಾದರಿಗಳನ್ನು ತರಬೇತುಗೊಳಿಸಲು ಹಾಗೂ ಬಳಸಲು ಹೆಚ್ಚಿನ ವಿದ್ಯುತ್ ಮತ್ತು ನೀರಿನ ಅಗತ್ಯವಿರುತ್ತದೆ. ಇಂತಹ ಉಪಯೋಗವಿಲ್ಲದ ಕೆಲಸಗಳಿಗೆ ಎಐ ಬಳಸುವ ಮೂಲಕ ಪರಿಸರವನ್ನು ಹಾನಿಮಾಡುತ್ತಿದ್ದೀರಿ ಎಂದು ಕೆಲವರು ಆರೋಪಿದ್ದಾರೆ. ಇನ್ನು ಕೆಲವರು AI ತಂತ್ರಜ್ಞಾನವನ್ನು ಇಂತಹ ಅತಿ ಸಣ್ಣ ಕೆಲಸಕ್ಕೆ ವ್ಯರ್ಥ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಐಟಿಐ ವಿದ್ಯಾರ್ಥಿಗಳ ಮಧ್ಯೆ ಚೂರಿ ಇರಿತ-ಇಬ್ಬರಿಗೆ ಗಾಯ

ತನಗೆ ಮತ್ತು ತನ್ನ ಕುಟುಂಬಕ್ಕೆ ಹತ್ತಾರು ಜನರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಂಕಜ್ X ಪೇಜ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. “ಕೇವಲ ವಾರಾಂತ್ಯದ ಒಂದು ಸಣ್ಣ ಪ್ರಾಜೆಕ್ಟ್‌ಗಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page