Connect with us

FILM

ಇಂದು ಸಂಜೆ ಕಂಠೀರವ‌ ಸ್ಟುಡಿಯೋದಲ್ಲಿ ಪುನೀತ್‌ ಅಂತ್ಯಕ್ರಿಯೆ

Published

on

ಬೆಂಗಳೂರು: ನಿನ್ನೆ ಹೃದಯಾಘಾತದಿಂದ ನಿಧನರಾದ ನಟ‌ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಕಂಠೀರವ‌ ಸ್ಟುಡಿಯೊ ಬಳಿ‌ ನೆರವೇರಲಿದೆ.


ಪುನೀತ್ ಅವರ ಪುತ್ರಿ ಧೃತಿ ನ್ಯೂಯಾರ್ಕ್ ನಿಂದ ಹೊರಟಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ದಿಲ್ಲಿ ತಲುಪಲಿದ್ದಾರೆ. ಅಲ್ಲಿಂದ ಸಂಜೆ 4:30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆ ಬಳಿಕ ಪುನೀತ್ ಅಂತ್ಯ ಸಂಸ್ಕಾರ ನೆರವೇರಲಿದೆ.
ಅಪರಾಹ್ನ ಮೂರು ಗಂಟೆಗೆ ಕಂಠೀರವ ಕ್ರೀಡಾಂಗಣದಿಂದ ಪುನೀತ್ ಅಂತಿಮಯಾತ್ರೆ ಆರಂಭವಾಗಲಿದೆ. 5 ಗಂಟೆ ಸುಮಾರಿಗೆ ಅಂತ್ಯ ಸಂಸ್ಕಾರ ನಡೆಯಲಿರುವ ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಡಾ.ರಾಜ್ ಸ್ಮಾರಕದ ಆವರಣಕ್ಕೆ ತಲುಪಲಿದೆ.

ಆ ಬಳಿಕ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಲಿದೆ ಎಂದು ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ, ನಟ ವಿನಯ್ ರಾಜ್ ಕುಮಾರ್ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಪುನೀತ್ ಪಾರ್ಥಿವ ಶರೀರ ಇರಿಸಿರುವ ಕಂಠೀರವ ಕ್ರೀಡಾಂಗಣ ಹಾಗೂ‌ ಅಂತ್ಯಕ್ರಿಯೆ ನಡೆಯಲಿರುವ ಕಂಠೀರವ‌ ಸ್ಟುಡಿಯೊ ಬಳಿ‌ ಪೊಲೀಸರು ಬಿಗಿ‌ ಭದ್ರತೆ ಕೈಗೊಂಡಿದ್ದಾರೆ.
ಪಾರ್ಥಿವ ಶರೀರದ ಅಂತಿಮ‌ ಯಾತ್ರೆ ವೇಳೆಯಲ್ಲೂ‌ ಯಾವುದೇ ಅಹಿತಕರ‌ ಘಟನೆಗಳು‌ ನಡೆಯದಂತೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

FILM

ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ನಟ ಉಗ್ರಂ ಮಂಜು

Published

on

ಕನ್ನಡದ ಜನಪ್ರಿಯ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್-11ರ ಸ್ಪರ್ಧಿ ಉಗ್ರಂ ಮಂಜು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ಕಾರ್ಯಕ್ರಮ ಸರಳವಾಗಿ ನಡೆದಿದೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಉಗ್ರಂ ಮಂಜು ಅವರ ಜೀವನದ ಹೊಸ ಅಧ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ 23ರಂದು ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮದುವೆಗೆ ಎರಡು ದಿನಗಳು ಬಾಕಿ ಇರುವಂತೆಯೇ, ಮಂಜು ಮನೆಯಲ್ಲಿ ಹಳದಿ ಶಾಸ್ತ್ರದ ಸಂಭ್ರಮ ವಿಜೃಂಭಣೆಯಿಂದ ನಡೆಯಿತು. ಕುಟುಂಬಸ್ಥರು, ಆಪ್ತರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ಅರಿಶಿಣ ಶಾಸ್ತ್ರ ನೆರವೇರಿತು. ಸಂಪ್ರದಾಯದಂತೆ ಮಂಜು ಅವರಿಗೆ ಅರಿಶಿಣ ಲೇಪಿಸಿ, ಶುಭಾಶಯಗಳ ಸುರಿಮಳೆಗೈಯಲಾಯಿತು.

ಇದನ್ನೂ ಓದಿ: BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

ಇತ್ತೀಚೆಗೆ ಉಗ್ರಂ ಮಂಜು ಎರಡನೇ ಬಾರಿಗೆ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸದಸ್ಯರೊಂದಿಗೆ ತಮ್ಮ ಬ್ಯಾಚುಲರ್ ಪಾರ್ಟಿಯನ್ನು ಸಹ ಮಾಡಿಕೊಂಡಿದ್ದರು.

Continue Reading

BIG BOSS

ಬಿಗ್ ಬಾಸ್ ಸೀಸನ್ 1  ಟು 12 : ಇಲ್ಲಿದೆ ಗೆದ್ದವರ ವಿವರ!

Published

on

BBK12 : ಬಿಗ್ ಬಾಸ್ ಸೀಸನ್ 12ಕ್ಕೆ ಅದ್ದೂರಿ ತೆರೆ ಬಿದ್ದಿದೆ. ಗಿಲ್ಲಿ ನಟ ಈ ಬಾರಿಯ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.  ಕರಾವಳಿಯ ರಕ್ಷಿತಾ ರನ್ನರ್ ಅಪ್ ಆಗಿದ್ದಾರೆ. ಅಶ್ವಿನಿ ಗೌಡ  ಎರಡನೇ ರನ್ನರ್ ಅಪ್ ಆಗಿದ್ದಾರೆ. ಸದ್ಯ ಗೆದ್ದವರ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ.

ಬಿಗ್ ಬಾಸ್ ಗೆದ್ದವರ ವಿವರ :

BBK 1  : ಬಿಗ್ ಬಾಸ್ ಕನ್ನಡ ಮೊದಲ ಶೋ ಆರಂಭವಾಗಿದ್ದು 2013ರಲ್ಲಿ. ಈಟಿವಿಯಲ್ಲಿ ಈ ಶೋ ಆರಂಭಗೊಂಡಿತ್ತು. ಮೊದಲ ಸೀಸನ್‌ನಲ್ಲಿ ವಿಜಯ್ ರಾಘವೇಂದ್ರ ಗೆದ್ದಿದ್ದರು. ಅರುಣ್ ಸಾಗರ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

BBK2 : ಬಿಗ್ ಬಾಸ್ ಸೀಸನ್ 2 2014ರಲ್ಲಿ ನಡೆಯಿತು. ಜೂನ್ 29 ರಿಂದ ಅಕ್ಟೋಬರ್ 5ರ ವರೆಗೆ ಈ ಸೀಸನ್ ನಡೆಯಿತು. ನಿರೂಪಕ ಅಕುಲ್ ಬಾಲಾಜಿ ವಿಜೇತರಾಗಿದ್ದರು.  ಮತ್ತೊಬ್ಬ ನಿರೂಪಕ ಸೃಜನ್ ಲೋಕೇಶ್ ರನ್ನರ್ ಅಪ್ ಆಗಿದ್ದರು.

BBK3:  ಬಿಗ್ ಬಾಸ್ ಸೀಸನ್ 3 ರಲ್ಲಿ 18 ಸ್ಪರ್ಧಿಗಳಿದ್ದರು. 2015 – 16ನೇ ಸಾಲಿನಲ್ಲಿ ನಡೆದಿದ್ದ ಈ ಶೋನಲ್ಲಿ ನಟಿ ಶ್ರುತಿ ಗೆದ್ದು ಬೀಗಿದ್ದರು. ಚಂದನ್ ರನ್ನರ್ ಆಪ್ ಆಗಿ ಮಿಂಚಿದ್ದರು.

BBk 4 : 2016-17ರಲ್ಲಿ ನಡೆದಿದ್ದ ಸೀಸನ್ 4ನಲ್ಲಿ ಒಳ್ಳೆ ಹುಡುಗ ಪ್ರಥಮ್‌ ಗೆಲುವಿನ ನಗೆ ಬೀರಿದ್ದರು. ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿದ್ದರು.

BBK5 : ಬಿಗ್ ಬಾಸ್ ಸೀಸನ್ 5 ರಲ್ಲಿ ರ್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊಮ್ಮಿದ್ದರು. ದಿವಾಕರ್ ರನ್ನರ್ ಅಪ್ ಆಗಿದ್ದರು.

BBK6 : 2018 – 19 ರಲ್ಲಿ ಬಿಗ್ ಬಾಸ್ ಸೀಸನ್ 6 ನಡೆಯಿತು. ರೈತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಶಶಿಕುಮಾರ್ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದರು. ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ರನ್ನರ್ ಅಪ್ ಆಗಿದ್ದರು.

BBK7 : 2019 – 20 ರಲ್ಲಿ ಬಿಗ್ ಬಾಸ್ ಸೀಸನ್ 7 ನಡೆಯಿತು. ಶೈನ್ ಶೆಟ್ಟಿ ಗೆದ್ದಿದ್ದರು. ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದರು.

BBK8 : ಸೀಸನ್ 8 ಕೋವಿಡ್ ಕಾರಣದಿಂದ ಅರ್ಧಕ್ಕೆ ನಿಂತು ಮತ್ತೆ ಆರಂಭವಾಯಿತು. ಈ ಶೋನ ವಿನ್ನರ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದರು.  ಅರವಿಂದ್ ಕೆ.ಪಿ ರನ್ನರ್ ಅಪ್ ಆಗಿದ್ದರು.

BBK9 : ಹಳೆಯ ಸೀಸನ್‌ನ ಸ್ಪರ್ಧಿಗಳು ಸೀಸನ್‌ 9ರಲ್ಲಿ ಬಂದಿದ್ದರು. ಒಟಿಟಿ ಶೋ ಕೂಡ ಇತ್ತು. ರೂಪೇಶ್ ಶೆಟ್ಟಿ ಗೆದ್ದರೆ, ರಾಕೇಶ್ ಅಡಿಗ ರನ್ನರ್ ಅಪ್ ಆದರು.

BBK10 : ಭಾರೀ ಕುತೂಹಲ ಕೆರಳಿಸಿದ್ದ ಸೀಸನ್ 10. ಕಾರ್ತಿಕ್ ಮಹೇಶ್‌ ಗೆದ್ದಿದ್ದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

BBK 11 : ‘ಬಿಗ್ ಬಾಸ್‌ ಕನ್ನಡ 1!ರ ವಿನ್ನರ್‌ ಟ್ರೋಫಿ ಹನುಮಂತ ಲಮಾಣಿ ಗೆದ್ದಿದ್ದರು. ರನ್ನರ್‌ ಅಪ್‌ ಆಗಿ ತ್ರಿವಿಕ್ರಮ್‌ ,  ಮೂರನೇ ಸ್ಥಾನ ರಜತ್‌ ಪಡೆದುಕೊಂಡರು.

Continue Reading

BIG BOSS

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಗೆದ್ದ ಗಿಲ್ಲಿ; ನುಡಿದಂತೆ ನಡೆದ ‘ಆ’ ವ್ಯಕ್ತಿ!

Published

on

BBK12 : ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ನಟ ಗೆದ್ದು ಬೀಗಿದ್ದಾರೆ. ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಗಿಲ್ಲಿ ಮತ್ತು ರಕ್ಷಿತಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಮತ್ತೊಂದೆಡೆ ಚಾಲೆಂಜ್ ಮಾಡಿರುವ ವ್ಯಕ್ತಿ ತಾನು ನುಡಿದಂತೆ ನಡೆದಿದ್ದಾರೆ.

ಗಿಲ್ಲಿ ಗೆದ್ದರೆ ಅರ್ಧ ಗಡ್ಡ ಮತ್ತು ಮೀಸೆ ತೆಗೆಯುತ್ತೇನೆಂದು ಚಾಲೆಂಜ್‌ ಮಾಡಿದ್ದ ವ್ಯಕ್ತಿಯೊಬ್ಬರು ತಾನು ಹೇಳಿದಂತೆ ಮಾಡಿದ್ದಾರೆ. ಅಬ್ದುಲ್ ರಜಾಕ್ ಎಂಬ ವ್ಯಕ್ತಿ ಈ ಸವಾಲು ಹಾಕಿದ್ದರು. ಗಿಲ್ಲಿ ಗೆಲುವು ದಾಖಲಿಸುತ್ತಿದ್ದಂತೆ, ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆದಿದ್ದಾರೆ. ಇದನ್ನು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಒಂದು ವೇಳೆ ಗಿಲ್ಲಿ ಬಿಗ್‌ ಬಾಸ್‌ನಲ್ಲಿ ವಿನ್ನರ್‌ ಆದ್ರೆ ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆಯುತ್ತೇನೆಂದು ಚಾಲೆಂಜ್‌ ಮಾಡಿದ್ದೆ. ಅವರು ಗೆದ್ದಿದ್ದಾರೆ. ಗಿಲ್ಲಿನ ಫ್ಯಾನ್ಸ್‌ ಗೆಲ್ಲಿಸಿದ್ದಾರೆ. ಅದಕ್ಕಾಗಿ ಗಡ್ಡ, ಮೀಸೆ ತೆಗೆಯುತ್ತಿದ್ದೇನೆ ಎಂದು ವೀಡಿಯೋದಲ್ಲಿ ವ್ಯಕ್ತಿ ಹೇಳಿದ್ದಾರೆ.

ಇದನ್ನೂ ಓದಿ : ‘ನಿಮ್ಮನ್ನು ಕಳಿಸಿಯೇ ನಾನು ಹೋಗೋದು’; ಅಶ್ವಿನಿ ವಿರುದ್ಧ ರಕ್ಷಿತಾ ಹಾಕಿದ್ದ ಸವಾಲು ಕೊನೆಗೂ ನಿಜವಾಯ್ತು!

ಬಿಗ್ ಬಾಸ್ ಸೀಸನ್ 12ಕ್ಕೆ ಅದ್ದೂರಿ ತೆರೆ ಬಿದ್ದಿದೆ. ಗಿಲ್ಲಿ ನಟ ಈ ಬಾರಿಯ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಅವರಿಗೆ ಬರೋಬ್ಬರಿ 40 ಕೋಟಿಗೂ ಅಧಿಕ ವೋಟ್ ಸಿಕ್ಕಿರೋದು ವಿಶೇಷ. ಕರಾವಳಿಯ ರಕ್ಷಿತಾ ರನ್ನರ್ ಅಪ್ ಆಗಿದ್ದಾರೆ. ಅಶ್ವಿನಿ ಗೌಡ  ಎರಡನೇ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿಗೆ 50 ಲಕ್ಷ ರೂಪಾಯಿ ಕ್ಯಾಶ್‌ ಪ್ರೈಸ್‌ ಜೊತೆ ಭರ್ಜರಿ ಗಿಫ್ಟ್‌  ಸಿಕ್ಕಿದೆ. ಮಾರುತಿ ಸುಜುಕಿ ವಿಕ್ಟೋರಿಸ್‌ ಕಾರು ಉಡುಗೊರೆಯಾಗಿ ಕೊಡಲಾಗಿದೆ.  ಸುದೀಪ್ ಕಡೆಯಿಂದ ಗಿಲ್ಲಿಗೆ 10 ಲಕ್ಷ ರೂಪಾಯಿ ಸಿಗುತ್ತಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page