Connect with us

LATEST NEWS

ದಿನ ಭವಿಷ್ಯ: ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ

Published

on

2025 ಜೂನ್ 29ರ ಭಾನುವಾರವಾದ ಇಂದು, ಚಂದ್ರನ ಸಂಚಾರ ಸಿಂಹ ರಾಶಿಯಲ್ಲಿ ಇರುತ್ತದೆ. ಇದರ ಮೇಲೆ, ಶುಕ್ರನು ವೃಷಭ ರಾಶಿಯಲ್ಲಿ ಸಾಗುತ್ತಾನೆ. ಇದರಿಂದಾಗಿ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತದೆ. ಇದಲ್ಲದೆ, ಲಕ್ಷ್ಮಿ ಯೋಗದ ಕಾಕತಾಳೀಯತೆಯೂ ಇರುತ್ತದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಮೇಷ: ಎಲ್ಲಿಂದ ಆರಂಭಿಸುವುದೆಂಬ ಗೊಂದಲ. ಚಪಲ ಮನಸ್ಸಿನ ನಿಯಂತ್ರಕ್ಕೆ ಯತ್ನ. ವೀರಮವಾಗಿರುದರಿಂದ ಸ್ವಂತ ಕಾರ್ಯಗಳತ್ತ ಗಮನ. ಅತ್ಮೀಯರೊಬ್ಬರಿಂದ ವ್ಯವಹಾರ ಸಂಬಂಧ ಅಮೂಲ್ಯ ಮಾಹಿತಿ.

ವೃಷಭ: ಇಂದು ವೃಷಭ ರಾಶಿಯವರಿಗೆ ಇಂದು ಚಂಚಲ ಮನಸ್ಸು ಇರುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವ್ಯಾಪಾರದಲ್ಲಿ ಉತ್ತಮ ಲಾಭವಿರುತ್ತದೆ ಮತ್ತು ಕೆಲವು ಉದ್ಯಮಿಗಳು ವ್ಯಾಪಾರದಲ್ಲಿ ಬೆಳವಣಿಗೆಯನ್ನು ಕಾಣುತ್ತಾರೆ. ಲಾಭದ ಅವಕಾಶವಿರುತ್ತದೆ. ನೀವು ವ್ಯಾಪಾರಕ್ಕಾಗಿ ಬೇರೆ ಯಾವುದಾದರೂ ಸ್ಥಳಕ್ಕೆ ಹೋಗಬಹುದು. ಪ್ರಯಾಣದ ಸಾಧ್ಯತೆಗಳಿವೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. . ಇಂದು, ನಿಮ್ಮ ಸಂಗಾತಿಯಿಂದ ಬೆಂಬಲವನ್ನು ಪಡೆಯುತ್ತೀರಿ. ಆದರೆ, ಕುಟುಂಬದ ಜವಾಬ್ದಾರಿಗಳು ಸಹ ಹೆಚ್ಚಾಗುತ್ತವೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆದರೆ ವೆಚ್ಚಗಳು ಹೆಚ್ಚಾಗಬಹುದು. ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ.

ಮಿಥುನ: ಇಂದು ವಿಷಯಗಳು ನಿಮ್ಮ ಪರವಾಗಿ ತಿರುಗಿಕೊಳ್ಳಲು ನೀವು ಬುದ್ಧಿವಂತರಾಗಿರಬೇಕು. ಇದು ಸಂದರ್ಶನವನ್ನು ಪೂರ್ಣಗೊಳಿಸುವ ವಿಷಯವಾಗಿರಬಹುದು ಅಥವಾ ವ್ಯವಹಾರ ಒಪ್ಪಂದಕ್ಕೆ ಪ್ರವೇಶಿಸುವ ವಿಷಯವಾಗಿರಬಹುದು. ಇಂದು ಕೆಲವು ಹಣಕಾಸಿನ ಬಾಕಿಗಳು ಬರಬಹುದು, ಅದು ನಿಮಗೆ ಮಾನಸಿಕ ಒತ್ತಡವನ್ನುಂಟುಮಾಡಬಹುದು.

ಕರ್ಕಾಟಕ ರಾಶಿ: ಇದು ಸ್ನೇಹ ಅಥವಾ ಸಂಬಂಧವನ್ನು ಕೊನೆಗೊಳಿಸುವುದರಿಂದ ನಿಮ್ಮನ್ನು ಉಳಿಸಬಹುದು. ಕೌಟುಂಬಿಕ ವಿವಾದಗಳು ಉದ್ವಿಗ್ನತೆಗೆ ಕಾರಣವಾಗಬಹುದು, ಆದ್ದರಿಂದ ನಿಮ್ಮ ಸ್ಥಳದಲ್ಲಿ ಆರೋಗ್ಯಕರ ಮತ್ತು ಹಗುರವಾದ ವಾತಾವರಣವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಂಬಂಧದಲ್ಲಿ ನಂಬಿಕೆ ಮತ್ತು ನಿಷ್ಠೆಯ ಅಂಶವನ್ನು ತರಲು ಪ್ರಯತ್ನಿಸಿ. ಇಂದು ಆರ್ಥಿಕ ಬಿಕ್ಕಟ್ಟುಗಳು ನಿಮ್ಮನ್ನು ಆವರಿಸಿಕೊಳ್ಳಬಹುದು, ಆದ್ದರಿಂದ ನಿಮ್ಮ ಜೇಬಿನ ಮೇಲೆ ಹಿಡಿತ ಸಾಧಿಸಿ ಮತ್ತು ಅತಿಯಾಗಿ ಖರ್ಚು ಮಾಡುವುದನ್ನು ತಪ್ಪಿಸಿ.

ಸಿಂಹ ರಾಶಿ: ರಾಶಿ ಚಕ್ರದ ಐದನೇ ರಾಶಿಯವರಿಗೆ ಮಿಶ್ರಫಲ. ನಿಮ್ಮ ಬಳಿ ಹಣ, ವ್ಯವಸ್ಥೆ, ಜನ, ಎಲ್ಲವೂ ಇದ್ದರೂ ಅಳು ಮಾತ್ರ ನಿಮ್ಮನ್ನು ಬಿಡದೇ ತಡೆದು ನಿಲ್ಲಿಸುವುದು. ವಿರೋಧಿಗಳ ನಡೆಯೇ ನೀವು ನಿಮ್ಮ ನಡೆಯನ್ನು ಬಿಡಲು ಒಪ್ಪುವುದಿಲ್ಲ. ಮನಃಸ್ಥಿತಿಯನ್ನು ಸಮತೋಲನವಾಗಿಡಲು ನಿಮಗೆ ಕಷ್ಟವಾದೀತು. ನಿಮ್ಮ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವುದು ಕಷ್ಟವಾಗುವುದು. ಸಹೋದರಿಯ ಮಾತನಲ್ಲಿ ನಿಮಗೆ ಕುಹಕವಿರುವುದು ಗೊತ್ತಾಗಿ ಜಗಳವಾಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಇಚ್ಛಿಸುವಿರಿ. ನಿಮ್ಮ ಕೆಲಸದಲ್ಲಿರುವ ಒತ್ತಡ ತಾನಾಗಿಯೇ ತಗ್ಗಿದ ಅನುಭವವಾಗುವುದು.

ಕನ್ಯಾ ರಾಶಿ: ಜುಲೈ ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭ. ಮಾಡಬೇಕಾದ ಕೆಲಸಗಳಿಗೆ ಯಾರಿಂದಲಾದರೂ ಅನಿರೀಕ್ಷಿತ ಸಹಾಯ ಲಭ್ಯವಾಗಲಿದೆ. ನೀವು ದುಃಖದ ಅನಂತರ ಸುಖವಿದೆ ಎಂಬ ಕಾರಣಕ್ಕೆ ಎಲ್ಲ ನೋವನ್ನೂ ಸಹಿಸಿಕೊಳ್ಳುವಿರಿ. ನಿಮ್ಮ ಮನೋಭಾವಕ್ಕೆ ಬೆಂಬಲವೂ ಸಿಗುವುದು. ಕಷ್ಟಗಳು ಹಾಗೆಯೇ ಇದ್ದರೂ ಅದು ಅನುಭವಕ್ಕೆ ಬಾರದು. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆಯಬೇಕಾದೀತು. ಸಂಸಾರದಲ್ಲಿ ಸಾರವಿಲ್ಲ ಎನ್ನಿಸಬಹುದು. ಭೂಮಿಯ ವ್ಯವಹಾರವು ಅಲ್ಪ‌ಮಟ್ಟಿಗೆ ಲಾಭ ಮಾಡುವುದು. ಕಾನೂನಿನ ಮಾರ್ಗದಲ್ಲಿ ನಿಮ್ಮ ಎಲ್ಲ‌ ಕೆಲಸಗಳೂ ಇರಲಿ.

ತುಲಾ ರಾಶಿ: ಯೋಜನೆಗಳು ಕಾರ್ಯಗತಗೊಳ್ಳುವುದರ ಬಗ್ಗೆ ಶನೈಶ್ಚರನ ಆರಾಧನೆ ಮಾಡುವುದು ಉತ್ತಮ. ಕೆಲಸಗಳಿಗಾಗಿ ಓಡಾಟ ನಡೆಸುವಿರಿ. ನೀವು ಮೌನರಾಗಿದ್ದರೆ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ.

ವೃಶ್ಚಿಕ ರಾಶಿ: ಕುಟುಂಬದಿಂದ ಬೆಂಬಲ ಸಿಗಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. ವಾಹನ ಸೌಕರ್ಯ ಹೆಚ್ಚಲಿದೆ. ಯಾವುದೇ ರೀತಿಯ ಆತುರವನ್ನು ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಸಮಯ. ಇಂದು, ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.

ಧನು ರಾಶಿ: ಇಂದು ನಿಮಗೆ ಶಾಂತ ದಿನ. ನಿಮ್ಮ ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ. ನಿಮ್ಮ ಆಸೆಗಳು ಮತ್ತು ಆಕಾಂಕ್ಷೆಗಳು ನಿಮ್ಮ ಏಕತಾನತೆಯ ದಿನಕ್ಕೆ ಸ್ವಲ್ಪ ಜೀವ ತುಂಬುತ್ತವೆ. ಕುಟುಂಬ ಸದಸ್ಯರ ಬೆಂಬಲವು ನಿಮ್ಮನ್ನು ಇನ್ನಷ್ಟು ಶ್ರಮಿಸಲು ಪ್ರೇರೇಪಿಸುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು, ಆದರೆ ಔಷಧಿಗಳು ಎಲ್ಲವನ್ನೂ ಗುಣಪಡಿಸುತ್ತವೆ.

ಮಕರ ರಾಶಿ: ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಅಶುಭ. ಲೆಕ್ಕಾಚಾರದ ವಿಷಯದಲ್ಲಿ ನೀವು ಹಿಂದುಳಿದಿರುವುದು ಎಲ್ಲರಿಗೂ ಗೊತ್ತಾಗುವುದು. ಕುಟುಂಬದ ಭಿನ್ನಾಭಿಪ್ರಾಯವನ್ನು ನೀವೇ ಪರಿಹರಿಸಿಕೊಳ್ಳಿ. ನಿಮ್ಮ ಮೇಲಿನ ಗೌರವ ಹಾಗು ಪ್ರೀತಿಯು ಇತರರಿಗೆ ಹೆಚ್ಚಾಗಬಹುದು. ಪ್ರಯಾಣದಲ್ಲಿ ಸುಖವಿರಲಿದೆ. ದಾಂಪತ್ಯದಲ್ಲಿ ಸಣ್ಣ ಮನಸ್ತಾಪಗಳು ಬಂದರೂ ಅಲ್ಲಿಯೇ ಶಾಂತವಾಗುವುದು. ಧಾರ್ಮಿಕ ಆಸಕ್ತಿಯು ಇಂದು ಕಡಿಮೆ ಇರಲಿದೆ. ವಿದ್ಯಾರ್ಥಿಗಳು ಗೊಂದಲವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುವಿರಿ.

ಕುಂಭ ರಾಶಿ: ಈ ತಿಂಗಳ ಮೊದಲ ವಾರದಲ್ಲಿ ನಿಮಗೆ ಶುಭ. ಶತ್ರುಗಳನ್ನು ಗೆಲ್ಲುವ ಸಾಧ್ಯತೆ ಇದೆ. ನಿಮ್ಮ ಮಾತಿನಿಂದ ಇನ್ನೊಬ್ಬರಿಗೆ ಬೇಸರಗವಾಗಲಿದ್ದು ಗೊತ್ತಾದ ಕೂಡಲೆ ಅದನ್ನು ನಿಲ್ಲಿಸಿ. ನಿಯಮ ಉಲ್ಲಂಘನೆ‌ ಮಾಡಿ ದಂಡ ತುಂಬುವಿರಿ. ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವುದನ್ನು ಮಾಡುವಿರಿ. ಉದ್ಯೋಗದಿಂದ‌‌ ಕೆಲವರನ್ನು ಕೈ ಬಿಡುವಿರಿ. ನಿಮಗೆ ಸಿಗುವ ಅವಕಾಶಗಳು ಬೇರೆಯವರ ಪಾಲಾಗಬಹುದು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಮನೆಯವರ ಮಾತು ಉತ್ಸಾಹ ಭಂಗವನ್ನು ಮಾಡುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಸಹಾಯವನ್ನು ನೀವು ಕೇಳುವಿರಿ. ಒಬ್ಬೊಂಟಿಯಾಗಿರುವುದು ನಿಮಗೆ ಕಷ್ಟವಾದೀತು.

ಮೀನ ರಾಶಿ: ಇಂದು ಮನಸ್ಸಿನಲ್ಲಿ ಏರಿಳಿತಗಳು ಕಂಡುಬರುತ್ತವೆ. ನೀವು ಆರ್ಥಿಕವಾಗಿ ಸ್ವಲ್ಪ ತೊಂದರೆಗೊಳಗಾಗುತ್ತೀರಿ ಆದರೆ ದಿನದ ಕೊನೆಯಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ವಾಹನ ಸೌಕರ್ಯವೂ ಹೆಚ್ಚಾಗಬಹುದು. ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ದಿನವಾಗಿದೆ. ಮಾತಿನಲ್ಲಿ ಸೌಮ್ಯತೆ ಇರುತ್ತದೆ. ವ್ಯಾಪಾರ ಮಾಡುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಆಸ್ತಿಯಲ್ಲಿ ಯಾವುದೇ ಹಳೆಯ ಹೂಡಿಕೆಯು ನಿಮ್ಮ ಆರ್ಥಿಕ ಪರಿಸ್ಥಿತಿಗಳನ್ನು ಬಲಪಡಿಸುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಹಸುವಿಗೆ ಹಸಿರು ಮೇವನ್ನು ನೀಡಿ.

LATEST NEWS

ಧಾರವಾಡದಲ್ಲಿ ಒಂದೇ ದಿನ ಇಬ್ಬರು ಪೊಲೀಸರು ಸಾ*ವು

Published

on

ಮಂಗಳೂರು/ಧಾರವಾಡ : ಧಾರವಾಢ ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ಪೊಲೀಸರು ಮೃ*ತಪಟ್ಟಿದ್ದಾರೆ. ಎಎಸ್‌ಐ  ಒಬ್ಬರು ಹೃದಯಾ*ಘಾತದಿಂದ  ಸಾ*ವನ್ನಪ್ಪಿದ್ದು, ಹೆಡ್ ಕಾನ್ಸ್ಟೇಬಲ್ ಒಬ್ಬರು ಅನಾರೋಗ್ಯದಿಂದ ಮೃ*ತಪಟ್ಟಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆಯ ಎಎಸ್‌ಐ ಚಂದ್ರಕಾಂತ ಹುಟಗಿ ಹೃದಯಾ*ಘಾತದಿಂದ ಸಾ*ವನ್ನಪ್ಪಿದ್ದಾರೆ. ಪೊಲೀಸ್ ಠಾಣೆಯಿಂದ ಮನೆಗೆ ವಿಶ್ರಾಂತಿಗೆ ತೆರಳಿದ್ದ  ಅವರಿಗೆ ಹೃದಯಾಘಾತವಾಗಿದೆ. ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ : ಮದುವೆಗೆ ಕೇವಲ ಒಂದು ಗಂಟೆ ಮೊದಲು ವಧುವನ್ನು ಕೊಂದ ವರ!

ಮತ್ತೊಂದೆಡೆ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎನ್.ಬಿ ಭಜಂತ್ರಿ ಬಹು ಅಂಗಾಗ ವೈಫಲ್ಯದಿಂದ ಮೃ*ತಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾ*ವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

 

Continue Reading

DAKSHINA KANNADA

ಅದ್ದೂರಿಯಾಗಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ

Published

on

ಮಂಗಳೂರು :  72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕರಾವಳಿ ಉತ್ಸವ ಮೈದಾನದಲ್ಲಿ ಇಂದು(ನ.16) ಅದ್ದೂರಿಯಾಗಿ ನಡೆಯಿತು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ , ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್ ಗಳು, ಸೌಹಾರ್ದ ಸಹಕಾರ ಸಂಘಗಳು ಹಾಗೂ ಎಲ್ಲಾ ವಿಧದ ಸಹಕಾರ ಸಂಘಗಳು ಮತ್ತು ಸಹಕಾರ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಬಲಪಡಿಸುವುದು’ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಸಹಕಾರ ಸಪ್ತಾಹವನ್ನು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಉದ್ಘಾಟಿಸಿದರು.

ಬಳಿಕ ಅವರು  ಮಾತನಾಡಿ, ಸಹಕಾರ ಕ್ಷೇತ್ರವು ಶಕ್ತಿ ಇಲ್ಲದವರಿಗೆ ಶಕ್ತಿ ಹಾಗೂ ಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ರಂಗವು ಈ ದಿಶೆಯಲ್ಲಿ ಶ್ಲಾಘನೀಯ ಕೆಲಸ ಮಾಡಿದೆ. ಕರಾವಳಿ ಭಾಗದ ಸಾಕಷ್ಟು ಮಂದಿ ಮಹಿಳೆಯರು ಸ್ವ- ಸಹಾಯ ಸಂಘಗಳ ಮೂಲಕ ಸ್ವಾವಲಂಬಿಗಳಾಗಿದ್ದಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬಿದೆ. ಶಿಕ್ಷಣ ಮತ್ತು ಇತರ ಕೆಲವು ಕ್ಷೇತ್ರಗಳಿಗೆ ಸಾಲ ಸೌಲಭ್ಯ ನೀಡಲು ವಾಣಿಜ್ಯ ಬ್ಯಾಂಕುಗಳು ಹಿಂದೇಟು ಹಾಕಿದಾಗ ಸಹಕಾರಿ ಬ್ಯಾಂಕು ಮುಂದೆ ಬಂದು ಸಾಲ ಒದಗಿಸಿ ಸಹಕರಿಸಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಗಾರ್ಮೆಂಟ್ ಫ್ಯಾಕ್ಟರಿಯನ್ನು ಆರಂಭಿಸಿ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಲಿ ಎಂದು ಸಲಹೆ ಮಾಡಿದರು.

ವಸ್ತು ಪ್ರದರ್ಶನ ಮಳಿಗೆ ಜಿ.ಟಿ. ದೇವೇಗೌಡ ಉದ್ಘಾಟನೆ :

ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ವಸ್ತು ಪ್ರದರ್ಶನ ಮಳಿಗೆಗಳನ್ನು ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ. ದೇವೇಗೌಡ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಸಹಕಾರಿ ಕ್ಷೇತ್ರವನ್ನು ಭದ್ರವಾಗಿ ಉಳಿಸಿದ ಕೀರ್ತಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲುತ್ತದೆ. ಇಲ್ಲಿ ಸಹಕಾರಿ ತತ್ವಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಂತಹ ಚುರುಕು ಮತಿಯ ಜನರಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದರು.

ಹಳ್ಳಿ ಹಳ್ಳಿಗಳಿಗೆ ಹೋಗಿ ಸೇವೆ : ಎಂ.ಎನ್.ಆರ್

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ। ಎಂ.ಎನ್.ರಾಜೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಬ್ಯಾಂಕುಗಳ ತವರೂರು. ವಿಪರ್ಯಾಸವೆಂದರೆ ಜಿಲ್ಲೆಯಲ್ಲಿ ಹುಟ್ಟಿದ ವಾಣಿಜ್ಯ ಬ್ಯಾಂಕುಗಳು ವಿಲೀನಗೊಂಡು ನೆಲೆ ಕಳೆದುಕೊಳ್ಳುತ್ತಿವೆ. ಆದರೆ, ಸಹಕಾರಿ ಬ್ಯಾಂಕುಗಳು ಹಳ್ಳಿ ಹಳ್ಳಿಗಳಿಗೆ ಹೋಗಿ ಸೇವೆ ಒದಗಿಸುತ್ತಿವೆ. ವಾಣಿಜ್ಯ ಬ್ಯಾಂಕುಗಳಿಗೆ ಮಹಿಳೆಯರು ಹೋದರೆ ವರ್ಷ ಕಳೆದರೂ ಸಾಲ ಸಿಗುತ್ತಿಲ್ಲ. ಆದರೆ ಸಹಕಾರಿ ಬ್ಯಾಂಕುಗಳಿಗೆ ಹೋದರೆ ಅರ್ಧ ದಿನದ ಒಳಗೆ ಸಾಲ ಕೊಡುವ ವ್ಯವಸ್ಥೆ ನಮ್ಮಲ್ಲಿದೆ. ಹಾಗಾಗಿ ಸಹಕಾರಿ ಸಂಸ್ಥೆಗಳು ಜನರ ವಿಶ್ವಾಸಕ್ಕೆ ಪಾತ್ರವಾಗಿವೆ ಎಂದರು.

ಪ್ರಶಸ್ತಿ ಪ್ರದಾನ :

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಸಹಕಾರಿ ಸಂಸ್ಥೆಗಳಿಗೆ ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ, ಎರಡು ಉತ್ತಮ ಸಹಕಾರಿ ಸಂಸ್ಥೆಗಳಿಗೆ ಮತ್ತು ಮಹಿಳಾ ಸಹಕಾರಿ ಬ್ಯಾಂಕುಗಳಿಗೆ ಪ್ರಶಸ್ತಿ ವಿತರಣೆ, ನಂದಿನಿಯ ಎರಡು ಹೊಸ ಉತ್ಪನ್ನಗಳ ಬಿಡುಗಡೆ, ಸಹಕಾರ ಶಿಕ್ಷಣ ನಿಧಿಯ ಅರ್ಪಣೆ, ಸ್ಮರಣ ಸಂಚಿಕೆ ಮತ್ತು ಸಹಕಾರಿ ಪತ್ರಿಕೆ ಬಿಡುಗಡೆ ನೆರವೇರಿತು.

ಇದನ್ನೂ ಓದಿ : 72ನೇ ಅಖಿಲ ಭಾರತ ಸಹಕಾರ ಸಪ್ತಾಹ : ಆಕರ್ಷಕ ಮೆರವಣಿಗೆ

ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಯಶ್ ಪಾಲ್‌ ಸುವರ್ಣ, ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ ಮತ್ತು ಐವನ್ ಡಿ’ಸೋಜಾ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ, ನಬಾರ್ಡ್ ಜನರಲ್ ಮ್ಯಾನೇಜರ್ ಡಾ. ಸುರೇಂದ್ರ ಬಾಬು, ಕರ್ನಾಟಕ ರಾಜ್ಯ ಸಹಕಾರ ಸಂಘಗಳ  ನಿಬಂಧಕ ಟಿ.ಎಚ್.ಎಂ. ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ವ್ಯವಸ್ಥಾಪಕ ನಿರ್ದೇಶಕ ಲಿಂಗರಾಜ್, ಸಹಕಾರ ಸಂಘಗಳ ಜಂಟಿ ನಿಬಂಧಕ ಮೈಸೂರು ಪ್ರಾಂತ್ಯದ ಪ್ರಸಾದ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ಉಪ ನಿಬಂಧಕ ರಮೇಶ್ ಎಚ್.ಎನ್., ಉಡುಪಿ ಜಿಲ್ಲೆಯ ಉಪ ನಿಬಂಧಕರಾದ ಲಾವಣ್ಯ, ಎಸ್.ಸಿ.ಡಿ.ಸಿ.ಸಿ.  ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಗೋಪಾಲಕೃಷ್ಣ ಭಟ್, ನವೋದಯ ಟ್ರಸ್ಟ್ ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪೂರ್ಣಿಮಾ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.

 

Continue Reading

DAKSHINA KANNADA

72ನೇ ಅಖಿಲ ಭಾರತ ಸಹಕಾರ ಸಪ್ತಾಹ : ಆಕರ್ಷಕ ಮೆರವಣಿಗೆ

Published

on

ಮಂಗಳೂರು : ‘ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಬಲಪಡಿಸುವುದು’  ಎಂಬ ಧ್ಯೇಯ ವಾಕ್ಯದೊಂದಿಗೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಇಂದು ನಡೆಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಮೊದಲು ಕೊಡಿಯಾಲ್‌ ಬೈಲಿನ  ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಿಂದ ಕರಾವಳಿ ಉತ್ಸವ ಮೈದಾನ ತನಕ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಗೆ  ರಾಜ್ಯ ವಿಧಾನ ಸಭೆಯ ಸ್ಪೀಕರ್‌ ಯು.ಟಿ. ಖಾದರ್ ಚಾಲನೆ ನೀಡಿದರು.

ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್ .ರಾಜೇಂದ್ರ ಕುಮಾರ್, ಸಹಕಾರಿ ಮಹಾಮಂಡಲದ ಅಧ್ಯಕ್ಷ ಜಿ.ಟಿ. ದೇವೇಗೌಡ, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ನಬಾರ್ಡ್ ಜನರಲ್ ಮ್ಯಾನೇಜರ್ ಡಾ. ಸುರೇಂದ್ರ ಬಾಬು ಮತ್ತಿತರರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ 45ಕ್ಕೂ ಅಧಿಕ ಟ್ಯಾಬ್ಲೋ, ಡೊಳ್ಳು, ಕುಣಿತ, ಕಂಗೀಲು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕಲಾ ತಂಡಗಳು ಭಾಗವಹಿಸಿದ್ದವು.

ಸಹಕಾರ ಬಂಧುಗಳು ಹಾಗೂ ಸ್ವಸಹಾಯ ಗುಂಪಿನ ಸದಸ್ಯರು ಪಾಲ್ಗೊಂಡಿದ್ದರು. ಸಹಕಾರ ರಥ, ಘಟೋತ್ಕಜ, ಚೆಂಡೆ, ಕೊಂಬು, ಸಹಕಾರಿ ಬಣ್ಣದ ಕೊಡೆಗಳು, ಭುವನೇಶ್ವರಿ ದೇವಿಯ ಸ್ತಬ್ಧಚಿತ್ರ, ಪುರುಷರ ಹಾಗೂ ಮಹಿಳೆಯರ ಡೊಳ್ಳು ಕುಣಿತ, ಮೊಳಹಳ್ಳಿ ಶಿವರಾವ್ ಸ್ತಬ್ಧಚಿತ್ರ, ಮಹಿಳೆಯರ ವೀರಗಾಸೆ, ಹೈನುಗಾರಿಕೆ ಸ್ತಬ್ಧಚಿತ್ರ, ಮೀನುಗಾರಿಕೆ ಸ್ತಬ್ಧಚಿತ್ರ, ಹೊನ್ನಾವರ ಬ್ಯಾಂಡ್ , ಕೆಎಂಎಫ್ – ನಂದಿನಿ ಆನ್ ವ್ಹೀಲ್ ಸ್ತಬ್ಧಚಿತ್ರ, ಸುಗ್ಗಿ ಕುಣಿತ, ತುಳುನಾಡು ವೈಭವ ಸ್ತಬ್ಧಚಿತ್ರ, ನವೋದಯ ಪ್ರಚಾರ ವಾಹನ, ಪುರವಂತಿಗೆ, ಗ್ರಾಮೀಣ ಬ್ಯಾಂಕಿಂಗ್ ಚಟುವಟಿಕೆಯ ಸ್ತಬ್ಧಚಿತ್ರ, ಚೆಂಡೆ ವಾಹನ, ಸೋಮನ ಕುಣಿತ, ಪಟ್ಟದ ಕುಣಿತ, ಶಿವನ ಮೂರ್ತಿಯ ಸ್ತಬ್ಧಚಿತ್ರ, ನವೋದಯ ಗುಂಪಿನ ಸಭೆ ನಡೆಸುವ ಸ್ತಬ್ಧಚಿತ್ರ, ಗೊರವರ ಕುಣಿತ, ಪ್ರಾಥಮಿಕ ಪತ್ತಿನ ಸಂಘದ ಸ್ತಬ್ಧಚಿತ್ರ, ಕೃಷಿ ಚಟುವಟಿಕೆಯ ಸ್ತಬ್ಧಚಿತ್ರ, ಉಳುಮೆ ಮಾಡುವ ರೈತನ ಸ್ತಬ್ಧಚಿತ್ರ, ಎಸ್ ಸಿಡಿಸಿಸಿ ಬ್ಯಾಂಕ್ ನ ಮೊಬೈಲ್ ಬ್ಯಾಂಕ್ ವಾಹನ ಮತ್ತಿತರ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು.

Continue Reading
Advertisement

Trending

Copyright © 2025 Namma Kudla News

You cannot copy content of this page