Connect with us

DAKSHINA KANNADA

ಪಿಲಿಕುಳದ ರಾಜ ಹುಲಿ ವಿಕ್ರಂ(21) ಇನ್ನಿಲ್ಲ…!

Published

on

ಪಿಲಿಕುಳದ ರಾಜ ಹುಲಿ ವಿಕ್ರಂ(21) ಇನ್ನಿಲ್ಲ…!

ಮಂಗಳೂರು : ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿದ್ದ ರಾಜ ಹುಲಿ ‘ವಿಕ್ರಂ ‘ ಇಹಲೋಕ ತ್ಯಜಿಸಿದ್ದಾನೆ. 21 ವರ್ಷದ ವಿಕ್ರಂ ಪಿಲಿಕುಳದ ಅತೀ ಹಿರಿಯ ಹುಲಿಯಾಗಿತ್ತು.

ವಯೋಸಹಜ ಕಾಯಿಲೆಯಿಂದ ವಿಕ್ರಂ ಮೃತಪಟ್ಟಿದೆ ಎಂದು ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2003 ರಲ್ಲಿ ಶಿವಮೊಗ್ಗ ತಾವರೆ ಕೊಪ್ಪದಿಂದ ಈ ಹುಲಿಯನ್ನು ಪಿಲಿಕುಳ ನಿಸರ್ಗಧಾಮಕ್ಕೆ ತರಲಾಗಿತ್ತು.

ಪ್ರಸ್ತುತ ಪಿಲಿಕುಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ವಿಕ್ರಂ ವಿಶೇಷ ಹಾವಭಾವದಿಂದ ಹೆಚ್ಚು ಜನಾಕರ್ಷಣೆಯ ಬಿಂದುವಾಗಿತ್ತು. ಅತೀ ಹೆಚ್ಚು ಚಟುವಟಿಕೆಯಿಂದ ಇರುತ್ತಿದ್ದ ವಿಕ್ರಂ ಕಳೆದ 5 ತಿಂಗಳುಗಳಿಂದ ವಯೋ ಸಹಜ ಕಾಯಿಗಳಾದ ವಾತಾ ಮತ್ತು ದೃಷ್ಟಿ ದೋಷದಿಂದ ಬಳಲುತ್ತಿತ್ತು.

ಈ ಹಿನ್ನೆಲೆಯಲ್ಲಿ ಹೊರಗಡೆ ಸುತ್ತಾಡಲು ಬಿಡದೆ ಒಳಗಡೆಯೇ ಆರೇಕೆ ಮಾಡಲಾಗುತ್ತಿತ್ತು. ಆದರೆ ಕಳೆದ 5 ದಿನಗಳಿಂದ ಏಕಾಏಕಿ ಆಹಾರವನ್ನು ತ್ಯಜಿಸಿದ್ದರಿಂದ ಅದಕ್ಕೆ ಸಿರಿಂಜ್ ಮೂಲಕ ಶಕ್ತಿವರ್ದನೆಗಾಗಿ ಗ್ಲೂಕೋಸ್ ಮತ್ತು ಇತರ ಮದ್ದುಗಳನ್ನು ನೀಡಿ ಜತನದಿಂದ ಆರೈಕೆಯನ್ನು ಮಾಡಲಾಗುತ್ತಿತ್ತು.

ಆದರೆ ಇಂದು ಬೆಳಿಗ್ಗೆ ವಿಕ್ರಂ ಇಹಲೋಕ ತ್ಯಜಿಸಿದ್ದಾನೆ. ಸಾಧಾರಣವಾಗಿ ಕಾಡಲ್ಲಿ ರುವ ಹುಲಿಗಳು 13 ರಿಂದ 15 ವರ್ಷಗಳ ಬದುಕಿದರೆ, ಮೃಗಾಲಗಳಲ್ಲಿ 16 ರಿಂದ 18 ವರ್ಷಗಳ ಕಾಲ ಬದುಕಿರುತ್ತದೆ.

ಆದರೆ ವಿಕ್ರಂ ಮಾತ್ರ 21 ವರ್ಷಗಳ ಕಾಲ ಬದುಕಿತ್ತು. ವನ್ಯ ಜೀವಿಗಳ ನಿರ್ವಹಣೆಯ ಮಾರ್ಗಸೂಚಿಗಳ ಪ್ರಕಾರ ಮೂವರು ವೈದ್ಯರುಗಳ ತಂಡ ವಿಕ್ರಂ ನ ಶವದ ಮಹಜರು ನಡೆಸಿ ಕೆಲವು ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ಪಿಲಿಕುಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

DAKSHINA KANNADA

ಪುತ್ತೂರು : 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

Published

on

ಪುತ್ತೂರು : ಷರತ್ತು ಬದ್ದ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೆ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಪುತ್ತೂರು ಕಸಬಾ ಗ್ರಾಮದ ಅಬ್ಬಾಸ್ ಆಲಿ ಅಲ್ತಾಫ್‌(55) ಬಂಧಿತ ಆರೋಪಿ.  ಮಂಗಳೂರು ಕುಲಶೇಖರ ಬಿಕರ್ನಕಟ್ಟೆ ಬಳಿ ಪುತ್ತೂರು ನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : NSUI ನಾಯಕನ ಮೇಲೆ ತಲವಾರು ದಾ*ಳಿ ಪ್ರಕರಣ; ಐವರು ಅರೆಸ್ಟ್

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 27ರ ವರೆಗೆ  ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Continue Reading

DAKSHINA KANNADA

ಲಕ್ಷ್ಮಣ ಮರಕಡರಿಗೆ ಯಕ್ಷ ಸವ್ಯಸಾಚಿ ಬಿರುದು ಪ್ರದಾನ

Published

on

ಮಂಗಳೂರು : ಶ್ರೀಕಟೀಲು ಮೇಳದ ಕಲಾವಿದ, ಯಕ್ಷ ಗುರು ಲಕ್ಷ್ಮಣ ಕುಮಾರ್ ಮರಕಡರಿಗೆ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀಭಗವದ್ಗೀತಾಮೃತ ಪುರಸ್ಕಾರದೊಂದಿಗೆ “ಯಕ್ಷ ಸವ್ಯ ಸಾಚಿ” ಬಿರುದು ನೀಡಿ ಗೌರವಿಸಲಾಯಿತು.

ಶ್ರೀ ಮದ್ ಭಗವದ್ಗೀತೆಯ  ಪ್ರಚಾರಕ, ಆಧ್ಯಾತ್ಮಿಕ ಗುರು ಸುಬ್ರಾಯ  ನಂದ್ಯೋಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಲಕ್ಷ್ಮಣ ಅವರು ಗಣೇಶ ಪುರ, ಸುರತ್ಕಲ್ ಸದಾಶಿವ ಮಹಾಗಣಪತಿ, ತಲಕಳ, ಬಪ್ಪನಾಡು, ಉಳ್ಳಾಲ ಚೀರುಂಭ ಭಗವತೀ , ಸಸಿಹಿತ್ಲು ಭಗವತಿ, ಎಡನೀರು ಮೇಳಗಳಲ್ಲಿ ತಿರುಗಾಟ ಮಾಡಿ ಕಟೀಲು  ಮೇಳದಲ್ಲಿ ಈಗ 7ನೇ ವರ್ಷದ  ತಿರುಗಾಟ ಮಾಡುತ್ತಿರುವ ನಿಷ್ಠಾವಂತ ಕಲಾಸಾಧಕ.

ಕಾಸರಗೋಡು ಮತ್ತು ಮಂಗಳೂರು ಪರಿಸರದಲ್ಲಿ ಯಕ್ಷಗಾನ ಶಿಕ್ಷಕನಾಗಿ ತರಗತಿ ನಡೆಸಿ ಸಮೃದ್ಧ ಶಿಷ್ಯ ಗಡಣ ಹೊಂದಿರುವ ಯಕ್ಷ ಗುರು.ಆಮೇರಿಕಾ, ಮಸ್ಕತ್, ಆಸ್ಟ್ರೇಲಿಯಾ, ದುಬೈ ದೇಶಗಳಲ್ಲಿ ಪುಂಡು, ಸ್ತ್ರೀ,ರಾಜವೇಷ,ಹಾಸ್ಯ, ಎದುರು ವೇಷಗಳೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ  ಅಪೂರ್ವ ಯಕ್ಷ ಕಲಾ ಸಾಧಕ ಎಂದು ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.

ಇದನ್ನೂ ಓದಿ : ಫೆ.21 ರಂದು ಕುದ್ರೋಳಿ ಕ್ಷೇತ್ರ ತೀರ್ಥಾಟನೆ

ಕಾರ್ಯಕ್ರಮದಲ್ಲಿ  ಯಕ್ಷಗಾನ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಕದ್ರಿ, ಡಾ.ಶಶಾಂಕ್ ಮತ್ತಿತ್ತರರು ಉಪಸ್ಥಿತರಿದ್ದರು. ಮೇಳದ ಎಲ್ಲಾ ಕಲಾವಿದರಿಗೆ ಸೇವಾಕರ್ತರಾದ ಗೀತಾ ಪ್ರಚಾರಕಿ ಸವಿತಾ ಕೊರಗಪ್ಪ ಅವರು ಅರ್ಥ ಸಹಿತ ಭಗವದ್ಗೀತೆಯನ್ನು ವಿತರಿಸಿದರು. ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಸೇವೆ ಬಯಲಾಟ ಜರುಗಿತು.

 

Continue Reading

DAKSHINA KANNADA

ಜಪ್ಪಿನಮೊಗರುವಿನಲ್ಲಿ 16ನೇ ವರ್ಷದ ಜಯ ವಿಜಯ ಕಂಬಳಕ್ಕೆ ಚಾಲನೆ

Published

on

ಮಂಗಳೂರು :  ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ 16 ನೇ ವರ್ಷದ ಹೊನಲು ಬೆಳಕಿನ ಜಯ ವಿಜಯ ಜೋಡುಕರೆ ಕಂಬಳಕ್ಕೆ ಇಂದು(ಫೆ.14) ಬೆಳಗ್ಗೆ ಚಾಲನೆ ದೊರೆತಿದೆ.

ಕೀರ್ತಿಶೇಷ ಜೆ. ಜಯಗಂಗಾಧರ ಶೆಟ್ಟಿ ಮೆನ್ನು ತೋಟಗುತ್ತು ಮತ್ತು ನಾಡಾಜೆಗುತ್ತು ಸ್ಮರಣಾರ್ಥಈ ಕಂಬಳ ನಡೆಯುತ್ತಿದೆ. ಕರಾವಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಗಣೇಶ್ ರಾವ್‌ ಅಧ್ಯಕ್ಷತೆಯಲ್ಲಿ ದೇರೆಬೈಲ್ ವಿಠಲದಾಸ ತಂತ್ರಿ ಅವರು 15 ನೇ ವರ್ಷದ ಜಯ ವಿಜಯ ಜೋಡುಕರೆ ಕಂಬಳವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಗೌರವ ಅಧ್ಯಕ್ಷ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕಂಬಳ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ತನ್ನಿಂದ ಸಾಧ್ಯವಿರುವ ಎಲ್ಲಾ ಸಹಕಾರ ನೀಡುತ್ತೇನೆ ಎಂದರು.

ಇದನ್ನೂ ಓದಿ : ಫೆ.21 ರಂದು ಕುದ್ರೋಳಿ ಕ್ಷೇತ್ರ ತೀರ್ಥಾಟನೆ

ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಜೆ. ಅನಿಲ್ ಶೆಟ್ಟಿ ಮನ್ನುತೋಟ, ಮಾರ್ಗದರ್ಶಕ ಸುಧಾಕರ ಶೆಟ್ಟಿ, ಕಟೀಲು ಕ್ಷೇತ್ರದ ಅನಂತಪದ್ಮನಾಭ ಆಸ್ರಣ್ಣ, ಬಿಜೆಪಿ ನಾಯಕ ಮೋನಪ್ಪ ಭಂಡಾರಿ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌, ಪ್ರವೀಣ್‌ಚಂದ್ರ ಆಳ್ವ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page