Connect with us

LATEST NEWS

ಚಾಮರಾಜನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ : ಮೂವರು ಸ್ಥಳದಲ್ಲೇ ಸಾವು..!

Published

on

ಚಾಮರಾಜನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ : ಮೂವರು ಸ್ಥಳದಲ್ಲೇ ಸಾವು..!

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಧನಗೆರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ಮತ್ತು ಗೂಡ್ಸ್ ವಾಹನ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗಿನ ಜಾವಾ ನಡೆದಿದೆ.

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಡೇವಿಡ್‍ ಪೆರಿಯನಾಯಗಮ್, ಶೇಷಾ, ಸೇಟು ಎಂಬುವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. .
ಸತ್ತೇಗಾಲ ಹಾಗೂ ಧನಗೆರೆ ಮುಖ್ಯರಸ್ತೆಯಲ್ಲಿ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬೈಕ್ ನಲ್ಲಿ ಮೂವರು ತೆರಳುತ್ತಿದ್ದರು. ಬೈಕ್ ಗೆ ಕೊಳ್ಳೇಗಾಲದಿಂದ ಸತ್ತೇಗಾಲದ ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ.

ಬೊಲೆರೋ ಚಾಲಕ ಅಜಾಗರೂಕತೆಯಿಂದ ಬೈಕ್ ಸವಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ವಿಷಯ ತಿಳಿದು ಡಿವೈಎಸ್ ಪಿ ನಾಗರಾಜು, ಸರ್ಕಲ್ ಇನ್‍ಸ್ಪೆಕ್ಟರ್ ಶ್ರೀಕಾಂತ್, ಗ್ರಾಮಾಂತರ ಎಸ್‍ಐ ಅಶೋಕ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಶವಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಿದರು.

ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

DAKSHINA KANNADA

ಕಡಬ : ಹಾಸ್ಟೆಲ್ ಮಕ್ಕಳ ಆಹಾರದಲ್ಲಿ ಹುಳ ಪತ್ತೆ

Published

on

ಕಡಬ : ಕಡಬ ತಾಲೂಕಿನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿದ ಮಂಗಳೂರು ಲೋಕಾಯುಕ್ತ ಪೊಲೀಸರ ತಂಡವು ಇಲ್ಲಿನ ಸರಕಾರಿ ಹಾಸ್ಟೆಲಿಗೆ ದಿಢೀರ್ ಭೇಟಿ ನೀಡಿದ್ದು,ತಪಾಸಣೆ ನಡೆಸಿದೆ.

ಕಡಬದ ಸರಕಾರಿ ಕಾಲೇಜು ಪಕ್ಕದಲ್ಲಿರುವ ಬಾಲಕರ ವಸತಿಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಈ ಹಿಂದಿನಿಂದಲೂ ಆರೋಪಗಳು ಕೇಳಿಬರುತ್ತಿದ್ದು,ಮಕ್ಕಳ ಪೊಷಕರಾಗಲೀ ಇತರ ಯಾರೊಬ್ಬರೂ ಈ ಬಗ್ಗೆ ದೂರು ನೀಡುವುದಾಗಲೀ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ಮಾಡುವುದಾಗಲೀ ಮಾಡುತ್ತಿರಲಿಲ್ಲ. ದ.ಕ. ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಇಲ್ಲಿಗಾಗಮಿಸಿ ತಪಾಸಣೆ ನಡೆಸಿದಾಗ ಅವ್ಯವಸ್ಥೆ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಮಂಗಳೂರು ಲೋಕಾಯುಕ್ತ ಎಸ್ಪಿ ಕುಮಾರ್‌ಚಂದ್ರ ಮತ್ತು ಡಿವೈಎಸ್‌ಪಿ ಗಾನಾ ಪಿ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಲೋಕಾಯುಕ್ತ ಸಿಬ್ಬಂದಿಗಳು ವಸತಿಗೃಹದಲ್ಲಿ ತಪಾಸಣೆ ನಡೆಸಿದ್ದು ಕಳಪೆ ಆಹಾರ ಪೂರೈಕೆ, ಸಿಸಿ ಕ್ಯಾಮರಾ ಸರಿಯಿಲ್ಲದ ವಿಚಾರ, ಮ್ಯಾಟ್ ಮಾರಾಟ ಆರೋಪ, ಸುರಕ್ಷತಾ ಸಿಬ್ಬಂದಿ ವಾರ್ಡನ್ ಇಲ್ಲದಿರುವುದು ಸೇರಿದಂತೆ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಮಕ್ಕಳಲ್ಲಿ ವಸತಿಗೃಹದ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ವಾರ್ಡನ್ ಸೇರಿದಂತೆ ಸಿಬ್ಬಂದಿಗಳು ಇಲ್ಲಿಗೆ ಬಾರದಿರುವ ಬಗ್ಗೆ ಮತ್ತು ಇಲ್ಲಿಗೆ ಬಂದಿರುವ ರಬ್ಬರ್ ಮ್ಯಾಟ್‌ಗಳಲ್ಲಿ ಸುಮಾರು 110 ಮ್ಯಾಟ್‌ಗಳು ಮಾರಾಟ ಮಾಡಿರುವ ಬಗ್ಗೆ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಮಕ್ಕಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಡುಗೆ ಸಾಮಾಗ್ರಿಗಳನ್ನು ಸಂಗ್ರಹಿಸಿದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆಹಾರ ಪದಾರ್ಥಗಳಲ್ಲಿ ಹುಳಗಳಿರುವುದನ್ನು ನೋಡಿದರು. ಹಾಜರಾತಿ ಪುಸ್ತಕದಲ್ಲಿ ಮಕ್ಕಳು ಮತ್ತು ಅಧಿಕಾರಿಗಳ ಸಹಿ ಇಲ್ಲದಿರುವ ಬಗ್ಗೆ ಮನಗಂಡರು.ಈ ಬಗ್ಗೆ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸುವುದಾಗಿ ಲೋಕಾಯುಕ್ತ ಎಸ್ಪಿ ಹೇಳಿದ್ದಾರೆ.

Continue Reading

LATEST NEWS

ಕೋವಿಡ್ ಸಂದರ್ಭದಲ್ಲಿ ವಿಧಿಸಿದ್ದ ನಿಷೇಧವನ್ನು ಐಪಿಎಲ್‌ನಲ್ಲಿ ತೆರವುಗೊಳಿಸುವ ಸಾಧ್ಯತೆ!

Published

on

ಮಂಗಳೂರು/ಮುಂಬೈ: ಇದೇ 22ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಳ್ಳಲಿದೆ. ಆದರೆ ಕೋವಿಡ್ ಸಂದರ್ಭದಲ್ಲಿ ವಿಧಿಸಿದ್ದ ಆ ಒಂದು ನಿಷೇಧವನ್ನು ಈ ಸೀಸನ್‌ನಲ್ಲಿ ತೆರವುಗೊಳಿಸುವ ಸಾಧ್ಯತೆ ಇದೆ.


ಹೌದು, 2022ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕೋವಿಡ್ ತಡೆ ಮಾರ್ಗಸೂಚಿಯನ್ನು ಜಾರಿ ಮಾಡಿತ್ತು. ಆ ಸಂದರ್ಭದಲ್ಲಿ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿತ್ತು. ನಿಯಮ ಉಲ್ಲಂಘಿಸಿದ ಆಟಗಾರನನ್ನು ವಜಾಗೊಳಿಸುವ ಶಿಕ್ಷೆಯನ್ನೂ ಪ್ರಕಟಿಸಿತ್ತು.

ಆದರೆ ಶನಿವಾರ (ಮಾ.22) ಶುರುವಾಗಲಿರುವ 18ನೇ ಸೀಸನ್‌ನ ಐಪಿಎಲ್‌ ಟೂರ್ನಿಯಲ್ಲಿ ಈ ನಿಷೇಧವನ್ನು ತೆರವುಗೊಳಿಸುವ ಸಾಧ್ಯತೆ ಇದೆ. ಗುರುವಾರ ಮುಂಬೈನಲ್ಲಿ ನಡೆಯಲಿರುವ ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಈ ಪ್ರಸ್ತಾವವನ್ನು ಬಿಸಿಸಿಐ ಸಿದ್ದವಾಗಿದೆ.

ಇದನ್ನೂ ಓದಿ: ಚಹಲ್-ಧನಶ್ರೀ ಡಿವೋರ್ಸ್ ನಾಳೆ ನಿರ್ಧಾರ… ಜೀವನಾಂಶ ಎಷ್ಟು ಕೋಟಿ ಗೊತ್ತಾ..?

ಒಂದೊಮ್ಮೆ ಐಪಿಎಲ್‌ನಲ್ಲಿ ಎಂಜಲು ಬಳಕೆಯು ಆರಂಭವಾದರೆ ಐಸಿಸಿಯು ತನ್ನ ನಿಯಮವನ್ನು ಸಡಿಲಗೊಳಿಸುವ ಕುರಿತು ಮರುಪರಿಶೀಲನೆ ನಡೆಸುವ ಸಾಧ್ಯತೆ ಹೆಚ್ಚಲಿದೆ. ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಅವರು ಎಂಜಲು ಬಳಕೆ ನಿಷೇಧ ತೆಗೆಯಬೇಕು ಎಂದು ಒತ್ತಾಯಿಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಬಳಸಲಾಗುವ ಕೆಂಪು ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಕೆ ಮುಖ್ಯವಾಗಿದೆ. ಅದರಿಂದ ವೇಗಿಗಳಿಗೆ ರಿವರ್ಸ್ ಸ್ಟಿಂಗ್ ಪ್ರಯೋಗವು ಸುಲಭವಾಗುತ್ತದೆ. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬಳಸಲಾಗುವ ಬಿಳಿ ಚೆಂಡಿಗೆ ಎಂಜಲು ಬಳಕೆಯಿಂದ ಹೆಚ್ಚು ವ್ಯತ್ಯಾಸವಾಗುವುದಿಲ್ಲ.

Continue Reading

DAKSHINA KANNADA

ಬಟ್ಟೆ ಅಂಗಡಿಯಲ್ಲಿನ ದರೋಡೆ ಪ್ರಕರಣಕ್ಕೆ ಟ್ವಿಸ್ಟ್; ಅಸಲಿ ಕಥೆನೇ ಬೇರೆ!

Published

on

ವಿಟ್ಲ: ಮಾ.18ರ ಮಧ್ಯಾಹ್ನ ವಿಟ್ಲದ ಬಟ್ಟೆ ಅಂಗಡಿಯಲ್ಲಿ ದರೋಡೆ ನಡೆದಿದೆ ಎಂಬ ರೀತಿಯಲ್ಲಿ ಚಿತ್ರಿಸಿ ಸಿಸಿಟಿವಿಯ ತುಣುಕುಗಳನ್ನು ಹಾಕಿ ವೈರಲ್ ಮಾಡಲಾಗಿತ್ತು. ಆದರೆ ಅಸಲಿಗೆ ನಡೆದದ್ದೇ ಬೇರೆ.


ಬಟ್ಟೆಯಂಗಡಿಯಾತ ವಿವಿಧ ವಿನ್ಯಾಸದ ಬಟ್ಟೆಗಳನ್ನು ತರಿಸಿಕೊಂಡು ಹಣ ನೀಡದೆ ಸತಾಯಿಸಿದ ಹಿನ್ನೆಲೆಯಲ್ಲಿ ವಿತರಣೆ ಮಾಡಿದಾತ ತಾನು ನೀಡಿದ್ದ ಬಟ್ಟೆಗಳನ್ನು ಅಂಗಡಿಯಿಂದ ಕೊಂಡೊಯ್ದಿದ್ದರು.

ಬಟ್ಟೆಗಳನ್ನು ಅಂಗಡಿಗೆ ವಿತರಣೆ ಮಾಡಿ, ಅದರ ಹಣವನ್ನು ತಿಂಗಳ ಕೊನೆಗೆ ಪಡೆದುಕೊಂಡು ಹೋಗಲಾಗುತ್ತಿತ್ತು. ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣೆ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊಂಡ ಬಟ್ಟೆ ಅಂಗಡಿಯಲ್ಲಿಯೂ ಇದೇ ಸಂಪ್ರದಾಯ ಚಾಲ್ತಿಯಲ್ಲಿತ್ತು.

ಬಟ್ಟೆ ಅಂಗಡಿ ಮಾಲಕ ಸುಮಾರು ಎರಡು ತಿಂಗಳುಗಳಿಂದ ಬಟ್ಟೆ ವಿತರಣೆ ಮಾಡಿದವನಿಗೆ 5,500 ರೂ. ಬಾಕಿ ಇರಿಸಿಕೊಂಡಿದ್ದ. ಇದರಿಂದ ರೋಸಿ ಹೋದ ವಿತರಕನು ಮಂಗಳವಾರ ಕಾರಿನಲ್ಲಿ ಬಂದು ತಾನು ನೀಡಿದ್ದ ಬಟ್ಟೆಗಳನ್ನು ಅಂಗಡಿಯಿಂದ ಹಿಂಪಡೆದುಕೊಂಡು ತೆರಳಿದ್ದಾನೆ. ಈ ಬಗ್ಗೆ ಎರಡು ಕಡೆಯವರೂ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page