Connect with us

LATEST NEWS

ಹಳೆಯ ವೀಡಿಯೋ ಬಳಸಿ ಬೆದರಿಕೆ: ಯುವಕನ ಕೊಲೆ ಮಾಡಿ ಆ್ಯಸಿಡ್ ಸುರಿದ ಆರೋಪಿ ಮಹಿಳೆ

Published

on

ಉತ್ತರ ಪ್ರದೇಶ: ಖಾಸಗಿ ವೀಡಿಯೋಗಳನ್ನು ತೋರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಹತ್ಯೆ ಮಾಡಿ, ಆತನ ಮುಖದ ಮೇಲೆ ಆ್ಯಸಿಡ್ ಸುರಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ.


ಮೃತ ವ್ಯಕ್ತಿ ಪಂಕಜ್ ಗುಪ್ತಾ, ಅಜಮ್‌ಗಢ ನಿವಾಸಿಯಾಗಿದ್ದು, ಪಕ್ಕದ ಹಳ್ಳಿಯ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಮಹಿಳೆ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದಳು ಎನ್ನಲಾಗಿದೆ. ಬ್ರೇಕಪ್ ನಂತರವೂ ಆತ ಆಕೆಯ ಕೆಲವು ಖಾಸಗಿ ವೀಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದನು.

ವೀಡಿಯೋಗಳಿಗಾಗಿ ಪೀಡಿಸುತ್ತಿದ್ದರಿಂದ ರೋಸಿಹೋದ ಮಹಿಳೆ, ಆತನನ್ನು ತನ್ನ ಸಹೋದರ ಮತ್ತು ಅತ್ತಿಗೆಯ ಸಹಾಯದಿಂದ ಹತ್ಯೆ ಮಾಡಿದ್ದಾಳೆ. ಬಳಿಕ ಆತನ ಗುರುತು ಸಿಗದಂತೆ ಮಾಡಲು ಮುಖದ ಮೇಲೆ ಆ್ಯಸಿಡ್ ಸುರಿದು ವಿಕಾರಗೊಳಿಸಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬೆಂಗಳೂರು ವಿಲ್ಲಾ ಗ್ಯಾಂಗ್ ರೇಪ್ ಕೇಸ್: ರಾಜಕಾರಣಿ ಪುತ್ರ ಸೇರಿ ಐವರು ಕಿರಾತಕರು ಅರೆಸ್ಟ್!

ಫೆಬ್ರವರಿ 10 ರಂದು ಮುಖ ವಿರೂಪಗೊಂಡಿದ್ದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು, ಅದಾದ ಬಳಿಕ ಈ ಅಪರಾಧ ಬೆಳಕಿಗೆ ಬಂದಿದೆ. ನಂತರ ಪೊಲೀಸ್ ತನಿಖೆಯಲ್ಲಿ ಕೊಲೆಯ ವಿವರಗಳು ಬೆಳಕಿಗೆ ಬಂದಿತ್ತು. ಈ ಸಂಬಂಧ ಪೊಲೀಸರು ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

INTERNATIONAL

ಇಸ್ರೇಲ್‌-ಇರಾನ್‌ ಸಂಘರ್ಷ; ಕಿಮ್‌ ಜಾಂಗ್‌ ಉನ್‌ ಎಂಟ್ರಿ..ಬೆಂಬಲ ಯಾರಿಗೆ!?

Published

on

ಪ್ಯೊಂಗ್ಯಾಂಗ್: ಇರಾನ್-ಇಸ್ರೇಲ್‌ ಸಂಘರ್ಷ ಜಗತ್ತಿನ ನಿದ್ದೆಗೆಡಿಸಿದೆ. ಇಸ್ರೇಲ್‌ ಗೆ ಅಮೆರಿಕ ಬೆಂಬಲವಾಗಿ ನಿಂತಿದ್ದರೆ, ಇರಾನ್‌ ಒಬ್ಬಂಟಿ ಹೋರಾಟ ನಡೆಸುತ್ತಿತ್ತು. ಇದೀಗ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಎಂಟ್ರಿ ಕೊಟ್ಟಿದ್ದಾರೆ. ಇರಾನ್‌-ಇಸ್ರೇಲ್‌ ಯುದ್ದದ ಬಗ್ಗೆ ಮಾತನಾಡಿದ್ದು, ಅಮೆರಿಕ ವಿರುದ್ದ ಗುಡುಗಿದ್ದಾರೆ.


ಹೌದು.. ಅಮೆರಿಕ ಮತ್ತು ಇರಾನ್‌ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರು ದೇಶಗಳ ನಡುವಿನ ಯುದ್ದೋನ್ಮಾದ ಕೇವಲ ಮಧ್ಯಪ್ರಾಚ್ಯ ಮಾತ್ರವಲ್ಲದೇ, ಜಾಗತಿಕ ಆತಂಕವನ್ನೂ ಹೆಚ್ಚಿಸಿದೆ. ಈ ನಡುವೆ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇದೀಗ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಇರಾನ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಇರಾನ್‌ ಮಾಜಿ ಸುಪ್ರೀಂ ಲೀಡರ್‌ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ನಂತರ ಅಧಿಕಾರ ವಹಿಸಿಕೊಂಡ ಮುಜ್ತಬಾ ಖಮೇನಿ ಅವರಿಗೆ ಉತ್ತರ ಕೊರಿಯಾದ ಕಿಮ್‌ ಜಾಂಗ್‌ ಉನ್‌ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಕಾನೂನುಬಾಹಿರ ಎಂದು ಕರೆದಿರುವ ಉತ್ತರ ಕೊರಿಯಾ, ಯುದ್ದದ ನಡುವೆಯೇ ತನ್ನ ಅತ್ಯಂತ ಶಕ್ತಿಶಾಲಿ ಯುದ್ದನೌಕೆಯಿಂದ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಉಡಾಯಿಸಿ ಅಮೆರಿಕಕ್ಕೆ ನೇರ ಸವಾಲು ಹಾಕಿದೆ. ಅಲ್ಲದೆ ಸಂಕಷ್ಟದ ಸಮಯದಲ್ಲಿ ತಾವು ಇರಾನ್‌ ಜೊತೆಗೆ ಇರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಸಂಘರ್ಷ: ಮಾ.12ರಂದು ಮಂಗಳೂರು- ಮಧ್ಯ ಪ್ರಾಚ್ಯ ಮಾರ್ಗದ 14 ವಿಮಾನಗಳು ರದ್ದು

ಇರಾನ್‌ ವಿಷಯದಲ್ಲಿ ಕೇವಲ ಹೇಳಿಕೆ ನೀಡಿ ಸುಮ್ಮನಾಗದ ಕಿಮ್‌ ಜಾಂಗ್‌ ಉನ್‌, ಪ್ರಾಯೋಗಿಕವಾಗಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಉತ್ತರ ಕೊರಿಯಾದ ಅತಿದೊಡ್ಡ ನೌಕಾ ವಿಧ್ವಂಸಕ ನೌಕೆ ಚೋ ಹ್ಯೋನ್‌ನಿಂದ ವ್ಯೂಹಾತ್ಮಕ ಕ್ರೂಸ್‌ ಕ್ಷಿಪಣಿಗಳ ಪರೀಕ್ಷೆಯನ್ನು ಕಿಮ್‌ ವೈಯಕ್ತಕವಾಗಿ ಮೇಲ್ವಿಚಾರಣೆ ಮಾಡಿದ್ದಾರೆ.

Continue Reading

LATEST NEWS

ಪ್ರೀತಿಸುವಂತೆ ಸಹಪಾಠಿಯಿಂದ ಒತ್ತಾಯ; ಶಾಲಾ ಕಟ್ಟಡದಿಂದ ಜಿ*ಗಿದು ವಿದ್ಯಾರ್ಥಿನಿ ಆ*ತ್ಮಹ*ತ್ಯೆ

Published

on

ಮಂಗಳೂರು/ಬೀದರ್ : ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.

16 ವರ್ಷದ ಮದಿಯಾ ನಶೀರ್ ಪಾಷಾ ಆ*ತ್ಮಹ*ತ್ಯೆ ಮಾಡಿಕೊಂಡ ಬಾಲಕಿ. ಹತ್ತನೇ ತರಗತಿಯಲ್ಲಿ ಮದಿಯಾ ವ್ಯಾಸಂಗ ಮಾಡುತ್ತಿದ್ದಳು.  ಲವ್ ಮಾಡುವಂತೆ ಸಹಪಾಠಿ ಒತ್ತಾಯಿಸಿದ್ದಕ್ಕೆ ಬಾಲಕಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : 30 ವರ್ಷಗಳಿಂದ ಕೊರಗ ಸಮುದಾಯದ ವ್ಯಕ್ತಿಯನ್ನು ಜೀತದಾಳಾಗಿಸಿ ದೌರ್ಜನ್ಯ ಆರೋಪ; ಮಹಿಳೆ ಬಂಧನ

ಈ ಬಗ್ಗೆ ಭೆಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Continue Reading

LATEST NEWS

ಐಸಿಸಿ ಟಿ20 ರ‍್ಯಾಂಕಿಂಗ್‌: 10ರಲ್ಲಿ ನಾಲ್ವರು ಟೀಮ್‌ ಇಂಡಿಯಾ ಆಟಗಾರರು

Published

on

ಮುಂಬೈ: ಟಿ20 ವಿಶ್ವಕಪ್‌ ಮುಗಿದ ಬೆನ್ನಲ್ಲೇ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬ್ಯಾಟರ್‌ಗಳ ನೂತನ ರ‍್ಯಾಂಕಿಂಗ್‌ ಬಿಡುಗಡೆ ಮಾಡಿದೆ. ಟಾಪ್‌ 10 ಆಟಗಾರರ ಪಟ್ಟಿಯಲ್ಲಿ ನಾಲ್ವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಅವರಲ್ಲಿಬ್ಬರು ಅಗ್ರಸ್ಥಾನದಲ್ಲಿರುವುದು ವಿಶೇಷ.

ಹೌದು.. ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಝಿಲೆಂಡ್‌ ತಂಡವನ್ನು ಮಣಿಸಿದ್ದ ಭಾರತ ಮೂರನೇ ಸಲ ಟಿ-20 ಕಿರೀಟ ಎತ್ತಿ ಹಿಡಿದಿತ್ತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಅಭಿಷೇಕ್‌ ಫೈನಲ್‌ನಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಲಯಕ್ಕೆ ಮರಳಿದ್ದರು. ಇದಾಗ್ಯೂ ಐಸಿಸಿ ಟಿ20 ರ‍್ಯಾಂಕಿಂಗ್‌ ನಲ್ಲಿ 875 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಅದೇ ರೀತಿ ಟೂರ್ನಿಯಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಇಶಾನ್‌ ಕಿಶನ್‌ ಎರಡು ಸ್ಥಾನಗಳ ಬಡ್ತಿ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಅಗ್ರಸ್ಥಾನದಲ್ಲಿರುವ ಅಭಿಷೇಕ್‌ಗಿಂತಲ ಕೇವಲ ನಾಲ್ಕು ರೇಟಿಂಗ್‌ ಪಾಯಿಂಟ್‌ಗಳ (871) ಹಿನ್ನಡೆಯಲಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ 381ನ ರನ್‌ ಕಲೆಹಾಕುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದ ಪಾಕಿಸ್ತಾನ್‌ ಬ್ಯಾಟರ್‌ ಸಾಹಿಬ್‌ಝಾದ ಫರ್ಹಾನ್‌ 848 ಅಂಕಗಳೊಂದಿಗೆ ಈ ಬಾರಿಯ ಶ್ರೇಯಾಂಕದಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್‌ ಬ್ಯಾಟರ್‌ ಫಿಲ್‌ ಸಾಲ್ಟ್‌ (792 ಅಂಕ) ಕಾಣಿಸಿಕೊಂಡಿದ್ದಾರೆ. 5ನೇ ಸ್ಥಾನದಲ್ಲಿ ಶ್ರೀಲಂಕಾ ತಂಡದ ಓಪನರ್‌ ಪಾತುಮ್‌ ನಿಸ್ಸಂಕಾ (766) ಸ್ಥಾನ ಪಡೆದಿದ್ದಾರೆ. 6ನೇ ಸ್ಥಾನದಲ್ಲಿ ನ್ಯೂಝಿಲೆಂಡ್‌ನ ಟಿಮ್‌ ಸೈಫರ್ಟ್‌ (749) ಇದ್ದು, 7ನೇ ಸ್ಥಾನದಲ್ಲಿ ಟೀಮ್‌ ಇಂಡಿಯಾದ ತಿಲಕ್‌ ವರ್ಮಾ (742) ಕಾಣಿಸಿಕೊಂಡಿದ್ದಾರೆ. ಹಾಗೆಯೇ 8 ಸ್ಥಾನದಲ್ಲಿ ಸೌತ್‌ ಆಫ್ರಿಕಾದ ಡೆವಾಲ್ಡ್‌ ಬ್ರೆವಿಸ್‌ (738) ಇದ್ದರೆ, 9ನೇ ಸ್ಥಾನದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (722) ಕಾಣಿಸಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್​ನ ಜೋಸ್ ಬಟ್ಲರ್ (716) 10ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಇದು ನನ್ನ ಕಾರ್ಯಾವಧಿಯ ಕೆಟ್ಟ ಘಳಿಗೆ’: ಹೀಗ್ಯಾಕಂದ್ರು ಗೌತಮ್ ಗಂಭೀರ್!

ಜಿಗಿತ ಕಂಡ ಸಂಜು ಸ್ಯಾಮ್ಸನ್
ಮತ್ತೊಂದೆಡೆ ಫೈನಲ್, ಸೆಮಿಫೈನಲ್ ಸೇರಿದಂತೆ ಕೊನೆಯ ಮೂರು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಕಟ್ಟುವ ಮೂಲಕ ಭಾರತಕ್ಕೆ ವಿಶ್ವಕಪ್ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಟ್ಸನ್ 18 ಸ್ಥಾನಗಳ ಜಿಗಿತ ಕಂಡಿದ್ದು, 22ನೇ ಸ್ಥಾನ ಅಲಂಕರಿಸಿದ್ದಾರೆ. ಸಂಜು ಒಟ್ಟು 637 ರೇಟಿಂಗ್ ಅಂಕ ಗಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page