Connect with us

DAKSHINA KANNADA

ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೇ ಭಯೋತ್ಪಾದಕರ ಬೆದರಿಕೆ..!!?

Published

on

ಮಂಗಳೂರು : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೇ ಬೆದರಿಕೆಯ ಸಂದೇಶ ಬಂದಿದೆ.

ವಿಮಾನ ನಿಲ್ದಾಣದಲ್ಲಿ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿಐಎಸ್‌ಎಫ್  ಕಚೇರಿಯ ಇ-ಮೇಲ್ ಗೆ ಬೆದರಿಕೆ ಹಾಕಿದ ಸಂದೇಶ ಬಂದಿದೆ.

ಈ ಬಗ್ಗೆ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿರುವ ಸಿಐ ಎಸ್‌ಎಫ್ ಅಧಿಕಾರಿಗಳಿಂದ ದೂರು ದಾಖಲಾಗಿದೆ.

ಮೇ.23ರಂದು ಸಿಐಎಸ್ ಎಫ್ ಕಚೇರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಇಮೇಲ್ ಕಳುಹಿಸಿದ್ದು whats up? Am terrorist  ಎಂದು ಸಂದೇಶ ರವಾನಿಸಿದ್ದಾನೆ.

ಈ ಬಗ್ಗೆ ತಡವಾಗಿ ಬಜಪೆ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣವನ್ನು ಹೆಚ್ಚಿನ ತನಿಖೆಗೆ ಮಂಗಳೂರು ನಗರ ಸೈಬರ್ ಠಾಣೆಗೆ ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ

BANTWAL

ಬಂಟ್ವಾಳದಲ್ಲಿ ಭಾರೀ ಅಗ್ನಿ ಅವಘಡ; ಸುಟ್ಟು ಕರಕಲಾದ ಗೋಡೋನ್‌

Published

on

ಬಂಟ್ವಾಳ : ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ನಿಂದ ಗೋಣಿಯ ಗೋಡನಿಗೆ  ಬೆಂಕಿ ಹತ್ತಿ ಗೋಡನ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ನಿನ್ನೆ (ಫೆ.10)  ಬಂಟ್ವಾಳ ಕರಿಯಂಗಳ ಗ್ರಾಮದ ಬಡಕಬೈಲು ಪ್ರದೇಶದಲ್ಲಿ ನಡೆದಿದೆ.

ಗೋಡೋನ್‌ಗೆ ಬೆಂಕಿ ಹತ್ತಿದ್ದು ಮಾತ್ರವಲ್ಲದೇ, ಹತ್ತಿರದ ಅಬ್ದುಲ್ ಹಮೀದ್ ಮನೆಗೆ ಬೆಂಕಿ ಬಿದ್ದಿದೆ. ಸುಲೇಮಾನ್ ಹಾಗೂ ಮಹಮ್ಮದ್ ಹನೀಪ್ ಮನೆ ಸ್ವಲ್ಪಮಟ್ಟಿಗೆ ಬೆಂಕಿಗಾಹುತಿಯಾಗಿದೆ. ಬೆಂಕಿ ಅನಾಹುತದಿಂದ ಪ್ರಾಣಹಾನಿ ಉಂಟಾಗಿಲ್ಲ. ರಾತ್ರಿ ಸುಮಾರು 11 ಗಂಟೆಗೆ ಬೆಂಕಿ ಬಿದ್ದಿದ್ದು, ಕೂಡಲೇ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಪತಿಗೆ ಅನೈತಿಕ ಸಂಬಂಧವಿರುವ ಶಂಕೆ; ಜಿಮ್‌ನಲ್ಲಿಯೇ ಆತ್ಮಹತ್ಯೆಗೆ ಶರಣಾದ ಪತ್ನಿ

ತಕ್ಷಣವೇ ಮೂರು ಅಗ್ನಿಶಾಮಕ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ ಭಾರೀ ಜನಸ್ತೋಮವೇ ನೆರೆದಿದ್ದು, ಬೆಂಕಿ ನಂದಿಸಲು ಸಹಕರಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

DAKSHINA KANNADA

ಬರ್ಟ್ರಾಂಡ್ ರಸ್ಸೆಲ್ ಆಂಗ್ಲಮಾಧ್ಯಮ ಶಾಲೆ ಬೈಕಂಪಾಡಿ : ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

Published

on

ಮಂಗಳೂರು : ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾಕಾರಂಜಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬೈಕಂಪಾಡಿಯ ಬರ್ಟ್ರಾಂಡ್ ರಸ್ಸೆಲ್ ಆಂಗ್ಲಮಾಧ್ಯಮ ಶಾಲೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

ಈ ಸ್ಪರ್ಧೆಯು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ನಡೆಸಿದ ಪ್ರತಿಷ್ಟಿತ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತೀ ಜಿಲ್ಲೆಯಿಂದ ಪ್ರಥಮ ಸ್ಥಾನ ಪಡೆದ ತಂಡಗಳು ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದವು.

ಇದನ್ನೂ ಓದಿ : ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾದ ‘ಶತಸ್ಮರಣ’

ಬರ್ಟ್ರಾಂಡ್ ರಸ್ಸೆಲ್ ಶಾಲೆಯ ನೃತ್ಯ ತಂಡವು, ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಈ ಗಮನಾರ್ಹ ಸಾಧನೆಯು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು  ನೃತ್ಯ ತಂಡದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರ ಸಮರ್ಪಣೆ, ಕಠಿನ ಪರಿಶ್ರಮ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಈ ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನ ಮತ್ತು ಅಛಲ ಬದ್ದತೆಗಾಗಿ ಶಾಲಾ ಆಡಳಿತ ಮಂಡಳಿ, ಶಿಕ್ಷಕವೃಂದ ಹಾಗೂ ಪೋಷಕರು ಅಭಿನಂದಿಸಿದ್ದಾರೆ.

 

Continue Reading

DAKSHINA KANNADA

ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾದ ‘ಶತಸ್ಮರಣ’

Published

on

ಮಂಗಳೂರು : ಕಾಶೀಮಠದ 20ನೇ ಯತಿಗಳಾ ಶ್ರೀಮದ್ ಸುದೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಇತ್ತೀಚೆಗೆ ಮಂಗಳೂರು ರಥಬೀದಿಯಲ್ಲಿ ನಡೆದಿತ್ತು.

ಈ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಸುದೀಂದ್ರ ತೀರ್ಥ ಶತನಮನ – ಶತಸ್ಮರಣೆ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಜನವರಿ 26 ರಂದು ನಡೆದಿದ್ದ ಈ ಕಾರ್ಯಕ್ರಮ ಲಂಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಕಾಪು ಶ್ರೀ ಹೊಸ ಮಾರಿಗುಡಿ ಕ್ಷೇತ್ರ; ಸಂಭ್ರಮದಿಂದ ನಡೆದ ಮೆರವಣಿಗೆ

ರಥಬೀದಿಯಲ್ಲಿ ನಿರ್ಮಿಸಿದ್ದ ಭವ್ಯವೇದಿಕೆಯಲ್ಲಿ ಖ್ಯಾತ ಗಾಯಕರುಗಳಿಂದ ಏಕಕಂಠದಲ್ಲಿ ಹತ್ತು ಭಜನಾ ಹಾಡುಗಳನ್ನು ಹಾಡಲಾಗಿತತು. ನೂರಾರು ಜನ ಗಾಯಕ ಗಾಯಕಿಯರು ಭಾಗವಹಸಿದ್ದ ಈ ಕಾರ್ಯಕ್ರಮವನ್ನು ಯೂತ್ ಆಫ್ ಜಿಎಸ್ ಬಿ ವಹಿಸಿಕೊಂಡಿತ್ತು.

ಪ್ರತಿಯೊಂದು ಭಜನೆಯನ್ನು ಅದರ ಸಾಹಿತ್ಯ, ಸಂಗೀತ, ಹಿನ್ನಲೆ, ಮಹತ್ವ ಮತ್ತೂ ಸೂಕ್ಷ್ಮಾರ್ಥವನ್ನು ವಿವರಿಸುವ ಮೂಲಕ ಜನರಿಗೆ ಪರಿಚಯಿಸಲಾಗಿತ್ತು. ಇದೀಗ ಈ ಯಶಸ್ವಿ ಕಾರ್ಯಕ್ರಮ ಲಂಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗುವ ಮೂಲಕ ಗಮನ ಸೆಳೆದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page