Connect with us

LATEST NEWS

ಬಾಯಾರಿಕೆ ಎಂದು ಲೀಟರ್‌ಗಟ್ಟಲೆ ಒಂದೇ ಸಮನೆ ನೀರು ಕುಡಿಯುವವರು ಇದನ್ನೊಮ್ಮೆ ಓದಿ…

Published

on

ಮನುಷ್ಯ ಆರೋಗ್ಯಕರವಾಗಿರಲು ದಿನಕ್ಕೆ 3-4 ಲೀಟರ್ ನೀರು ಕುಡಿಯಬೇಕು. ಈ ಸುಡು ಬೇಸಿಗೆಯಲ್ಲಂತೂ ದೇಹವನ್ನು ಹೈಡ್ರೇಟೆಡ್ ಆಗಿ ಇಟ್ಟುಕೊಳ್ಳಲು ದೇಹಕ್ಕೆ ಸರಿಹೊಂದುವಷ್ಟು ನೀರು ಕುಡಿಯಬೇಕು. ವಯಸ್ಸು, ದೇಹದ ತೂಕ, ಮಾಡೋ ಕೆಲಸ, ವಾತಾವರಣದ ಮೇಲೆ ಮನುಷ್ಯ ಎಷ್ಟು ನೀರು ಕುಡಿಯಬೇಕು ಎನ್ನುವುದು ಡಿಪೆಂಡ್ ಆಗಿರುತ್ತೆ.

ಯಾರು ಎಷ್ಟು ನೀರು ಕುಡಿದೆ ಒಳ್ಳೆಯದು ?

ಸಾಮಾನ್ಯ ವ್ಯಕ್ತಿಗಳು ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಬೇಕು. ಆದರೆ ಮನೆಯಲ್ಲಿ ಮನೆಯಲ್ಲಿ ಇರುವ ಹೆಂಗಸರು ಹೆಚ್ಚು ಕೆಲಸ ಮಾಡುವ ಕಾರಣ ಜಾಸ್ತಿ ನೀರು ಕುಡಿಯಬೇಕು. ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗೋರು, ಎಸಿ ರೂಮ್ ಅಲ್ಲಿ ಕೂತು ಕೆಲಸ ಮಾಡೋರು ದಿನಕ್ಕೆ 2.5 ಲೀಟರ್ ಇಂದ 3 ಲೀಟರ್ ನೀರು ಕುಡಿದರೆ ಉತ್ತಮ.

ಹೆಚ್ಚು ಹೊರಗಡೆ ತಿರುಗಾಡುವವರು, ಬಿಸಿಲಲ್ಲಿ ಕೂಲಿ ಕೆಲಸ ಮಾಡುವವರು ದಿನಕ್ಕೆ 4 ಲೀಟರ್ ಇಂದ 5 ಲೀಟರ್ ನೀರು ಕುಡಿಬೇಕು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು..ಅಂದರೆ ಕಿಡ್ನಿ, ಹಾರ್ಟ್, ಶುಗರ್ ಪ್ರಾಬ್ಲಮ್ ಇರೋರು ಡಾಕ್ಟರ್ ಹತ್ರ ಕೇಳಿ ಎಷ್ಟು ಬೇಕೋ ಅಷ್ಟೇ ನೀರು ಕುಡಿಬೇಕು.

ಸರಿಯಾಗಿ ನೀರು ಕುಡಿಯುವ ವಿಧಾನ : 

ಯಾವಾಗಲೂ ಸ್ವಲ್ಪ ಸ್ವಲ್ಪನೇ ನೀರು ಕುಡಿಯಬೇಕು. ಅದೇ ಕಾರಣಕ್ಕೆ ಯಾರದ್ದಾದರು ಮನೆಗೆ ಹೋದಾಗ ಮೊದಲು ಒಂದು ಗ್ಲಾಸ್ ನೀರು ಕೊಡುದು. ಒಂದು ಗ್ಲಾಸ್ ನೀರು ಕುಡಿದರೆ ಒಮ್ಮೆಯ ಸುಸ್ತು ಇಳಿದಂತಾಗುತ್ತದೆ.  ಹಾಗೆಂದು ಒಂದೇ ಸಮನೇ ಜಾಸ್ತಿ ನೀರು ಕುಡಿಯುವುದರಿಂದ ದೇಹಕ್ಕೆ ತೊಂದರೆ ಆಗುತ್ತೆ.

ಸಿಹಿ ಇರೋ ಡ್ರಿಂಕ್ಸ್, ಸೋಡಾಗಳನ್ನು ಯಾವಾಗ ಬೇಕೆಂದರಾವಾಗ ಕುಡಿಯಬಾರದು. ಬಾಯಾರಿಕೆ ಆದ ವೇಳೆಯಂತೂ ಇವುಗಳನ್ನು ಕುಡಿಯಲೇ ಬಾರದು. ಒಂದು ವೇಳೆ ಕುಡಿದರೆ ಹೊಟ್ಟೆಯಲ್ಲಿ ಡೀಹೈಡ್ರೇಶನ್ ಆಗಬಹುದು. ಹಾಗಾಗಿ ಬಾಯಾರಿಕೆಯಾದ ಸಂದರ್ಭ ಉಗುರು ಬೆಚ್ಚಗಿನ ನೀರು ಅಥವಾ ರೂಮ್ ಟೆಂಪರೇಚರ್ ನೀರು ಕುಡಿದರೆ ಒಳ್ಳೆಯದು. ಇದರಿಂದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಆದರೆ, ತುಂಬಾ ತಣ್ಣಗಿರೋ ನೀರು ಕುಡಿದರೆ ಜೀರ್ಣ ಸಮಸ್ಯೆಗಳು ಬರಬಹುದು.

ಮಿತವಾಗಿ ಸರಿಯಾದ ಸಮಯದ ಅಂತರ ಕಾಯ್ದುಕೊಂಡು ನೀರು ಕುಡಿಯುವುದು ಒಳ್ಳೆಯದು. ವಾತಾವರಣ ಬಿಸಿ ಇದ್ರೆ ಜಾಸ್ತಿ ನೀರು ಕುಡಿಬೇಕು. ಜಾಸ್ತಿ ಬೆವರು ಬರೋ ಟೈಮ್ ಅಲ್ಲೂ ನೀರು ಜಾಸ್ತಿ ಕುಡಿಯೋದು ಮುಖ್ಯ. ಆದ್ರೆ ಒಂದೇ ಸಮನೆ ಕುಡಿಯಬಾರದು. ಮುಖ್ಯವಾಗಿ ತಲೆ ಸುತ್ತು ಬಂದ ಸಂದರ್ಭ,ಅಸ್ತಮ ಸಮಸ್ಯೆ ಇರುವವರು ಅಥವಾ ಹೆಚ್ಚು ರಕ್ತಸ್ರಾವದಂತಹ ಸಮಸ್ಯೆಗಳು ಉಂಟಾದಾಗ ನೀರು ಕುಡಿಯಬಾರದು. ಒಂದು ವೇಳೆ ನೀರು ಕುಡಿಸಿದ್ದೇ ಆದರೆ ಆ ವ್ಯಕ್ತಿ ಕೋಮಕ್ಕೂ ಹೋಗಬಹುದು ಅಥವಾ ಆತನ ಪ್ರಾಣಪಕ್ಷಿಯೇ ಹಾರಿ ಹೋಗಬಹುದು ಹಾಗಾಗಿ ಈ ಸಮಯ ನೀರಿಗಿಂತ ವಾಯು ಮುಖ್ಯವಾಗಿರುತ್ತದೆ ಎಂಬುವುದನ್ನು ತಿಳಿದಿರಬೇಕು.

LATEST NEWS

ಸಹಾಯ ಕೇಳಿ ಬಂದ ಯುವತಿಯ ಗ್ಯಾಂಗ್ ರೇ*ಪ್..! ಅಟೋ ಚಾಲಕ ಅಂದರ್..!

Published

on

ಮಂಗಳೂರು : ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿ ಬಂದು ಕೇರಳದ ಉಪ್ಪಳದಲ್ಲಿ ವಾಸವಾಗಿದ್ದ ಯುವತಿಯನ್ನು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಸಾಮೂಹಿಕ ಅ*ತ್ಯಾ*ಚಾರ ಮಾಡಲಾಗಿದೆ. ಏಪ್ರಿಲ್ 16 ರ ರಾತ್ರಿ ಈ ಹೇಯ ಕೃತ್ಯ ನಡೆದಿದ್ದು, ಅಟೋ ಚಾಲಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಉಪ್ಪಳದಲ್ಲಿ ವಾಸವಾಗಿದ್ದ ಯುವತಿ ಸ್ನೇಹಿತನ ಜೊತೆಯಲ್ಲಿ ಮಂಗಳೂರಿಗೆ ಬಂದಿದ್ದು, ಇಲ್ಲಿ ಇಬ್ಬರಿಗೂ ಜಗಳವಾಗಿ ಬೇರೆ ಬೇರೆಯಾಗಿದ್ದಾರೆ. ರಾತ್ರಿವೇಳೆಯಲ್ಲಿ ದಾರಿ ಗೊತ್ತಿಲ್ಲದ ಯುವತಿ ಅದೇ ದಾರಿಯಲ್ಲಿ ಬಂದ ಬಗಂಬಿಲ ಮೂಲದ ಅಟೋ ಚಾಲಕನಲ್ಲಿ ಸಹಾಯ ಯಾಚಿಸಿದ್ದಾಳೆ. ಸಹಾಯ ಮಾಡುವ ನೆಪದಲ್ಲಿ ಅಟೋದಲ್ಲಿ ಕೂರಿಸಿದ ಚಾಲಕ ಆಕೆಗೆ ಅ*ಮಲು ಪದಾರ್ಥ ನೀಡಿ ಮುನ್ನೂರು ಗ್ರಾಮ ಮತ್ತು ಉಳ್ಳಾಲ ನಗರಸಭೆ ಗಡಿಯಲ್ಲಿನ ಬೊಳ್ಳ ಹೌಸ್ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ನೇತ್ರವಾದಿ ನದಿ ಸಮೀಪದ ನಿರ್ಜನ ಪ್ರದೇಶವಾಗಿರುವ ಬೊಳ್ಳ ಹೌಸ್ ಬಳಿ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯನ್ನು ಅ*ತ್ಯಾ*ಚಾರ ಮಾಡಿದ್ದಾನೆ. ಅತ್ಯಾಚಾರಿಗಳ ಕೈನಿಂದ ತಪ್ಪಿಸಿಕೊಂಡು ಬಂದ ಯುವತಿ ಮನೆಯೊಂದರ ಬಾಗಿಲು ತಟ್ಟಿ ನೀರು ಕೇಳಿ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತಕ್ಷಣ ಮನೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಗಂಬಿಲದ ಅಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದು, ಇತರ ಆರೋಪಿಗಳನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಲು ಪೊಲೀಸರಿಗೆ ಸೂಚಿಸಿದ್ದಾರೆ.

Continue Reading

LATEST NEWS

ಪಾಕಿಸ್ತಾನಿಯರು ಹಿಂದೂ-ಮುಸ್ಲಿಮರ ನಡುವಿನ ವ್ಯತ್ಯಾಸಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು: ಪಾಕ್ ಸೇನಾ ಮುಖ್ಯಸ್ಥ

Published

on

ಮಂಗಳೂರು/ನವದೆಹಲಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತೊಮ್ಮೆ ಭಾರತ ಮತ್ತು ಹಿಂದೂ ಧರ್ಮವನ್ನು ಗುರಿಯಾಗಿಸಿಕೊಂಡು ಹಲವು ಹೇಳಿಕೆಗಳನ್ನು ನೀಡಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸಾಗರೋತ್ತರ ಪಾಕಿಸ್ತಾನಿ ಸಮ್ಮೇಳನದಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿಗಳನ್ನು ಉದ್ದೇಶಿಸಿ ಮಾತನಾಡುವ ಬದಲು.. ಸೇನಾ ಮುಖ್ಯಸ್ಥರು ಧರ್ಮೋಪದೇಶಗಳು, ಎರಡು ರಾಷ್ಟ್ರದ ಸಿದ್ದಾಂತಗಳನ್ನು ಪ್ರತಿಪಾದಿಸಿ ಭಾರತದ ವಿರುದ್ದ ಮತ್ತೆ ಕ್ಯಾತೆ ತೆಗೆದಿದ್ದಾರೆ.

ಈ ಸಮ್ಮೇಳನದಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಸೆರಿದಂತೆ ಪಾಕಿಸ್ತಾನದ ಎಲ್ಲಾ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಪಾಕಿಸ್ಥಾನದ ಕಥೆಯನ್ನು ಹೇಳಬೇಕು
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ‘ನೀವು ಖಂಡಿತವಾಗಿಯೂ ನಿಮ್ಮ ಮಕ್ಕಳಿಗೆ ಪಾಕಿಸ್ತಾನದ ಕಥೆಯನ್ನು ಹೇಳಬೇಕು. ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಅಂಶದಲ್ಲೂ ನಾವು ಹಿಂದೂಗಳಿಗಿಂತ ಭಿನ್ನರು ಎಂದು ಭಾವಿಸಿದ್ದರು. ನಮ್ಮ ಧರ್ಮಗಳು, ನಮ್ಮ ಪದ್ದತಿಗಳು, ಸಂಪ್ರದಾಯಗಳು, ಆಲೋಚನೆಗಳು ಮತ್ತು ಮಹತ್ವಾಕಾಂಕ್ಷೆಗಳು ವಿಭಿನ್ನವಾಗಿವೆ. ಅದು ಎರಡು ರಾಷ್ಟ್ರಗಳ ಸಿದ್ದಾಂತದ ಅಡಿಪಾಯವಾಗಿತ್ತು’ಎಂದು ಹೇಳಿದ್ದಾರೆ.

ಪಾಕಿಸ್ತಾನಿಯರು ಹಿಂದೂ-ಮುಸ್ಲಿಮರ ನಡುವಿನ ವ್ಯತ್ಯಾಸ ಹೇಳಿಕೊಡಿ
ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದೂಗಳಿಗಿಂತ ಭಿನ್ನರು ಎಂದೇ ಭಾವಿಸಿದ್ದರು. ನಮ್ಮ ಧರ್ಮ, ಆಚರಣೆ, ಸಂಪ್ರದಾಯ, ಆಲೋಚನೆ ಮತ್ತು ಗುರಿಗಳು ಬೇರೆ ಆದ್ದರಿಂದಲೇ, ದ್ವಿರಾಷ್ಟ್ರ ಪರಿಕಲ್ಪನೆ ಮೊಳಕೆಯೊಡೆಯಿತು. ಈಗಲೂ ಪಾಕಿಸ್ತಾನವು ದ್ವಿರಾಷ್ಟ್ರ ಸಿದ್ಧಾಂತದ ತಳಹದಿಯ ಮೇಲೆ ನಿಂತಿದೆ. ಇದರ ಮಹತ್ವ ಎಂದಿಗೂ ಕಡಿಮೆಯಾಗಬಾರದು. ಇದಕ್ಕಾಗಿ ನಾವು ನಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ನಡುವಿನ ವ್ಯತ್ಯಾಸವನ್ನು ಹೇಳಿಕೊಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಚೀನಾದ ಮೇಲೆ ಮುನಿದ ಅಮೆರಿಕ..!

ಭಯೋತ್ಪಾದಕರಿಗೆ ಎಚ್ಚರಿಕೆ
ಭಯೋತ್ಪಾದಕರಿಗೆ ಎಚ್ಚರಿಕೆ ನೀಡಿದ ಅಸಿಮ್ ಮುನೀರ್, ‘ಕೇವಲ 1500 ಭಯೋತ್ಪಾದಕರು ದೇಶದ ಭವಿಷ್ಯವನ್ನು ಬದಲಾಯಿಸುತ್ತಾರೆ ಎಂದು ಪಾಕಿಸ್ತಾನದ ಶತ್ರುಗಳು ಭಾವಿಸುತ್ತಾರಾ? ನಾವು ಶೀಘ್ರದಲ್ಲೇ ಈ ಭಯೋತ್ಪಾದಕರ ಬೆನ್ನು ಮುರಿಯುತ್ತೇವೆ. 13 ಲಕ್ಷ ಜನರ ಭಾರತೀಯ ಸೇನೆಗೆ ನಮ್ಮನ್ನು ಹೆದರಿಸಲು ಸಾಧ್ಯವಾಗಲಿಲ್ಲ, ಈ ಭಯೋತ್ಪಾದಕರು ಏನು ಮಾಡುತ್ತಾರೆ?’’ ಎಂದು ಕುಹಕ ನಗೆ ಬೀರಿದರು.

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ), ಬಲೂಚ್ ಲಿಬರೇಶನ್ ಫ್ರಂಟ್ (ಬಿಎಲ್‌ಎಫ್) ಮತ್ತು ಬಲೂಚ್ ರಿಪಬ್ಲಿಕನ್ ಆರ್ಮಿ (ಬಿಆರ್‌ಎ) ನಂತಹ ಸಂಘಟನೆಗಳನ್ನು ದೇಶಕ್ಕೆ ಬೆದರಿಕೆ ಎಂದು ಒಪ್ಪಿಕೊಳ್ಳಲು ಅವರು ನಿರಾಕರಿಸಿದರು ಮತ್ತು ಈ ಸಂಘಟನೆಗಳಿಗೆ ಶೀಘ್ರದಲ್ಲೇ ಸೂಕ್ತ ಉತ್ತರ ನೀಡಲಾಗುವುದು ಎಂದು ಹೇಳಿದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

Continue Reading

DAKSHINA KANNADA

WATCH : ವೇದಿಕೆಗೆ ನುಗ್ಗಿ ವೇಷಧಾರಿಯ ಮೈಮೇಲೆ ಎರಗಿದ ವ್ಯಕ್ತಿ, ವೀಡಿಯೋ ವೈರಲ್

Published

on

ಕಡಬ : ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಏಕಾಏಕಿ ಸಭೆಯಲ್ಲಿದ್ದ  ವ್ಯಕ್ತಿಯೊಬ್ಬರು ವೇದಿಕೆಗೆ ನುಗ್ಗಿ ವೇಷಧಾರಿಯ ಮೈಮೇಲೆ ಎರಗಿದ ಘಟನೆ ನಡೆದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

ಕಡಬದ ನಂದುಗುರಿ ಎಂಬಲ್ಲಿ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಎಂಬವರ ಮನೆಯಲ್ಲಿ  ಸೇವಾರ್ಥವಾಗಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ವಿದ್ಯುನ್ಮಾಲಿ ಹಾಗೂ ಅದಿತಿ ಸಂಭಾಷಣೆ ನಡೆಯುತ್ತಿದ್ದ ವೇಳೆ  ಸಭೆಯಿಂದ ಏಕಾಏಕಿ ಓಡೋಡಿ ಬಂದ ವ್ಯಕ್ತಿಯೊಬ್ಬರು ವೇಷಧಾರಿಯ ಮೇಲೆ ಎರಗಿದ್ದಾರೆ.

ಇದನ್ನೂ ಓದಿ : ಕಾಡು ಹಂದಿ ಮಾಂಸದ ಆಮಿಷವೊಡ್ಡಿ ವಂಚನೆ; ಖದೀಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

ಏಕಾಏಕಿ ವೇದಿಕೆ ಮೇಲೆ ಹಾರಿ ಬಂದ ವ್ಯಕ್ತಿಯ ವರ್ತನೆಯಿಂದ   ಕಲಾವಿದರು, ಪ್ರೇಕ್ಷಕರು ದಿಗ್ಬ್ರಮೆಗೊಳಗಾಗಿ ಗಲಿಬಿಲಿಗೊಂಡಿದ್ದಾರೆ.  ಕೂಡಲೇ ಆತನನ್ನು ತಡೆದು ಇತರರ ಸಹಕಾರದಿಂದ ಎಳೆದುಕೊಂಡು ದೂರ ಹೋಗಿರುವುದು ವೀಡಿಯೋದಲ್ಲಿದೆ. ವೇದಿಕೆಗೆ ನುಗ್ಗಿದ ವ್ಯಕ್ತಿ ಸ್ಥಳೀಯ ನಿವಾಸಿ ರಾಧಾಕೃಷ್ಣ ಎಂದು ಗುರುತಿಸಲಾಗಿದ್ದು,  ಮೈಮೇಲೆ ಆವೇಶ ಬಂದ ರೀತಿಯಲ್ಲಿ ವರ್ತಿಸಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.

Continue Reading
Advertisement

Trending

Copyright © 2025 Namma Kudla News

You cannot copy content of this page