Connect with us

BANTWAL

ನವೆಂಬರ್ 26 ರಿಂದ ಈ ಬಾರಿಯ ಕಂಬಳ ಸೀಸನ್ ಪ್ರಾರಂಭ..! ಪಿಲಿಕುಳ ಈ ಬಾರಿಯೂ ಡೌಟ್…

Published

on

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಬಿಡುಗಡೆಗೊಳಿಸಿದ್ದ ವೇಳಾಪಟ್ಟಿಯಂತೆ ಇದೇ ವಾರ ಆರಂಭವಾಗಬೇಕಿದ್ದ ಕಂಬಳ ಸೀಸನ್ ಮುಂದೂಡಲಾಗಿದ್ದು ನ.26ರಂದು ಕಕ್ಯಪದವು ಸತ್ಯಧರ್ಮ ಜೋಡುಕರೆ ಕಂಬಳದೊಂದಿಗೆ ಆರಂಭವಾಗಲಿದೆ.

ಈ ಋತುವಿನ ಮೊದಲ ಮೂರು ಕಂಬಳಗಳು ಮುಂದೂಡಲ್ಪಟ್ಟಿರುವುದರಿಂದ ಕಂಬಳ ಆರಂಭ ಮೂರು ವಾರ ವಿಳಂಬವಾಗಲಿದೆ. ಇದರೊಂದಿಗೆ ಒಟ್ಟು ಕಂಬಳಗಳ ಸಂಖ್ಯೆ 24ರಿಂದ 21ಕ್ಕೆ ಇಳಿಕೆಯಾಗಲಿದೆ.

ಸಾಂಪ್ರದಾಯಿಕ ಕಂಬಳವಾಗಿರುವ ಶಿರ್ವ ಕಂಬಳ ಹಗಲು ಮಾತ್ರ ನಡೆಯುತ್ತದೆ.

ಈ ಬಾರಿ ಗದ್ದೆಯಲ್ಲಿ ಭತ್ತ ನಾಟಿ ವಿಳಂಬವಾಗಿ, ಮಳೆಯ ನಡುವೆ ಕಟಾವು ಇನ್ನಷ್ಟೇ ನಡೆಯಬೇಕಿರುವುದರಿಂದ ಶಿರ್ವ ಕಂಬಳವನ್ನು ಒಂದು ತಿಂಗಳು ಮುಂದೂಡಲಾಗಿದ್ದು, ಡಿ.13ರಂದು ಮಂಗಳವಾರ ನಡೆಯಲಿದೆ.

ನ.19ರಂದು ನಿಗದಿಯಾಗಿದ್ದ ಪಜೀರು ಕಂಬಳ ಕರೆಗೆ ಮೊನ್ನೆಯಷ್ಟೇ ಶಿಲಾನ್ಯಾಸ ನಡೆದಿದೆ.

ಕರೆ ಇನ್ನಷ್ಟೇ ಸಿದ್ಧವಾಗಬೇಕಿರುವುದರಿಂದ ಹೊಸ ದಿನಾಂಕ ನೀಡಲಾಗಿಲ್ಲ. ಈ ನಡುವೆ, ಈ ಪ್ರದೇಶದ ಮೂರ್ನಾಲ್ಕು ಕಂಬಳ ಸಮಿತಿಗಳು ಸೇರಿಕೊಂಡು ಈ ಬಾರಿ ಪಜೀರಿನಲ್ಲಿ ಕಂಬಳ ನಡೆಸುವ ಮಾತುಕತೆಯೂ ನಡೆಯುತ್ತಿದೆ.

ಕಟಪಾಡಿ, ಜೆಪ್ಪು ಸಹಿತ ಇತರ ಕೆಲವು ಕಂಬಳಗಳ ದಿನಾಂಕಗಳಲ್ಲೂ ಸಣ್ಣಪುಟ್ಟ ಬದಲಾವಣೆಯಾಗಿದೆ.

ಇಂತಹ ದಿನಾಂಕ ಹೊಂದಾಣಿಕೆ ಮುಂದೆಯೂ ನಡೆಯಬಹುದು ಎಂದು ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ತಿಳಿಸಿದ್ದಾರೆ.

ಆನೇಕ ವರ್ಷಗಳಿಂದ ಸ್ಥಗಿತಗೊಂಡಿದ್ದ ಪಿಲಿಕುಳ ಕಂಬಳ ಈ ಬಾರಿ ಆರಂಭವಾಗುವ ಸೂಚನೆಗಳು ದೊರಕಿದ್ದು ನ.12ರ ದಿನಾಂಕ ನಿಗದಿಯಾಗಿತ್ತು.

ಆದರೆ ‘ಈ ಬಾರಿ ಕಂಬಳ ನಡೆಸಲು ಭಾರಿ ಆಸಕ್ತಿ ವಹಿಸಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ವರ್ಗಾವಣೆಗೊಂಡಿದ್ದಾರೆ.

ಹೊಸ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಇನ್ನಷ್ಟೇ ಅಧಿಕಾರ ವಹಿಸಿಕೊಳ್ಳಬೇಕಿದೆ.

ಜೊತೆಗೆ ಕಂಬಳಕ್ಕೆ ಬೇಕಾದ ಸಿದ್ದತೆಗಳು ಇನ್ನೂ ಆರಂಭವಾಗಿಲ್ಲ ಹೀಗಾಗಿ ಪಿಲಿಕುಳದಲ್ಲಿ ಈ ಬಾರಿಯೂ ಕಂಬಳ ನಡೆಯುವುದು ಡೌಟ್.. ಎಂದೇ ಹೇಳಲಾಗುತ್ತಿದೆ.

Advertisement
Click to comment

Leave a Reply

Your email address will not be published. Required fields are marked *

BANTWAL

ಬಸ್ ಡ್ರೈವರ್ ಹಾಗೂ ಕಂಡಕ್ಟರ್‌ಗೆ ಬೆದರಿಕೆ; ಪ್ರಕರಣ ದಾಖಲು

Published

on

ಬಂಟ್ವಾಳ : ಬಸ್‌ ತಿರುಗಿಸುವ ವಿಚಾರದಲ್ಲಿ ಖಾಸಗಿ ಬಸ್‌ನ್ನು ತಡೆದ ತಂಡವೊಂದು ಡ್ರೈವರ್ ಹಾಗೂ ಕಂಡಕ್ಟರ್‌ನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ನಡೆದಿತ್ತು.

ಎ.21 ರಂದು ರಾತ್ರಿ 7.40 ರ ಸುಮಾರಿಗೆ ಬಸ್‌ ಪೊಳಲಿ-ಕೊಳತ್ತಮಜಲು ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಬಸ್‌ ತಿರುಗಿಸುವ ವಿಚಾರದಲ್ಲಿ ಆರೋಪಿಗಳಾದ ಉಮೇಶ ಶೆಟ್ಟಿ, ವಿಜಯ, ಕಿಶೋರ, ಪ್ರಶಾಂತ್‌ ಹಾಗೂ ಇತರರು ತಕರಾರು ತೆಗೆದಿದ್ದಾರೆ.

ಗಲಾಟೆ ಮಾಡಿ ಬಳಿಕ ಆರೋಪಿಗಳು ಪಲಾಯನಗೈದಿದ್ದಾರೆ. ಬಳಿಕ ಬಸ್‌ ಕಂಡಕ್ಟರ್ ಅಭಿಜಿತ್‌ ಶೆಟ್ಟಿ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಬೀಗ ಮುರಿದು ಬಟ್ಟೆ ಮಳಿಗೆಯಲ್ಲಿ ಕಳ್ಳತನ ಪ್ರಕರಣ; ಒಬ್ಬ ಆರೋಪಿ ಅಂದರ್

Published

on

ಬಂಟ್ವಾಳ: ಬಟ್ಟೆ ಮಳಿಗೆಯೊಂದರ ಬೀಗ ಮುರಿದು ನಗದು ದೋಚಿದ ಘಟನೆ ಮಂಗಳೂರಿನ ಫರಂಗಿಪೇಟೆಯಲ್ಲಿ ನಡೆದಿತ್ತು. ಇದೀಗ ಪ್ರಕರಣವನ್ನು ಬೇಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಡ್ಯಾರು ಗ್ರಾಮದ ಕಣ್ಣೂರು ನಿವಾಸಿ ನಝೀ‌ರ್ ಮಹಮ್ಮದ್ ಬಂಧಿತ ಆರೋಪಿಯಾಗಿದ್ದು, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ನಝೀರ್‌ನಿಂದ 1,09,490 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಎ. 11ರ ತಡರಾತ್ರಿ ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ಸಂಕೀರ್ಣದಲ್ಲಿದ್ದ ವೈಟ್‌ಲೆ ‌ನ್ ಕಿಡ್ಸ್ ವರ್ಲ್ಡ್ ಬಟ್ಟೆ ಮಳಿಗೆಯ ಶಟರ್‌ನ ಬೀಗ ಮುರಿದು ಒಳಪ್ರವೇಶಿಸಿ ಕ್ಯಾಶ್ ಕೌಂಟರ್‌ನಲ್ಲಿದ್ದ ಸುಮಾರು 4 ಲಕ್ಷ ರೂ.ಗಳನ್ನು ಕಳವು ಮಾಡಿದ್ದಾನೆ ಎಂದು ಮಾಲಕ ಇರ್ಫಾನ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಬಂಧಿತ ಆರೋಪಿ ನಝೀರ್ ಮಹಮ್ಮದ್‌ನು ಕಳೆದ ವರ್ಷ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಟಿವಿಎಸ್ ಶೋರೂಮ್‌ನ ಗಾಜು ಒಡೆದು ಹಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟ‌ರ್ ಶಿವಕುಮಾ‌ರ್ ಬಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

Continue Reading

BANTWAL

ಕ್ರೈಸ್ತ ಬಾಂಧವರಿಂದ ಈಸ್ಟರ್ ಸಂಭ್ರಮ ; ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತರು ಪಾಲು

Published

on

ಬಂಟ್ವಾಳ : ಕರಾವಳಿಯ ಕ್ರೈಸ್ತರು ನಿನ್ನೆ (ಏ.19) ಏಸುಕ್ರಿಸ್ತರು ಮರಣ ಗೆದ್ದು ಪುನರುತ್ಥಾನರಾದ ಹಬ್ಬವಾದ ಈಸ್ಟರ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಿದ್ದಾರೆ. ಹಾಗಾಗಿ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತರು ವಿವಿಧ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಿದರು.

ಪೆರುವಾಯಿ ಫಾತಿಮಾ ಮಾತೆಯ ಇಗರ್ಜಿಯಲ್ಲಿ ಫಾ. ಸೈಮನ್ ಡಿಸೋಜಾ ನೇತೃತ್ವದಲ್ಲಿ ಈಸ್ಟರ್ ಆಚರಿಸಲಾಯಿತು. ಚರ್ಚ್ ಆವರಣದಲ್ಲಿ ಆಶಿರ್ವಚನ ಹಾಗೂ ಮೊಂಬತ್ತಿ ಮೆರವಣಿಗೆ ನಡೆಯಿತು. ಬಳಿಕ ಚರ್ಚ್ ನಲ್ಲಿ ಸ್ತೋತ್ರ ಹಾಡಲಾಯಿತು. ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ದೇವರ ವಾಕ್ಯ ವಾಚನ, ಕೀರ್ತನೆ ಗಾಯನ ಹಾಗೂ ಧರ್ಮಗುರುಗಳಿಂದ ಪ್ರವಚನ ನಡೆಯಿತು.

ಪವಿತ್ರಸ್ನಾನದ ಪ್ರತಿಜ್ಞೆ ನವೀಕರಿಸಲಾಯಿತು. ಪವಿತ್ರ ಜಲ ಆಶೀರ್ವದಿಸಲಾಯಿತು. ಧಾರ್ಮಿಕ ವಿಧಿಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ ಇದ್ದರು. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಬಲಿಪೂಜೆ ನೆರವೇರಿಸಿದರು.

Continue Reading
Advertisement

Trending

Copyright © 2025 Namma Kudla News

You cannot copy content of this page