Connect with us

BIG BOSS

BBK11: ಅಬ್ಬಾ.. ಇದೇ ಮೊದಲ ಬಾರಿಗೆ ಸ್ಪರ್ಧಿಗಳಿಗೆ ಅತಿ ದೊಡ್ಡ 6 ಆಫರ್​ ಕೊಟ್ಟ ಬಿಗ್​ಬಾಸ್​; ಏನದು?

Published

on

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11 ಐದನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಬಿಗ್​ಬಾಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮನೆಯಲ್ಲಿರೋ ಸ್ಪರ್ಧಿಗಳಿಗೆ ಅತಿ ದೊಡ್ಡ 6 ಆಫರ್​ ನೀಡಿದ್ದಾರೆ.

ಹೌದು, 13 ಮಂದಿ ಇರುವ ಬಿಗ್​ಬಾಸ್​ ಸೀಸನ್​ 11ರಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಆಫರ್ ನೀಡಲಾಗಿದೆ. ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಯಾವ ಟೀಮ್​ ಗೆಲ್ಲುತ್ತದೆಯೋ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಹೀಗಾಗಿ ನಾಲ್ಕು ತಂಡವನ್ನು ರಚಿಸಿದ ಬಿಗ್​ಬಾಸ್​ ಈ ಟಾಸ್ಕ್​ಗಳನ್ನು ನೋಡಿದ್ದಾರೆ. ಟಾಸ್ಕ್​ ಗೆದ್ದ ತಂಡಕ್ಕೆ ಬಿಗ್​ಬಾಸ್​ ಮನೆಯಲ್ಲಿರೋ ಅಧಿಕಾರವನ್ನು ಏಕಾಕಾಲದಲ್ಲಿ ಪಡೆಯಲು, ಅನುಭವಿಸಲು ಹಾಗೂ ಈ ಮನೆಯ ಮೇಲಿನ ಅಧಿಕಾರವನ್ನು ಸಾಧಿಸಲು ಒಂದೇ ವಾರದಲ್ಲಿ ಅನುಭವಿಸಬಹುದಾಗಿದೆ.

ಟಾಸ್ಕ್​ ಗೆದ್ದ ತಂಡಕ್ಕೆ ಬಿಗ್​ಬಾಸ್​ ಕೊಟ್ಟ ಆಫರ್​ ಏನು?

1. ಇಮ್ಯೂನಿಟಿ ಕಾರ್ಡ್​: ಈ ವಾರದ ನಾಮಿನೇಷನ್​ನಿಂದ ಇಮ್ಯೂನಿಟಿ.

2. ಕ್ಯಾಪ್ಟನ್ಸಿ ಕಂಟೆಂಡರ್ ಕಾರ್ಡ್: ಗೆದ್ದವರಿಗೆ ಕ್ಯಾಪ್ಟನ್ಸಿ ಓಟಕ್ಕೆ ನೇರ ಪ್ರವೇಶ.

3. ಲಕ್ಷುರಿ ಕಾರ್ಡ್​: ಗೆದ್ದವರಿಗೆ ಬಾಯಿ ಚಪ್ಪರಿಸುವ ಆನಂದ.

4. ಗುಡ್​ನೈಟ್​ ಕಾರ್ಡ್​: ಗೆದ್ದವರಿಗೆ ಈ ಮನೆಯಲ್ಲಿನ ನಿದ್ದೆ ಹಾಗೂ ಮಂಚಗಳ ಮೇಲಿನ ಅಧಿಕಾರದ ಸುಖ.

5. ಕಿಕ್​ ಔಟ್​ ಕಾರ್ಡ್​: ಗೆದ್ದವರಿಗೆ ಮುಂದಿನ ಟಾಸ್ಕ್​ನಿಂದ ಒಂದು ತಂಡವನ್ನು ಹೊರಗೆ ಇಡುವ ಅಧಿಕಾರ.

6. ಪನಿಶ್ಮೆಂಟ್ ಕಾರ್ಡ್​: ಗೆದ್ದವರಿಗೆ ಮನೆ ಕೆಲಸದಿಂದ ಸಂಪೂರ್ಣ ಮುಕ್ತಿ. ಸೋತವರಿಗೆ ಹೆಚ್ಚುವ ಮನೆಕೆಲಸ ಹಾಗೂ ಒಂದು ತಂಡಕ್ಕೆ ಗೆದ್ದ ತಂಡದಿಂದ ಸೇವಾ ಭಾಗ್ಯಾ.

ಪ್ರತಿ ತಂಡ ತಮ್ಮ ಎದುರಾಳಿ ತಂಡಗಳ ವಿರುದ್ಧ ಮುನ್ನಡೆ ಸಾಧಸುವುದು ತುಂಬಾ ಮುಖ್ಯ ಅಂತ ಬಿಗ್​ಬಾಸ್​ ಅನೌನ್ಸ್​ ಮಾಡಿದ್ದಾರೆ. ಇನ್ನೂ ಬಿಗ್​ಬಾಸ್​ ಕೊಟ್ಟ ತವರಿನ ಸಿರಿ ಟಾಸ್ಕ್​ನಲ್ಲಿ ಗೌತಮಿ ಅವರ ಟೀಮ್​ ಗೆದ್ದಿದೆ. ಹೀಗಾಗಿ ಅವರು ಇಮ್ಯೂನಿಟಿ ಕಾರ್ಡ್ ಆನ್ನು ಆಯ್ಕೆ ಮಾಡಿ ಅನುಷಾ ಅವರನ್ನು ನಾಮಿನೇಷ್​ನಿಂದ ಸೇಫ್ ಮಾಡಿದ್ದಾರೆ. ಅಲ್ಲದೇ ಮನೆಯ ಕ್ಯಾಪ್ಟನ್​ ಹನುಮಂತ ಅವರ ಆಯ್ಕೆ ಅನುಸಾರ ಧನರಾಜ್​, ಗೋಲ್ಡ್​ ಸುರೇಶ್​ ಹಾಗೂ ಮೋಕ್ಷಿತಾ ಪೈ ಈ ವಾರ ಮನೆಯಿಂದ ಆಚೆ ಹೋಗಲು ನೇರವಾಗಿ ನಾಮಿನೇಟ್​ ಆಗಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಯಾರ ತಂಡ ಯಾವ ಅಧಿಕಾರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಅಂತ ಕಾದು ನೋಡಬೇಕಾಗಿದೆ.

BIG BOSS

ನಿಶ್ಚಿತಾರ್ಥ ಮಾಡಿಕೊಂಡ BBK11ರ ಸ್ಪರ್ಧಿ ಉಗ್ರಂ ಮಂಜು

Published

on

ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿ, ನಟ ಉಗ್ರಂ ಮಂಜು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಮಂಜು ಬದುಕಿನಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ.

ಮ್ಯಾಕ್ಸ್ ಮಂಜು ಅವರು ಸಂಧ್ಯಾ ಖುಷಿ ಎನ್ನುವವರ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದು, ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ, ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ’ ಬರೆದುಕೊಂಡಿದ್ದಾರೆ.

ಮ್ಯಾಕ್ಸ್​ ಮಂಜು ಅವರು ಬಿಗ್ ಬಾಸ್ ಸೀಸನ್​ 11ರಲ್ಲಿ ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು. ಬಿಗ್ ಬಾಸ್​ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮ್ಯಾಕ್ಸ್ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ.

ಇದನ್ನೂ ಓದಿ: 20 ವರ್ಷದ ಯುವತಿ ವಿರುದ್ದ ಕೇಸ್ ದಾಖಲಿಸಿದ ಖ್ಯಾತ ನಟಿ ಅನುಪಮಾ ಪರಮೇಶ್ವರನ್‌; ಪೋಸ್ಟ್‌ನಲ್ಲೇನಿದೆ?

ಹುಡುಗಿ ಯಾರು?
ಉಗ್ರಂ ಮಂಜು ಕೈಹಿಡಿಯಲಿರುವ ಸಂಧ್ಯಾ ಖುಷಿ ಅವರು ಸ್ಪರ್ಷ್ ಆಸ್ಪತ್ರೆಯಲ್ಲಿ ಟ್ರಾನ್ಸ್‌ಪ್ಲ್ಯಾಂಟ್ ಕೋರ್ಡಿನೇಟರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಬಹಳ ಸಕ್ರಿಯವಾಗಿರುವ ಸಂಧ್ಯಾ ಅವರು ತಮ್ಮ ಹಲವಾರು ವಿಡಿಯೋಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ.

Continue Reading

BIG BOSS

ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ? ಸುದೀಪ್ ಬಿಚ್ಚಿಟ್ರು ಅಸಲಿ ಸತ್ಯ!

Published

on

BBK 12 : ವಾರಾಂತ್ಯ ಬಂತೆಂದರೆ ಎಲ್ಲರೂ ಕಿಚ್ಚನ ಆಗಮನಕ್ಕಾಗಿ ಕಾಯುತ್ತಿರುತ್ತಾರೆ. ಈ ಬಾರಿ ಎಂದಿನಂತೆ ಕಿಚ್ಚ ವೀಕೆಂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ವಾರದ ಪಂಚಾಯಿತಿ ನಡೆಸಲು ಬರುತ್ತಿದ್ದಂತೆ ಗರಂ ಆಗಿದ್ದರು. ರಕ್ಷಿತಾ ಶೆಟ್ಟಿ ಕಲಾವಿದರಿಗೆ ಚಪ್ಪಲಿ ತೋರಿಸಿದ್ದಾರೆಂಬ ಅಶ್ವಿನಿ ಗೌಡ ಆರೋಪಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ.

ರಕ್ಷಿತಾ.. ನಾಟಕ ಅಂತ ಹೇಳಿಕೊಂಡು ನೀನು ಚಪ್ಪಲಿ ತೋರಿಸಿದ್ದೀಯಾ ಅಂದರೆ ಯಾರಿಗೆ ನೀನು ಅವಮಾನ ಮಾಡುತ್ತಾ ಇದ್ದೀಯಾ? ಎಂದು ಕಿಚ್ಚ ಸುದೀಪ್ ಮುಂದೆಯೇ ಅಶ್ವಿನಿ ಗೌಡ ಆರೋಪ ಮಾಡಿದ್ದಾರೆ.

ಆಗ ಸುದೀಪ್, ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ನಾನು ತಪ್ಪು ಹೇಳಿಕೆ ಕೊಟ್ಟಾಗ ಏನಾಗುತ್ತೆ ಯಾರ್ ಯಾರೋ ಕಲಾವಿದರಿಗೆ ಹೇಳಿದ್ದರಂತೆ, ಕಲಾವಿದರಿಗೆ ಹೇಳಿದ್ದರಂತೆ ಅಂತಾರೆ. ಯಾಕೆ ಮೇಡಂ ವೇದಿಕೆ ಮೇಲೆ ನಿಂತಿರುವ ನಾನು ಒಬ್ಬ ಕಲಾವಿದ ಅಲ್ವಾ? ಕರ್ನಾಟದಲ್ಲಿ ಇರುವ ಪ್ರತಿಯೊಬ್ಬ ಕಲಾವಿದರಿಗೆ ನಾನು ಉತ್ತರ ಕೊಡಬೇಕಾಗಿತ್ತು. ಇದೊಂದು ತಪ್ಪು ಗ್ರಹಿಕೆ ಎಂದಿದ್ದಾರೆ.

ಅಸಲಿಗೆ ಆಗಿದ್ದೇನು?

ಕಳೆದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಜಗಳ ನಡೆದಿತ್ತು. ಈ  ವೇಳೆ ಅಶ್ವಿನಿ ಗೌಡ ರಕ್ಷಿತಾ ಮೇಲೆ ಗಂಭೀರ ಆರೋಪ ಮಾಡಿದ್ದರು. ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದರು. ನಾಲ್ಕೈದು ಬಾರಿ ಚಪ್ಪಲಿ ತೋರಿಸಿ ಮಾತನಾಡಿದ್ರು ಎಂದು ಆರೋಪಿಸಿದ್ದರು.

ಇದನ್ನೂ ಓದಿ : BBK12: ಗ್ರೂಪಿಸಂ ಮಾಡಿ ಗಿಲ್ಲಿಗೆ ಕಳಪೆ ಪಟ್ಟ; ಕಿಚ್ಚನ ಕ್ಲಾಸ್?

ಇದೀಗ ಇದೇ ವಿಚಾರವಾಗಿ ಸುದೀಪ್ ಅವರು ವಾರದ ಪಂಚಾಯಿತಿಯಲ್ಲಿ ಪ್ರಶ್ನಿಸಿದ್ದಾರೆ. ಇದೊಂದು ತಪ್ಪು ಗ್ರಹಿಕೆ ಎಂದು ರಕ್ಷಿತಾ ಮೇಲಿನ ಆರೋಪಕ್ಕೆ ತೆರೆ ಎಳೆದಿದ್ದಾರೆ.

Continue Reading

BIG BOSS

ವ್ಯಕ್ತಿತ್ವದ ಪರೀಕ್ಷೆಯಲ್ಲಿ ಗೆಲ್ಲೋದು ಯಾರು? ಯಾರಿಗೆ ಗೇಟ್‌ ಪಾಸ್?

Published

on

BBK12 : ಬಿಗ್ ಬಾಸ್ ಕನ್ನಡ ಸೀಸನ್‌ 12 ಶೋನಲ್ಲಿ ವಾರಾಂತ್ಯ ಬಂತು ಅಂದ್ರೆ ಕುತೂಹಲ ಹೆಚ್ಚು. ಕಿಚ್ಚ ಯಾರಿಗೆ ಕ್ಲಾಸ್ ತಗೋತ್ತಾರೆ? ಕಿಚ್ಚನ ಚಪ್ಪಾಳೆ ಯಾರಿಗೆ? ಯಾರು ದೊಡ್ಮನೆಯಿಂದ ಹೊರ ಹೋಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತೆ. ಹಾಗಾಗಿ ಕಿಚ್ಚನ ಬರುವಿಕೆಗಾಗಿ ಬಿಗ್ ಬಾಸ್ ವೀಕ್ಷಕರು ಕಾಯುತ್ತಿರುತ್ತಾರೆ.

ಅಂದಹಾಗೆ,  ಈ ಬಾರಿ ಎಲ್ಲಾ ಸ್ಪರ್ಧಿಗಳನ್ನು ಕಿಚ್ಚ ಸುದೀಪ್‌ ನಾಮಿನೇಟ್‌ ಮಾಡಿದ್ದರು. ಈ ವಾರ ವ್ಯಕ್ತಿತ್ವದ ಆಟ, ಫಿಸಿಕಲ್‌ ಟಾಸ್ಕ್‌ ಇರೋದಿಲ್ಲ ಎಂದು ಹೇಳಿದ್ದರು. ಹಾಗಾಗಿ ಯಾರು ಬಚಾವಾಗ್ತಾರೆ ಅನ್ನೋ ಕುತೂಹಲ ಹೆಚ್ಚು.

ಕಲರ್ಸ್‌ ಕನ್ನಡ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕಿಚ್ಚ ಸುದೀಪ್ ವಾರದ ಪಂಚಾಯಿತಿ ನಡೆಸಲು ವೇದಿಕೆಗೆ ಎಂಟ್ರಿ ಕೊಟ್ಟಿರೋದನ್ನು ಕಾಣಬಹುದು. ತಾಳ್ಮೆ ನಮಗೆ ಕಲಿಸುವುದು ಪಾಠ ಒಂದು ಕಡೆಯಾದರೆ, ಬದುಕು ದಿನನಿತ್ಯ ಕಲಿಸುವ ಪಾಠಗಳೇ ಬೇರೆ ತರ ಆಗಿರುತ್ತವೆ.

ಬಿಗ್‌ಬಾಸ್‌ನಲ್ಲಿ ಪರೀಕ್ಷೆ ಎಲ್ಲರಿಗೂ ಒಂದೆ. ಆದರೇ, ಪಠ್ಯಕ್ರಮ ಎಲ್ಲ ವ್ಯಕ್ತಿತ್ವಗಳಿಗೆ ಸರಿಯಾಗಿ ಬದಲಾಗುತ್ತಾ ಹೋಗುತ್ತದೆ. ವ್ಯಕ್ತಿತ್ವದ ಪರೀಕ್ಷೆಯಲ್ಲಿ ಪಾಸ್ ಆದೋರು ಯಾರು? ಪಾಸ್ ಆಗದವರು ಯಾರು? ಎಂದು ಅವರು ಹೇಳಿದ್ದಾರೆ.

ಈ ಬಾರಿ ಲೆಟರ್‌ ಟಾಸ್ಕ್‌ ಇತ್ತು. ಎಲ್ಲ ಸ್ಪರ್ಧಿಗಳಿಗೂ ಮನೆಯವರಿಂದ ಪತ್ರ ಬಂದಿತ್ತು. ಈ ಪತ್ರ ಪಡೆಯಲು ಎಮೋಶನ್ ಟಾಸ್ಕ್ ಇತ್ತು. ಯಾರಿಗೆ ಪತ್ರ ಸಿಕ್ಕಿದೆಯೋ ಅವರಿಗೆ ಇಮ್ಯೂನಿಟಿ ಸಿಕ್ಕಿದೆ. ಅಭಿಷೇಕ್‌, ಜಾಹ್ನವಿ, ಕಾವ್ಯ ಶೈವ, ಮಾಳು ನಿಪನಾಳ, ರಿಷಾ ಗೌಡ ಅವರಿಗೆ ಪತ್ರ ಸಿಕ್ಕಿದ್ದು,  ಅವರು ಒಂದು ವಾರ ಸೇಫ್‌ ಆಗಿದ್ದಾರೆ.

ಇದನ್ನೂ ಓದಿ : BBK12: ಗ್ರೂಪಿಸಂ ಮಾಡಿ ಗಿಲ್ಲಿಗೆ ಕಳಪೆ ಪಟ್ಟ; ಕಿಚ್ಚನ ಕ್ಲಾಸ್?

ಪತ್ರ ಸಿಗದ ಅಶ್ವಿನಿ ಗೌಡ, ರಕ್ಷಿತಾ, ಗಿಲ್ಲಿ ನಟ, ಧನುಷ್, ಕಾಕ್ರೋಚ್ ಸುಧಿ, ಸ್ಪಂದನಾ, ಧ್ರುವಂತ್, ಸೂರಜ್, ಚಂದ್ರಪ್ರಭ ಹಾಗೂ ರಾಶಿಕಾ ಬಿಗ್‌ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page