Connect with us

FILM

ನಡುರಸ್ತೇಲಿ ನಿಂತ ಕಾರಲ್ಲೇ ಡ್ರೆಸ್ ಚೇಂಜ್ ಮಾಡುತ್ತಿದ್ದ ಈ ನಟಿ…ಯಾರು ಗೊತ್ತಾ?

Published

on

ನಮಗೆಲ್ಲಾ ತಿಳಿದಿರುವಂತೆ, ಕಹಾನಿ 2012 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ನವಾಜುದ್ದೀನ್ ಸಿದ್ದಿಕಿ, ಪರಂಬ್ರತ ಚಟರ್ಜಿ, ಶಾಶ್ವತ ಚಟರ್ಜಿ, ಇಂದ್ರನೀಲ್ ಸೆಂಗುಪ್ತ, ಧೃತಿಮಾನ್ ಚಟರ್ಜಿ, ದರ್ಶನ್ ಜರಿವಾಲಾ ಮತ್ತು ಇತರರು ನಟಿಸಿದ್ದರು. ಕಾಣೆಯಾದ ಗಂಡನನ್ನು ಹುಡುಕಲು ಲಂಡನ್‌ನಿಂದ ಕೋಲ್ಕತ್ತಾಗೆ ಪ್ರಯಾಣಿಸುವ ವಿದ್ಯಾ ಬಾಗ್ಚಿ ಎಂಬ ಗರ್ಭಿಣಿ ಮಹಿಳೆಯನ್ನು ಕಥೆಯನ್ನು ಇದು ಹೊಂದಿದೆ. ಆದರೆ, ಸಿನಿಮಾದ ಕ್ಲೈಮ್ಯಾಕ್ಸ್‌ ಮಾತ್ರ ಬಹಳ ವಿಭಿನ್ನವಾಗಿ ಚಿತ್ರಿಸಲಾಗಿತ್ತು.


ಕಹಾನಿ ಸ್ಲೀಪರ್ ಹಿಟ್ ಆಗಿ ಹೊರಹೊಮ್ಮಿ 12 ವರ್ಷಗಳಾಗಿವೆ. ಆದರೆ, ಸುಜಯ್‌ ಘೋಷ್‌ ನಿರ್ದೇಶನದ ಈ ಸಿನಿಮಾದ ಇನ್‌ಸೈಡ್‌ ಸ್ಟೋರಿಗಳು ಇಂದಿಗೂ ಈ ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸುವಂತೆ ಮಾಡುತ್ತದೆ. ಕೋಲ್ಕತ್ತಾದ ದುರ್ಗಾಪೂಜೆಯ ಸಂಭ್ರವವನ್ನು ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರಿಸಲಾಗಿತ್ತು. ಅದರೊಂದಿಗೆ ಸಿನಿಮಾವನ್ನು ಗೆರಿಲ್ಲಾ ಫಿಲ್ಮ್‌ಮೇಕಿಂಗ್‌ ಮಾಡಲಾಗಿತ್ತು. ಅದೇನೇ ಇದ್ದರೂ ಕಹಾನಿ ಸಿನಿಮಾವನ್ನು ಶೂಟಿಂಗ್‌ ಮಾಡೋದು ನಿರ್ದೇಶಕರಿಗೆ ಮಾತ್ರವಲ್ಲ ನಟರಿಗೂ ಕಷ್ಟವಾಗಿತ್ತು.


“ಈ ಸಿನಿಮಾಗಾಗಿ ದೊಡ್ಡ ಬಜೆಟ್‌ ಇದ್ದಿರಲಿಲ್ಲ. ವ್ಯಾನಿಟಿ ವ್ಯಾನ್‌ ಸೌಲಭ್ಯವೂ ಇರಲಿಲ್ಲ. ನಿಸಲ್ಲಿಸುವ ಹಾಗೆಯೂ ಇರಲಿಲ್ಲ. ಹಾಗಾಗಿ ಪ್ರತಿ ಬಾರಿ ಅವರು ಬಟ್ಟೆ ಬದಲಾಯಿಸಬೇಕಾದಾಗ, ಅವರ ಇನ್ನೋವಾ ಕಾರ್‌ಗೆ ಕಪ್ಪು ಬಟ್ಟೆ ಹೊದಿಸಿ, ನಡು ರಸ್ತೆಯಲ್ಲಿ ನಿಂತಿದ್ದ ಕಾರ್‌ನಲ್ಲಿಯೇ ಬಟ್ಟೆ ಬಸಲಾಯಿಸಿ, ಶೂಟಿಂಗ್‌ಗೆ ಬರುತ್ತಿದ್ದರು” ಎಂದು ನಿರ್ದೇಶಕರು ಹೇಳಿದ್ದಾರೆ.
“ಅಲಾದಿನ್‌ನ ವೈಫಲ್ಯದ ನಂತರ, ವಿದ್ಯಾ ಅವರು ಕಹಾನಿ ಬೇಡ ಎಂದು ಸುಲಭವಾಗಿ ಹೇಳಬಹುದಿತ್ತು. ಆದರೆ, ಅವರು ಅದಾಗಲೇ ಮಾತು ಕೊಟ್ಟಾಗಿತ್ತು. ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌ ರೀತಿಯಲ್ಲಿ ಕೊಟ್ಟ ಮಾತನ್ನು ಪಾಲಿಸುವಂತ ಕಲಾವಿದೆ ವಿದ್ಯಾ ಬಾಲನ್‌” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

FILM

ಜು.14 ರಂದು ಥೈಲ್ಯಾಂಡ್‌ ದೇಶಕ್ಕೆ ಹಾರಲಿದ್ದಾರೆ ನಟ ದರ್ಶನ್

Published

on

ಬೆಂಗಳೂರು: ಜು.14 ರಂದು ನಟ ದರ್ಶನ್ ಡೆವಿಲ್ ಚಿತ್ರದ ಬಾಕಿ ಇರುವ ಒಂದೇ ಒಂದು ಹಾಡಿನ ಶೂಟಿಂಗ್‌ಗಾಗಿ ಥೈಲ್ಯಾಂಡ್ ದೇಶಕ್ಕೆ ಹಾರಲಿದ್ದಾರೆ.

ಅಲ್ಲದೇ ವಿದೇಶಕ್ಕೆ ತೆರಳಲು ಅನುಮತಿಯನ್ನೂ ಪಡೆದುಕೊಂಡಿದ್ದಾರೆ. ಕೋರ್ಟ್ ಆದೇಶದಂತೆ ದರ್ಶನ್ ಸೋಮವಾರ ಥಾಯ್ಲೆಂಡ್‌ಗೆ ತೆರಳಲಿದ್ದಾರೆ. ಡೆವಿಲ್ ಚಿತ್ರದ ಡ್ಯುಯೆಟ್ ಹಾಡೊಂದರ ಚಿತ್ರೀಕರಣಕ್ಕೆ ಥೈಲ್ಯಾಂಡ್‌ ದೇಶದ ಬ್ಯಾಂಕಾಕ್, ಪುಕೆಟ್, ಕ್ರಾಬಿಯಲ್ಲಿ ದರ್ಶನ್ ಹಾಡಿನ ಚಿತ್ರೀಕರಣದಲ್ಲಿ ನಡೆಯಲಿದೆ. ಇದು ಕೊಲೆ ಪ್ರಕರಣದ ಬಳಿಕ ದರ್ಶನ್ ತೆರೆಳುತ್ತಿರುವ ಮೊದಲ ವಿದೇಶ ಪ್ರಯಾಣವಾಗಿದೆ.

ಇದನ್ನೂ ಓದಿ: ವಾಕಿಂಗ್ ಮಾಡಲು ಹೋದ ವ್ಯಕ್ತಿ ಹೃದಯಾ*ಘಾತಕ್ಕೆ ಬ*ಲಿ

ಸೋಮವಾರ ಟಿಕೆಟ್ ಬುಕ್ ಆಗಿದ್ದು ಸಿನಿಮಾ ಟೀಮ್ ಜೊತೆಗೂಡಿ ತೆರಳಲಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಅವರು ಪತಿ ಜೊತೆ ಹೋಗುವ ಸಾಧ್ಯತೆ ಇದೆ.

Continue Reading

FILM

ಕರಾವಳಿಯಾದ್ಯಂತ ತೆರೆಕಂಡ ‘ಧರ್ಮ ಚಾವಡಿ’ ತುಳು ಚಿತ್ರ

Published

on

ಮಂಗಳೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿಸಲಾದ ಧರ್ಮ ಚಾವಡಿ ತುಳು ಚಿತ್ರ ಇಂದು(ಜು.11) ಮಂಗಳೂರಿನ ಭಾರತ್‌ ಮಾಲ್‌ನಲ್ಲಿ ಬಿಡುಗಡೆಗೊಂಡಿತು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ದೀಪ ಬೆಳಗಿಸುವ ಮೂಲಕ ಸಿನೆಮಾ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತುಳು ಚಿತ್ರರಂಗ ಇದೀಗ ಉಚ್ಛಾಯ ಸ್ಥಿತಿಯಲ್ಲಿದ್ದು, ಚಿತ್ರ ಯಶಸ್ಸಿ ಕಾಣಲಿ. ಈ ಮೂಲಕ ಇನ್ನಷ್ಟು ವ್ಯಾಪಿಸಲಿ ಎಂದು ನಳಿನ್ ಶುಭ ಹಾರೈಸಿದರು.

ಇದನ್ನೂ ಓದಿ: ಚಿನ್ನದಂಗಡಿಗೆ ನುಗ್ಗಿ 3 ಕೆಜಿ ಚಿನ್ನಾಭರಣವನ್ನು ಲೂಟಿ ಮಾಡಿ ಪರಾರಿಯಾದ ಕಳ್ಳರು

ಕಾರ್ಯಕ್ರಮದಲ್ಲಿ ಗಣ್ಯರಾದ ಚಿತ್ರ ನಿರ್ಮಾಪಕರಾದ ವಿಜಯಕುಮಾರ್ ಕೊಡಿಯಾಲ್‌ ಬೈಲ್‌, ದೇವದಾಸ್‌ ಕಾಪಿಕಾಡ್, ಆರ್ ಧನರಾಜ್‌, ಯೋಗೀಶ್ ಶೆಟ್ಟಿ, ಲಂಚುಲಾಲ್‌, ಇಸ್ಮಾಯಿಲ್‌ ಮೂಡುಶೆಡ್ಡೆ, ಮೋಹನ್‌ ಕೊಪ್ಪಳ, ಪ್ರಕಾಶ್ ಪಾಂಡೇಶ್ವರ, ತಾರಾನಾಥ ಗಟ್ಟಿ ಕಾಪಿಕಾಡ್, ರೂಪೇಶ್ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಸ್ವರಾಜ್ ಶೆಟ್ಟಿ, ಹಿರಿಯ ನಟ ರಮೇಶ್ ರೈ ಕುಕ್ಕುವಳ್ಳಿ, ಚಿತ್ರ ನಿರ್ದೇಶಕ ನಿತಿನ್ ರೈ ಕುಕ್ಕವಳ್ಳಿ, ನಟಿ ಧನ್ಯ ಪೂಜಾರಿ, ಚಿತ್ರ ನಿರ್ಮಾಪಕ ನಡುಬೈಲ್ ಜಗದೀಶ್ ಅಮೀನ್, ಸಂಗೀತ ನಿರ್ದೇಶಕ ಪ್ರಸಾದ್ ಕೆ. ಶೆಟ್ಟಿ, ಅರುಣ್ ರೈ ಪುತ್ತೂರು, ನಟಿ ನೇಹಾ ಕೋಟ್ಯಾನ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದು, ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

Continue Reading

FILM

‘ಅಮೃತಧಾರೆ’ ಕಿರುತೆರೆ ನಟಿಗೆ ಪತಿಯಿಂದ ಚಾ*ಕು ಇ*ರಿತ

Published

on

ಬೆಂಗಳೂರು: ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ‘ಅಮೃತಧಾರೆ’ ಧಾರಾವಾಹಿಯ ನಟಿ ಶ್ರುತಿ ಚಾ*ಕು ಇ*ರಿತಕ್ಕೆ ಒಳಗಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರುತಿ ಅವರ ಪತಿ ಅಮರೇಶ್ ಅವರೇ ಪತ್ನಿಗೆ ಚಾ*ಕು ಇ*ರಿದಿದ್ದಾರೆ ಎನ್ನಲಾಗಿದ್ದು, ಪೊಲೀಸರು ಅಮರೇಶ್ ಅನ್ನು ಬಂಧಿಸಿದ್ದಾರೆ. ಈ ಘಟನೆ ಜುಲೈ 4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶ್ರುತಿ 20 ವರ್ಷದ ಹಿಂದೆ ಅಮರೇಶ್‌ ಎಚ್‌ಎಸ್‌ಎಂಬಾತನ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದರು. ಸಂಸಾರ ಸಮೇತ ಹನುಮಂತ ನಗರದಲ್ಲಿ ಲೀಸ್ ಗೆ ಮನೆ ಪಡೆದು ದಂಪತಿ ವಾಸವಿದ್ದರು. ನಂತರ ಶ್ರುತಿ ನಡವಳಿಕೆ ಗಂಡ ಅಮರೇಶ್‌ಗೆ ಇಷ್ಟವಾಗುತ್ತಿರಲಿಲ್ಲ. ಇಬ್ಬರ ನಡುವೆ ಹೊಂದಾಣಿಕೆ ಕೂಡ ಸರಿಯಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಗಂಡನಿಂದ ದೂರಾಗಿ ಶ್ರುತಿ ಅಣ್ಣನ ಮನೆಯಲ್ಲಿ ವಾಸವಿದ್ದರು. ಕಳೆದ ಏಪ್ರಿಲ್‌ನಲ್ಲಿ ಶ್ರುತಿ ಗಂಡನಿಂದ ದೂರವಾಗಿದ್ದರು. ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ಪ್ರೇಮಿಗಳು

ಈ ಕುರಿತಂತೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದರು. ಇದಾದ ಬಳಿಕ ಕಳೆದ ಗುರುವಾರ ರಾಜಿ ಸಂದಾನ ಮಾಡಿ ಗಂಡ-ಹೆಂಡತಿ ಒಂದಾಗಿದ್ದರು. ಆದರೆ, ಇಬ್ಬರೂ ಒಂದಾದ ಮಾರನೇ ದಿನವೇ ಗಂಡ ಪತ್ನಿಗೆ ಚಾ*ಕು ಇರಿದಿದ್ದಾನೆ. ಕಳೆದ ಶುಕ್ರವಾರ ಮಕ್ಕಳಿಬ್ಬರು ಕಾಲೇಜಿಗೆ ಹೋದ ನಂತರ ಹೆಂಡತಿಯ ಮೇಲೆ ಹ*ಲ್ಲೆ ನಡೆದಿದೆ. ಪೆಪ್ಪರ್ ಸ್ಪ್ರೇ ಹೊಡೆದು ಹೆಂಡತಿಗೆ ಚಾ*ಕು ಇ*ರಿದು ಕೊ*ಲೆಗೆ ಯತ್ನ ನಡೆಸಿದ್ದಾನೆ. ಸದ್ಯ ಶ್ರುತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page