Connect with us

LATEST NEWS

ಊಟಿಗೆ ಪ್ರಯಾಣ ಬೆಳೆಸೋ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ಈ ಆದೇಶ ಪಾಲಿಸೋದು ಕಡ್ಡಾಯ!

Published

on

ಮಂಗಳೂರು / ಚೆನ್ನೈ : ಮಕ್ಕಳಿಗೆ ರಜೆ ಇದೆ ಈ ಬೇಸಿಗೆ ರಜೆಗೆ ಎಲ್ಲಾದರೂ ಸುತ್ತಾಡೋಣ ಅನ್ನೋ ಯೋಚನೆ ಬರುವುದು ಸಾಮಾನ್ಯ. ಬಿಸಿಲಿನ ತಾಪದಿಂದ ತಂಪಾಗಲು ಊಟಿ, ಕೊಡೈಕನಾಲ್ ನತ್ತ ಪಯಣ ಬೆಳೆಸೋ ಯೋಚನೆಯಲ್ಲಿದ್ದೀರಾ? ಹಾಗಾದರೆ ಅಲ್ಲಿಗೆ ಭೇಟಿ ನೀಡಲು ಹೊಸ ನಿಯಮ ಜಾರಿ ಆಗಿದೆ.

ಹೌದು, ಜಿಲ್ಲಾಡಳಿತ ಹೊಸ ಕ್ರಮ ಕೈಗೊಂಡಿದೆ. ಇಲ್ಲಿಗೆ ಭೇಟಿ ನೀಡಲು ಇ – ಪಾಸ್ ಕಡ್ಡಾಯ ಎಂದು ಆದೇಶಿಸಿದೆ. ಪ್ರಸ್ತುತ ಇರುವ ವಿವಿಧ ವಾಹನಗಳು ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಈ ಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೆ ಸಂಬಂಧಿಸಿದಂತೆ ಡೇಟಾ ಸಂಗ್ರಹಿಸಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.


ಹೈಕೋರ್ಟ್ ಆದೇಶ :

ಮೇ 7 ಮತ್ತು ಜೂನ್ 30 ರ ನಡುವೆ ನೀಲಗಿರಿ ಮತ್ತು ಕೊಡೈಕೆನಾಲ್‌ಗೆ ಪ್ರವೇಶಿಸಲು ಬಯಸುವ ಎಲ್ಲಾ ಮೋಟಾರು ವಾಹನಗಳು ಎಲೆಕ್ಟ್ರಾನಿಕ್ ಪಾಸ್‌ಗಳನ್ನು (ಇ-ಪಾಸ್‌ಗಳು) ಪಡೆಯಬೇಕು. ಎರಡು ಗಿರಿಧಾಮಗಳಿಗೆ ಪ್ರವೇಶಿಸುವ ವಾಹನಗಳ ಸಂಖ್ಯೆ ಸೇರಿ ಎಲ್ಲಾ ಡೇಟಾವನ್ನು ಸಂಗ್ರಹ ಮಾಡಲು ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.

ಮೇ 7 ರಿಂದ ಜೂನ್ 30 ರವರೆಗೆ ಊಟಿ ಮತ್ತು ಕೊಡೈಕೆನಾಲ್‌ಗೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಇ-ಪಾಸ್ ಪಡೆಯಬೇಕು ಎಂದು ನ್ಯಾಯಮೂರ್ತಿಗಳಾದ ಎನ್.ಸತೀಶ್ ಕುಮಾರ್ ಮತ್ತು ಡಿ.ಭರತ ಚಕ್ರವರ್ತಿ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ಆದೇಶಿಸಿದೆ.

ಇದರ ಜೊತೆಗೆ ವಿಶೇಷ ವಿಭಾಗೀಯ ಪೀಠವು ನೀಲಗಿರಿ ಮತ್ತು ದಿಂಡುಗಲ್ ಕಲೆಕ್ಟರೇಟ್‌ಗಳಿಂದ ಇ-ಪಾಸ್‌ಗಳ ವಿತರಣೆಗೆ ಯಾವುದೇ ಮಿತಿಯಿಲ್ಲ ಎಂದು ಹೇಳಿದೆ. ಅಲ್ಲದೇ, ಈ ಪಾಸ್‌ಗಳನ್ನು ಪಡೆದುಕೊಳ್ಳುವುದರಿಂದ ಸ್ಥಳೀಯ ನಿವಾಸಿಗಳಿಗೆ ವಿನಾಯಿತಿ ನೀಡಲಾಗಿದೆ. ಇ-ಪಾಸ್ ವ್ಯವಸ್ಥೆಯನ್ನು ವ್ಯಾಪಕವಾಗಿ ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಇಬ್ಬರು ಜಿಲ್ಲಾಧಿಕಾರಿಗಳು ಮಾಹಿತಿ ತಂತ್ರಜ್ಞಾನ ಇಲಾಖೆಯ ಜೊತೆಗೆ ಇ-ಪಾಸ್ ವ್ಯವಸ್ಥೆಯಲ್ಲಿ ಪಾವತಿ ಗೇಟ್‌ವೇ ಅನ್ನು ತರುವ ಬಗ್ಗೆ ಚರ್ಚೆ ಮಾಡಲು ನ್ಯಾಯಾಧೀಶರು ತಿಳಿಸಿದ್ದಾರೆ.

ಇದನ್ನೂ ಓದು : ನೇ*ಣಿಗೆ ಶರಣಾದ ಯುವ ನಟಿ..! ಸಾ*ವಿಗೂ ಮುನ್ನ ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು..!

ಯಾಕೆ ಈ ನಿರ್ಧಾರ ?

ಇದು ಅರ್ಜಿದಾರರಿಗೆ ಆನ್‌ಲೈನ್‌ನಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು, ಚೆಕ್‌ಪೋಸ್ಟ್‌ಗಳ ಬಳಿ ದಟ್ಟಣೆಯನ್ನು ಕಡಿಮೆ ಮಾಡಲು, ಇಂಧನವನ್ನು ಉಳಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಅನುವು ಮಾಡಿಕೊಡುತ್ತದೆ. ಈ ಹಿಂದೆ, ಪ್ರವಾಸಿಗರ ಸಂಖ್ಯೆಗೆ ಕಡಿವಾಣ ಹಾಕುವ ಹೈಕೋರ್ಟ್‌ನ ಚಿಂತನೆಗೆ ಪ್ರತಿಕ್ರಿಯೆಯಾಗಿ ನೀಲಗಿರಿ ಮತ್ತು ದಿಂಡುಗಲ್ ಜಿಲ್ಲಾಧಿಕಾರಿಗಳು ವಾಹನ ಸಂಚಾರವನ್ನು ನಿರ್ಬಂಧಿಸಲು ಪ್ರಸ್ತಾಪಿಸಿದರು. ಪೀಕ್ ಸೀಸನ್‌ಗಳಲ್ಲಿ, ವಾಹನಗಳ ಒಳಹರಿವು ದಿನಕ್ಕೆ 2,000 ರಿಂದ 20,000 ಕ್ಕೆ ಏರುತ್ತದೆ, ಇದು ದಟ್ಟಣೆ ಮತ್ತು ಪರಿಸರ ಹಾನಿಗೆ ಕಾರಣವಾಗುತ್ತದೆ.

ಈ ವಿಷಯವನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳ ವಿಶೇಷ ವಿಭಾಗೀಯ ಪೀಠವು ಈ ವಿಷಯದ ಬಗ್ಗೆ ಚರ್ಚಿಸಿತು. ಘಾಟ್ ರಸ್ತೆಗಳ ಮೇಲಿನ ಒತ್ತಡ ಮತ್ತು ಬೇಸಿಗೆಯಲ್ಲಿ ಅತಿಯಾದ ಪ್ರವಾಸಿ ಚಟುವಟಿಕೆಯಿಂದ ಉಂಟಾಗುವ ಪರಿಸರ ನಾಶವನ್ನು ವಕೀಲರು ಎತ್ತಿ ತೋರಿಸಿದ್ದರು.

ಒಂಭತ್ತು ಚೆಕ್ ಪೋಸ್ಟ್‌ಗಳ ಮೂಲಕ ಪ್ರತಿದಿನ ಸರಿಸುಮಾರು 20 ಸಾವಿರ ವಾಹನಗಳು ಅಂದರೆ 11,500 ಕಾರುಗಳು, 1,300 ವ್ಯಾನ್‌ಗಳು, 600 ಬಸ್‌ಗಳು ಮತ್ತು 6,500 ಬೈಕುಗಳು ನೀಲಗಿರಿ ಪ್ರವೇಶಿಸುತ್ತವೆ ಎಂದು ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ.

FILM

ಮಂಗಳೂರಿನಲ್ಲಿಯೂ ಆಫ್ರೋ ಟಪಾಂಗ್ ಹವಾ; ಪ್ರಮೋಷನ್‌ಗಾಗಿ ಆಗಮಿಸಿದ ಚಿತ್ರತಂಡ

Published

on

ಮಂಗಳೂರು : ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ ‘45’.  ಈ ಸಿನಿಮಾದ ಆಫ್ರೋ ಟಪಾಂಗ್ ಹಾಡು ಭಾರೀ ಸದ್ದು ಮಾಡುತ್ತಿದ್ದು, ಇದೀಗ ಈ ಹಾಡಿನ  ಪ್ರಮೋಷನ್ ಗಾಗಿ ಆಗಮಿಸಿದ್ದ ಚಿತ್ರತಂಡ ಮಂಗಳೂರಿನ ಫೋರಂ ಫಿಜಾ ಮಾಲ್ ನಲ್ಲಿ ನೆರೆದಿದ್ದ ಸಿನಿಮಾ ಪ್ರೇಮಿಗಳು ಮತ್ತು ಅಭಿಮಾನಿಗಳನ್ನು ಮೋಡಿ ಮಾಡಿತು. ನಿರ್ದೇಶಕ ಅರ್ಜುನ್ ಜನ್ಯ, ರಾಜ್ ಬಿ. ಶೆಟ್ಟಿ, ಗಾಯಕರಾದ ನಿಶಾನ್ ರೈ, ಎಂ.ಸಿ.ಬಿಜು ಅವರಿಗೆ ನಿರೂಪಕಿ ಅನುಶ್ರೀ ಶೆಟ್ಟಿ ಸಾಥ್ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಹಾಡಿನ ನೃತ್ಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಳಿಸಿತು. ಹಾಡಿಗೆ ರಾಜ್ ಬಿ ಶೆಟ್ಟಿ ಟಪಾಂಗುಚ್ಚಿ ಕುಣಿಯುವ ಮೂಲಕ ಮತ್ತಷ್ಟು ಮನರಂಜಿಸಿದರು. ಜೊತೆಗೆ ಆ್ಯಂಕರ್ ಅನುಶ್ರಿ ಅವರ ನಿರೂಪಣೆ ಕಾರ್ಯಕ್ರಮಕ್ಕೆ ಮತ್ತಷ್ಟು ಕಿಕ್ ನೀಡಿತು.

ಬಳಿಕ ಮಾಧ್ಯಮಗಳ ಜೊತೆಗೆ ಮಾತಾಡಿದ ಅರ್ಜುನ್ ಜನ್ಯ, ಮಂಗಳೂರಿನ ಜನ ಬಹಳ ಒಳ್ಳೆಯವರು. ಇಲ್ಲಿಗೆ ಪ್ರತೀ ಬಾರಿ ಬಂದಾಗಲೂ ಒಳ್ಳೆಯ ಫೀಲ್ ಉಂಟಾಗುತ್ತೆ. ಹಾಗಾಗಿ ಸಿನಿಮಾದಲ್ಲಿ ನಿಶಾನ್ ರೈ ಬರೆದಿರುವ ತುಳು ಸಾಹಿತ್ಯವಿರುವ ಹಾಡನ್ನು ಅಳವಡಿಸಲಾಗಿದೆ. ಈಗಾಗಲೇ ಹಾಡು 25 ಮಿಲಿಯನ್ ವೀಕ್ಷಣೆ ಪಡೆಯುವ ಸನಿಹದಲ್ಲಿಯುವುದು ಖುಷಿ ಎನಿಸುತ್ತಿದೆ. ರೀಲ್ಸ್ ಮೂಲಕವೇ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದ ಉಗಾಂಡಾ ದೇಶದ ಹಳ್ಳಿಯ ಮಕ್ಕಳ ತಂಡ ‘ಗೆಟ್ಟೋ ಕಿಡ್ಸ್’ ಅನ್ನು 45 ಸಿನಿಮಾದ ಟಪಾಂಗ್ ಹಾಡಿನಲ್ಲಿ ಕುಣಿಸಿರುವುದು ಸಿನಿಮಾದ ವಿಶೇಷವಾಗಿದೆ. ಚಿತ್ರವು ಡಿಸೆಂಬರ್ 25 ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.

ನಟ ರಾಜ್ ಬಿ ಶೆಟ್ಟಿ ಮಾತನಾಡಿ, 45 ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಅವರೊಂದಿಗೆ ನಟಿಸಿರುವುದು ರೋಮಾಂಚನಕಾರಿ ಅನುಭವ. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು ಆಫ್ರೋ ಟಪಾಂಗ್ ಹಾಡಿಗೆ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ತುಳುವರು ಸಿನಿಮಾ ನೋಡಿ ಎಂದರು.

ಫೋರಂ ಫಿಜಾ ಮಾಲ್‌ನ ಬಿ.ಎಂ.ಫಾರೂಕ್ ಚಿತ್ರತಂಡದ ಕಲಾವಿದರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿ, ಚಿತ್ರತಂಡ ಒಳ್ಳೆಯ ಪ್ರಯತ್ನಕ್ಕೆ ಕೈಹಾಕಿದೆ. ತುಳು ಸಾಹಿತ್ಯವನ್ನು ಹಾಡಿನಲ್ಲಿ ಬಳಕೆ ಮಾಡಿರುವುದು ನಮಗೆ ಹೆಮ್ಮೆಯ ವಿಚಾರ ಎಂದರು.

ಇದನ್ನೂ ಓದಿ : ಪ್ರೀಮಿಯರ್ ಶೋ ನೋಡಿ ‘ಜೈ’ ಅಂದ್ರು ಪ್ರೇಕ್ಷಕರು

ಅನುಶ್ರೀ  ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಜನ ಉಪಸ್ಥಿತರಿದ್ದು ಕಾರ್ಯಕ್ರಮ ವೀಕ್ಷಿಸಿದರು.

Continue Reading

FILM

ಪ್ರೀಮಿಯರ್ ಶೋ ನೋಡಿ ‘ಜೈ’ ಅಂದ್ರು ಪ್ರೇಕ್ಷಕರು

Published

on

ಮಂಗಳೂರು : ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ಹೊಸ ತುಳು ಚಲನ ಚಿತ್ರ ‘ಜೈ’ ನವೆಂಬರ್ 14 ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಅದರ ಪ್ರೀಮಿಯರ್ ಶೋ ಇಂದು(ನ.09) ಮಂಗಳೂರಿನ ಭಾರತ್ ಸಿನಿಮಾ ಚಿತ್ರ ಮಂದಿರದಲ್ಲಿ ಭರ್ಜರಿಯಾಗಿ ನಡೆಯಿತು.  ನಟ ರಾಜ್ ದೀಪಕ್ ಶೆಟ್ಟಿ ಸೇರಿದಂತೆ ಹಲವಾರು ಕಲಾವಿದರು ಮತ್ತು ಅಭಿಮಾನಿಗಳು ಪ್ರೀಮಿಯರ್ ಶೋ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು.

ಬಿಗ್ ಬಜೆಟ್‌ನ ಈ ಚಿತ್ರ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್, ಟ್ರೇಲರ್ ಎಲ್ಲವೂ  ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ. ಅಂದಹಾಗೆ, ಈ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ನಟಿಸಿರೋದು ಪ್ರಮುಖ ಆಕರ್ಷಣೆ.

ಗಿರಿಗಿಟ್, ಗಮ್ಜಾಲ್ ಮತ್ತು ಸರ್ಕಸ್ ಚಿತ್ರದ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ‘ಜೈ’ ಎಂಬ ಮಹತ್ವಾಕಾಂಕ್ಷೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.  ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್ ಹಾಗೂ ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಆ್ಯಕ್ಷನ್, ಡ್ರಾಮಾ ಮತ್ತು ಎಮೋಷನ್‌ಗಳ ಸಮನ್ವಯವಿದೆ. ರೂಪೇಶ್ ಶೆಟ್ಟಿಗೆ  ನಾಯಕಿಯಾಗಿ ಅದ್ವಿತಿ ಶೆಟ್ಟಿ ಜೊತೆಯಾಗಿದ್ದಾರೆ.

ಚಿತ್ರದ ಕಥೆ ಹಾಗೂ ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು ಅವರು ಬರೆದಿದ್ದಾರೆ. ಕ್ಯಾಮೆರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ್ಹಾ, ಸಂಕಲನ ರಾಹುಲ್ ವಸಿಷ್ಠ ಅವರದ್ದು ಅರವಿಂದ್ ಬೋಳಾರ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ : ಉರ್ವ ಮಾರಿಯಮ್ಮ ಕ್ಷೇತ್ರ : ಡಿ.25 ಮತ್ತು 26 ರಂದು ನವಾಕ್ಷರಿ ಮಹಾಮಂತ್ರ ಯಾಗ

ನವೆಂಬರ್ 14 ರಂದು ರಾಜ್ಯಾದ್ಯಂತ ತೆರೆಕಾಣಲಿರುವ ‘ಜೈ’ ಚಲನ ಚಿತ್ರದ  ಪ್ರಿಮಿಯರ್ ಶೋ ಈಗಾಗಲೇ ಹಲವಾರು ಕಡೆ ನೆರವೇರಿದೆ. ಮಂಗಳೂರಿನಲ್ಲಿ ಇಂದು(ನ.09) ನೆರವೇರಿದ್ದು, ಚಿತ್ರ  ನೋಡಿದ ಪ್ರೇಕ್ಷಕರು ಜೈ ಎಂದಿದ್ದಾರೆ.

 

 

Continue Reading

BIG BOSS

ನಿಶ್ಚಿತಾರ್ಥ ಮಾಡಿಕೊಂಡ BBK11ರ ಸ್ಪರ್ಧಿ ಉಗ್ರಂ ಮಂಜು

Published

on

ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿ, ನಟ ಉಗ್ರಂ ಮಂಜು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಮಂಜು ಬದುಕಿನಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ.

ಮ್ಯಾಕ್ಸ್ ಮಂಜು ಅವರು ಸಂಧ್ಯಾ ಖುಷಿ ಎನ್ನುವವರ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದು, ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ, ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ’ ಬರೆದುಕೊಂಡಿದ್ದಾರೆ.

ಮ್ಯಾಕ್ಸ್​ ಮಂಜು ಅವರು ಬಿಗ್ ಬಾಸ್ ಸೀಸನ್​ 11ರಲ್ಲಿ ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು. ಬಿಗ್ ಬಾಸ್​ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮ್ಯಾಕ್ಸ್ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ.

ಇದನ್ನೂ ಓದಿ: 20 ವರ್ಷದ ಯುವತಿ ವಿರುದ್ದ ಕೇಸ್ ದಾಖಲಿಸಿದ ಖ್ಯಾತ ನಟಿ ಅನುಪಮಾ ಪರಮೇಶ್ವರನ್‌; ಪೋಸ್ಟ್‌ನಲ್ಲೇನಿದೆ?

ಹುಡುಗಿ ಯಾರು?
ಉಗ್ರಂ ಮಂಜು ಕೈಹಿಡಿಯಲಿರುವ ಸಂಧ್ಯಾ ಖುಷಿ ಅವರು ಸ್ಪರ್ಷ್ ಆಸ್ಪತ್ರೆಯಲ್ಲಿ ಟ್ರಾನ್ಸ್‌ಪ್ಲ್ಯಾಂಟ್ ಕೋರ್ಡಿನೇಟರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಬಹಳ ಸಕ್ರಿಯವಾಗಿರುವ ಸಂಧ್ಯಾ ಅವರು ತಮ್ಮ ಹಲವಾರು ವಿಡಿಯೋಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page