Connect with us

LATEST NEWS

ಕಾರ್ಕಳದಲ್ಲಿ ಮನೆ ಮಂದಿ ಮೆಹೆಂದಿಗೆ ಹೋಗಿದ್ದಾಗ ಲಕ್ಷಾಂತರ ಮೌಲ್ಯದ ಸೊತ್ತು ಕಳವು: ಕಳ್ಳ-ಕಳ್ಳಿ ಅರೆಸ್ಟ್

Published

on

ಉಡುಪಿ: ಮನೆಯವರು ಮೆಹಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಡುಗೆ ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕಂಗಿತ್ತು ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂದ ಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಅರಂಬೋಡಿ ಕಾಂತರಬೆಟ್ಟು ನಿವಾಸಿ ಪ್ರಸಾದ್‌ (34) ಹಾಗು ಕಳ್ಳತನಕ್ಕೆ ಸಹಕರಿಸಿದ ಆರೋಪದಲ್ಲಿ ಶಿಬಾ (39) ಎಂಬಾಕೆ ಬಂಧನಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ.


ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕಂಗಿತ್ತುವಿನ ಉಷಾ ಜಗದೀಶ್‌ ಆಂಚನ್‌ ಅವರ ಮನೆಯಲ್ಲಿ ಡಿಸೆಂಬರ್ 3ರಂದು ಈ ಕಳವು ಪ್ರಕರಣ ನಡೆದಿತ್ತು.

ಅಂದು ಮನೆಯ ಗಾದ್ರೆಜ್‌ನಲ್ಲಿ ಇರಿಸಿದ್ದ ಸುಮಾರು 4.50 ಲಕ್ಷ ರೂ. ಮೌಲ್ಯದ ಸುಮಾರು 156 ಗ್ರಾಂ ತೂಕದ ಬಂಗಾರದ ಒಡವೆ ಸಹಿತ 9,75,000 ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ತನಿಖೆ ನಡೆಸಿದ ಪೊಲೀಸರು ಬಂಧಿತರಾದ ಇಬ್ಬರು ಆರೋಪಿ ಗಳಿಂದ ಕಳ್ಳತನವಾಗಿದ್ದ 9,75,000 ರೂ. ಮೌಲ್ಯದ 216 ಗ್ರಾಂ ಬಂಗಾರದ ಒಡವೆಗಳು ಮತ್ತು 77 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.


ಆರೋಪಿ ಪ್ರಸಾದ್‌ ಮೇಲೆ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡುಬಿದಿರೆ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮೂಡುಬಿದಿರೆ ಠಾಣೆಯಲ್ಲಿ ಸುದರ್ಶನ ಜೈನ್‌ ಅವರ ಕೊಲೆ ಹಾಗೂ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು.ಕಳ್ಳತನವಾದ ಮನೆಯ ಮಾಲಕಿ ಉಷಾ ಅಂಚನ್‌ ಹಾಗೂ ಕಳ್ಳತನಕ್ಕೆ ಸಹಕರಿಸಿದ ಶಿಬು ಹಲವು ವರ್ಷಗಳ ಪರಿಚಯಸ್ಥರು. ಆಪ್ತ ಸ್ನೇಹಿತರು.

ಇಬ್ಬರ ಮನೆಗಳ ನಡುವಿನ ಅಂತರ ಸುಮಾರು 50 ಮೀ. ದೂರವಷ್ಟೆ ಇರುವುದು.ಮೊದಲಿನಿಂದಲೂ ಅವರಿಬ್ಬರು ಜತೆಯಾಗಿ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು.ಕಳ್ಳತನವಾದ ದಿನ ರಾತ್ರಿ ಇಬ್ಬರು ಜತೆಯಾಗಿ ಪರಿಸರದಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು.


ಈ ಮೊದಲು ತೆರಳುವಾಗ ಸ್ಕೂಟಿಯಲ್ಲಿ ತೆರಳುತಿದ್ದರು. ಅವತ್ತು ನಾವು ನಡೆದಾಡಿಕೊಂಡು ಆರಾಮವಾಗಿ ಮಾತಾಡಿಕೊಂಡು ಹೋಗುವ ಅಂದಿದ್ದಳು. ಆಕೆಯ ಮರುಳು ಮಾತಿಗೆ ಉಷಾ ಒಪ್ಪಿ ನಡೆದುಕೊಂಡೆ ಇಬ್ಬರು ಇನ್ನಿತರರ ಜತೆ ಸೇರಿ ಹೋಗಿದ್ದರು.

ದೊಡ್ಡ ಕರಿಮಣಿ ಹಾಕುವುದು ಬೇಡವೆಂದೂ ಶಿಬಾ ಹೇಳಿದ್ದಳು. ಅದರಂತೆ ಅದನ್ನು ಮನೆಯಲ್ಲೇ ಇರಿಸಿ ಸಣ್ಣ ಕರಿಮಣಿ ಹಾಕಿದ್ದರು.

ಮೊದಲೇ ಯೋಜನೆ ರೂಪಿಸಿದ್ದ ಶಿಬಾ ಇನ್ನೊಂದು ಕಡೆ ಸಂಬಂದಿ ಪ್ರಸಾದ್‌ಗೆ ಮಾಹಿತಿ ನೀಡಿದ್ದಳು. ಆಕೆಯ ಮಾಹಿತಿ ಆಧರಿಸಿ ಆತ ಕಳ್ಳತನಗೈದಿದ್ದ. ಕಳ್ಳತನವಾದ ಬಳಿಕವೂ ಆರೋಪಿತೆ ಶಿಬು ನಾಟಕವಾಡಿದ್ದಳು.

ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಕ್ಷಯ್‌ ಹಾಕೆ ಮಚ್ಚಿಂದ್ರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

 

DAKSHINA KANNADA

ಅನ್ಯಧರ್ಮದ ಯುವತಿಯರನ್ನ ಮದುವೆ ಆಗಲು ಸಲಹೆ…ಸಂಕಷ್ಟದಲ್ಲಿ ಸೂಲಿಬೆಲೆ!

Published

on

ಮಂಗಳೂರು : ಭಾರೀ ವಿವಾದ ಸೃಷ್ಟಿಸಿದ್ದ ಚಕ್ರವರ್ತಿ ಸೂಲಿಬೆಲೆ ಅವರ ‘ಅನ್ಯಧರ್ಮೀಯ’ ವಿವಾಹ ಸಲಹೆ ಈಗ ಸಂಕಷ್ಟ ತಂದೊಡ್ಡಿದೆ. ಕೋಮುದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ರಶೀದ್ ಉಳ್ಳಾಳ ಠಾಣೆಗೆ ದೂರು ನೀಡಿದ್ದಾರೆ.

ಏನಂದಿದ್ರು ಸೂಲಿಬೆಲೆ?

ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಮಾರ್ಚ್ 9 ರಂದು ಕದ್ರಿ ಮಂಜುನಾಥ  ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜ ಆದಿಕ್ಷೇತ್ರಕ್ಕೆ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆ ನಡೆದಿತ್ತು. ಸಮಾರೋಪ ಸಮಾರಂಭದಲ್ಲಿ ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಘರ್ ವಾಪ್ಸಿ ಬಗ್ಗೆ ಮಾತನಾಡಿದ್ದರು.

ಮತಾಂತರ ಎಂದು ಬಾಯಿ ಬಡಿದುಕೊಳ್ಳುವುದು ಸಾಕು. ಈಗ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಮಾಡೋ ಬಗ್ಗೆ ಮಾತಾಡಿ. ಎಲ್ಲಿವರೆಗೆ ಲವ್ ಜಿಹಾದ್, ಮತಾಂತರ ಬಗ್ಗೆ ಮಾತನಾಡೋದು? ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತಿಯಪ್ಪ ಅಂತ ನಮ್ಮ ಗಂಡು ಮಕ್ಕಳಿಗೆ ಕೇಳೋಣ. ಬೇರೆ ಧರ್ಮದ ಹುಡುಗಿಯರನ್ನೂ ನೋಡು ಅಂತ ಹೇಳಬೇಕು. ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದಿದ್ದರು.

ಇದನ್ನೂ ಓದಿ : 9 ತಿಂಗಳ ಬಳಿಕ ಮಾ.18ರಂದು ಸುನಿತಾ ಭೂಮಿಗೆ ವಾಪಸ್; ಗಗನಯಾನಿಗಳ ಸಂಬಳ ಎಷ್ಟಿರುತ್ತೆ ಗೊತ್ತಾ?

ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಲ್ಲ ಅನ್ನೋವಾಗ ಪಕ್ಕದ ಸಮಾಜದಲ್ಲೂ ಸಮಸ್ಯೆಯಿದೆ ಎಂದು ಧೈರ್ಯ ತುಂಬಿ. ನಾವು ಆಕ್ರಮಣಕಾರಿಯಾಗಿ ಆಡಬೇಕು, ರಕ್ಷಣಾತ್ಮಕವಾಗಿ ಆಡಿದ್ದು ಸಾಕು. ಟೆಸ್ಟ್ ಮ್ಯಾಚ್‌ಗಳು ನಿಂತು ಹೋಯ್ತು. ಈಗ ಟ್ವೆಂಟಿ ಟ್ವೆಂಟಿ ಮ್ಯಾಚ್ ಆಡೋ ಸಮಯ ಬಂದಾಗಿದೆ. ಇರುವ ಇಪ್ಪತ್ತು ಓವರ್‌ನಲ್ಲಿ ಬಡಿಬೇಕು ಅಷ್ಟೇ. ಘರ್ ವಾಪ್ಸಿ ಹೇಗೆ ಮಾಡೋದು ಅನ್ನೋದರ ಬಗ್ಗೆ ರೀಲ್ಸ್ ಮಾಡಿ. ಹಿಂದೂ ಧರ್ಮದಿಂದ ಹೋಗಿರುವವರನ್ನ ಮೊದಲು ವಾಪಸ್ ತರೋಣ ಎಂದು ಹೇಳಿದ್ದರು.

ಈ ಹೇಳಿಕೆಗೆ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ಹುಟ್ಟುಕೊಂಡಿದ್ದವು.

Continue Reading

LATEST NEWS

ಆಟ ಆಡುತ್ತಿದ್ದಾಗ ಸಿಡಿಲು ಬಡಿದು ಯುವಕ ಸಾವು

Published

on

ಕೇರಳ: ಕ್ರಿಕೆಟ್ ಆಡುವಾಗ ಸಿಡಿಲು ಬಡಿದು ಯುವಕನೋರ್ವ ಸಾವನ್ನಪ್ಪಿದ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ.

ಅಖಿಲ್ ಪಿ ಶ್ರೀನಿವಾಸನ್ (28) ಸಾವನ್ನಪ್ಪಿದ ಯುವಕ. ಈತ ಸಂಜೆಯ ವೇಳೆ ತನ್ನ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ.

ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

Continue Reading

DAKSHINA KANNADA

15 ಫೀಟ್ ಆಳಕ್ಕೆ ಉರು*ಳಿದ ಕಾರು; ತಪ್ಪಿದ ಭಾರೀ ದುರಂ*ತ

Published

on

ಉಳ್ಳಾಲ : ಚಾಲಕನ ನಿಯಂತ್ರಣ ತಪ್ಪಿದ ಕಾರು ನದಿಯ ತೀರಕ್ಕೆ ಉ*ರುಳಿ ಬಿದ್ದ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ನಡೆದಿದೆ. ಕಲ್ಲಾಪುವಿನ ರಾಷ್ಟ್ರೀಯ ಹೆದ್ದಾರಿಯಿಂದ ಗುಳಿಗ ಕೊರಗಜ್ಜ ಶಿಲೆಯ ಪ್ರಧಾನ ಆದಿಸ್ಥಳಕ್ಕೆ ಹೋಗುವ ದಾರಿಯಲ್ಲಿ ಈ ಘಟನೆ ನಡೆದಿದೆ.

ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಕಾರು ಚಲಿಸುತ್ತಿತ್ತು. ಅಗಲ ಕಿರಿದಾದ ರಸ್ತೆ ಇದಾಗಿದ್ದು, ಹೆದ್ದಾರಿಯಿಂದ ತಿರುವು ಪಡೆದುಕೊಂಡ ಕಾರು  15 ಫೀಟ್ ಆಳಕ್ಕೆ ಉ*ರುಳಿ ಬಿದ್ದಿದೆ. ಅದೃಷ್ಟವಶಾತ್, ನದಿಯ ನೀರಿಗೆ ಬೀಳದೆ ಕಸಕಡ್ಡಿ ತುಂಬಿದ್ದ ಜಾಗದಲ್ಲಿ ಕಾರು ಸಿ*ಲುಕಿಕೊಂಡಿದೆ. ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಅಪ*ಘಾತ ನಡೆದ ತಕ್ಷಣ ಕಾರಿನಿಂದ ಹೊರಬಂದಿದ್ದಾರೆಯಾದ್ರೂ ಸ್ಥಳದಲ್ಲಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ : ಸ್ಕೂಟರ್‌ಗೆ ಅಡ್ಡ ಬಂದ ಕಾಡುಹಂದಿ; ರಸ್ತೆಗೆಸೆಯಲ್ಪಟ್ಟು ಹಿಂಬದಿ ಸವಾರೆ ಸಾ*ವು

ಕೊರಗಜ್ಜನ ದೈವಸ್ಥಾನಕ್ಕೆ ಹೋಗುವ ದಾರಿಯ ಫಲಕಕ್ಕೆ ಡಿ*ಕ್ಕಿ ಹೊಡೆದು ಕಾರು ನದಿಪಾತ್ರಕ್ಕೆ ಉರುಳಿ ಬಿದ್ದಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಾರಿನಲ್ಲಿದ್ದವರು ಗಾ*ಯಗೊಂಡ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ತೆರಳಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page