Connect with us

DAKSHINA KANNADA

ಹಾಡಹಗಲಲ್ಲೇ ಚಿನ್ನದಂಗಡಿಗೆ ಕನ್ನ; ಕೈಚಳಕ ತೋರಿಸುವಾಗಲೇ ಸಿಕ್ಕಿ ಬಿದ್ದ ಖದೀಮ

Published

on

ಮೂಡುಬಿದ್ರೆ : ಚಿನ್ನದ ಅಂಗಡಿಯೊಂದರಲ್ಲಿ ಕೈ ಚಳಕ ತೋರಿಸಲು ಹೋದ ವ್ಯಕ್ತಿಯೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಮೂಡುಬಿದ್ರೆಯಲ್ಲಿ ನಡೆದಿದೆ. ಮೂಡುಬಿದಿರೆಯ ಅಲಂಕಾರ್ ಎಂಬ ಚಿನ್ನದ ಅಂಗಡಿಗೆ ಗಿರಾಕಿಯಂತೆ ಬಂದು ಚಿನ್ನ ಎಗರಿಸುವಾಗ ಈತ ಸಿಕ್ಕಿಬಿದ್ದಿದ್ದಾನೆ.

ಜ್ಯುವೆಲ್ಲರಿ ಅಂಗಡಿಯಿಂದ ತಪ್ಪಿಸಿಕೊಂಡು ಓಡುವ ವೇಳೆ ಈತನನ್ನು ಸಾರ್ವಜನಿಕರು ಹಿಡಿದಿದ್ದು, ಒಂದೆರಡು ತದುಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಮೂಲತಃ ಬೆಳ್ತಂಗಡಿ ತಾಲೂಕಿನ ಗುರುವಾಯನಕರೆ ಗ್ರಾಮದನಾಗಿದ್ದಾನೆ.

ಇದನ್ನೂ ಓದಿ : WATCH VIDEO : ಅಬ್ಬಬ್ಬಾ! ಏನ್ ಡ್ಯಾನ್ಸ್ ಗುರು! ಬ್ರಿಟನ್ಸ್ ಗಾಟ್ ಟ್ಯಾಲೆಂಟ್ ನಲ್ಲಿ ಮೋಡಿ ಮಾಡಿದ ಅಸ್ಸಾಂ ಬಾಲಕಿ

ಜನರು ಈತನ ಬಾಯಿ ಬಿಡಿಸಿದಾಗ ಎಲ್ಲಾ ಸತ್ಯ ಒಪ್ಪಿಕೊಂಡಿದ್ದು, ಹೆಸರು ರಮೇಶ್ ಎಂದು ಹೇಳಿದ್ದಾನೆ. ಈತ ಈ ಹಿಂದೆ ಬೆಳ್ತಂಗಡಿಯ ಕೆಲವೆಡೆ ಹೊಟೇಲ್‌ನಲ್ಲಿ ತಿಂಡಿ ಮಾಡುವ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

BELTHANGADY

ಬೆಳ್ತಂಗಡಿ: ಪಂಜಾಬ್‌ ನಲ್ಲಿ ಆಕಾಂಕ್ಷ ಆತ್ಮಹತ್ಯೆ ಪ್ರಕರಣ; ಮನೆಗೆ ತಲುಪಿದ ಮೃತದೇಹ

Published

on

ಬೆಳ್ತಂಗಡಿ: ಪಂಜಾಬ್​​ನಲ್ಲಿ ನಿಗೂಢವಾಗಿ ಮೃತಪಟ್ಟ ಬೆಳ್ತಂಗಡಿಯ ನಿವಾಸಿ ಆಕಾಂಕ್ಷಾ ಎಸ್ ನಾಯರ್ ಮೃತದೇಹವನ್ನು ಬುಧವಾರ ಹುಟ್ಟೂರಿಗೆ ತರಲಾಯಿತು. ಬೆಂಗಳೂರು ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಮನೆಗೆ ತರಲಾಯಿತು.

ಭಾರೀ ಮಳೆಯ ಹಿನ್ನಲೆ ಮನೆಗೆ ಸಾಗುವ ದಾರಿಯಲ್ಲಿ ಆ್ಯಂಬುಲೆನ್ಸ್ ಮಣ್ಣಿನಲ್ಲಿ ಹೂತಗೊಂಡ ಘಟನೆಯೂ ನಡೆಯಿತು. ನಂತರ ಸ್ಥಳೀಯರು ಆ್ಯಂಬುಲೆನ್ಸ್ ಟೈರ್ ಅನ್ನು ಮಣ್ಣಿನಿಂದ ಹೊರತೆಗೆದರು.

ಇದನ್ನೂ ಓದಿ: ಆಕಾಂಕ್ಷ ಸಾ*ವು ಪ್ರಕರಣ: ಪ್ರೊಫೆಸರ್ ಅರೆಸ್ಟ್; ಮೇ.21 ರಂದು  ಮೃ*ತದೇಹ ಬೆಳ್ತಂಗಡಿಗೆ

ಸದ್ಯ ಆಕಾಂಕ್ಷಾ ಮೃತದೇಹ ಬೋಳಿಯಾರ್​​ನಲ್ಲಿರುವ ಮನೆಗೆ ತಲುಪಿದೆ. ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಹೆಚ್ಚಾಗಿದೆ. ಮೃತದೇಹದ ಅಂತ್ಯ ಸಂಸ್ಕಾರ ಇಂದೇ ನೆರವೇರುವ ಸಾಧ್ಯತೆ ಇದೆ.

Continue Reading

BANTWAL

ವಿಟ್ಲ: ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾದ ಕಾರು; ಆಕ್ಟಿವಾ, ಪಿಕಪ್ ಗೆ ಢಿಕ್ಕಿ

Published

on

ಬಂಟ್ವಾಳ: ಬಿ.ಸಿ.ರೋಡ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗುತ್ತಿದ್ದ ಆಲ್ಟೋ ಕಾರೊಂದು ಮುಂದೆ ಆಕ್ಟಿವಾ ಮತ್ತು ಪಿಕಪ್ ಗೆ ಡಿಕ್ಕಿ ಹೊಡೆದ ಘಟನೆ ಸಾಲೆತ್ತೂರು ಸಮೀಪದ ಪಾಲ್ತಾಜೆಯಲ್ಲಿ ನಡೆದಿದೆ.

ಕಾರಿನಲ್ಲಿ ಇಬ್ಬರು ಇದ್ದು, ಅವರು ಸಾಲೆತ್ತೂರು ಮೂಲಕ ಪರಾರಿಯಾಗಲು ಯತ್ನಿಸಿದಾಗ ಪಾಲ್ತಾಜೆಯಲ್ಲಿ ಆಕ್ಟಿವಾ ಮತ್ತು ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಆಕ್ಟಿವಾ ಸವಾರ ಕಟ್ಟತ್ತಿಲ ನಿವಾಸಿ ಅಬೂಬಕ್ಕರ್ ಗಂಭೀರ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರು: ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಹೊಡೆದಾಟ

ಸ್ಥಳಕ್ಕೆ ಗಸ್ತು ಪೊಲೀಸರು ಮತ್ತು ವಿಟ್ಲ ಪೊಲೀಸರು ಆಗಮಿಸಿ ಕಾರು ಹಾಗೂ ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಯುವಕರಿಬ್ಬರೂ ಹಿಂದಿಯಲ್ಲಿ ಮಾತನಾಡುತ್ತಿದ್ದು, ಹೊರರಾಜ್ಯದಿಂದ ಬಂದವರೆನ್ನಲಾಗಿದೆ.

Continue Reading

DAKSHINA KANNADA

ಮಂಗಳೂರು: ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಹೊಡೆದಾಟ

Published

on

ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮೇ 20 ರಂದು ಮತ್ತೆ ಕೈದಿಗಳ ನಡುವೆ ಹೊಡೆದಾಟ ನಡೆದಿರುವುದಾಗಿ ವರದಿಯಾಗಿದೆ.

ಅಡುಗೆ ಕೆಲಸ ಮಾಡುತ್ತಿದ್ದ ಹಿಂದೂ ಕೈದಿಗೆ ಮತ್ತೋರ್ವ ಕೈದಿ ಮುನೀರ್ ಹೊಡೆದಿದ್ದಾನೆ. ಇದರಿಂದ, ಆಕ್ರೋಶಗೊಂಡ ಇತರ ಕೈದಿಗಳು ಮುನೀರ್ ಮೇಲೆ ಹಲ್ಲೆಗೆ ಮುಂದಾದರು.

ಇದನ್ನೂ ಓದಿ: ಮೇ 23 ರಿಂದ ತುಳುನಾಡಿನಾದ್ಯಂತ “ಗಂಟ್ ಕಲ್ವೆರ್’ ತುಳು ಚಿತ್ರ ತೆರೆಗೆ

ತಕ್ಷಣ ಜಾಗೃತರಾದ ಜೈಲಿನ ಅಧಿಕಾರಿಗಳು ಮುನೀರ್ ಮೇಲೆ ಹಲ್ಲೆ ಮಾಡುವುದನ್ನು ತಪ್ಪಿಸಿದರು. ಇದರಿಂದ ಕೆಲಕಾಲ ಜೈಲಿನೊಳಗೆ ಆತಂಕದ ವಾತಾವರಣ ಸೃಷ್ಟಿಯಾಯಿತು ಎಂದು ತಿಳಿದು ಬಂದಿದೆ.

ಬರ್ಕೆ ಪೊಲೀಸರು ಜೈಲು ಆವರಣಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರಸ್ತುತ ಹೆಚ್ಚಿನ ತನಿಖೆ ನಡೆಯುತ್ತಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page