ಮಂಗಳೂರು/ವಾಷಿಂಗ್ಟನ್ : ಅಮೆರಿಕಾದಲ್ಲಿ ಅಧ್ಯಕ್ಷರ ಮೇಲೆ ಗುಂ*ಡಿನ ದಾಳಿ ನಡೆದಿರುವುದು ಹಾಗೂ ಅಧ್ಯಕ್ಷರ ಹ*ತ್ಯೆ ನಡೆದಿರುವುದು ಇದೇ ಮೊದಲೇನಲ್ಲ. 1865 ರಲ್ಲಿ ಅಮೇರಿಕಾದ ಅಧ್ಯಕ್ಷ ಅಬ್ರಾಹಂ ಲಿಂಕನ್ ಈ ರೀತಿಯ ದಾ*ಳಿಯಲ್ಲಿ ಹ*ತ್ಯೆಯಾದ ಮೊದಲ ಅಮೆರಿಕಾ ಅಧ್ಯಕ್ಷರಾಗಿದ್ದಾರೆ. ಅದೇ ರೀತಿ ಟ್ರಂಪ್ ದಾಳಿಗೆ ಒಳಗಾದ ಅಮೆರಿಕಾದ ಎರಡನೇ ಮಾಜಿ ಅಧ್ಯಕ್ಷರಾಗಿದ್ದಾರೆ.

ಜಗತ್ತಿನ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಅಮೆರಿಕಾದ ಅಧ್ಯಕ್ಷರಿಗೆ ದೊಡ್ಡ ಬೆಂಗಾವಲು ಪಡೆಯೇ ಇದೆ. ಆದ್ರೆ, ಆ ಬೆಂಗಾವಲು ಪಡೆಯನ್ನು ಬೇಧಿಸಿ ಗುಂ*ಡಿನ ದಾಳಿ ನಡೆಸಿ ಇದುವರೆಗೆ ನಾಲ್ವರು ಅಧ್ಯಕ್ಷರನ್ನು ಹ*ತ್ಯೆ ಮಾಡಲಾಗಿದೆ. ಇನ್ನು ನಾಲ್ವರು ಅಧ್ಯಕ್ಷರ ಮೇಲೆ ದಾ*ಳಿ ನಡೆದಿದ್ದರೂ ಜೀವ ಉಳಿಸಿಕೊಂಡಿದ್ದಾರೆ. ಇನ್ನು ಟ್ರಂಪ್‌ಗೂ ಮೊದಲು 1912 ರಲ್ಲಿ ಮಾಜಿ ಅಧ್ಯಕ್ಷ ಥಿಯೋಡೋರ್ ರೋಸ್‌ವೆಲ್ಸ್ ಮೇಲೆ ದಾಳಿ ನಡೆಸಲಾಗಿತ್ತು. ಅವರೂ ಕೂಡ ಗಾ*ಯಗೊಂಡು ಜೀವ ಉಳಿಸಿಕೊಂಡಿದ್ದರು.
ಇದುವರೆಗೆ ಗುಂ*ಡಿನ ದಾಳಿಗೆ ಹ*ತ್ಯೆಯಾದ ಅಮೆರಿಕಾ ಅಧ್ಯಕ್ಷರು ಇವರು..!

1. ಅಬ್ರಹಾಮ್ ಲಿಂಕನ್ (Abraham Lincoln). ಹ*ತ್ಯೆ ನಡೆದ ವರ್ಷ: 1865 . ಹ*ತ್ಯೆ ನಡೆದ ಸ್ಥಳ : ವಾಷಿಂಗ್ಟನ್ ಡಿ.ಸಿ. , ಫೋರ್ಡ್ ಥಿಯೇಟರ್. ಹ*ತ್ಯೆ ಮಾಡಿದಾತ : ಜಾನ್ ವಿಲ್ಕ್ಸ್ ಬೂತ್.

2. ಜೇಮ್ಸ್ ಎ. ಗಾರ್ಫೀಲ್ಡ್ (James A. Garfield). ಹ*ತ್ಯೆ ನಡೆದ ವರ್ಷ: 1881. ಹ*ತ್ಯೆ ನಡೆದ ಸ್ಥಳ : ವಾಷಿಂಗ್ಟನ್ ಡಿ.ಸಿ. Baltimore and Potomac Railroad Station. ಹ*ತ್ಯೆ ಮಾಡಿದಾತ : ಚಾರ್ಲ್ಸ್ ಜೆ. ಗುಟೀಯೋ

3. ವಿಲಿಯಂ ಮಕ್ಕಿನ್‌ಲಿಯೆ (William McKinley). ಹ*ತ್ಯೆ ನಡೆದ ವರ್ಷ: 1901. ಹತ್ಯೆ ನಡೆದ ಸ್ಥಳ : ಬಫಲೋ, ನ್ಯೂಯಾರ್ಕ್. ಹ*ತ್ಯೆ ಮಾಡಿದಾತ : ಲಿಯೋನ್ ಚೋಲ್ಗೊಶ್

4. ಜಾನ್ ಎಫ್. ಕೆನಡಿ (John F. Kennedy). ಹ*ತ್ಯೆ ನಡೆದ ವರ್ಷ: 1963. ಹ*ತ್ಯೆ ನಡೆದ ಸ್ಥಳ : ಡಲ್ಲಾಸ್, ಟೆಕ್ಸಾಸ್, ಹ*ತ್ಯೆ ಮಾಡಿದಾತ : ಲೀ ಹಾರ್ವೇ ಓಸ್ವಾಲ್ಡ್
ಅಧ್ಯಕ್ಷರಾಗಿದ್ದಾಗಲೇ ಇವರ ಮೇಲೆ ದಾ*ಳಿ ನಡೆದಿತ್ತು..!

1. ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ (Franklin D. Roosevelt). ದಾ*ಳಿ ನಡೆದ ವರ್ಷ : 1933. ದಾ*ಳಿ ನಡೆದ ಸ್ಥಳ : ಮಿಯಾಮಿ, ಫ್ಲೋರಿಡಾ. ದಾ*ಳಿ ಮಾಡಿದ ಆರೋಪಿ : ಜ್ಯೂಸೆಪ್ಸ್.

2. ಹ್ಯಾರಿ ಎಸ್. ಟ್ರೂಮನ್ (Harry S. Truman). ದಾ*ಳಿ ನಡೆದ ವರ್ಷ : 1950 . ದಾ*ಳಿ ನಡೆದ ಸ್ಥಳ : ಬ್ಲೇರ್ ಹೌಸ್, ವಾಷಿಂಗ್ಟನ್ ಡಿ.ಸಿ., ದಾ*ಳಿ ಮಾಡಿದಾತ : ಓಸ್ಕರ್ ಕೊಲ್ಲಾಜೋ ಮತ್ತು ಗ್ರೈಸಿಯೋ ಟೊರ್ರೆಸೊಲಾ.

3. ಜೆರಾಲ್ಡ್ ಫೋರ್ಡ್ (Gerald Ford). ದಾಳಿ ನಡೆದ ವರ್ಷ : 1975 . ಇವರ ಮೇಲೆ ಎರಡು ಬಾರಿ ದಾ*ಳಿ ನಡೆಸಲಾಗಿದ್ದು ಒಂದು ಬಾರಿ ಸಕ್ರಾಮೆಂಟೋ, ಕ್ಯಾಲಿಫೋರ್ನಿಯಾ ಹಾಗೂ ಸಾನ್ ಫ್ರಾನ್ಸಿಸ್ಕೋದಲ್ಲಿ ದಾ*ಳಿ ನಡೆದಿತ್ತು. ಲಿನೆಟ್ “ಸ್ಕ್ವೀಕಿ” ಫ್ರೊಮ್ ಮತ್ತು ಸಾರೆ ಜೇನ್ಮೂರ್ ಎಂಬವರು ಈ ವಿಫಲ ದಾ*ಳಿ ನಡೆಸಿದ್ದರು.

4. ರೋನಾಲ್ಡ್ ರೀಗನ್ (Ronald Reagan). ದಾ*ಳಿ ನಡೆದ ವರ್ಷ : 1981 . ದಾಳಿ ನಡೆದ ಸ್ಥಳ : ವಾಷಿಂಗ್ಟನ್ ಡಿ.ಸಿ. ದಾ*ಳಿ ಮಾಡಿದವ : ಜಾನ್ ಹಿಂಕ್ಲಿ ಜೂನಿಯರ್.
ಇದನ್ನೂ ಓದಿ : ಶ್ವಾನಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕರು!
ಅಧ್ಯಕ್ಷರನ್ನು ಗುರಿಯಾಗಿಸಿ ದಾ*ಳಿ ನಡೆದಿದ್ದ ಅಮೆರಿಕಾದಲ್ಲಿ ಎರಡು ಬಾರಿ ಮಾಜಿ ಅಧ್ಯಕ್ಷರ ಮೇಲೆ ದಾ*ಳಿ ನಡೆಸಲಾಗಿದೆ. ಮೊದಲ ಬಾರಿ 1912 ರಲ್ಲಿ ಮಾಜಿ ಅಧ್ಯಕ್ಷ ಥಿಯೋಡೋರ್ ರೂಸ್‌ವೆಲ್ಟ್ ಮೇಲೆ ದಾ*ಳಿ ನಡೆದಿತ್ತು. ದಾ*ಳಿಯಲ್ಲಿ ರೂಸ್‌ವೆಲ್ಟ್ ಬದುಕಿ ಉಳಿದಿದ್ದರು. ಇದಾದ ಬಳಿಕ 2024 ರಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ದಾ*ಳಿ ನಡೆಸಲಾಗಿದೆ. ಕಿವಿಗೆ ಗಾ*ಯವಾಗಿ ಟ್ರಂಪ್ ಕೂಡ ಬದುಕಿ ಉಳಿದಿದ್ದಾರೆ.