Connect with us

LATEST NEWS

‘ಎಲ್ಲಿದೆ ಬೆಲೆ ಏರಿಕೆ? ಜನರು ಪ್ರಶ್ನಿಸುತ್ತಿಲ್ಲ, ನೀವು ಮಾತ್ರ ಪ್ರಶ್ನಿಸುತ್ತಿದ್ದೀರಿ’: ಬಿಜೆಪಿ ಸಂಸದ

Published

on

ಬೆಂಗಳೂರು: ಬೆಲೆ ಏರಿಕೆ ಕುರಿತು ಜನರಿಗೆ ಆಕ್ರೋಶವಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಆಕ್ರೋಶವಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬ ಹೇಳಿದರು.


ಇಂದು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ವೇಳೆ ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ ಅವರು, ‘ಎಲ್ಲಿದೆ ಬೆಲೆ ಏರಿಕೆ? ಜನರು ಪ್ರಶ್ನಿಸುತ್ತಿಲ್ಲ. ನೀವು ಮಾತ್ರ ಪ್ರಶ್ನಿಸುತ್ತಿದ್ದೀರಿ’ ಎಂದರು.

ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನರಿಗೆ ಸಮಸ್ಯೆಯಾಗಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಅವಧಿಗಿಂತಲೂ ಈಗ ಜನರು ನೆಮ್ಮದಿಯಿಂದ ಇದ್ದಾರೆ. ಕಾಂಗ್ರೆಸ್ ಪಕ್ಷದವರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಉತ್ತರಿಸಿದರು.
ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಪೆಟ್ರೊಲಿಯಂ ಉತ್ಪನ್ನ ಖರೀದಿಗೆ ಮಾಡಿದ್ದ ಸಾಲವನ್ನು ಈಗಿಮ ಸರ್ಕಾರ ತೀರಿಸುತ್ತಿದೆ. ಹೀಗಾಗಿ ದರ ಹೆಚ್ಚಳ ಮಾಡಲಾಗುತ್ತಿದೆ ಎಂದರು. ಸಾಲ ತೀರಿಸಿದ ಕುರಿತು ಮಾಹಿತಿ ಇಲ್ಲ ಎಂದ ಸಚಿವರು, ಪೆಟ್ರೊಲಿಯಂ ಸಚಿವಾಲಯ ತಮ್ಮ ವ್ಯಾಪ್ತಿಯಲ್ಲಿಲ್ಲ ಎಂದರು.

INTERNATIONAL

ದಾವೋಸ್ ನಲ್ಲಿ ಫ್ರೆಂಚ್‌ ಅಧ್ಯಕ್ಷರ ಭಾಷಣ; ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ಭಾರೀ ಏರಿಕೆ!

Published

on

ದಾವೋಸ್:‌ ವಿಶ್ವ ನಾಯಕರು ಸೇರಿದ್ದ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಸನ್‌ ಗ್ಲಾಸ್‌ ಧರಿಸಿದ್ದರು. ಇದೀಗ ಈ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಬದಲಾದಂತಾಗಿದೆ.


ಹೌದು, ಜಾಗತೀಕವಾಗಿರುವ ಅತ್ಯಂತ ಸಂಕೀರ್ಣ ಮತ್ತು ಆತಂಕಕಾರಿ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಸೇರಿ ಇತರ ವಿಚಾರಗಳ ಬಗ್ಗೆ ಚರ್ಚಿಸಲು ವಿಶ್ವ ನಾಯಕರು ಸೇರಿರುವ ವಿಶ್ವ ಆರ್ಥಿಕ ವೇದಿಕೆ ಚರ್ಚೆಯಲ್ಲಿ ಮಹತ್ವದ ವಿಚಾರಗಳ ಬದಲಾಗಿ, ಎಲ್ಲರ ಕಣ್ಣುಗಳು ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಧರಿಸಿದ್ದ ಸನ್‌ ಗ್ಲಾಸ್‌ ಮೇಲೆ ಬಿದ್ದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ತಮ್ಮ ಕಣ್ಣು ಊದಿಕೊಂಡು ಕೆಂಪಾಗಿ ಕಾಣುತ್ತಿವೆ. ಹೀಗಾಗಿ ಸನ್‌ ಗ್ಲಾಸ್‌ ಧರಿಸುವ ಅನಿವಾರ್ಯತೆ ಇದೆ ಎಂದು ಹೇಳಿಕೊಂಡಿದ್ದರು.

“ದಯವಿಟ್ಟು ಸನ್ ಗ್ಲಾಸ್ ಧರಿಸಿರುವ ನನ್ನ ಕಣ್ಣಿನ ನೋಟಕ್ಕಾಗಿ ಕ್ಷಮಿಸಿ, ಇದು ಸಂಪೂರ್ಣವಾಗಿ ನಿರುಪದ್ರವ” ಎಂದು ಹೇಳಿದ್ದರು.

ಇದನ್ನೂ ಓದಿ: ಮದುವೆ ಮನೆಯಲ್ಲಿ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್..!‌?

ಸನ್‌ ಗ್ಲಾಸ್‌ ಕಂಪನಿಯ ಷೇರುಗಳಲ್ಲಿ ದಿಢೀರ್‌ ಏರಿಕೆ!
ಅಧ್ಯಕ್ಷರು ನೀಡಿದ ಹೇಳಿಕೆಯಿಂದ ಸನ್‌ ಗ್ಲಾಸ್‌ ಕಂಪನಿಯ ಅದೃಷ್ಟ ಖಲಾಯಿಸಿದೆ. ಅದರ ತಯಾರಕ ಐವಿಷನ್ ಟೆಕ್‌ನ ಷೇರುಗಳು ಗುರುವಾರ ಸುಮಾರು 28% ರಷ್ಟು ಏರಿಕೆ ಕಂಡಿವೆ. ಫ್ರೆಂಚ್ ಐಷಾರಾಮಿ ಕನ್ನಡಕ ಬ್ಯಾಂಡ್ ಹೆನ್ರಿ ಜೂಲಿಯನ್ ಅನ್ನು ಹೊಂದಿರುತ ಐವಿಷನ್ ಟೆಕ್, ಮ್ಯಾಕ್ರನ್ ಧರಿಸಿದ್ದ ಸನ್ ಗ್ಲಾಸ್ ಪೆಸಿಫಿಕ್ S 01 ಮಾದರಿಯಾಗಿದ್ದು, ಕಂಪನಿಯ ವೆಬ್‌ಸೈಟ್‌ನಲ್ಲಿ ಇದರ ಬೆಲೆ 659 ಯುರೋಗಳ ಎಂದು ಬುಧವಾರ ಹೇಳಿದೆ ಎಂದು ವರದಿಯಾಗಿದೆ.

Continue Reading

LATEST NEWS

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

Published

on

ಚಾಮರಾಜನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಇಂದು(ಜ.24) ಬೆಳಗ್ಗೆ ನಡೆದಿದೆ.


ಬಂಡಳ್ಳಿ ಗ್ರಾಮದ ಜಯಲಕ್ಷ್ಮಿ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.


ಇದನ್ನೂ ಓದಿ: ಕೆಲಸಕ್ಕೆ ಗೈರಾಗಿದ್ದಕ್ಕೆ ಯುವತಿಗೆ ಸಾರ್ವಜನಿಕವಾಗಿ ಅವಮಾನ: ಮಾಲೀಕ ಪೊಲೀಸರ ವಶ

ಅದೃಷ್ಟವಶಾತ್‌, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಆದರೆ ಮನೆ ಸಂಪೂರ್ಣ ಹಾನಿಗೊಳಗಾಗಿದೆ.

Continue Reading

LATEST NEWS

ಜನ್ಮದಿನದ ಪಾರ್ಟಿಗೆ ಕರೆಸಿ ಯುವಕನ ಹ*ತ್ಯೆ

Published

on

ಮಂಗಳೂರು/ರಾಯಚೂರು :  ಜನ್ಮದಿನದ ಪಾರ್ಟಿಗೆ ಕರೆಸಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಯುವಕನ ಕೊ*ಲೆ ಮಾಡಿರುವ ಘಟನೆ ರಾಯಚೂರಿನ ಮಾವಿನಕೆರೆ ದಂಡೆಯ ಮೇಲೆ  ನಡೆದಿದೆ.

ಜಹೀರಾಬಾದ್ ಬಡಾವಣೆ ನಿವಾಸಿ, 22 ವರ್ಷದ ವಿಶಾಲ್ ಕೊ*ಲೆಯಾದ ಯುವಕ. 19 ವರ್ಷದ ರಾಜು ಅಲಿಯಾಸ್ ಯೇಸು ಮತ್ತು ಬಸವರಾಜ  ಕೊ*ಲೆಗೈದ ಆರೋಪಿಗಳು.

ಇದನ್ನೂ ಓದಿ : ವಸತಿ ಕಟ್ಟಡದ ಮೇಲೆ ಫೈ*ರಿಂಗ್ ; ಬಾಲಿವುಡ್ ನಟನ ಬಂಧನ

ಬಸವರಾಜ ಜನ್ಮದಿನದ ಪಾರ್ಟಿ ಕೊಡಿಸುವುದಾಗಿ ವಿಶಾಲ್ ನನ್ನು ಕರೆಸಿಕೊಂಡಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಬಳಿಕ ಕೊ*ಲೆಯಲ್ಲಿ ಅಂತ್ಯ ಕಂಡಿದೆ. ಕೊ*ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page