Connect with us

FILM

WATCH VIDEO : ಖ್ಯಾತ ಸಂಗೀತ ನಿರ್ದೇಶಕನ ಮನೆಯಲ್ಲಿ ಕಳ್ಳತನ; ಡೆಲಿವರಿ ಬಾಯ್ಸ್ ವೇಷದಲ್ಲಿ ಬಂದು ಕೃತ್ಯ!

Published

on

ಮಂಗಳೂರು/ಬೆಂಗಳೂರು : ಪದ್ಮಶ್ರೀ ಪುರಸ್ಕೃತ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್  ಮನೆಯಲ್ಲಿ ಕಳ್ಳತನ ನಡೆದಿದೆ. ಈ ಬಗ್ಗೆ  ರಿಕ್ಕಿ ಕೇಜ್ ತಮ್ಮ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ಮನೆಗೆ ನುಗ್ಗಿದ ಕಳ್ಳರು ಸಂಪ್ ಕವರ್ ಕದ್ದಿದ್ದಾರೆ ಎಂದು ತಿಳಿಸಿದ್ದಾರೆ. ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ಈ ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳ್ಳರು ಝೊಮ್ಯಾಟೋ ಡೆಲಿವರಿ ಸಿಬ್ಬಂದಿಯಂತೆ ಕಾಣಿಸಿಕೊಂಡಿದ್ದರು ಎಂದು ರಿಕ್ಕಿ ಕೇಜ್ ಆರೋಪಿಸಿದ್ದಾರೆ. ಇನ್ನು ಸಿಸಿಟಿವಿ ವೀಡಿಯೋದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರನ್ನು ಕಾಣಬಹುದು. ಡೆಲಿವರಿ ಬ್ಯಾಗ್ ವಾಹನದಲ್ಲಿರುವುದು ಕಾಣಿಸುತ್ತಿದೆ. ಒಬ್ಬ ಯುವಕ ರಸ್ತೆಯಲ್ಲಿಯೇ ಬೈಕ್ ಮೇಲೆ ಕುಳಿತಿದ್ದರೆ, ಮತ್ತೊಬ್ಬ ಬೈಕ್‌ನಿಂದ ಕೆಳಗಿಳಿದು ಮನೆಯ ಆವರಣಕ್ಕೆ ಪ್ರವೇಶಿಸಿ ನೀರಿನ ಸಂಪ್‌ ನ ಕಬ್ಬಿಣದ ಮುಚ್ಚಳವನ್ನು ಕದ್ದುಕೊಂಡು ಹೋಗಿರುವುದು ದೃಶ್ಯಗಳಲ್ಲಿ ದಾಖಲಾಗಿದೆ.

ರಿಕ್ಕಿ ಪೋಸ್ಟ್ ಏನು?

ನನ್ನನ್ನು ದರೋಡೆ ಮಾಡಲಾಗಿದೆ. ಪ್ರಿಯ @zomato, @zomatocare, ನಿಮ್ಮ ಚಾಲಕರಲ್ಲಿ ಒಬ್ಬರು ಗುರುವಾರ ನನ್ನ ಮನೆಗೆ ಪ್ರವೇಶಿಸಿ  ಸಂಪ್ ಕವರ್ ಕದ್ದಿದ್ದಾರೆ. ಸಂಜೆ 6 ಗಂಟೆ ಸಮಯದಲ್ಲಿ ಈ ಕಳ್ಳತನ ನಡೆದಿದೆ. ಅವರಲ್ಲಿ ತುಂಬಾ ದಿಟ್ಟತನವಿದೆ. ಇದು ಬಹುಶಃ ಅವರ ಮೊದಲ ಬಾರಿ ಮಾಡಿದ್ದಲ್ಲ ಎನ್ನಿಸುತ್ತದೆ. ಅವರು ಕೇವಲ 15 ನಿಮಿಷಗಳ ಹಿಂದೆ ಬಂದಿದ್ದರು. ನಂತರ ಮತ್ತೆ ಒಳಗೆ ನುಗ್ಗಿ ಅಪರಾಧ ಎಸಗಿದರು ಎಂದು ಬರೆದು ಕೊಂಡಿದ್ದಾರೆ.

ಇದನ್ನೂ ಓದಿ : ಡಿವೋರ್ಸ್ ವದಂತಿ ಮಗಳ ಕಿವಿಗೆ ಬಿದ್ದಿದ್ಯಾ…! ಅಭಿಷೇಕ್ ಬಚ್ಚನ್ ಏನಂದ್ರು?

ನೀವು ಸಿಸಿಟಿವಿ ದೃಶ್ಯಾವಳಿಗಳನ್ನು ಎರಡು ಕೋನಗಳಿಂದ ನೋಡಬಹುದು. ಅವರ ಮುಖದ ಸ್ಕ್ರೀನ್‌ಶಾಟ್‌ಗಳು ಮತ್ತು ನಂಬರ್ ಪ್ಲೇಟ್ ಸಹ ಕಾಣುತ್ತದೆ. ಕೆಂಪು ಹೋಂಡಾ ಆಕ್ಟಿವಾದಲ್ಲಿ ಸಂಖ್ಯೆ KA03HY8751 ಎಂದು ತೋರುತ್ತದೆ. ಈ ವ್ಯಕ್ತಿ ಯಾರು ಎಂಬ ಬಗ್ಗೆ ಬೆಂಗಳೂರು ಸಿಟಿ ಪೊಲೀಸರಿಗೆ ಸಹಾಯ ನೀಡುವ ಸಾಧ್ಯತೆಯಿದೆಯೇ? ಅಲ್ಲದೆ, ಜನರೇ, ಜಾಗರೂಕರಾಗಿರಿ. ಇದು ನಿಮಗೂ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.

BIG BOSS

ಅಂತ್ಯ ಅಲ್ಲ….ಇದು ಹೊಸ ಆರಂಭ..ಧ್ರುವಂತ್ ಗೆಟಪ್ ಚೇಂಜ್

Published

on

ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಸೀಸನ್ 12 ಮುಕ್ತಾಯದ ಹಂತದಲ್ಲಿದೆ. ಒಬ್ಬೊಬ್ಬರೇ ಹೊರ ನಡೆದಿದ್ದಾರೆ. ಈಗ ಉಳಿದಿರೋದು ಕೇವಲ ಐದು ಮಂದಿ. ಮಿಡ್ ವೀಕ್ ಎಲಿಮಿನೇಷನ್‌ ಮೂಲಕ ಧ್ರುವಂತ್ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಲೇ ಧ್ರುವಂತ್ ಬದಲಾಗಿದ್ದಾರೆ.

ಬದಲಾಯ್ತು ಗೆಟಪ್:

ಬಿಗ್ ಬಾಸ್ ಮನೆಯೊಳಗಿದ್ದಾಗ ತಮ್ಮದೇ ಆದ ರೀತಿಯಲ್ಲಿ ಆಟವಾಡಿದ್ದರು ಧ್ರುವಂತ್. ಚರ್ಚೆ, ಜಗಳ, ವಾದದಲ್ಲೂ ಧ್ರುವಂತ್ ಇದ್ದರು. ಎಲ್ಲರೊಂದಿಗೆ ಜಗಳವಾಡುತ್ತಿದ್ದ ಧ್ರುವಂತ್‌ರನ್ನು ಕಿಚ್ಚ ಕ್ಲಾಸ ತೆಗೆದುಕೊಂಡಿದ್ದೂ ಇದೆ. ದೊಡ್ಮನೆಯೊಳಗೆ ‘ಜೈ ಮಹಾಕಾಳ್’ ಎನ್ನುತ್ತಾ ಖ್ಯಾತರಾಗಿದ್ದ ಧ್ರುವಂತ್ ಸೀಕ್ರೆಟ್ ರೂಮಿಗೂ ಹೋಗಿದ್ದರು. ಅಲ್ಲೂ ರಕ್ಷಿತಾ ಶೆಟ್ಟಿ ಜೊತೆ ಅವರ ಜಗಳ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಬಿಗ್ ಬಾಸ್ ಮನೆಯಲ್ಲಿ ತನ್ನ ಉದ್ದ ಕೂದಲನ್ನು ಜುಟ್ಟು ಕಟ್ಟಿಕೊಂಡು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದ ಧ್ರುವಂತ್, ಇದೀಗ ಜುಟ್ಟಿಗೆ ಕತ್ತರಿ ಹಾಕಿಸಿಕೊಂಡಿದ್ದಾರೆ. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕಣ್ಣು ಬಣ್ಣದ ಥಾರ್‌ನಲ್ಲಿ ಬಂದಿಳಿದ ಧ್ರುವಂತ್, ಅಭಿಮಾನಿಗಳನ್ನು ಭೇಟಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಬಳಿಕ ಸೆಲೂನ್‌ಗೆ ಹೋದ ಅವರು ಕೂದಲು ಕತ್ತರಿಸಿಕೊಂಡಿದ್ದಾರೆ. ಸ್ಟೈಲಿಷ್ ಹೇರ್ ಸ್ಟೈಲ್ ಮಾಡಿಕೊಂಡು ಡಿಫರೆಂಟ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಅಂತ್ಯ ಅಲ್ಲ….ಇದು ಹೊಸ ಆರಂಭ ಎಂಬುದಾಗಿ ಟ್ಯಾಗ್ ಲೈನ್‌ನೊಂದಿಗೆ ವೀಡಿಯೋ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ : ‘ಅಶ್ವಿನಿ ಗೌಡಗೆ ಕನ್ನಡ ಬರೆಯೋಕೆ ಬರಲ್ಲ’ ಎಂಬ ಟೀಕೆಗೆ ಸ್ಪಷ್ಟೀಕರಣ ಕೊಟ್ಟ ಕರವೇ ನಾರಾಯಣ ಗೌಡ!

ಅಂದಹಾಗೆ, ಇಂದು(ಜ.17) ಬಿಗ್ ಬಾಸ್ ಪ್ರಿ ಫಿನಾಲೆ ನಡೆಯಲಿದೆ. ನಾಳೆ(ಜ.18) ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ,ರಘು, ಧನುಷ್, ಅಶ್ವಿನಿ ಗೌಡರಲ್ಲಿ ಯಾರು ಬಿಗ್ ಬಾಸ್ ಟ್ರೋಫಿ ಗೆಲ್ತಾರೆ ಅನ್ನೋದು ಸದ್ಯದ ಕುತೂಹಲ.

Continue Reading

DAKSHINA KANNADA

ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಭೇಟಿ; ಮಗನಿಗಾಗಿ ಪ್ರಾರ್ಥನೆ

Published

on

ಉಳ್ಳಾಲ : ಕರಾವಳಿಯ ಕಾರಣಿಕ ಕ್ಷೇತ್ರ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಶುಕ್ರವಾರ(ಜ.17) ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಿಗೆ ಯಾರು ಬಂದರು ಕೊರಗಜ್ಜನ ಕ್ಷೇತ್ರಕ್ಕೆ ಬಂದೇ ಬರ್ತಾರೆ. ಯಾರೇ ಬಂದರೂ ಕೊರಗಜ್ಜ ಅವರ ಬಯಕೆಗಳನ್ನು ಈಡೇರಿಸುತ್ತಾರೆ. ನನ್ನ ಮಗ, ಮಗಳು, ಅಳಿಯ ಎಲ್ಲರೂ ಇಲ್ಲಿಗೆ ಬಂದಿದ್ದಾರೆ. ನನಗೂ ಇಲ್ಲಿಗೆ ಬರಲು ಬಹಳ ಆಸೆ ಇತ್ತು ಅದು ಇಂದು ನೆರವೇರಿದೆ. ಪುತ್ರ ಅಹಾನ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಬಾರ್ಡರ್ -2 ಚಿತ್ರ ಬಿಡುಗಡೆಯಾಗುತ್ತಿದೆ. ಅದರ ಯಶಸ್ಸಿಗಾಗಿ ಆಶೀರ್ವಾದ ಬೇಡಲು ಇಲ್ಲಿಗೆ ಬಂದಿದ್ದೇನೆ.

ತುಳು ಭಾಷೆ, ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸುವ ಉದ್ದೇಶದಿಂದ ಈಗಾಗಲೇ ‘ಜೈ’ ತುಳು  ಸಿನಿಮಾದಲ್ಲಿ ನಟಿಸಿದ್ದೇನೆ. ತುಳು,ಕನ್ನಡ ಸಿನೆಮಾದಲ್ಲಿ ಸದ್ಯಕ್ಕೆ ಬೇರೆ ಯೋಜನೆಗಳಿಲ್ಲ ಎಂದರು.

ಇದನ್ನೂ ಓದಿ : ರಚಿತಾ ರಾಮ್ ಅಭಿಮಾನಿಗಳಿಗೆ ಡಬಲ್ ಧಮಾಕಾ: ಒಂದೇ ದಿನ ಎರಡು ಸಿನಿಮಾಗಳು ತೆರೆಗೆ!

ಕುತ್ತಾರು ಕೊರಗತನಿಯ ಆದಿಸ್ಥಳ ಕ್ಷೇತ್ರದ ಪರವಾಗಿ ನಟ ಸುನೀಲ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮುಂಬಯಿ ಉದ್ಯಮಿ ವಿವೇಕ್ ಶೆಟ್ಟಿ ಬೊಲ್ಯಗುತ್ತು,ಕುತ್ತಾರು ಕೊರಗತನಿಯ ಆದಿಕ್ಷೇತ್ರದ ಮಹಾಬಲ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ಶ್ರೀರಾಮ್ ರೈ ಮೊದಲಾದವರು ಉಪಸ್ಥಿತರಿದ್ದರು.

Continue Reading

FILM

ರಚಿತಾ ರಾಮ್ ಅಭಿಮಾನಿಗಳಿಗೆ ಡಬಲ್ ಧಮಾಕಾ: ಒಂದೇ ದಿನ ಎರಡು ಸಿನಿಮಾಗಳು ತೆರೆಗೆ!

Published

on

ಹೀರೋ/ಹೀರೋಯಿನ್‌ಗಳ ಸಿನಿಮಾಗಳು ಸಾಮಾನ್ಯವಾಗಿ ಒಂದೇ ದಿನ ಬಿಡುಗಡೆ ಆಗೊದು ಕಡಿಮೆ. ಆದರೆ, ಕೆಲವೊಮ್ಮೆ ಈ ರೀತಿ ಆಗಿದ್ದು ಇದೆ. ಇದೀಗ ಜನವರಿ 23ರಂದು ಸ್ಯಾಂಡಲ್‌ವುಡ್‌ ‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌ ನಟಿಸಿರುವ ಎರಡು ಸಿನಿಮಾಗಳು ರಿಲೀಸ್‌ ಆಗುತ್ತಿದೆ. ಒಂದರಲ್ಲಿ ರಚಿತಾ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಹಳ್ಳಿ ಹುಡುಗಿಯಾಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಒಂದೇ ದಿನ ಎರಡು ಭಿನ್ನ ಪಾತ್ರಗಳಲ್ಲಿ ರಚಿತಾ ರಾಮ್ ಅಬ್ಬರಿಸಲು ಸಜ್ಜಾಗಿದ್ದಾರೆ.


ರಚಿತಾ ರಾಮ್‌, ಅನಿಲ್‌ ಕುಮಾರ್ ನಿರ್ದೇಶನದ ‘ಕಲ್ಟ್‌’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಜನವರಿ 16ರಂದು ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದ್ದು, ಜನರ ಮನಸ್ಸನ್ನು ಸೆಳೆದಿದೆ. ಮಲೈಕಾ ಮಸುಪಾಲ್ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಈ ಸಿನಿಮಾ ಜನವರಿ 23ರಂದು ತೆರೆಕಾಣಲಿದೆ.

ಈ ಸಿನಿಮಾದಲ್ಲಿ ರಚಿತಾ ರಾಮ್‌ ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೇಲರ್‌ನಲ್ಲಿ ಒಂದು ಶೇಡ್‌ ಮಾತ್ರ ತೋರಿಸಲಾಗಿದೆ. ಇನ್ನೊಂದು ಶೇಡ್‌ನನ್ನು ಸಿನಿಮಾದಲ್ಲಿ ನೋಡಬೇಕು ಎಂಬುದು ರಚಿತಾ ರಾಮ್‌ ಅಭಿಪ್ರಾಯ.

ಇದನ್ನೂ ಓದಿ: ಪೀಕಬೂ ಮೂಲಕ ಅಮೂಲ್ಯ ಕಂಬ್ಯಾಕ್; ಹೀರೋ ಯಾರು ಗೊತ್ತಾ!?

ದುನಿಯಾ ವಿಜಯ್, ರಾಜ್‌ ಬಿ ಶೆಟ್ಟಿ ಮೊದಲಾದವರು ಅಭಿನಯಿಸಿರುವ, ಜಡೇಶ್​ ಕುಮಾರ್ ಹಂಪಿ ನಿರ್ದೇಶನದ ‘ಲ್ಯಾಡ್‌ಲಾರ್ಡ್‌’ ಸಿನಿಮಾವು ಕೂಡ ಜನವರಿ 23ರಂದೇ ಬಿಡುಗಡೆಗೊಳ್ಳಲಿದೆ. ಇದು ಅಳಿದು ಉಳಿದವರ ಕಥೆ ಎನ್ನಲಾಗಿದೆ. ಹೇಮಂತ್‌ ಗೌಡ ಕೆಎಸ್‌ ಸಂಗೀತ ಸಂಯೋಜನೆ ಮಾಡಿದ್ದು, ಇದರ ಟಿಸರ್‌ ಜನರ ಗಮನ ಸೆಳೆದಿದೆ. ದೊಡ್ಡ ಮಟ್ಟದಲ್ಲಿ ಸತ್ಯ ಪ್ರಕಾಶ್‌ ನಿರ್ಮಾಣದ ಈ ಸಿನಿಮಾ ಜನರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ರಚಿತಾ ರಾಮ್‌ ನಟೆನೆಯ ಎರಡು ಸಿನಿಮಾಗಳು ಒಂದೇ ದಿನ ತೆರೆ ಕಾಣುತ್ತಿದೆ ಎಂಬುದೇ ವಿಶೇಷ.

Continue Reading
Advertisement

Trending

Copyright © 2025 Namma Kudla News

You cannot copy content of this page