Connect with us

FILM

ರಂಗಕರ್ಮಿ, ನಟ, ‘ನಗೆಯ ಸರ್ದಾರ’ ಯಶವಂತ್ ಸರದೇಶಪಾಂಡೆ ಇನ್ನಿಲ್ಲ

Published

on

ಮಂಗಳೂರು/ಬೆಂಗಳೂರು : ರಂಗಕರ್ಮಿ, ನಟ ಯಶವಂತ್ ಸರದೇಶಪಾಂಡೆ ಇಂದು(ಸೆ.19) ಬೆಳಿಗ್ಗೆ ಹೃದಯಾ*ಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಭಾನುವಾರ(ಸೆ.28)  ರಾತ್ರಿ ಧಾರವಾಡದಲ್ಲಿ ಯಶವಂತ್ ಸರದೇಶಪಾಂಡೆ ನಾಟಕ ಪ್ರದರ್ಶನ ನೀಡಿದ್ದರು. ಇಂದು ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ್ದರು. ಹೃದಯಾ*ಘಾತಕ್ಕೊಳಗಾದ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರು ಪತ್ನಿ, ನಟಿ ಮಾಲತಿ ಸರದೇಶಪಾಂಡೆ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ನಗೆಯ ಸರ್ದಾರ್ ಯಶವಂತ್ : 

ಹಾಸ್ಯ ನಾಟಕಗಳಿಗೆ ಹೆಸರುವಾಸಿಯಾಗಿದ್ದ ಯಶವಂತ್ ನಗೆಯ ಸರ್ದಾರ್ ಅಥವಾ ನಗೆ ನಾಟಕಗಳ ಬಾದ್ ಷಾ ಎಂದೇ ಪ್ರಸಿದ್ಧರಾಗಿದ್ದರು. 50ಕ್ಕೂ ಅಧಿಕ ನಾಟಕಗನ್ನು ಅವರು ನಿರ್ದೇಶಿಸಿದ್ದಾರೆ. ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್, ಮಿಡ್‌ ಸಮರ್‌ ನೈಟ್ಸ್‌ಡ್ರೀಮ್, ಬಾಡಿಗೆ ಮನೆ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ಕುಂಟಾ ಕುಂಟ ಕುರವತ್ತಿ ಮುಂತಾದವು ಅವರ ನಿರ್ದೇಶನದ ನಾಟಕಗಳು. ಮರಾಠಿ ನಾಟಕದ ಕನ್ನಡ ಅನುವಾದ ಹಾಗೂ ಜನಪ್ರಿಯ ಹಾಸ್ಯ ನಾಟಕ ಆಲ್ ದಿ ಬೆಸ್ಟ್, ರಾಶಿ ಚಕ್ರ, ಒಲವೇ ಜೀವನ ಸಾಕ್ಷಾತ್ಕಾರ ಇತ್ಯಾದಿ ನಾಟಕಗಳು ಜನಮನ ಗೆದ್ದಿವೆ.

ಇದನ್ನೂ ಓದಿ : WATCH VIDEO : ASIA CUP : ರೌಫ್‌ಗೆ ಬೂಮ್ರಾ ತಿರುಗೇಟು; ವೈರಲ್ ಆಯ್ತು ಸನ್ನೆ!

ಯಶವಂತ್ ರಂಗಭೂಮಿ ಮಾತ್ರವಲ್ಲದೆ ಧಾರಾವಾಹಿ, ಸಿನಿಮಾಗಳಲ್ಲೂ ಪಾತ್ರವಾಗಿದ್ದಾರೆ. ಅಲ್ಲೂ ನಗಿಸಿದ್ದಾರೆ. ಅಲ್ಲದೇ, ಸಿನಿಮಾ, ಕಿರುತೆರೆಗೆ ಕಥೆ, ಸಂಭಾಷಣೆಗಳನ್ನೂ ಬರೆದಿದ್ದಾರೆ. ಪರ್ವ, ತುಂತುರು, ದಶಾವತಾರ ಇತ್ಯಾದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.  ಅತಿಥಿ, ವರ್ಮ, ಜೂಜಾಟ, ಅಮೃತಧಾರೆ, ರಾಮ ಶಾಮ ಭಾಮಾ ಮೊದಲಾದ ಚಿತ್ರಗಳಲ್ಲಿ ಪಾತ್ರವಾಗಿ ಜನಮನ ಗೆದ್ದಿದ್ದಾರೆ.

ಆರ್ಯಭಟ ಪ್ರಶಸ್ತಿ, ಮಯೂರ ಪ್ರಶಸ್ತಿ, ನಗೆ ಸರದಾರ ಪ್ರಶಸ್ತಿ  ಮೊದಲಾದ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

FILM

ಸುದೀಪ್ ಸಿನಿಮಾದಲ್ಲಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟರು! ಪೋಸ್ಟರ್ ಬಿಡುಗಡೆ

Published

on

ಮಂಗಳೂರು/ಬೆಂಗಳೂರು : ಕಿಚ್ಚ ಸುದೀಪ್  ನಟನೆಯ ‘ಮಾರ್ಕ್’ ಸಿನಿಮಾ ತೆರೆಗೆ ಬರಲು ದಿನಗಣನೆ ಆರಂಭವಾಗಿದೆ. ಡಿಸೆಂಬರ್ 25 ರಂದು ಚಿತ್ರ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು, 15 ಮಿಲಿಯನ್ ವೀಕ್ಷಣೆ ಪಡೆದಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಜೋರಾಗಿದೆ.

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಚಿತ್ರದಲ್ಲಿ ಹಲವರು ಬಣ್ಣ ಹಚ್ಚಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಭಾಷೆಯ ಕಲಾವಿದರೂ ಪಾತ್ರವಾಗಿರೋದು ವಿಶೇಷ.

ಯಾರೆಲ್ಲ ಇದ್ದಾರೆ?

ದಕ್ಷಿಣ ಭಾರತದ ಜನಪ್ರಿಯ ಹಾಸ್ಯ ನಟ ಯೋಗಿ ಬಾಬು ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಮಾರ್ಕ್‌ ಸಿನಿಮಾಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರನ್ನು ಚಿತ್ರ ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಫಿಲ್ಮ್ಸ್ ಹಂಚಿಕೊಂಡಿದೆ.

ತಮಿಳು ಮತ್ತು ತೆಲುಗು ಭಾಷೆಯ ಸಿನಿಮಾದಲ್ಲಿ ನಟಿಸಿ ಖ್ಯಾತರಾಗಿರುವ ನವೀನ್ ಚಂದ್ರ ಮಾರ್ಕ್‌ನಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಪರಿಚಯ ನೀಡುವ ಪೋಸ್ಟರ್ ಒಂದು ಇದೀಗ  ಬಿಡುಗಡೆಗೊಂಡಿದೆ. ಪೋಸ್ಟರ್‌ ಅನ್ನು ಚಿತ್ರ ನಿರ್ಮಾಣ ಸಂಸ್ಥೆ ರಿವೀಲ್ ಮಾಡಿದೆ.

ಮಲಯಾಳಂನ ಖ್ಯಾತ ನಟ ಶೈನ್ ಟಾಮ್ ಚಾಕೊ ಕೂಡ ಮಾರ್ಕ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಖಳನಾಯಕನಾಗಿ ನಟಿಸಿ ಶೈನ್ ಜನಮನ ಗೆದ್ದಿದ್ದಾರೆ.

ಇದನ್ನೂ ಓದಿ : WATCH VIDEO : ಖ್ಯಾತ ಸಂಗೀತ ನಿರ್ದೇಶಕನ ಮನೆಯಲ್ಲಿ ಕಳ್ಳತನ; ಡೆಲಿವರಿ ಬಾಯ್ಸ್ ವೇಷದಲ್ಲಿ ಬಂದು ಕೃತ್ಯ!

ಮಾರ್ಕ್ ಚಿತ್ರವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ. ಅಂದಹಾಗೆ, ಮಾರ್ಕ್ ಕಿಚ್ಚ ನಟನೆಯ 47ನೇ ಸಿನಿಮಾ. ಚಿತ್ರದಲ್ಲಿ ಕಿಚ್ಚ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು,  ಮ್ಯಾಕ್ಸ್ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಮಾರ್ಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.
ದೀಪ್ಶಿಕಾ, ಗುರು ಸೋಮಸುಂದರಂ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶೇಖರ್ ಚಂದ್ರ ಛಾಯಾಗ್ರಹಣವಿದೆ.

 

 

Continue Reading

FILM

WATCH VIDEO : ಖ್ಯಾತ ಸಂಗೀತ ನಿರ್ದೇಶಕನ ಮನೆಯಲ್ಲಿ ಕಳ್ಳತನ; ಡೆಲಿವರಿ ಬಾಯ್ಸ್ ವೇಷದಲ್ಲಿ ಬಂದು ಕೃತ್ಯ!

Published

on

ಮಂಗಳೂರು/ಬೆಂಗಳೂರು : ಪದ್ಮಶ್ರೀ ಪುರಸ್ಕೃತ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್  ಮನೆಯಲ್ಲಿ ಕಳ್ಳತನ ನಡೆದಿದೆ. ಈ ಬಗ್ಗೆ  ರಿಕ್ಕಿ ಕೇಜ್ ತಮ್ಮ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ಮನೆಗೆ ನುಗ್ಗಿದ ಕಳ್ಳರು ಸಂಪ್ ಕವರ್ ಕದ್ದಿದ್ದಾರೆ ಎಂದು ತಿಳಿಸಿದ್ದಾರೆ. ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ಈ ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳ್ಳರು ಝೊಮ್ಯಾಟೋ ಡೆಲಿವರಿ ಸಿಬ್ಬಂದಿಯಂತೆ ಕಾಣಿಸಿಕೊಂಡಿದ್ದರು ಎಂದು ರಿಕ್ಕಿ ಕೇಜ್ ಆರೋಪಿಸಿದ್ದಾರೆ. ಇನ್ನು ಸಿಸಿಟಿವಿ ವೀಡಿಯೋದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರನ್ನು ಕಾಣಬಹುದು. ಡೆಲಿವರಿ ಬ್ಯಾಗ್ ವಾಹನದಲ್ಲಿರುವುದು ಕಾಣಿಸುತ್ತಿದೆ. ಒಬ್ಬ ಯುವಕ ರಸ್ತೆಯಲ್ಲಿಯೇ ಬೈಕ್ ಮೇಲೆ ಕುಳಿತಿದ್ದರೆ, ಮತ್ತೊಬ್ಬ ಬೈಕ್‌ನಿಂದ ಕೆಳಗಿಳಿದು ಮನೆಯ ಆವರಣಕ್ಕೆ ಪ್ರವೇಶಿಸಿ ನೀರಿನ ಸಂಪ್‌ ನ ಕಬ್ಬಿಣದ ಮುಚ್ಚಳವನ್ನು ಕದ್ದುಕೊಂಡು ಹೋಗಿರುವುದು ದೃಶ್ಯಗಳಲ್ಲಿ ದಾಖಲಾಗಿದೆ.

ರಿಕ್ಕಿ ಪೋಸ್ಟ್ ಏನು?

ನನ್ನನ್ನು ದರೋಡೆ ಮಾಡಲಾಗಿದೆ. ಪ್ರಿಯ @zomato, @zomatocare, ನಿಮ್ಮ ಚಾಲಕರಲ್ಲಿ ಒಬ್ಬರು ಗುರುವಾರ ನನ್ನ ಮನೆಗೆ ಪ್ರವೇಶಿಸಿ  ಸಂಪ್ ಕವರ್ ಕದ್ದಿದ್ದಾರೆ. ಸಂಜೆ 6 ಗಂಟೆ ಸಮಯದಲ್ಲಿ ಈ ಕಳ್ಳತನ ನಡೆದಿದೆ. ಅವರಲ್ಲಿ ತುಂಬಾ ದಿಟ್ಟತನವಿದೆ. ಇದು ಬಹುಶಃ ಅವರ ಮೊದಲ ಬಾರಿ ಮಾಡಿದ್ದಲ್ಲ ಎನ್ನಿಸುತ್ತದೆ. ಅವರು ಕೇವಲ 15 ನಿಮಿಷಗಳ ಹಿಂದೆ ಬಂದಿದ್ದರು. ನಂತರ ಮತ್ತೆ ಒಳಗೆ ನುಗ್ಗಿ ಅಪರಾಧ ಎಸಗಿದರು ಎಂದು ಬರೆದು ಕೊಂಡಿದ್ದಾರೆ.

ಇದನ್ನೂ ಓದಿ : ಡಿವೋರ್ಸ್ ವದಂತಿ ಮಗಳ ಕಿವಿಗೆ ಬಿದ್ದಿದ್ಯಾ…! ಅಭಿಷೇಕ್ ಬಚ್ಚನ್ ಏನಂದ್ರು?

ನೀವು ಸಿಸಿಟಿವಿ ದೃಶ್ಯಾವಳಿಗಳನ್ನು ಎರಡು ಕೋನಗಳಿಂದ ನೋಡಬಹುದು. ಅವರ ಮುಖದ ಸ್ಕ್ರೀನ್‌ಶಾಟ್‌ಗಳು ಮತ್ತು ನಂಬರ್ ಪ್ಲೇಟ್ ಸಹ ಕಾಣುತ್ತದೆ. ಕೆಂಪು ಹೋಂಡಾ ಆಕ್ಟಿವಾದಲ್ಲಿ ಸಂಖ್ಯೆ KA03HY8751 ಎಂದು ತೋರುತ್ತದೆ. ಈ ವ್ಯಕ್ತಿ ಯಾರು ಎಂಬ ಬಗ್ಗೆ ಬೆಂಗಳೂರು ಸಿಟಿ ಪೊಲೀಸರಿಗೆ ಸಹಾಯ ನೀಡುವ ಸಾಧ್ಯತೆಯಿದೆಯೇ? ಅಲ್ಲದೆ, ಜನರೇ, ಜಾಗರೂಕರಾಗಿರಿ. ಇದು ನಿಮಗೂ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.

Continue Reading

FILM

ಡಿವೋರ್ಸ್ ವದಂತಿ ಮಗಳ ಕಿವಿಗೆ ಬಿದ್ದಿದ್ಯಾ…! ಅಭಿಷೇಕ್ ಬಚ್ಚನ್ ಏನಂದ್ರು?

Published

on

ಮಂಗಳೂರು/ಮುಂಬೈ : ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಯಾವಾಗಲೂ ಗಾಸಿಪ್ ಹರಿದಾಡುತ್ತಿರುತ್ತದೆ. ತಾರಾದಂಪತಿ ದೂರವಾಗಿದ್ದಾರೆ, ಸಂಸಾರದಲ್ಲಿ ಬಿರುಕು ಬಿಟ್ಟಿದೆ, ವಿಚ್ಛೇದನ ಪಡೆಯಲಿದ್ದಾರೆ ಎಂಬಿತ್ಯಾದಿ ಗಾಳಿಸುದ್ದಿ ಹರಿದಾಡುತ್ತಿರುತ್ತವೆ. ಈ ಬಗ್ಗೆ ಎಲ್ಲೂ ದಂಪತಿ ಪ್ರತಿಕ್ರಿಯೆ ಕೊಟ್ಟಿಲ್ಲ. ಈ ನಡುವೆ ಅಭಿಷೇಕ್ ಬಚ್ಚನ್ ಮಗಳ ಬಗ್ಗೆ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.

ಮಗಳ ಬಳಿ ಮೊಬೈಲ್ ಇಲ್ಲ

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ನಡುವಿನ ಡಿವೋರ್ಸ್ ವಿವಾದ ಹರಿದಾಡುತ್ತಿರುವ ನಡುವೆ ಸಂದರ್ಶನವೊಂದರಲ್ಲಿ ನಟ ಮಾತನಾಡಿದ್ದಾರೆ. ಮಗಳು ಆರಾಧ್ಯ ಬಗ್ಗೆ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.

ನಿಮ್ಮ ವಿಚ್ಛೇದನ ವದಂತಿ ಬಗ್ಗೆ ಮಗಳು ಆರಾಧ್ಯಗೆ ಏನಾದರೂ ತಿಳಿದಿದೆಯಾ? ಎಂದು ಸಂದರ್ಶನದಲ್ಲಿ ಕೇಳಲಾಗಿದೆ. ಇದಕ್ಕೆ ಅಭಿಷೇಕ್ ಬಚ್ಚನ್ ಇಲ್ಲ ಎಂದಿದ್ದಾರೆ. ನನಗೆ ತಿಳಿದಿರುವಂತೆ, ಆರಾಧ್ಯಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ಅವಳ ಬಳಿ ಸ್ವಂತ ಫೋನ್ ಕೂಡ ಇಲ್ಲ ಎಂಬುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಮಗಳು ಆರಾಧ್ಯಗೆ ಈಗ 14 ವರ್ಷ. ಅವಳು ತುಂಬಾ ಅರ್ಥಮಾಡಿಕೊಳ್ಳುವವಳು. ತುಂಬಾ ಒಳ್ಳೆಯವಳು. ಐಶ್ವರ್ಯಾ ಅವಳಿಗೆ ತುಂಬಾ ಒಳ್ಳೆಯ ಮೌಲ್ಯಗಳನ್ನು ನೀಡಿದ್ದಾರೆ. ಆರಾಧ್ಯಳ ಸ್ನೇಹಿತರಿಗೆ ಕರೆ ಮಾಡಲು ತಾಯಿಯ ಫೋನ್ ಬಳಸುತ್ತಾಳೆ. ಅವಳು ಓದಲು ಮತ್ತು ಶಾಲೆಗೆ ಹೋಗಲು ಇಷ್ಟಪಡುತ್ತಾಳೆ. ಒಂದು ದಿನ ಯಾರಾದರೂ ಫೋನ್ ತೆಗೆದುಕೊಂಡು ಗೂಗಲ್‌ನಲ್ಲಿ ಸುಳ್ಳು ಸುದ್ದಿಗಳನ್ನು ಓದಿದರೆ ಏನಾಗುತ್ತದೆ? ಅವಳ ಮನಸ್ಸಿನಲ್ಲಿ ಏನೇನೋ ಪ್ರಶ್ನೆಗಳು ಮೂಡಬಹುದು. ಅದನ್ನು ಯೋಚಿಸಿದಾಗ ನೋವಾಗುತ್ತದೆ ಎಂದು ಹೇಳಿ ಅಭಿಷೇಕ್ ಭಾವುಕರಾಗಿದ್ದಾರೆ.

ಇದನ್ನೂ ಓದಿ : ಧುರಂಧರ್ ಸಕ್ಸಸ್ ಸಂಭ್ರಮದ ನಡುವೆ ರಣವೀರ್ ಸಿಂಗ್‌ಗೆ ಆಘಾ*ತ!

ಐಶ್ವರ್ಯ ರೈ ನಮ್ಮ ಮಗಳಿಗೆ ಯಾವುದು ಸರಿ ಯಾವುದು ತಪ್ಪು ಎಂದು ಹೇಳಿಕೊಟ್ಟಿದ್ದಾಳೆ. ಓದಿದ್ದೆಲ್ಲವನ್ನೂ ನಂಬಬೇಡ ಎಂದು ಕೂಡ ಆರಾಧ್ಯಗೆ ಐಶ್ವರ್ಯಾ ಕಲಿಸಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ವಿಚ್ಛೇದನದ ವದಂತಿಗೆ ತೆರೆ ಎಳೆದಿದ್ದಾರೆ. ಸದ್ಯ  ಐಶ್ವರ್ಯಾ ರೈ ತಮ್ಮ ಮಗಳನ್ನು ಬೆಳೆಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page