Connect with us

LATEST NEWS

ನವ ವಧು ಸಹಿತ ನದಿಗೆ ಹಾರಿದ ಕುಟುಂಬ ; ಸ್ಮ*ಶಾನವಾದ ಮದುವೆ ಮನೆ..!

Published

on

ಮಂಗಳೂರು/ತೆಲಂಗಾಣ : ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ವಧುವಿನ ಮನೆ ಕುಟುಂಬ ಸಮೇತ ಸ್ಮ*ಶಾನವಾದ ಆಘಾತಕಾರಿ ಘಟನೆ ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯ ಬಸರಾದಲ್ಲಿ ಸಂಭವಿಸಿದೆ.

ಗೋದಾವರಿ ನದಿಗೆ ಜಿಗಿದ ಯಾದಾದ್ರಿ ಭುವನಗಿರಿ ಜಿಲ್ಲೆಯ ಮೋತ್ಕೂರಿನ ಉಪ್ಪಲಿಂಚಿ ವೇಣು (54) ಮತ್ತು ಅವರ ಪುತ್ರಿ ಸಾ*ವನ್ನಪ್ಪಿದರೆ, ಪತ್ನಿ ಅನುರಾಧನನ್ನು ಗಂಗಾಪುತ್ರ ಸ್ಥಳೀಯರು ಪ್ರಾ*ಣಪಾಯದಿಂದ ಪಾರು ಮಾಡಿದ್ದಾರೆ.

ದಾಂಪತ್ಯ ‘ಎರಡನೇ ಹೊಸ ಜೀವನ’ :

ಪ್ರತಿಯೊಬ್ಬರ ಜೀವನದಲ್ಲಿ ದಾಂಪತ್ಯ ಜೀವನ ಸಾವಿರಾರು ಕನಸುಗಳಿಂದ ಕೂಡಿದ್ದು, ರಂಗುರಂಗಾಗಿರುತ್ತವೆ. ಮದುವೆ ಅನ್ನೋ ಪದ ಕೇಳಿದಾಕ್ಷಣ ಅನೇಕರು, ತಮ್ಮ ಹುಡುಗಿ-ಹುಡುಗ ಹೀಗಿರಬೇಕು, ಹಾಗಿರಬೇಕು ಎಂಬ ಹತ್ತಾರು ಆಸೆಗಳನ್ನು ಹೊಂದಿರುತ್ತಾರೆ. ಎಲ್ಲರ ಬಾಳಿನಲ್ಲೂ ಮದುವೆ ಎಂಬುದು ‘ಎರಡನೇ ಹೊಸ ಜೀವನ’ವೇ  ಆಗಿರುತ್ತದೆ.

ದಾಂಪತ್ಯ ಜೀವನಕ್ಕೆ ಕಾಲಿಡುವ ವಧುವಿಗೆ ಅಪಾರ ಕನಸು ಮತ್ತು ತ್ಯಾಗಗಳಿರುತ್ತವೆ. ತಾನು ಬೆಳೆದು, ಬಾಳಿದ ಮನೆ, ಹೆತ್ತವರನ್ನು ಬಿಟ್ಟು ಹೊಸ್ತಿಲು ದಾಟುವ ಹೆಣ್ಣುಮಗಳ ಕಣ್ಣೀರು, ಬಿಸಿ ಉಸಿರು ಹಲವು ನೋವುಗಳನ್ನು ಹೇಳುತ್ತಿರುತ್ತದೆ. ಇಂತಹ ಮನಸ್ಸಿಗೆ ಹಿಂಸೆ, ಘಾಸಿಯನ್ನುಂಟು ಮಾಡುವ ಘಟನೆಯಿಂದ ಸಾವಿಗೀಡಾಗುವ ಮುಖೇನ ತಮ್ಮೆಲ್ಲಾ ಕನಸು, ಆಸೆಗಳನ್ನು ಅರ್ಧಕ್ಕೆ ಮೊಟುಕುಗೊಳಿಸುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ.

ಮದುವೆಯ ಮೊದಲ ಹೆಜ್ಜೆ ‘ಸಾಲ’ :

ತಮ್ಮ ಮನೆಯ ಹೆಣ್ಣುಮಗಳನ್ನು ಮತ್ತೊಂದು ಮನೆಗೆ ಕಳಿಸುವಾಗ ಹೆತ್ತವರಿಗೆ ಆತಂಕ, ನೋವು ಕಾಡುತ್ತಿರುತ್ತದೆ. ಇದೆಲ್ಲವೂ ಮುಂಚಿತವಾಗಿಯೇ ತಿಳಿದಿದ್ದರೂ ಸಹ ಆಕೆಯ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಲು ಪೋಷಕರು ಯೋಚಿಸುವ ದಾಟಿ, ಮಾಡುವ ತ್ಯಾಗಗಳು ಅಪಾರ. ಗಂಡನ ಮನೆಗೆ ಕಳಿಸುವ ಹೆತ್ತವರು, ಮಗಳ ಭವಿಷ್ಯಕ್ಕಾಗಿ ಆಕೆ ಹುಟ್ಟಿದಾಗಿನಿಂದಲೂ ಒಂದಲ್ಲ ಒಂದು ತ್ಯಾಗಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಇನ್ನು ಅವಳು ಮದುವೆಗೆ ಬಂದ ಸಮಯದಲ್ಲಿ ಅವಳನ್ನು ಮನೆಯಿಂದ ಕಳಿಸಿಕೊಡುವ ತ್ಯಾಗವನ್ನು ಒಲ್ಲದ ಮನಸ್ಸಿನಿಂದ ನಿರ್ವಹಿಸುತ್ತಾರೆ. ಈ ಮಧ್ಯೆ ಆಕೆಯನ್ನು ಖುಷಿ ಖುಷಿಯಿಂದ ಕಳಿಸಿಕೊಡಬೇಕು ಎಂಬ ಬಯಕೆ ಪೋಷಕರದ್ದು. ಇದಕ್ಕಾಗಿ ಮಧ್ಯಮ ವರ್ಗದ ಕೆಲವು ಕುಟುಂಬ ಇಡುವ ಮೊದಲ ಹೆಜ್ಜೆಯೇ ‘ಸಾಲ’ ಮಾಡುವುದು.

ಎರಡನೇ ಮಗಳ ಮದುವೆ ಕನಸು :

ಇತ್ತೀಚೆಗಷ್ಟೇ ಎರಡನೇ ಮಗಳ ಎಂಗೇಜ್ಮೆಂಟ್ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದ ಪೋಷಕರು, ಮದುವೆಯನ್ನು ಮಾತ್ರ ಅದ್ಧೂರಿಯಾಗಿ ಮಾಡಬೇಕೆಂದು ನಿರ್ಧರಿಸಿದ್ದರು. ವೇಣು ಎಂಬ ವ್ಯಕ್ತಿ, ಸಣ್ಣ ಗಿರವಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಈ ವೇಳೆ ಮೊದಲ ಪುತ್ರಿ ಮದುವೆಯಾಗಿ, ನಾಲ್ಕು ವರ್ಷಗಳು ಕಳೆದ ಮೇಲೆ ತೀವ್ರ ಅ*ನಾರೋಗ್ಯಕ್ಕೆ ತುತ್ತಾದ ಆಕೆ, ಆ*ತ್ಮಹತ್ಯೆಗೆ ಶರಣಾಗಿದ್ದಳು. ಇನ್ನು ಎರಡನೇ ಮಗಳ ವಿವಾಹದ ಬಗ್ಗೆ ಸಾಕಷ್ಟು ಕನಸು ಕಟ್ಟಿದ್ದ ವೇಣು, 3 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು.

ಸಾಲದ ಚಿಂತೆಯಲ್ಲಿ ಸಾವು :

ಇನ್ನೇನು ಮಗಳ ಮದುವೆಗೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ ಎನ್ನುವಷ್ಟರಲ್ಲಿ ಸಾಲಗಾರರು ಹಣ ಕೊಡುವಂತೆ ಒತ್ತಾಯ ಹೇರಿದ್ದರು. “ಮಗಳಿಗೆ ಮದುವೆ ಫಿಕ್ಸ್ ಆಗಿದೆ, ಆದಷ್ಟು ಬೇಗ ತೀರಿಸುತ್ತೇವೆ. ಸ್ವಲ್ಪ ಕಾಲಾವಕಾಶ ಕೊಡಿ” ಎಂದು ಅಂಗಲಾಚಿ ಬೇಡಿಕೊಂಡರೂ ಕರಗದ ವ್ಯಕ್ತಿಗಳು, ಅವಾಚ್ಯ ಪದಗಳಿಂದ ನಿಂದಿಸಿ, ವಿಪರೀತ ಕಿರುಕುಳ ಕೊಟ್ಟಿದ್ದಾರೆ. ಈ ನೋವನ್ನು ತಾಳಲಾರದ ವೇಣು, ತಮ್ಮ ಪತ್ನಿ ಅನುರಾಧ ಮತ್ತು ವಿವಾಹ ನಿಶ್ಚಯವಾಗಿದ್ದ ಮಗಳನ್ನು ಕರೆದುಕೊಂಡು ಗೋದಾವರಿ ನದಿಗೆ ಹಾರಿದ್ದಾರೆ.

ಪತ್ನಿ ಅನುರಾಧನನ್ನು ಬದುಕುಳಿಸಿದ ಸ್ಥಳೀಯರು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರ, ಮೃತದೇಹಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

LATEST NEWS

ಖಾವಿ ವೇಷದಲ್ಲಿ ಮನೆಗೆ ಬರ್ತಾರೆ, ಭಸ್ಮ ಹಾಕ್ತಾರೆ-ಇಂಥವರನ್ನು ಕಂಡ್ರೆ ಹುಷಾರಾಗಿರಿ..!

Published

on

ಕಾರ್ಕಳ: ಸ್ವಾಮೀಜಿಗಳ ವೇಷದಲ್ಲಿ ಕೆಲವರು ವಾಹನವೊಂದರಲ್ಲಿ ಮನೆ ಮನೆಗೆ ತೆರಳುತ್ತಿರುವ ಕುರಿತಂತೆ ಫೋಟೊ ಮತ್ತು ಎಚ್ಚರಿಕೆಯ ಸಂದೇಶ ನೀಡುವ ಆಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ  ಸ್ವಾಮೀಜಿ ವೇಷಧಾರಿಗಳು ಕಾರ್ಕಳದ ಮಿಯ್ಯಾರ್ ಪರಿಸರದಲ್ಲಿ ರಿಕ್ಷಾ ಟೆಂಪೊ ಮಾದರಿಯ ವಾಹನದಲ್ಲಿ ಪ್ರಯಾಣಿಸುತ್ತಾ ಮನೆ ಮನೆಗೆ ತೆರಳುತ್ತಿದ್ದಾರೆ.

ಮನೆಯೊಂದಕ್ಕೆ ತೆರಳಿ ಅಲ್ಲಿದ್ದ ಮಹಿಳೆಗೆ ಭಸ್ಮ ಹಾಕಿರುವುದು ಮತ್ತು ಪರಿಸರದ ಜನರು ಬಂದು ಈ ವೇಷಧಾರಿಗಳನ್ನು ಅಲ್ಲಿಂದ ಓಡಿಸಿದ್ದಾರೆ ಎಂದು ವ್ಯಕ್ತಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಇಂತಹ ಕಪಟ  ಸ್ವಾಮೀಜಿ ವೇಷಧಾರಿಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಬೇಕೆಂಬ ಎಚ್ಚರಿಕೆಯ ಸಂದೇಶವನ್ನು ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ.

ಇವರು ಎಂಎಚ್‌ ರಿಜಿಸ್ಟ್ರೇಷನ್‌ ಹೊಂದಿರುವ ವಾಹನದಲ್ಲಿ  ಆಗಮಿಸಿದ್ದು ಉತ್ತರ ಭಾರತದಿಂದ ಬಂದ ಕಪಟರಾಗಿದ್ದು, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವ ಇಂತಹ ಸ್ವಾಮೀಜಿಗಳ ಬಗ್ಗೆ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.

 

Continue Reading

DAKSHINA KANNADA

ಡಿ.7ರಂದು ಶಾರದಾ ವಿದ್ಯಾಲಯದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ, ಸಾಂಸ್ಕೃತಿಕ ವೈಭವ

Published

on

ಮಂಗಳೂರು: ಮಕ್ಕಳಲ್ಲಿ ಶಿಸ್ತು, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಸ ಕ್ರೀಡೆ, ನೃತ್ಯ, ಸಂಗೀತ ಇವೆಲ್ಲವುಗಳನ್ನೊಳಗೊಂಡ ಹೊನಲು ಬೆಳಕಿನ ಕ್ರೀಡೋತ್ಸವ ಡಿ7ರ ಭಾನುವಾರದದಂದು ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ನಡೆಯಲಿದೆ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಈ ಬಾರಿಯ ಕ್ರೀಡೋತ್ಸವ ಸಮಾರಂಭವನ್ನು ಮೈಸೂರಿನ ಸಂಸದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಆಗಮಿಸಲಿದ್ದಾರೆ. ಸಾಹಸ ಕ್ರೀಡೆ, ಸಾಂಸ್ಕೃತಿಕ ಪ್ರದರ್ಶನದಲ್ಲಿ ಸುಮಾರು 2000 ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಒ ಸಮೀರ್ ಪುರಾಣಿಕ್ ಮಾತನಾಡಿ 4ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲ್ಲಕಂಬ, ಫೈರ್ ಜಂಪ್, ಯೋಗಾಸನ ಸೇರಿದಂತೆ ಪಿರಮಿಡ್ ರಚನೆಯ ಕ್ರೀಡಾ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: WATCH : ಉಡುಪಿ: ಶಾಲೆಯ ರೋಡ್ ಸರಿ ಇಲ್ಲ…ನಗರಸಭೆ ಆಯುಕ್ತರಿಗೆ ದೂರು ಕೊಟ್ಟ ಪುಟ್ಟ ವಿದ್ಯಾರ್ಥಿ

ಸಂಸ್ಥೆಯ ಪ್ರಾಂಶುಪಾಲ ದಯಾನಂದ ಕಟೀಲ್ ಶೋಭಾಯಾತ್ರೆಯಲ್ಲಿ ಒಡೆಯರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಈ ಕ್ರೀಡೋತ್ಸವಕ್ಕೆ ಮಕ್ಕಳನ್ನು ತಯಾರು ಮಾಡಲು ಯಾವುದೇ ತರಬೇತುದಾರರಿಲ್ಲ. ಶಾರದಾ ಕುಟುಂಬ ಜೊತೆಯಾಗಿ ಸೇರಿಕೊಂಡೇ ಮಕ್ಕಳನ್ನು ಸಿದ್ಧಪಡಿಸಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಸುಧಾಕರ್ ಪೇಜಾವರ, ಶಾರದಾ ಪಿಯು ಕಾಲೇಜು ಪ್ರಾಂಶುಪಾಲ ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.

Continue Reading

LATEST NEWS

ತನ್ನ ಮೂರು ವರ್ಷದ ಮಗು ಸೇರಿ ನಾಲ್ಕು ಮಕ್ಕಳನ್ನು ಹತ್ಯೆ ಮಾಡಿದ ಮಹಿಳೆ; ಕಾರಣ ಕೇಳಿದ್ರೆ ಶಾಕ್ ಆಗ್ತಿರಾ!

Published

on

ಪಾಣಿಪತ್: ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಸರಣಿ ಕೊಲೆ ಪ್ರಕರಣವೂ ಜನರನ್ನು ಬೆಚ್ಚಿಬೀಳಿಸಿದೆ. ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತನ್ನು ಈ ಘಟನೆ ಸುಳ್ಳು ಮಾಡಿದೆ. ಇಲ್ಲೊಬ್ಬ ತಾಯಿ ತನ್ನ ಸ್ವಂತ ಮಗುವನ್ನು ಸೇರಿ ಸಂಬಂಧಿಕರ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ.


ನೌಲ್ತಾ ಗ್ರಾಮದ ಪೂನಂ(32) ಕೃತ್ಯ ಎಸಗಿದ ತಾಯಿ.

ಪೂನಂ ಕಳೆದ ಎರಡು ವರ್ಷಗಳಲ್ಲಿ, ತನ್ನ ಮೂರು ವರ್ಷದ ಮಗು ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಮದುವೆ ಮನೆಯಲ್ಲಿ ರಾದ್ಧಾಂತ ಮಾಡಿದ ವರನ ಕುಟುಂಬ; ಕಾರಣ ಏನು ಗೊತ್ತಾ?

ನಾಲ್ಕು ಮಕ್ಕಳ ಕೊಲೆ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆಯ ರಹಸ್ಯ ಬಯಲಾಗಿದ್ದು, ಮಕ್ಕಳ ಸೌಂದರ್ಯದ ಬಗ್ಗೆ ಆಕೆಗಿದ್ದ ಅತಿಯಾದ ಅಸೂಯೆಯೇ ಈ ಕೊಲೆಗಳಿಗೆ ಕಾರಣ ಎಂದು ತಿಳಿದುಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page