Connect with us

kerala

ಎಟಿಎಂ ಮೆಷಿನ್‌ಗೆ ಹಣ ತುಂಬಲು ಬಂದ ವಾಹನಕ್ಕೆ ಕನ್ನ..!! ಲಕ್ಷಾಂತರ ರೂ. ದೋಚಿದ ಖದೀಮರು

Published

on

ಕಾಸರಗೋಡು: ಎಟಿಎಂ ಮಿಷಿನ್ ಗೆ ಹಣ ತುಂಬಿಸಲೆಂದು ಬಂದಿದ್ದ ವಾಹನದಿಂದಲೇ ಹಾಡಹಗಲೇ 50 ಲಕ್ಷ ಹಣವನ್ನು ಖತರ್ನಾಕ್ ಖದೀಮರು ದರೋಡೆಗೈದ ಘಟನೆ ಬುಧವಾರದಂದು (ಮಾ.27) ಉಪ್ಪಳ ಪೇಟೆಯಲ್ಲಿ ನಡೆದಿದೆ.

ವಾಹನದ ಗಾಜು ಪುಡಿ ಮಾಡಿ ಕೃತ್ಯ ಎಸಗಿದ ಕಳ್ಳರು..!!

ATM amount theft

ದರೋಡೆಕೋರರು ವಾಹನದ ಗಾಜನ್ನು ಪುಡಿಗೈದು ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ನೌಕರರು ವಾಹನವನ್ನು ನಿಲ್ಲಿಸಿ ಎಟಿಎಂ ಮೆಷಿನ್‌ ತೆರೆದು ವಾಹನದಲ್ಲಿದ್ದ ಹಣದ ಬಾಕ್ಸ್ ತೆಗೆದುಕೊಂಡು ಹೋಗಲು ಮರಳಿ ಬಂದ ವೇಳೆ ವಾಹನದ ಗಾಜು ಪುಡಿಯಾಗಿತ್ತು. ಪರಿಶೀಲಿಸಿದಾಗ 50 ಲಕ್ಷ ರೂ. ಇದ್ದ ಬಾಕ್ಸ್ ನಾಪತ್ತೆಯಾಗಿದೆ. ಖಾಸಗಿ ಏಜೆನ್ಸಿಯ ವಾಹನದಲ್ಲಿ ಹಣವನ್ನು ತಂದು ಎಟಿಎಂ ತುಂಬಿಸಲಾಗುತ್ತಿತ್ತು. ವಾಹನದ ಗಾಜನ್ನು ಒಡೆದು ಕೃತ್ಯ ನಡೆಸಲಾಗಿದೆ.

ಮಂಜೇಶ್ವರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ವಾಹನದ ಚಾಲಕ ಮತ್ತು ನೌಕರನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಸಮೀಪದ ಸಿಸಿ ಕ್ಯಾಮರಾ ಮೂಲಕ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

kerala

ಬಾವಿಗೆ ಬಿದ್ದ ಪತಿಯನ್ನು ರಕ್ಷಿಸಿ ಕಲಿಯುಗದ ಸೀತೆಯಾದ ಪದ್ಮಾ

Published

on

ಕೇರಳ : ಆಕಸ್ಮಿಕವಾಗಿ 40 ಅಡಿ ಆಳದ ಬಾವಿಗೆ ಪತಿಯನ್ನು ಪತ್ನಿಯೊಬ್ಬಾಕೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಣೆ ಮಾಡಿದ ಘಟನೆ ಕೇರಳದ ಪಿರವಂನಲ್ಲಿ ನಡೆದಿದೆ.

ಬಾವಿಗೆ ಬಿದ್ದಿದ್ದ ರಮೇಶನ್‌ (64) ಅನ್ನು ಅವರ ಪತ್ನಿ ಪದ್ಮಾ (56) ಕಂಡು ತಕ್ಷಣ ಬಾವಿಗಿಳಿದು ರಕ್ಷಿಸಿದ್ದಾರೆ. ಪತಿ ಬಾವಿಗೆ ಬಿದ್ದಿರುವುದನ್ನು ಕಂಡ ಪದ್ಮ ತಕ್ಷಣ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದು, ಅಗ್ನಿಶಾಮಕ ತಂಡ ಬರುವವರೆಗೂ ಆಕೆ ತನ್ನ ಗಂಡನನ್ನು ಹಿಡಿದು ಎದೆಯ ಆಳದ ನೀರಿನಲ್ಲಿ ಸುಮಾರು 15-20 ನಿಮಿಷಗಳ ಕಾಲ ಇದ್ದರು. ”ಹಗ್ಗವನ್ನು ಬಿಗಿಯಾಗಿ ಹಿಡಿದಿದ್ದರಿಂದ ಆಕೆಯ ಕೈಗಳಿಗೆ ತೀವ್ರ ಪೆಟ್ಟಾಗಿದೆ. ಪತಿಯನ್ನು ರಕ್ಷಿಸುವತ್ತ ಮಾತ್ರ ಆಕೆಯ ಗಮನವಿತ್ತು. ಆಕೆ ತನ್ನ ಗಂಡನನ್ನು ಹಿಡಿದುಕೊಂಡು ಎದೆಯ ಆಳದ ನೀರಿನಲ್ಲಿ ಸುಮಾರು 15-20 ನಿಮಿಷಗಳ ಕಾಲ ರಕ್ಷಣಾ ತಂಡ ಬರುವವರೆಗೂ ನೀರಿನಲ್ಲಿ ತೇಲುತ್ತಿದ್ದರು” ಎಂದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ವಯನಾಡ್ : ಮೂರು ಹುಲಿಗಳ ಶ*ವ ಪತ್ತೆ; ತನಿಖೆಗೆ ಆದೇಶಿಸಿದ ಅರಣ್ಯ ಇಲಾಖೆ

ನೀರಿನಲ್ಲಿಯೇ ಇದ್ದು ತನ್ನ ಪತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಮಹಿಳೆಯ ಧೈರ್ಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಆಕೆಯ  ಮತ್ತು ಬುದ್ಧಿವಂತಿಕೆಯಿಂದಾಗಿ ತನ್ನ ಗಂಡನ ಜೀವ ಉಳಿಸಿದ್ದಾಳೆ ಎಂಬ ಶ್ಲಾಘನೆ ವ್ಯಕ್ತವಾಗಿದೆ. ಘಟನೆಯಲ್ಲಿ ದಂಪತಿಗೆ ಯಾವುದೇ ಗಾಯಗಳಾಗಿಲ್ಲ. ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪತ್ನಿ ಕಲಿಯುಗದ ಸಾವಿತ್ರಿ ಎಂದು ಜನ ಕೊಂಡಾಡುತ್ತಿದ್ದಾರೆ.

Continue Reading

kerala

ತರಗತಿಗೆ ಬಂದ ಯಮರಾಜ; ತಲೆನೋವೆಂದು ಮಲಗಿದ್ದ ವಿದ್ಯಾರ್ಥಿನಿ ಚಿರನಿದ್ರೆಗೆ…

Published

on

ಕೇರಳ : ತರಗತಿಯಲ್ಲಿ ತಲೆನೋವೆಂದು ಮಲಗಿದ್ದ ವಿದ್ಯಾರ್ಥಿನಿ ಚಿರನಿದ್ರೆಗೆ ಜಾರಿದ ಹೃದಯ ವಿದ್ರಾವಕ ಘಟನೆ ಕೇರಳದ ತ್ರಿಶೂರ್‌ನ ವಿಯ್ಯೂರಿನಲ್ಲಿರುವ ರಾಮವರ್ಮಪುರಂ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದಿದೆ.

ಕುಂದುಕಾಡ್‌ನ ಕೃಷ್ಣಪ್ರಿಯಾ (13) ಮೃತ ಬಾಲಕಿ ಎಂದು ಗುರುತಿಸಲಾಗಿದೆ.

ಎಂದಿನ0ತೆ ತರಗತಿಯಲ್ಲಿ ಹಾಜರಿದ್ದ ಕೃಷ್ಣಪ್ರಿಯಾ ನಿನ್ನೆ (ಫೆ.3)  ಮಧ್ಯಾಹ್ನ 2 ಗಂಟೆಯವರೆಗೆ ತರಗತಿಯಲ್ಲಿ ಆರೋಗ್ಯವಾಗಿದ್ದಳು. ಬಳಿಕ ತಲೆನೋವೆಂದು ಬೆಂಚಿನ ಮೇಲೆ ತಲೆಯಿಟ್ಟು ನಿದ್ರಿಸಿದ್ದು, ಮಧ್ಯಾಹ್ನ 2.30 ರ ಸುಮಾರಿಗೆ ಪ್ರಜ್ಞೆ ತಪ್ಪಿದ್ದಾಳೆ. ಸಹಪಾಠಿಗಳು ಆಕೆಯನ್ನು ಎಚ್ಚರಗೊಳಿಸಿದರೂ, ಎಚ್ಚರಗೊಂಡಿಲ್ಲ. ಇದರಿಂದ ಗಾಬರಿಗೊಂಡ ಸ್ನೇಹಿತರು ಕೂಡಲೇ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೃಷ್ಣಪ್ರಿಯಾಳನ್ನು ತ್ರಿಶೂರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿಸಲಾಯಿತು. ಆದರೆ ಆ ವೇಳೆಗಾಗಲೇ ಕೃಷ್ಣಪ್ರಿಯಾ ಮೃತಪಟ್ಟಿದ್ದಳು. ಸಾವಿಗೆ ಕಾರಣ ಏನೆಂಬುವುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ : ಆ ಒಂದು ಕರೆಗೆ ಒಂದನ್ನು ಒತ್ತಿ ಎರಡು ಲಕ್ಷ ಕಳೆದುಕೊಂಡ ಮಹಿಳೆ

ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಲ್ಲದ ಮಗು ಹಠಾತ್ ಸಾವನ್ನಪ್ಪಿರುವುದು ಆಶ್ಚರ್ಯಕರವಾದ ಹಿನ್ನಲೆ, ಈ ಬಗ್ಗೆ ವಿಯ್ಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

kerala

ಕಡಲ್ಕೊರೆತ ತಡೆಗಾಗಿ ವಿಷ್ಣು ಸಹಸ್ರನಾಮ ಪಠಣ

Published

on

By

ಮಂಗಳೂರು : ಕಡಲ ಕೊರೆತ ಹಾಗೂ ಕಡಲಿನಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಕಡಲ ತೀರದಲ್ಲಿ ವಿಷ್ಣು ಸಹಸ್ರನಾಮ ಪಠಣ ಮಾಡಲಾಗಿದೆ.

ಕಾಸರಗೋಡಿನ ಕಣ್ಣೂರಿನಿಂದ ಉಡುಪಿಯ ಶಿರೂರು ವರೆಗೆ ಈ ವಿಷ್ಣು ಸಹಸ್ರನಾಮದ ಅಭಿಯಾನ ನಡೆಸಲಾಗಿದೆ. ಭಾನುವಾರ ಸಂಜೆ ನಾಲ್ಕು ಗಂಟೆಗೆ ಕಡಲ ತೀರದಲ್ಲಿ 108 ಜನರ ತಂಡವಾಗಿ ಕುಳಿತ ಸಾವಿರಾರು ಜನರು ಈ ವಿಷ್ಣು ಸಹಸ್ರನಾಮ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

ವಿಷ್ಣು ಸಹಸ್ರನಾಮ ಸ್ತ್ರೋತ್ರ ಪಠಣ ಸಮಿತಿಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ವೇದ ಕೃಷಿಕ ಕೆ.ಎಸ್ ನಿತ್ಯಾನಂದ ಅವರು ಈ ವಿಷ್ಣು ಸಹಸ್ರನಾಮ ಸ್ತ್ರೋತ್ರ ಪಠಣದಿಂದ ಪ್ರಾಕೃತಿಕ ವಿಕೋಪ ತಡೆಗಟ್ಟಬಹುದು ಎಂದು ಕಂಡುಕೊಂಡಿದ್ದರು.

ಇದನ್ನೂ ಓದಿ: ಸುಳ್ಯದ ಅರಣ್ಯದಲ್ಲಿ ಕಾಡಾನೆಯ ಕಳೇಬರ ಪತ್ತೆ

ಇದರ ಭಾಗವಾಗಿ ಈ ಹಿಂದೆ ಎರಡು ಬಾರಿ ಇದರ ಪ್ರಾಯೋಗಿಕ ಪ್ರಯೋಗ ಮಾಡಿ ಯಶಸ್ವಿಯಾಗಿತ್ತು. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರಲ್ಲಿ ಭಾಗವಹಿಸಿ ಕರಾವಳಿಯ ಕಡಲ ತೀರದ ಸುರಕ್ಷತೆಯಲ್ಲಿ ಪಾಲ್ಗೊಳ್ಳಲು ಕಾಸರಗೋಡಿನ ಕಣ್ಣೂರಿನಿಂದ ಉಡುಪಿಯ ಶಿರೂರು ತನಕ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಸಂಜೆ ಸರಿಯಾಗಿ ನಾಲ್ಕು ಗಂಟೆಗೆ ಜನರು ಕಡಲ ಕಿನಾರೆಯಲ್ಲಿ ಸೇರಿ ಎರಡು ಗಂಟೆಗಳ ಕಾಲ ನಿರಂತರ ಎರಡು ಬಾರಿ ವಿಷ್ಣು ಸಹಸ್ರನಾಮ ಪಠಿಸುವಂತೆ ಕರೆನೀಡಲಾಗಿತ್ತು. ಮಂಗಳೂರಿನಲ್ಲಿ ಉಳ್ಳಾಲದಿಂದ ಸಸಿ ಹಿತ್ಲು ವರೆಗಿನ ಕಡಲ ಕಿನಾರೆಯಲ್ಲಿ ಹಲವೆಡೆ ಈ ಅಭಿಯಾನ ನಡೆದಿದೆ. ಚಿತ್ರಾಪುರ ಕಡಲತೀರದಲ್ಲಿ ಉಡುಪಿ ಚಿತ್ರಾಪುರ ಮಠದ ಯತಿಗಳು ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page