Connect with us

LATEST NEWS

ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಶಿಕ್ಷಕಿ..!

Published

on

ಮಂಡ್ಯ: ಮಹಾಮಾರಿ ಕೊರೊನಾದ 2 ನೇ ಅಲೆ ನಾಡಿನಲ್ಲಿ ಅನೇಕ ಶಿಕ್ಷಕರನ್ನು ಬಲಿ ಪಡೆದಿದೆ. ಮತ್ತೊಂದು ಇಂತಹುದೇ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. 

ಹೆಣ್ಣುಮಗುವಿಗೆ ಜನ್ಮ ನೀಡಿ, ಕೋವಿಡ್‌ ಸೋಂಕಿನಿಂದ ಉಪನ್ಯಾಸಕಿಯೊಬ್ಬರು ಮೃತಪಟ್ಟ ದಾರುಣ ಘಟನೆ ಮಂಡ್ಯ ಜಿಲ್ಲೆಯ ಭಾರತಿನಗರದ ಅರೆತಿಪ್ಪೂರು ಗ್ರಾಮದಲ್ಲಿ ನಡೆದಿದೆ.

ಅರೆತಿಪ್ಪೂರು ಗ್ರಾಮದ ಟಿ.ಪಿ. ಮನೋಹರಗೌಡ ಅವರ ಪತ್ನಿ 35 ವರ್ಷದ ಡಿ.ಆರ್‌. ಗುಣಶ್ರೀ  ಮೃತಪಟ್ಟ ಉಪನ್ಯಾಸಕಿಯಾಗಿದ್ದಾರೆ. ಮೂಲತಃ ಬೊಮ್ಮನದೊಡ್ಡಿ ಗ್ರಾಮದವರಾದ ಇವರು ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪತಿ ಬೇಸಾಯ ಮಾಡುತ್ತಿದ್ದಾರೆ.ಮದುವೆಯಾಗಿ 4 ವರ್ಷಗಳಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಏಳೂವರೆ ತಿಂಗಳ ಗರ್ಭಿಣಿಯಾಗಿದ್ದ ಗುಣಶ್ರೀ ಅವರಿಗೆ ಈಚೆಗೆ ಕೋವಿಡ್‌ ಸೋಂಕು ತಗುಲಿತ್ತು.

ಉಸಿರಾಟದ ಸಮಸ್ಯೆಯಿಂದಾಗಿ ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.‌ ತೀವ್ರ ಶ್ವಾಸಕೋಶ ಸೋಂಕಿನ ಪರಿಣಾಮ ಭಾನುವಾರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು  ಹೊರತೆಗೆದಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಗುಣಶ್ರೀ  ಅವರು ನಿನ್ನೆ ರಾತ್ರಿ ಮೃತರಾಗಿದ್ದಾರೆ.

DAKSHINA KANNADA

ರಾಜ್ಯ ಕಾಂಗ್ರೆಸ್‌ ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ: ವೇದವ್ಯಾಸ ಕಾಮತ್

Published

on

ಮಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ನೇತೃತ್ವದಲ್ಲಿ ಜೂನ್ 23 ರಂದು ಸೋಮವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ತನಕ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 94 ಸಿ ಹಕ್ಕು ಪತ್ರಗಳಿಗೆ 9/11 ನೀಡುತ್ತಿಲ್ಲ. ಇ-ಖಾತಾ ಹೆಸರಿನಲ್ಲಿ ಜನಸಾಮಾನ್ಯರಿಗೆ ಸಂಕಷ್ಟವಾಗಿದೆ. ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಮಾಡುತ್ತಿಲ್ಲ. ಅರ್ಹ ಬಿಪಿಎಲ್ ಕಾರ್ಡ್ ಗಳ ರದ್ದತಿ ಮತ್ತು ನೂತನ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸ್ವೀಕರಿಸುತ್ತಿಲ್ಲ. ಮಂಗಳೂರು ಪಾಲಿಕೆಗೆ ಕಳೆದೆರಡು ವರ್ಷಗಳಿಂದ ರಾಜ್ಯ ಸರಕಾರ ವಿಶೇಷ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು ಇದೆಲ್ಲವನ್ನೂ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

Continue Reading

DAKSHINA KANNADA

ಮಂಗಳೂರು ಮಹಾನಗರ ಪಾಲಿಕೆಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

Published

on

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು (ಜೂನ್.21) ಬೆಳಿಗ್ಗೆ 11.30 ಗಂಟೆಗೆ ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಮಹಾನಗರ ಪಾಲಿಕೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಪಾಲಿಕೆಯ ಎಂಜಿನಿಯರಿಂಗ್‌, ಯೋಜನೆ, ಕಂದಾಯ, ಲೆಕ್ಕ ಪತ್ರವಿಭಾಗದಲ್ಲಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಉಡುಪಿ: ನೀಟ್ ಅಂಕಪಟ್ಟಿಯನ್ನೇ ನಕಲಿ ಮಾಡಿದ ವಿದ್ಯಾರ್ಥಿ..!

ಲೋಕಾಯುಕ್ತ ಪ್ರಭಾರ ಎಸ್ ಪಿ ಕುಮಾರ ಚಂದ್ರ ಅವರ ನೇತೃತ್ವದಲ್ಲಿ ಇಬ್ಬರು ಡಿವೈಎಸ್‌ಪಿ, ನಾಲ್ಕು ಮಂದಿ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದರು.

Continue Reading

LATEST NEWS

ಉಡುಪಿ: ನೀಟ್ ಅಂಕಪಟ್ಟಿಯನ್ನೇ ನಕಲಿ ಮಾಡಿದ ವಿದ್ಯಾರ್ಥಿ..!

Published

on

ಉಡುಪಿ: ವಿದ್ಯಾರ್ಥಿ ಓರ್ವ ನೀಟ್ ಪರೀಕ್ಷೆಯಲ್ಲಿ ನಕಲಿ ಅಂಕಪಟ್ಟಿಯನ್ನು ಸೃಷ್ಟಿಸಿ, ತಾನು ಟಾಪರ್ ಎಂದು ಸುಳ್ಳು ಪ್ರಚಾರ ಪಡೆದುಕೊಂಡಿರುವಂತಹ ವಿಚಿತ್ರ ಘಟನೆ ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ಉಡುಪಿಯಲ್ಲಿ ನಡೆದಿದೆ.

ಖಾಸಗಿ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಯ ಮಗ ರೋನಕ್ ಶೆಟ್ಟಿ ಊರಿಗೆ ಮಕ್ಮಲ್ ಟೋಪಿ ಹಾಕಿರುವ ಯುವಕ. ನಕಲಿ ದಾಖಲೆಗಳನ್ನು ಸೃಷ್ಟಿಸಿ 107ನೇ ರ‍್ಯಾಂಕ್ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಅನುಮಾನ ಬಂದು ಪರಿಶೀಲಿಸಿದಾಗ ವಿದ್ಯಾರ್ಥಿಯ ನಕಲಿ ಮುಖ ಬಯಲಾಗಿದೆ.

ವೈದ್ಯಕೀಯ ಪ್ರವೇಶಕ್ಕೆ ನಡೆಯುವ ನೀಟ್ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿತ್ತು. ಹಲವು ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಉಡುಪಿಯ ಈ ರೋನಕ್ ಶೆಟ್ಟಿ ನಕಲಿ ಅಂಕಪಟ್ಟಿ ಸಿದ್ಧಪಡಿಸುವ ಮೂಲಕ ನಾನೇ ಟಾಪರ್ ಎಂದು ಹೇಳಿಕೊಂಡು ಇಡೀ ಊರಿಗೆ ಯಾಮಾರಿಸಿದ್ದಾನೆ.

ನೀಟ್ ಫಲಿತಾಂಶದಲ್ಲಿ ರಾಜ್ಯದ ಹಲವು ವಿದ್ಯಾರ್ಥಿಗಳು 200ನೇ ರ್ಯಾಂಕ್ ನೊಳಗೆ ಸಾಧನೆ ಮಾಡಿದ್ದಾರೆ. ಇದರ ಮಧ್ಯೆ ಉಡುಪಿಯ ರೋನಕ್ ಶೆಟ್ಟಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ ಎಂಟನೇ ಸ್ಥಾನ ಎಂದು ಹೇಳಲಾಗಿತ್ತು. ಈತನ ಸಾಧನೆ ಬಗ್ಗೆ ಇತರ ವಿದ್ಯಾರ್ಥಿಗಳಿಗೆ ಸಂಶಯ ಬಂದು ಪರಿಸೀಲಿಸಿದಾಗ ಅಸಲಿಗೆ ಆತನಿಗೆ ಸಿಕ್ಕಿದ್ದು 17 ಲಕ್ಷ ಸರಣಿಯ ರ್ಯಾಂಕ್. ಇದಲ್ಲದೇ ಆತ ಮತ್ತು ಆತನ ಪೋಷಕರು ನಕಲಿ ಅಂಕಪಟ್ಟಿಯನ್ನೇ ಕಾಲೇಜಿನ ಮೂಲಕ ಪ್ರಚಾರ ತಂತ್ರಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿಬಡವರಿಗೆ ನೆರವಾಗಲು ವೇಷ ಧರಿಸುತ್ತಿದ್ದ ಅಣ್ಣಪ್ಪ ಪುತ್ತೂರು ಇನ್ನಿಲ್ಲ

ರೋನಕ್ ಶೆಟ್ಟಿ ಅಸಲಿ ಅಂಕಪಟ್ಟಿಯಲ್ಲಿ 65 ಅಂಕ ಎಂದಿದ್ದು, ನಕಲಿ ಪಟ್ಟಿಯಲ್ಲಿ 646 ಎಂದಿದೆ. ನಕಲಿ ಪ್ರಮಾಣ ಪತ್ರದ ಅಕ್ಷರಗಳು ಸಂಪೂರ್ಣ ಅದಲು ಬದಲಾಗಿದ್ದು, 2024ರ ಅಂಕಪಟ್ಟಿಗೆ ಅಂಕಗಳನ್ನು ಸೇರಿಸಲಾಗಿದೆ. ಎರಡೂ ಅಂಕಪಟ್ಟಿಯನ್ನು ತಾಳೆಹಾಕಿ ನೋಡಿದಾಗ ನಕಲಿ ಎಂಬುದು ಬಯಲಿಗೆ ಬಂದಿದೆ. ಮುಖ್ಯವಾಗಿ ಪರೀಕ್ಷಾ ನಿರ್ದೇಶಕರ ಬದಲಾಗಿ ಹಿರಿಯ ನಿರ್ದೇಶಕರ ಸಹಿ ಹಾಕಲಾಗಿದೆ. ಮೂಲ ದಾಖಲೆಯಲ್ಲಿ ಎರಡು ಪುಟಗಳಿದ್ದರೆ ನಕಲಿಯಲ್ಲಿ ಒಂದೇ ಪುಟವಿದೆ. ಅಭ್ಯರ್ಥಿಯ ಭಾವಚಿತ್ರದಲ್ಲೂ ವ್ಯತ್ಯಾಸವಿದೆ.

ಕಟ್ಆಫ್ ಸ್ಕೋರ್ ಹಾಗೂ ಒಟ್ಟು ಅಭ್ಯರ್ಥಿಗಳ ಸಂಖ್ಯೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ನೀಟ್ನಲ್ಲಿ ಇಡೀ ದೇಶಕ್ಕೆ 107ನೇ ರ್ಯಾಂಕ್ ಎಂದು ಬಿಂಬಿಸಿದ್ದ ರೋನಕ್ ನಿಜವಾಗಿ ಬಂದಿದ್ದು 17,62,258 ರ್ಯಾಂಕ್. 107 ನೇ ರ್ಯಾಂಕ್ ಹೊಸದಿಲ್ಲಿ ಮೂಲದ ವಿದ್ಯಾರ್ಥಿನಿಯೊಬ್ಬರು ಪಡೆದುಕೊಂಡಿದ್ದಾರೆ.

ನಕಲಿ ಅಂಕಪಟ್ಟಿ ಸೃಷ್ಟಿಸಿ ವಿದ್ಯಾ ಸಂಸ್ಥೆಗಳಿಗೆ ಮೋಸ ಮಾಡುವ ಮತ್ತು ವೈದ್ಯಕೀಯದಂತಹ ಸೀಟುಗಳನ್ನು ಸುಲಭವಾಗಿ ಪಡೆಯಲು ಅಡ್ಡದಾರಿ ಹಿಡಿಯಲು ಯತ್ನಿಸಿದವರ ಬಗ್ಗೆ ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page