Connect with us

DAKSHINA KANNADA

ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್‌..!

Published

on

ಮಂಗಳೂರು/ ನವದೆಹಲಿ : ಇತ್ತೀಚಿನ ದಿನಗಳಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಅನೇಕ ಜನರು ತಮ್ಮ ಕೃಷಿ ಹಾಗೂ ಪಟ್ಟಾ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುವ ಪರಿಸ್ಥಿತಿ ಬಂದಿದೆ. ಹೀಗೆ ಬಿಟ್ಟು ಕೊಟ್ಟ ಜಮೀನಿಗೆ ಪರಿಹಾರ ನೀಡಲಾಗುತ್ತಿದೆಯಾದ್ರೂ ಪರಿಹಾರದ ಹಣಕ್ಕಾಗಿ ಜನರು ಅಲೆದಾಡುವ ಪರಿಸ್ಥಿತಿ ಕೂಡಾ ಇದೆ. ಆದ್ರೆ ಇನ್ನು ಮುಂದೆ ಈ ರೀತಿ ಸ್ವಾಧೀನಪಡಿಸಿದ ಜಮೀನಿಗೆ ಪರಿಹಾರ ನೀಡಲು ವಿಳಂಬವಾದ್ರೆ ಚಿಂತಿಸಬೇಕಾಗಿಲ್ಲ. ಯಾಕಂದ್ರೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಪರವಾಗಿ ತೀರ್ಪೊಂದನ್ನು ನೀಡಿದೆ. ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿಕೊಂಡು ನ್ಯಾಯಾಲಯವು ಈ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ ಇನ್ನು ಮುಂದೆ ಭೂ ಸ್ವಾಧೀನ ಮಾಡಿ ಪರಿಹಾರ ಸಮಯಕ್ಕೆ ಸರಿಯಾಗಿ ನೀಡದೇ ಇದ್ರೆ ಸರ್ಕಾರದ ಬೊಕ್ಕಸಕ್ಕೇ ನಷ್ಟ ಉಂಟಾಗಲಿದೆ. ಯಾಕಂದ್ರೆ ಇನ್ನು ಮುಂದೆ ಸರ್ಕಾರ ಭೂ ಸ್ವಾಧೀನ ಮಾಡಿ ಧೀರ್ಘಕಾಲ ಪರಿಹಾರ ನೀಡದೇ ಇದ್ದರೆ ಪರಿಹಾರ ನೀಡುವ ಸಮಯದಲ್ಲಿನ ಮಾರುಕಟ್ಟೆಯ ದರವನ್ನು ಸಂತ್ರಸ್ತರಿಗೆ ನೀಡಬೇಕಾಗುತ್ತದೆ.

ಯಾವ ಕಾರಣಕ್ಕೆ ಈ ಅದೇಶ ನೀಡಲಾಗಿದೆ..?

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB) ವಿರುದ್ಧ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿ ಈ ಆದೇಶ ನೀಡಲಾಗಿದೆ. ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆಗಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು 2003 ರಲ್ಲಿ KIADB ಅಧಿಸೂಚನೆ ಹೊರಡಿಸಿತ್ತು. ಆದ್ರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ ಸಂತ್ರಸ್ತರಿಗೆ ಪರಿಹಾರವನ್ನು ನೀಡಿರಲಿಲ್ಲ. ನೋಟಿಫಿಕೇಷನ್ ಬಳಿಕವೂ ಪರಿಹಾರ ಸಿಗದ ಕಾರಣ ಜಮೀನು ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. 2019 ರಲ್ಲಿ ಪರಿಹಾರ ನೀಡಲು KIADB ಮುಂದಾಗಿತ್ತಾದ್ರೂ ಅದು 2003 ರ ಮಾರುಕಟ್ಟೆ ದರವಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣದ ತೀರ್ಪು ಹೊರಬಿದ್ದಿದೆ. ಕೆಐಎಡಿಬಿಯು ಸಂತ್ರಸ್ತರಿಗೆ 2019 ರ ಮಾರುಕಟ್ಟೆ ದರದಲ್ಲೇ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಹಳೆ ಮೀಸಲು ಪಟ್ಟಿಯಂತೆ ಪಾಲಿಕೆ ಚುನಾವಣೆ ..!? ಶೀಘ್ರವೇ ಆಗಲಿದೆ ಘೋಷಣೆ..!

Published

on

ಮಂಗಳೂರು / ಮೈಸೂರು: ಮಂಗಳೂರು ಸೇರಿದಂತೆ ರಾಜ್ಯದ ಐದು ಮಹಾನಗರ ಪಾಲಿಕೆಗೆ ಈ ವರ್ಷದಲ್ಲೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಸರ್ಕಾರದಿಂದ ಈ ಐದೂ ಮಹಾನಗರ ಪಾಲಿಕೆಗಳ ಮೀಸಲು ಪಟ್ಟಿ ನೀಡಿದ್ರೆ ಅದರಂತೆ ಚುನಾವಣೆ ನಡೆಯಲಿದೆ. ಇಲ್ಲವಾದಲ್ಲಿ ಹೈ ಕೋರ್ಟ್ ಮೊರೆ ಹೋಗಿ ಹಳೆ ಮೀಸಲು ಪಟ್ಟಿಯಂತೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.


ಮಂಗಳೂರು ಸೇರಿದಂತೆ ಮೈಸೂರು, ಶಿವಮೊಗ್ಗ, ದಾವರಣಗೆರೆ, ತುಮಕೂರು ಈ ಐದು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿದಿಗಳ ಅವದಿ ಮುಕ್ತಾಯಗೊಂಡಿದೆ. ಈ ಐದೂ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆಸಬೇಕಾಗಿದ್ದು, ಚುನಾವಣಾ ಆಯೋಗ ರಾಜ್ಯ ಸರ್ಕಾರದ ಬಳಿ ಮೀಸಲು ಪಟ್ಟಿ ನೀಡಲು ಮನವಿ ಮಾಡಿದೆ. ನಿಯಮಾನುಸಾರ ಸರ್ಕಾರ ಮೀಸಲು ಪಟ್ಟಿ ಕೊಟ್ಟ ಬಳಿಕ ಅದರಂತೆ ಚುನಾವಣೆ ನಡೆಸಲಾಗುತ್ತದೆ. ಆದ್ರೆ ಸರ್ಕಾರ ಇನ್ನೂ ಮೀಸಲು ಪಟ್ಟಿ ನೀಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೊಂದು ವೇಳೆ ಮೀಸಲು ಪಟ್ಟಿ ನೀಡದೇ ಇದ್ರೆ ಈ ಹಿಂದಿನ ಮೀಸಲು ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣ ಆಯಕ್ತು ಜಿ.ಎಸ್. ಸಂಗ್ರೇಶಿ ಮಾಹಿತಿ ನೀಡಿದ್ದಾರೆ. ಮತದಾರರ ಪಟ್ಟಿ ಸಿದ್ಧವಾಗಿದೆಯಾದ್ರೂ ಮೀಸಲು ಪಟ್ಟಿಗಾಗಿ ಮಾತ್ರ ಕಾಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಜಸ್ಟ್ ಪಾಸ್ ಮಾಡಲು ದೈವಕ್ಕೆ ಮನವಿ ಸಲ್ಲಿಸಿದ ವಿದ್ಯಾರ್ಥಿ..! ಹುಂಡಿಯಲ್ಲಿ ಪತ್ತೆಯಾದ ಚೀಟಿ..!

Published

on

ಉಡುಪಿ :  ವಿದ್ಯಾರ್ಥಿಯೊಬ್ಬ ದೈವಕ್ಕೆ ಚೀಟಿ ಬರೆದು ನನಗೆ ಇಂತಿಷ್ಟು ಅಂಕ ಬರುವಂತೆ ಮಾಡಿ ಪಾಸ್ ಮಾಡಿಸು ಅಂತ ಕೋರಿಕೊಂಡ ಪತ್ರವೊಂದು ವೈರಲ್ ಆಗಿದೆ.

ಪರೀಕ್ಷೆ ಅಂದ್ರೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಅದೊಂದು ರೀತಿಯ ಟೆನ್ಷನ್ ಇದ್ದೇ ಇರುತ್ತದೆ. ಟಾಪರ್ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಗಿಂತ ಅಂಕ ಕಡಿಮೆ ಬಾರದಿರಲಿ ಅನ್ನೋ ಟೆನ್ಷನ್ ಇದ್ರೆ, ಸಾಮಾನ್ಯ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಹೇಗಾದ್ರೂ ಹೆಚ್ಚಿನ ಅಂಕ ಗಳಿಸಬೇಕು ಅನ್ನೋ ಚ್ಯಾಲೆಂಜ್ ಇರುತ್ತದೆ. ಆದ್ರೆ ಕಲಿಕೆಯಲ್ಲಿ ತೀರಾ ಹಿಂದೆ ಉಳಿದ ವಿದ್ಯಾರ್ಥಿಗಳು ಜಸ್ಟ್ ಪಾಸ್ ಆದ್ರೆ ಸಾಕು ಅಂತಿರ್ತಾರೆ. ಅಂತಹ ಒಬ್ಬ ವಿದ್ಯಾರ್ಥಿ ದೈವದ ಹುಂಡಿಯಲ್ಲಿ ಚೀಟಿ ಬರೆದು ಅಂಕಗಳ ಆಪ್ಷನ್ ಕೊಟ್ಟು ಇಷ್ಟಾದ್ರೂ ಕೊಡಿಸು ದೇವರೆ ಅಂತ ಬೇಡಿಕೊಂಡಿದ್ದಾನೆ.

ಕುಂದಾಪುರ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇವಸ್ಥಾನದ ಕಾಣಿಕೆ ಹುಂಡಿಯ ಲೆಕ್ಕಚಾರ ನಡೆಯುವಾಗ ಈ ಪತ್ರ ಲಭ್ಯವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ಬದ್ಧತೆಯ ಬಗ್ಗೆ ಚರ್ಚೆ ನಡೆದಿದೆ. ಜಸ್ಟ್ ಪಾಸ್ ಮಾಡುವ ಅಂಕ ನೀಡು ಅಂತ ದೈವದ ಬಳಿ ಕೋರಿಕೆ ಇಟ್ಟಿರುವ ವಿದ್ಯಾರ್ಥಿ ಅಂಕಗಳ ಅಪ್ಷನ್ ನೀಡಿದ್ದಾನೆ. ಪ್ರತಿಯೊಂದು ಸಬ್ಜೆಕ್ಟ್‌ ಗೆ ಎಷ್ಟು ಎಷ್ಟು ಸಿಗಬೇಕು ಎಂದು ದೈವದ ಬಳಿ ಕೋರಿಕೆ ಇಟ್ಟಿದ್ದಾನೆ. ಇದಕ್ಕಿಂತ ಕಡಿಮೆ ಬೇಡವೇ ಬೇಡ ದೇವರೆ ಅಂತ ಹೊರ ಬೊಬ್ಬರ್ಯ ದೈವಕ್ಕೆ ಮನವಿ ಮಾಡಿಕೊಂಡಿದ್ದಾನೆ.

Continue Reading

DAKSHINA KANNADA

ಬಂಜಾರ ಸಮೂದಾಯದೊಳಗೆ ಒಡಕು ಮೂಡಿಸಿತಾ ಮಲ್ಪೆ ಹಲ್ಲೆ ಪ್ರಕರಣ..!?

Published

on

ಉಡುಪಿ : ಮಲ್ಪೆಯಲ್ಲಿ ಮೀನು ಕದ್ದ ವಿಚಾರವಾಗಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿದ ಪ್ರಕರಣ ಸದ್ಯ ಬಂಜಾರ ಸಮೂದಾಯದ ನಡುವೆಯೆ ಬಿರುಕು ಮೂಡಿಸಿದಂತೆ ಕಾಣುತ್ತಿದೆ. ಹಲ್ಲೆಯನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡು ಮೀನುಗಾರರ ಪರ ನಿಂತಿದ್ದರೆ, ಹ*ಲ್ಲೆಯನ್ನು ಹಾಗೂ ಬಿಜೆಪಿ ನಾಯಕರ ನಡೆಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಇವರಿಬ್ಬರ ನಡುವೆ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಬಂಜಾರ ಸಮೂದಾಯದವರು ಹೆಣಗಾಡುತ್ತಿದ್ದಾರೆ.


ಮಲ್ಪೆಯಲ್ಲಿ ಹ*ಲ್ಲೆಗೊಳಗಾದ ಮಹಿಳೆ ಸಹಿ ಪಡೆದುಕೊಂಡ ಪೊಲೀಸರು ಆಕೆಗೆ ತಿಳಿಯದಂತೆ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ ಅನ್ನೋದು ಸದ್ಯ ಪೊಲೀಸರ ಮೇಲೆ ಇರುವ ಆರೋಪ. ಈ ಬಗ್ಗೆ ಮಹಿಳೆ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ನಾನು ಊರಿಗೆ ಹೋಗುತ್ತೇನೆ ಎಂದು ಹೇಳಿದ್ದರು. ಆದ್ರೆ ಇದೇ ವೇಳೆ ಪತ್ರಿಕಾಗೋಷ್ಠಿ ನಡೆಸಿದ ಬಂಜಾರ ಸಮೂದಾಯದ ವಿದ್ಯಾರ್ಥಿ ಸಂಘಟನೆ ಹ*ಲ್ಲೆ ನಡೆಸಿದ ಎಲ್ಲರನ್ನೂ ಹಾಗೂ ಪ್ರಮೋದ್ ಮದ್ವರಾಜ್ ಅವರನ್ನೂ ಬಂಧಿಸಬೇಕು ಎಂದು ಒತ್ತಾಯ ಮಾಡಿದೆ. ಆದ್ರೆ ಮತ್ತೊಂದೆಡೆ ಅದೇ ಸಮೂದಾಯದ ಪ್ರಮುಖರು ಇದೊಂದು ದೊಡ್ಡ ಘಟನೆಯೇ ಅಲ್ಲ. ನಾವು ಹೊಟ್ಟೆ ಪಾಡಿಗೆ ಇಲ್ಲಿಗೆ ಬಂದವರು. ಇಲ್ಲಿನ ಜನರು ತುಂಬಾ ಒಳ್ಳೆಯವರು ಹಾಗೂ ಪ್ರಮೋದ್ ಮದ್ವರಾಜ್ ಅವರಷ್ಟು ಒಳ್ಳೆಯವರು ಯಾರೂ ಇಲ್ಲ. ಮಲ್ಪೆ ಬಂದರಿನಲ್ಲಿ ಇಂತಹದು ದಿನಾ ನಡಿತಾ ಇರುತ್ತದೆ ಅದಕ್ಕೆಲ್ಲಾ ಕೇಸ್ ಹಾಕ್ತಾ ಇದ್ರೆ ಪೊಲೀಸ್ ಠಾಣೆಯಲ್ಲಿ ಪುಸ್ತಕ ಸಾಕಾಗದು. ಇದು ನಮ್ಮನ್ನು ಮುಂದಿಟ್ಟು ಮಾಡುತ್ತಿರುವ ರಾಜಕೀಯ ಅಂತ ಹೇಳಿದ್ದಾರೆ.

ಕೇವಲ ಮೀನು ಕದ್ದ ಆರೋಪಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹ*ಲ್ಲೆ ನಡೆಸಿರುವುದನ್ನು ನಾಗರಿಕ ಸಮಾಜ ಒಪ್ಪುವ ವಿಚಾರವಂತು ಖಂಡಿತಾ ಅಲ್ಲ. ಇಂತಹ ಘಟನೆಗಳು ನಡೆದಾಗ ಸಂವಿಧಾನದ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕಾಗಿರುವುದು ಪೊಲೀಸರ ಕರ್ತವ್ಯ ಕೂಡಾ. ಆದ್ರೆ ಇದರಲ್ಲಿ ರಾಜಕೀಯದವರು ಮೂಗು ತೂರಿಸಿದ ಕಾರಣ ಇದೀಗ ಹೊಟ್ಟೆಪಾಡಿಗೆ ಬಂದಿರುವ ಬಂಜಾರ ಸಮೂದಾಯದ ನಡುವೆ ಒಡಕು ಮೂಡಿರುವುದು ಸುಳ್ಳಲ್ಲ.

Continue Reading
Advertisement

Trending

Copyright © 2025 Namma Kudla News

You cannot copy content of this page