Connect with us

FILM

ಆ ನಟ ಕಿಸ್ ಮಾಡಿದಕ್ಕೆ ವಾಂತಿ ಮಾಡಿಕೊಂಡಿದ್ದರಂತೆ ಸ್ಟಾರ್ ನಟಿ

Published

on

ಮಂಗಳೂರು/ಮುಂಬೈ : ಕೆಲವು ನಟಿಯರು ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸುತ್ತಾರೆ. ಈ ಬಗ್ಗೆ ಸಿನಿಮಾ ಒಪ್ಪಿಕೊಳ್ಳುವ ಮೊದಲೇ ಮಾತುಕತೆ ನಡೆಸಿರುತ್ತಾರೆ. ಇದನ್ನು ಬಾಲಿವುಡ್‌ನ ಈ ಸ್ಟಾರ್ ನಟಿ ಕೂಡ ಅನುಸರಿಸುತ್ತಿದ್ದರು.

ಆದರೆ ಆ ಒಬ್ಬ ನಟ ಬಲವಂತವಾಗಿ ಕಿಸ್ ಮಾಡಿದಕ್ಕೆ ವಾಂತಿ ಮಾಡಿ 100 ಸಲ ಮುಖ ತೊಳೆದಿದ್ದೆ ಎಂದು ಸ್ಟಾರ್ ನಟಿ ಹೇಳಿದ್ದಾರೆ.

ಬಾಲಿವುಡ್ ನಟಿ ರವೀನಾ ಟಂಡನ್ ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ರವಿನಾ ಟಂಡನ್ ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸಿದ ನಟಿಯರಲ್ಲಿ ರವೀನಾ ಟಂಡನ್ ಕೂಡ ಒಬ್ಬರು.

ಆದರೆ ಸಿನಿಮಾವೊಂದರ ಶೂಟಿಂಗ್ ವೇಳೆ ಸಹ ನಟರೊಬ್ಬರು ಆಕಸ್ಮಿಕವಾಗಿ ರವೀನಾ ಟಂಡನ್ ತುಟಿಗಳಿಗೆ ಮುತ್ತಿಟ್ಟ ಘಟನೆ ನಡೆದಿತ್ತು. ಆ ನಂತರ ಏನಾಯಿತು ಎಂಬುದನ್ನು ಸ್ವತಃ ರವೀನಾ ಅವರೇ ಹೇಳಿದ್ದಾರೆ.

ಇದನ್ನೂ ಓದಿ: ಎಲಿಮಿನೇಟ್ ಆದ ಸ್ಪರ್ಧಿಗಳ ರೀ ಎಂಟ್ರಿ; ಕುತೂಹಲ ಕೆರಳಿಸಿದ ಎಲಿಮಿನೇಷನ್

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ರವೀನಾ ಮಾತನಾಡಿದ್ದಾರೆ. ರವೀನಾ ಟಂಡನ್ ಅವರೊಂದಿಗೆ ಒಂದು ಘಟನೆ ನಡೆದಿತ್ತಂತೆ. ಅವರ ಸಹ ನಟರೊಬ್ಬರು ತಪ್ಪಾಗಿ ಅವರನ್ನು ಚುಂಬಿಸಿದ್ದರಂತೆ. ಈ ದೃಶ್ಯವು ಸ್ಕ್ರಿಪ್ಟ್ ನ ಭಾಗವೂ ಆಗಿರಲಿಲ್ಲ. ಇದಾದ ನಂತರ ರವೀನಾ ಟಂಡನ್ ತುಂಬಾ ಅನ್‌ಕಂಫರ್ಟ್ ಫೀಲ್ ಮಾಡಿಕೊಂಡರಂತೆ.

ಆ ಬಳಿಕ ವಾಂತಿ ಕೂಡ ಮಾಡಿದರಂತೆ. 100 ಸಲ ತಮ್ಮ ಬಾಯಿ ತೊಳೆದುಕೊಂಡಿದ್ದಾರಂತೆ. ನಂತರ ಆ ನಟ ರವೀನಾ ಟಂಡನ್ ಅವರ ಬಳಿಕ ಕ್ಷಮೆಯಾಚಿಸಿದರಂತೆ. ಸಂದರ್ಶನ ಸಮಯದಲ್ಲಿ ರವೀನಾ ಟಂಡನ್ ಈ ವಿಚಾರ ಹೇಳಿದ್ದಾರೆ. ಸಿನಿಮಾಗಳಲ್ಲಿ ಕಿಸ್ ಮಾಡದಿರುವುದು ನನ್ನ ಆಯ್ಕೆ ಎಂದು ರವೀನಾ ಟಂಡನ್ ಹೇಳಿದ್ದಾರೆ.

 

FILM

ಅತ್ತೆಯನ್ನೇ ಪ್ರೀತಿಸಿ ಮದುವೆಯಾದ ಅಳಿಯ…! ಇದು ರೋಚಕ ಪ್ರೇಮಯಾನ…!

Published

on

ನಿಜವಾದ ಪ್ರೀತಿಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂದು ಅನೇಕರು ಹೇಳುತ್ತಾರೆ. ಈ ಮಾತನ್ನು ತೆಲುಗು ಕಿರುತೆರೆಯ ಜೋಡಿಯೊಂದು ಸಾಬೀತುಪಡಿಸಿದ್ದು, ಧಾರಾವಾಹಿಯಲ್ಲಿ ಅತ್ತೆ ಮತ್ತು ಅಳಿಯನಾಗಿ ನಟಿಸಿದ್ದ ಇಂದ್ರಾನಿಲ್ ಹಾಗೂ ಮೇಘನಾ ನಿಜ ಜೀವನದಲ್ಲಿ ಪತಿ-ಪತ್ನಿಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು.

ತೆಲುಗು “ಚಕ್ರವಾಗಂ” ಎಂಬ ಜನಪ್ರಿಯ ಸೀರಿಯಲ್‌ನಲ್ಲಿ ಜೊತೆಯಾಗಿ ಇಂದ್ರಾನಿಲ್ ಹಾಗೂ ಮೇಘನಾ ಅಭಿನಯಿಸಿದ್ದಾರೆ. ಈ ಧಾರವಾಹಿ 2003 ರಲ್ಲಿ ಪ್ರಸಾರವಾಗುತ್ತಿತ್ತು. ಇದರಲ್ಲಿ ಇಂದ್ರಾನಿಲ್‌ನ ಅತ್ತೆಯಾಗಿ ಮೇಘನಾ ಅಭಿನಯಿಸಿದ್ದಾರೆ. ಉತ್ತಮ ಟಿ.ಆರ್‌.ಪಿ ಹೊಂದಿರುವ “ಚಕ್ರವಾಗಂ” ಧಾರವಾಹಿಯನ್ನು ಕೊರೊನಾ ಅವಧಿಯಲ್ಲಿ ಮರು ಪ್ರಸಾರ ಮಾಡಲಾಯಿತು. 1000 ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಈ ಧಾರಾವಾಹಿಯು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಧಾರವಾಹಿಯಲ್ಲಿ ನಟಿಸುವ ಮೂಲಕ ಪ್ರೀತಿಯಲ್ಲಿ ಬಿದ್ದಿದ್ದ ಇಂದ್ರಾನಿಲ್ ಹಾಗೂ ಮೇಘನಾ ನಿಜ ಜೀವನದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಆದರೂ, ತಮ್ಮ ಪ್ರೀತಿಯಲ್ಲಿ ಮಾತ್ರ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ದೃಢವಾಗಿ ಉಳಿದಿದ್ದಾರೆ. ಹಲವು ಅಡೆತಡೆಗಳನ್ನು ನಿವಾರಿಸಿಕೊಂಡು ಮದುವೆಯಾದ ಈ ಜೋಡಿ ಬಹಳ ಸುಖವಾಗಿ ಸಂಸಾರ ಮಾಡುತ್ತಿದೆ. ಮುಖದಲ್ಲಿ ವಯಸ್ಸಿನ ಅಂತರ ಕಾಣಿಸಿದರೂ ಇಂದ್ರಾನಿಲ್ ಹಾಗೂ ಮೇಘನಾ ದಾಂಪತ್ಯ ಬಹಳ ಚೆನ್ನಾಗಿದೆ. ಸದ್ಯ ಸೋಷಿಯಲ್ ಮೀಡಿಯಾದ್ಯಂತ ಇವರ ಪ್ರೇಮ್‌ಕಹಾನಿ ಸುದ್ಧಿ ಮಾಡುತ್ತಿದೆ. ಇಂದ್ರಾನಿಲ್ ಹಾಗೂ ಮೇಘನಾಳ ಪ್ರೀತಿಯ ಕಥೆ ತಿಳಿದ ಜನ “ಅಯ್ಯೋ ಅತ್ತೆ ಅಳಿಯನ ಮದುವೆಯಾ..?” ಎಂದು ಅಚ್ಚರಿ ಪಡುತ್ತಿದ್ದಾರೆ. ಆದರೆ ಇಂದ್ರಾನಿಲ್ ಹಾಗೂ ಮೇಘನಾ ಧಾರವಾಹಿಯಲ್ಲಿ ಮಾತ್ರ ಅಳಿಯ-ಅತ್ತೆ, ನಿಜ ಜೀವನದಲ್ಲಿ ಗಂಡ-ಹೆಂಡತಿ ಎಂಬುವುದು ವಾಸ್ತವ.

Continue Reading

FILM

ವಿಜಯ್ ಅವರ ಕೊನೆಯ ಸಿನಿಮಾದಲ್ಲಿ ಎರಡನೇ ನಾಯಕಿ ಯಾರು ಗೊತ್ತಾ?

Published

on

ಮಂಗಳೂರು : ದಾಖಲೆ ಎಂಬ ಪದಕ್ಕೆ ಉದಾಹರಣೆ ಎಂದರೆ ಅದುವೇ ಕಾಲಿವುಡ್ ಸ್ಟಾರ್ ವಿಜಯ್ ದಳಪತಿ. ಅದು ಅವರ ಪ್ರತಿ ಸಿನಿಮಾದಲ್ಲಿಯೂ ಸಾಬೀತು ಆಗುತ್ತಲೇ ಇರುತ್ತವೆ.  ಅದರಲ್ಲೂ ರಾಜಕೀಯ ಅಖಾಡಕ್ಕೆ ಇಳಿದಿರುವ ವಿಜಯ್ ವೃತ್ತಿಜೀವನದ ಕೊನೆ ಸಿನಿಮಾ ‘ಜನನಾಯಗನ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರಿಕರಣ ಆರಂಭವಾಗಿದ್ದು, ಸದ್ಯ ಸಿನಿಮಾದ ಎರಡನೇ ನಾಯಕಿ ಯಾರು ಎಂಬ ಬಗ್ಗೆ ಬಹಿರಂಗಗೊಂಡಿದೆ.

ಎಚ್ ವಿನೋದ್ ನಿರ್ದೇಶನದ ‘ಜನನಾಯಗನ್’ ಸಿನಿಮಾ, ವಿಜಯ್ ಅವರ ಕೊನೆಯ ಚಿತ್ರವಾಗಿದೆ. ದಳಪತಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ. ಆದರೆ  ಈ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.

ವಿಜಯ್ ಮತ್ತು ಶ್ರುತಿ ಹಾಸನ್ ಸುಮಾರು ಹತ್ತು ವರ್ಷಗಳ  ನಂತರ ‘ಜನನಾಯಗನ್’ ಚಿತ್ರದ ಮೂಲಕ ಒಂದಾಗಿದ್ದಾರೆ. ಕೊನೆಯ ಬಾರಿ ‘ಪುಲಿ’ ಸಿನಿಮಾದಲ್ಲಿ ವಿಜಯ್‌ಗೆ ನಾಯಕಿಯಾಗಿ ಶ್ರುತಿ ಕಾಣಿಸಿಕೊಂಡಿದ್ದರು. ಮತ್ತೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಅದು ಕೂಡ ವಿಜಯ್ ಅವರ ಕೊನೆಯ ಚಿತ್ರ ಎಂಬುದು ವಿಶೇಷ.

ಇದನ್ನೂ ಓದಿ: ಆನೆಯ ಮುಂದೆ ಫೋಟೋ ಕ್ಲಿಕ್ಕಿಸಿದ್ದಕ್ಕೆ ಯುವಕನಿಗೆ ಬಿತ್ತು 25 ಸಾವಿರ ರೂಪಾಯಿ ದಂಡ

ಶ್ರುತಿ ಹಾಸನ್ ಶೀಘ್ರದಲ್ಲೇ ಸಿನಿಮಾ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಕಾಶ್ ರಾಜ್, ಗೌತಮ್ ಮೆನನ್, ಮಮಿತಾ ಬೈಜು, ಬಾಬಿ ಡಿಯೋಲ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜನನಾಯಗನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನ ವೆಂಕಟ್ ಕೆ ನಾರಾಯಣ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅನಿರುದ್ದ್ ಸಂಗೀತ ಸಂಯೋಜನೆಯಿದ್ದು, ಮುಂದಿನ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡಲು ಚಿತ್ರ ತಂಡ ಯೋಜನೆ ರೂಪಿಸಿದೆ.

Continue Reading

FILM

ಹ*ಲ್ಲೆಗೊಳಗಾದಾಗ ಆಟೋದಲ್ಲಿ ಹೋಗಿದ್ಯಾಕೆ ? ಘಟನೆಯ ಬಗ್ಗೆ ಸೈಫ್ ಬಿಚ್ಚಿಟ್ರು ಸತ್ಯ!

Published

on

ಮಂಗಳೂರು/ಮುಂಬೈ : ಸೈಫ್ ಅಲಿ ಖಾನ್ ಮೇಲೆ ಜ.16 ರಂದು ದಾ*ಳಿ ನಡೆದಿತ್ತು. ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಅವರ ಮೇಲೆ ನಡೆದ ಹ*ಲ್ಲೆ ಪ್ರಕರಣದ ಬಗ್ಗೆ ಹಲವು ಊಹಾಪೋಹಾಗಳು ಹುಟ್ಟಿಕೊಂಡಿದ್ದವು. ಭದ್ರತೆಯ ಬಗ್ಗೆ ಹಲವು ಸಂಶಯಗಳು ವ್ಯಕ್ತವಾಗಿದ್ದವು. ಅದರಲ್ಲಿ ಪ್ರಮುಖವಾಗಿ ಹ*ಲ್ಲೆಗೊಳಗಾದ ಸೈಫ್‌ನನ್ನುಆಟೋದಲ್ಲಿ ಆಸ್ಪತ್ರೆಯಲ್ಲಿ ಸಾಗಿಸಿದ್ಯಾಕೆ? ಐಷಾರಾಮಿ ಕಾರುಗಳ ಒಡೆಯನಾಗಿರುವ ಸೈಫ್‌ ಯಾಕೆ ಆಟೋದಲ್ಲಿ ಹೋದ್ರು? ಅನ್ನೋದು. ಇದಕ್ಕೆಲ್ಲ ಇದೀಗ ಸೈಫ್ ಉತ್ತರ ನೀಡಿದ್ದಾರೆ.

ದಾ*ಳಿಯ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಸೈಫ್ ಮಾತಾನಾಡಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹ*ಲ್ಲೆಗೊಳಗಾದ ಸಂದರ್ಭದ ಬಗ್ಗೆ ವಿವರಿಸಿದ್ದಾರೆ.

ಕರೀನಾ ಊಟಕ್ಕಾಗಿ ಹೊರಗೆ ಹೋಗಿದ್ದು, ನನಗೆ ಬೆಳಗ್ಗೆ ಸ್ವಲ್ಪ ಮುಖ್ಯವಾದ ಕೆಲಸವಿದ್ದ ಕಾರಣ ಮನೆಯಲ್ಲೇ ಇದ್ದೆ. ಊಟ ಮುಗಿಸಿ ಕರೀನಾ ಮನೆಗೆ ವಾಪಾಸಾಗಿದ್ದಳು. ನಾವು ಸ್ವಲ್ಪ ಹೊತ್ತು ಮಾತಾಡಿ ಮಲಗಿದೆವು. ಅಷ್ಟರಲ್ಲಿ ಮನೆಯ ಸಹಾಯಕನೊಬ್ಬ ಯಾರೋ ಒಬ್ಬ ಮನೆಗೆ ನುಸುಳಿರುವ ಬಗ್ಗೆ ತಿಳಿಸಿದ. ಆತ ಜೆಹ್‌ನ ಕೋಣೆಯಲ್ಲಿದ್ದು, ಚಾ*ಕು ತೋರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ ಎಂದು ಹೇಳಿದ.

ತಕ್ಷಣ  ನಾವು ಅಲ್ಲಿಗೆ ಓಡಿದೆವು. ಜೆಹ್‌ನ ಹಾಸಿಗೆಯ ಮೇಲಿದ್ದ ಅವನನ್ನು ಎಳೆದೆ. ಬಳಿಕ ಇಬ್ಬರ ನಡುವೆ ಫೈ*ಟ್ ನಡೆಯಿತು. ಈ ವೇಳೆ ಆತ ನನ್ನ ಬೆನ್ನಿಗೆ ಬ*ಡಿಯುತ್ತಿದ್ದ. ಕುತ್ತಿಗೆ ಸೀ*ಳಲು ಯತ್ನಿಸಿದಾಗ ನಾನು ತಡೆದೆ. ನನ್ನ ಅಂಗೈ, ಮಣಿಕಟ್ಟು ಮತ್ತು ತೋಳಿಗೆ ಆತ ಚಾ*ಕುವಿನಿಂದ ಚು*ಚ್ಚಿದ. ಆತ ಎರಡೂ ಕೈಗಳಿಂದ ದಾ*ಳಿ ನಡೆಸುತ್ತಿದ್ದ. ಈ ಸಂದರ್ಭ ಮನೆ ಕೆಲಸಗಾರ್ತಿ ಗೀತಾ ಅವನನ್ನು ನನ್ನಿಂದ ಎಳೆದು ದೂರ ತಳ್ಳಿದಳು. ಬಳಿಕ ನಾವಿಬ್ಬರೂ ಬಾಗಿಲು ಮುಚ್ಚಿದೆವು. ಆ ಸಮಯದಲ್ಲಿ ನಾನು ರ*ಕ್ತದಲ್ಲಿ ಮುಳುಗಿದ್ದೆ. ಬಲಗಾಲಿನ ಸಂವೇದನೆ ಕಳೆದುಕೊಂಡಿದ್ದೆ. ಯಾಕೆಂದರೆ, ಆತನ ಬೆನ್ನುಮೂಳೆಗೆ ಚಾ*ಕುವಿನಿಂದ ಇರಿದಿದ್ದ. ಆತ ಬಂದ ದಾರಿಯಿಂದ ತಪ್ಪಿಸಿಕೊಂಡ. ಕರೀನಾ ರಿಕ್ಷಾಗಾಗಿ ಕೂಗಿದಳು. ರಿಕ್ಷಾದವನು ಬಂದು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದ ಎಂದಿದ್ದಾರೆ.

ಶಾಕ್ ಕೊಟ್ಟ ತೈಮೂರ್ ಪ್ರಶ್ನೆ!

ಬೆನ್ನಿನಲ್ಲಿ ಏನೋ ತೊಂದರೆ ಇರುವಂತೆ ನನಗೆ ಅನಿಸಿತ್ತು. ಇದನ್ನು ಕರೀನಾಳಲ್ಲೂ ಹೇಳಿದೆ. ಅದಕ್ಕವಳು ಆಸ್ಪತ್ರೆಗೆ ಹೋಗು. ನಾನು ಸಹೋದರಿಯ ಮನೆಗೆ ಹೋಗುತ್ತೇನೆ ಎಂದಳು. ನಾನು ಚೆನ್ನಾಗಿದ್ದೇನೆ, ಸಾ*ಯುವುದಿಲ್ಲ ಎಂದು ಆಕೆಯನ್ನು ಸಂತೈಸಿದೆ. ಆಗ ಮಗ ತೈಮೂರ್, ನೀನು ಸಾ*ಯುತ್ತೀಯಾ ಎಂದು ಕೇಳಿದ. ನಾನು ‘ಇಲ್ಲ’ ಎಂದು ಹೇಳಿದೆ.

ಇದನ್ನೂ ಓದಿ : ತಾನು ಪ್ರೀತಿಸುವ ಪುರುಷನ ಬಳಿ ಮಾತ್ರ ಮಹಿಳೆ ಈ ರೀತಿ ಇರುತ್ತಾಳೆ..

ಆಟೋದಲ್ಲಿ ಹೋಗಿದ್ಯಾಕೆ?

ಸೈಫ್ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಆದರೆ, ಹ*ಲ್ಲೆಗೊಳಗಾದಾಗ ಆಟೋದಲ್ಲಿ ಯಾಕೆ ಹೋದರು ಎಂಬುದು ಬಹುದೊಡ್ಡ ಪ್ರಶ್ನೆ. ಇದಕ್ಕೂ ಸೈಫ್ ಉತ್ತರಿಸಿದ್ದಾರೆ. ರಾತ್ರಿಯಿಡೀ ಯಾರೂ ಉಳಿಯುವುದಿಲ್ಲ. ಎಲ್ಲರಿಗೂ ಮನೆ ಇರುತ್ತೆ ಅಲ್ವಾ? ಅವರು ಮನೆಗೆ ಹೋಗುತ್ತಾರೆ. ನಮ್ಮ ಮನೆಯಲ್ಲಿ ಕೆಲವರು ಉಳಿದುಕೊಳ್ಳುತ್ತಾರೆ. ಆದರೆ, ಅವರು ಚಾಲಕರಲ್ಲ. ರಾತ್ರಿ ಹೊರಗೆ ಹೋಗುವುದಿದ್ದರೆ ಅಥವಾ ಏನಾದರೂ ಅಗತ್ಯವಿದ್ದರೆ ಚಾಲಕರನ್ನು ಉಳಿದುಕೊಳ್ಳಲು ಹೇಳುವುದು. ಆದರೆ, ಅಂದು ಅಗತ್ಯವಿರಲಿಲ್ಲ. ಅವತ್ತು ಕಾರಿನ ಕೀ ಸಿಕ್ಕಿದ್ದರೆ ನಾನೇ ಕಾರು ಓಡಿಸುತ್ತಿದ್ದೆ. ಅದೃಷ್ಟವಶಾತ್ ನಾನು ಹಾಗೆ ಮಾಡಲಿಲ್ಲ. ಏಕೆಂದರೆ, ನನ್ನ ಬೆನ್ನನ್ನು ಹೆಚ್ಚು ಅಲುಗಾಡಿಸಬಾರದಿತ್ತು. ಕರೆ ಮಾಡಿ ಡ್ರೈವರ್‌ನ್ನು ಕರೆಯಬಹುದಿತ್ತು. ಆದರೆ, ಆತ ಅಲ್ಲಿಗೆ ಬರಲು ಸಮಯವಾಗುತ್ತದೆ ಎಂದು ತಿಳಿದು ಬೇಗನೆ ಆಸ್ಪತ್ರೆಗೆ ಹೋಗುವ ಉದ್ದೇಶದಿಂದ ಆಟೋದಲ್ಲಿ ಹೋದೆ ಎಂದಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page