Connect with us

LATEST NEWS

ಪೊಲೀಸರ ತನಿಖೆ ವೇಳೆ ಲಾಯರ್ ಜಗದೀಶ್ ಸಾವಿನ ಅಸಲಿ ಸತ್ಯ ಬಯಲು

Published

on

ಮಂಗಳೂರು/ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಲಾಯರ್ ಜಗದೀಶ್ ಶ*ವ ಪತ್ತೆಯಾಗಿತ್ತು. ಈ ಅನುಮಾನಾಸ್ಪಾದ ಸಾವು ಕೊಲೆಯೋ ಅಥವಾ ಅಪ*ಘಾತವೋ ಎಂಬ ಸಾಕಷ್ಟು ಅನುಮಾನ ಪೊಲೀಸರನ್ನು ಕಾಡಿತ್ತು. ಇದೀಗ ಕೊನೆಗೂ ಲಾಯರ್ ಜಗದೀಶ್ ಸಾ*ವಿನ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.


ಮೇ2ರ ರಾತ್ರಿ ವಕೀಲ ಜಗದೀಶ್ ಅವರ ದೇಹ ರಕ್ತಸಿಕ್ತವಾಗಿ ನೈಸ್ ರಸ್ತೆಯಲ್ಲಿ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ವಕೀಲ ಜಗದೀಶ್ ಸಂಬಂಧಿಯೊಬ್ಬರು ನೀಡಿದ ದೂರಿನ ಅನ್ವಯ ಕೊ*ಲೆ ಕೇಸ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಈ ಘಟನೆ ಹಿಂದೆ ನಾನಾ ಅನುಮಾನಗಳು ಮೂಡಿದ್ದು, ಪೊಲೀಸರು ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದರು.

ಅಸಲಿಗೆ ಆಗಿದ್ದೇನು?
ಲಾಯರ್ ಜಗದೀಶ್ ನೈಸ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಅವರ ಕಾರಿಗೆ ಲಾರಿಯೊಂದು ಟಚ್ ಆಗಿದೆ. ಟಚ್ ಆಗುತ್ತಿದ್ದಂತೆ ಚಾಲಕ ಸ್ವಲ್ಪ ಮುಂದೆ ಹೋಗಿ ಲಾರಿ ನಿಲ್ಲಿಸಿದ್ದ. ಆಗ ಜಗದೀಶ್ ಕಾರು ನಿಲ್ಲಿಸಿ ಲಾರಿ ಚಾಲಕನ ಬಳಿಗೆ ಹೋಗಿದ್ದಾರೆ. ಈ ವೇಳೆ ಅವರಿಬ್ಬರ ಮಧ್ಯೆ ವಾಗ್ವಾದ ನಡೆದಿದೆ. ವಾಗ್ವಾದದ ಭರದಲ್ಲಿ ಜಗದೀಶ್ ಅರಿವಿಲ್ಲದೇ ನಡುರಸ್ತೆಗೆ ಹೋಗಿದ್ದಾರೆ. ಇದೇ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಲಾರಿಯ ಹಿಂಬದಿಯ ಭಾಗ ಜಗದೀಶ್‌ಗೆ ಟಚ್ ಆಗಿದೆ. ಇದರಿಂದ ತಕ್ಷಣ ಕೆಳಗೆ ಬಿದ್ದು, ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ನೈಸ್ ರಸ್ತೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿರುವ ಲಾಯರ್ ಜಗದೀಶ್ ಮೃ*ತದೇಹ..!?

ಲಾರಿ ಚಾಲಕನಿಗೆ ಹಿಂಬದಿಗೆ ಏನೋ ತಾಗಿದೆ ಎಂದು ಅನಿಸಿದಾಗ, ಸುಮಾರು ಅರ್ಧ ಕಿ.ಮೀ ಮುಂದೆ ಹೋಗಿ ಲಾರಿ ನಿಲ್ಲಿಸಿದ್ದ. ಆದರೆ ಯಾರು ಲಾರಿಯ ಹಿಂದೆ ಬರದ ಕಾರಣ ಏನು ಆಗಿಲ್ಲ ಎಂದು ಹಾಗೆಯೇ ತೆರಳುತ್ತಾನೆ ಎಂದು ತನಿಖೆ ವೇಳೆ ಮಾಹಿತಿ ಲಭ್ಯವಾಗಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೆಂಗೇರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 

LATEST NEWS

ಬಸ್ ನಿಲ್ದಾಣಕ್ಕೆ ಕಾರು ಡಿ*ಕ್ಕಿ; ಚಾಲಕನಿಗೆ ಗಾ*ಯ

Published

on

ಕಾಪು : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬಸ್ ನಿಲ್ದಾಣಕ್ಕೆ ಡಿ*ಕ್ಕಿಯಾದ ಘಟನೆ ಉಡುಪಿ ಜಿಲ್ಲೆಯ ಕಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ(ಡಿ.07) ಸಂಭವಿಸಿದೆ.

ಕಾರು ಚಾಲಕ ಕೊಪ್ಪಲಂಗಡಿಯ ಇಸ್ಮಾಯಿಲ್  ಗಾ*ಯಗೊಂಡಿದ್ದಾರೆ. ಕಾಪುನಿಂದ ಉಚ್ಚಿಲ ಕಡೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬಸ್ ನಿಲ್ದಾಣಕ್ಕೆ ಡಿಕ್ಕಿಯಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಇಸ್ಮಾಯಿಲ್‌ರನ್ನು  ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ಮಹಿಳೆಯ ಹ*ತ್ಯೆ ಪ್ರಕರಣ : ಪೊಲೀಸರು ಬೀಸಿದ ಬಲೆಗೆ ಹಂ*ತಕ ಸಿಕ್ಕಿ ಬಿದ್ದಿದ್ದು ಹೇಗೆ?

ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು

Continue Reading

LATEST NEWS

ನಾಗರಹಾವು ಕಡಿದು ವ್ಯಕ್ತಿ ಸಾ*ವು

Published

on

ಉಡುಪಿ : ನಾಗರಹಾವು ಕ*ಡಿದು ವ್ಯಕ್ತಿಯೊಬ್ಬರು ಸಾ*ವನ್ನಪ್ಪಿರುವ ಘಟನೆ ಉಡುಪಿ ಕುತ್ಯಾರು ಗ್ರಾಮದಲ್ಲಿ ನಡೆದಿದೆ. ಸುರೇಂದ್ರ ಕಿಟ್ಟು ಪೂಜಾರಿ(54) ಮೃ*ತಪಟ್ಟ ವ್ಯಕ್ತಿ.

ಸುರೇಂದ್ರ ಸ್ಥಳೀಯರೊಬ್ಬರಿಗೆ ಸೇರಿದ ತೋಟದಲ್ಲಿ ಕಳೆದ 6 ವರ್ಷಗಳಿಂದ ತೋಟ ನೋಡಿಕೊಳ್ಳುವ ಕೆಲಸ ಮಾಡಿಕೊಂಡಿದ್ದರು. ಡಿ. 5 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಡಕೆ ಮರಗಳಿಗೆ ಕ್ರಿಮಿನಾಶಕ ಸಿಂಪಡಿಸಲು ತೋಟಕ್ಕೆ ಹೋಗಿದ್ದಾಗ ನಾಗರಹಾವು ಕ*ಚ್ಚಿದೆ.

ಇದನ್ನೂ ಓದಿ : ನಾಲ್ಕು ತಿಂಗಳ ಹಿಂದಷ್ಟೇ ಮದುವೆ… ನವವಿವಾಹಿತೆಯ ದುರಂ*ತ ಅಂತ್ಯ!

ತಕ್ಷಣವೇ ಅವರನ್ನು ಕಿನ್ನಿಗೋಳಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಸುರೇಂದ್ರ ಪೂಜಾರಿ ಮೃ*ತಪಟ್ಟಿದ್ದಾರೆಂದು ತಿಳಿದುಬಂದಿದೆ. ಮೃ*ತರ ಪುತ್ರ ಕಿರಣ್.ಎಸ್ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

LATEST NEWS

ನಾಲ್ಕು ತಿಂಗಳ ಹಿಂದಷ್ಟೇ ಮದುವೆ… ನವವಿವಾಹಿತೆಯ ದುರಂ*ತ ಅಂತ್ಯ!

Published

on

ಮಂಗಳೂರು/ಬೆಂಗಳೂರು : ಗ್ಯಾಸ್ ಗೀಸರ್​ ಸೋರಿಕೆಯಿಂದ ನವ ವಿವಾಹಿತೆ ಸಾ*ವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ. 24 ವರ್ಷದ ಭೂಮಿಕಾ ಮೃ*ತ ದುರ್ದೈವಿ.

ಭೂಮಿಕಾ ಹಾಸನ ಮೂಲದವರಾಗಿದ್ದು ನಾಲ್ಕು ತಿಂಗಳ ಹಿಂದಷ್ಟೇ ಕೃಷ್ಣಮೂರ್ತಿ ಎಂಬುವವರ ಜೊತೆ ಮದುವೆಯಾಗಿದ್ದರು. ಪತಿ ಕೆಲಸಕ್ಕೆ ಹೋದ ಬಳಿಕ ಭೂಮಿಕಾ ಸ್ನಾನಕ್ಕೆ ಹೋಗಿದ್ದಳಂತೆ. ಗ್ಯಾಸ್​ ಲೀಕ್​ ಆದ ಹಿನ್ನೆಲೆ ಭೂಮಿಕಾಗೆ ಉಸಿರುಗಟ್ಟಿದ್ದು, ಬಾತ್‌ ರೂಂನಲ್ಲೇ ಕೊನೆಯು*ಸಿರೆಳೆದಿದ್ದಾಳೆ.

ಇದನ್ನೂ ಓದಿ : ‘ಮದುವೆಯನ್ನು ರದ್ದುಗೊಳಿಸಲಾಗಿದೆ’ ಕೊನೆಗೂ ವದಂತಿಗೆ ಫುಲ್ ಸ್ಟಾಪ್ ನೀಡಿದ ಸ್ಮೃತಿ ಮಂಧಾನ

ಪತಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page